ಜಪಾನ್ ಅನೇಕ ಪರ್ವತಗಳನ್ನು ಹೊಂದಿರುವ ಒಂದು ಸಣ್ಣ ದೇಶವಾಗಿದ್ದು, ಪ್ರವಾಸಿಗರು ಮತ್ತು ಪ್ರಕೃತಿ ಆಸ್ವಾದಿಸುವವರಿಗೆ ಹೆಚ್ಚು ಇಷ್ಟಪಡುವ ಸ್ಥಳ. ಜಗತ್ತು ಜಪಾನ್ ಅನ್ನು ವ್ಯಾಪಾರ ಹಾಗೂ ಬಿಡುವಿಲ್ಲದ ನಗರಗಳು , ಕಲೆ , ಸಂಗೀತ , ನೃತ್ಯ ಹಾಗೂ ಆನಿಮೆ ಚಿತ್ರೀಕರಣ ಹೊಂದಿರುವ ದೇಶವಾಗಿ ಮಾತ್ರ ಕಂಡಿದೆ. ಆದರೆ ಆ ದೇಶದ ಕೆಲವೊಂದು ವೈಶಿಷ್ಟ್ಯತೆ ಹಾಗೂ ಸೌಂದರ್ಯದ ರಹಸ್ಯದ ಬಗ್ಗೆ ಹೆಚ್ಚು ತಿಳಿದಿಲ್ಲ.
ಜಪಾನ್ ಕೇವಲ ವ್ಯಾಪಾರ ಮತ್ತು ಜನಪ್ರಿಯ ಸಂಸ್ಕೃತಿ ಹೊಂದಿರುವ ದೇಶ ಮಾತ್ರವಾಗಿರದೇ ಭವ್ಯ ಪ್ರಾಕೃತಿಕ ಸೌಂದರ್ಯ ಹೊಂದಿರುವ ದೇಶ. ಎಲ್ಲರನ್ನೂ ಆಕರ್ಷಿಸುವ ಬೃಹತ್ ಪರ್ವತಗಳು ಇಲ್ಲಿ ಕಾಣಸಿಗುತ್ತವೆ. ಜಪಾನಿನಲ್ಲಿರುವ ಹೆಚ್ಚಿನ ಪರ್ವತಗಳು ಅಲ್ಲಿಯ ಜನರಿಗೆ ಆಧ್ಯಾತ್ಮಿಕವಾಗಿ ಮಹತ್ವದ್ದಾಗಿದೆ, ಅವರು ಅವುಗಳನ್ನು "ಪವಿತ್ರ ಪರ್ವತಗಳು" ಎಂದೂ ಕರೆಯುತ್ತಾರೆ.
ಆಕರ್ಷಕ ಪರ್ವತಗಳು ಹೊಂದಿರುವ ದೇಶ ಯಾವುದು ಎಂದು ನೋಡುವುದಾದರೆ, ಅದಕ್ಕೆ ಸೂಕ್ತ ಉತ್ತರ ಜಪಾನ್ ಆಗಿ ಕಾಣಸಿಗುತ್ತದೆ. ಅಲ್ಲಿರುವ ಪ್ರತಿಯೊಂದು ಪರ್ವತಗಳು ನೋಡುಗರ ಮನಸೆಳೆಯುವುದು ಮಾತ್ರವಲ್ಲದೆ, ಆರೋಗ್ಯದ ಕಣಜಗಳು ಆಗಿವೆ. ಈ ಪರ್ವತಗಳು ಪ್ರವಾಸಕ್ಕೆ ಒಂದು ಉತ್ತಮ ಆಯ್ಕೆಯಾಗಿದೆ.
ಇಲ್ಲಿರುವ ಪ್ರಮುಖ