ರೈಲ್ವೆ ನಿಲ್ದಾಣದಲ್ಲಿ ಗಂಟೆಗಟ್ಲೆ ನಿಲ್ಬೇಕಾಗಿಲ್ಲ, 150 ರೂ.ಗೆ ಸಿಗುತ್ತೆ ರೂಮ್ !

By Suvarna News  |  First Published Jan 4, 2024, 4:08 PM IST

ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಹೊತ್ತು ರೈಲಿಗೆ ಕಾಯೋದು ಸುಲಭವಲ್ಲ. ಅದ್ರಲ್ಲೂ ಮಹಿಳೆಯರು ಸುರಕ್ಷತೆ ಬಗ್ಗೆ ಹೆಚ್ಚು ಗಮನ ನೀಡ್ಬೇಕು. ಒಂಟಿಯಾಗಿ ಮೂರ್ನಾಲ್ಕು ಗಂಟೆ ರೈಲ್ವೆ ನಿಲ್ದಾಣದಲ್ಲಿ ಕಾಯುವ ಬದಲು ಕಡಿಮೆ ಬೆಲೆಯ ರೂಮ್ ಬುಕ್ ಮಾಡ್ಕೊಂಡು ವಿಶ್ರಾಂತಿ ಪಡಿರಿ. 
 


ಭಾರತದಲ್ಲಿ ರೈಲು ಪ್ರಯಾಣಿಕರ ಜೀವನಾಡಿ. ಪ್ರತಿ ದಿನ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಎಲ್ಲ ಬಾರಿ ನಾವಂದುಕೊಂಡಂತೆ ಪ್ರಯಾಣ ಸಾಧ್ಯವಾಗೋದಿಲ್ಲ. ರೈಲಿನ ಸಮಯದಲ್ಲಿ ಬದಲಾವಣೆ ಆಗುವ ಕಾರಣ ಅಥವಾ ಒಂದು ರೈಲಿನಿಂದ ಇನ್ನೊಂದು ರೈಲು ಹಿಡಿಯುವ ಸಮಯದಲ್ಲಿ ರೈಲ್ವೆ ನಿಲ್ದಾಣದಲ್ಲೇ ಬಹಳ ಸಮಯ ಕಾಯಬೇಕಾಗುತ್ತದೆ. ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಸಮಯ ಕಳೆಯೋದು ಸ್ವಲ್ಪ ಕಷ್ಟ. ಪ್ರಯಾಣಕ್ಕೆ ಗಂಟೆಗಟ್ಟಲೆ ತಡವಿದೆ ಎಂದಾಗ ಮನಸ್ಸು ವಿಶ್ರಾಂತಿ ಬಯಸುತ್ತದೆ. ಹೊಸ ಪ್ರದೇಶದಲ್ಲಿ ಹೊಟೇಲ್ ರೂಮ್ ಹುಡುಕೋದು ಕಷ್ಟ. ರೈಲ್ವೆ ನಿಲ್ದಾಣದಲ್ಲಿ ಸಮಯ ಕಳೆಯೋದು ಕೂಡ ಕಷ್ಟ. ಹೀಗಿರುವಾಗ ನೀವು ರೈಲ್ವೆ ಇಲಾಖೆ ನೀಡುವ ಒಂದು ಸೌಲಭ್ಯದ ಲಾಭ ಪಡೆಯಬಹುದು. ಇದ್ರಿಂದ ವಿಶ್ರಾಂತಿಯೂ ಸಿಗುತ್ತೆ, ಜೇಬಿನಿಂದ ಹೆಚ್ಚಿನ ಹಣವೂ ಖಾಲಿ ಆಗೋದಿಲ್ಲ. ನಾವಿಂದು ರೈಲ್ವೆ ಇಲಾಖೆ ಪ್ರಯಾಣಿಕರಿಗೆ ನೀಡುವ ವಿಶೇಷ ಸೌಲಭ್ಯವೊಂದರ ಬಗ್ಗೆ ಮಾಹಿತಿ ನೀಡ್ತೇವೆ.

ರಿಟೈರಿಂಗ್ (Retiring Room) ರೂಮ್ ಸೌಲಭ್ಯ : ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ರಿಟೈರಿಂಗ್ ರೂಮ್ (Room) ಸೌಲಭ್ಯ ನೀಡುತ್ತದೆ. ಅದನ್ನು ನೀವು ವಿಶ್ರಾಂತಿ (Rest) ಕೊಠಡಿ ಎನ್ನಬಹುದು. ಯಾರು ಬೇಕಾದ್ರೂ ರಿಟೈರಿಂಗ್ ರೂಮ್ ಬುಕ್ ಮಾಡಬಹುದು. ಮೊದಲೇ ಹೇಳಿದಂತೆ ರೈಲಿಗಾಗಿ ನೀವು ತುಂಬಾ ಸಮಯ ಕಾಯುವ ಸ್ಥಿತಿ ಇದ್ದಲ್ಲಿ ನೀವು ಈ ರೂಮ್ ಬುಕ್ ಮಾಡಿ ಅಲ್ಲಿ ವಿಶ್ರಾಂತಿ ಪಡೆಯಬಹುದು.

Tap to resize

Latest Videos

17,843 ಕೋಟಿ ವೆಚ್ಚದ ದೇಶದ ಅತೀ ಉದ್ದದ ಸೀ ಬ್ರಿಜ್‌ MUMBAI TRANS HARBOUR LINK ಜ.12ಕ್ಕೆ ಲೋಕಾರ್ಪಣೆ!

ಈ ಸೌಲಭ್ಯವನ್ನು ಐಆರ್ ಸಿಟಿಸಿ (IRCTC) ಒದಗಿಸುತ್ತದೆ. ನೀವಿರುವ ರೈಲ್ವೆ ನಿಲ್ದಾಣದ ಬಳಿ ಹೊಟೇಲ್ ರೂಮ್ ಸಿಗೋದು ಕಷ್ಟ. ಕೆಲವೇ ಗಂಟೆಗೆ ಯಾವುದೇ ರೂಮ್ ಬುಕ್ ಆಗೋದಿಲ್ಲ. ಆದ್ರೂ ದುಬಾರಿ ಹಣ ನೀಡ್ಬೇಕು. ಇನ್ನು ನಿಲ್ದಾಣದ ಬಳಿ ಇರುವ ಹಾಗೂ ಕಡಿಮೆ ಶುಲ್ಕದ ಹೊಟೇಲ್ ರೂಮ್ ಗಳಲ್ಲಿ ಸುರಕ್ಷತೆ ಹಾಗೂ ಸ್ವಚ್ಛತೆ ಲೋಪ ಕಾಣಿಸೋದೇ ಹೆಚ್ಚು. ಆದ್ರೆ ನೀವು ಬುಕ್ ಮಾಡುವ ರಿಟೈರಿಂಗ್ ರೂಮ್, ಎಲ್ಲ ಸೌಲಭ್ಯ ಹೊಂದಿರುತ್ತದೆ. ಸ್ವಚ್ಛತೆಯಲ್ಲೂ ನೀವು ರಾಜಿ ಆಗ್ಬೇಕಾಗಿಲ್ಲ. ಹಾಗೆ ಇದ್ರ ಬಾಡಿಗೆ ಕೂಡ ಕಡಿಮೆ ಇರುತ್ತದೆ.

ಅಯೋಧ್ಯೆ ರಾಮಮಂದಿರ: ಪತಿವ್ರತೆ ಅಹಲ್ಯಾ, ರಾಮ ಭಕ್ತೆ ಶಬರಿಗೂ ಮಂದಿರವಿದೆ!

ರಿಟೈರಿಂಗ್ ರೂಮ್ ನಲ್ಲಿ ನಿಮಗೆ ಎರಡು ರೀತಿಯ ರೂಮ್ ಲಭ್ಯವಿದೆ. ಒಂದು ಎಸಿ ರೂಮ್ ಆದ್ರೆ ಇನ್ನೊಂದು ನಾನ್ ಎಸಿ ರೂಮ್.  ನೀವು ಯಾವ ರೂಮನ್ನು ಯಾವ ಸ್ಥಳದಲ್ಲಿ ಬುಕ್ ಮಾಡುತ್ತೀರಿ ಮತ್ತು ಎಷ್ಟು ಸಮಯದವರೆಗೆ ಬುಕ್ ಮಾಡುತ್ತೀರಿ ಎಂಬ ಆಧಾರದ ಮೇಲೆ ಬೆಲೆ ನಿಗದಿಯಾಗುತ್ತದೆ. ಸುಮಾರು 100 ರಿಂದ 700 ರೂಪಾಯಿ ಒಳಗೆ ನೀವು ಬಾಡಿಗೆ ಪಾವತಿ ಮಾಡಬೇಕಾಗುತ್ತದೆ. 

ಕನಿಷ್ಟ 1 ಗಂಟೆಯಿಂದ ಗರಿಷ್ಠ 48 ಗಂಟೆಗಳ ಕಾಲ ಈ ಕೊಠಡಿಗಳನ್ನು ನೀವು ಬುಕ್ ಮಾಡಬಹುದು. ಕೆಲ ರೈಲ್ವೆ ನಿಲ್ದಾಣದಲ್ಲಿ ಮಾತ್ರ ಒಂದು ಗಂಟೆ ಅವಧಿಗೆ ರೂಮ್ ಬುಕ್ ಮಾಡುವ ಅವಕಾಶವಿದೆ. ರಾಷ್ಟ್ರ ರಾಜಧಾನಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಾನ್ ಎಸಿ ಕೊಠಡಿಯ ದರ 12 ಗಂಟೆಗೆ 150 ರೂಪಾಯಿ. 450 ರೂಪಾಯಿಗೆ 24 ಗಂಟೆಗಳ ಕಾಲ ಎಸಿ ಕೊಠಡಿ ಬುಕ್ ಮಾಡಬಹುದು.ಇಡೀ ರಾತ್ರಿ ರೂಮ್ ಬುಕ್ ಮಾಡುವ ಅವಕಾಶವೂ ಇಲ್ಲಿದೆ. ರೂಮ್ ಬೆಲೆ ಬೇರೆ ಬೇರೆ ನಿಲ್ದಾಣದಲ್ಲಿ ಬೇರೆ ಬೇರೆಯಾಗಿದೆ.  ಐಆರ್ ಸಿಟಿಸಿ (IRCTC) ಸೈಟ್ ನಲ್ಲಿ ನಿಮಗೆ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ರಿಟೈರಿಂಗ್ ರೂಮ್ ಆಯ್ಕೆಯು ಟಿಕೆಟ್ ಬುಕಿಂಗ್‌ನ ಕೆಳಭಾಗದಲ್ಲಿ ಕಾಣಿಸುತ್ತದೆ.
 

click me!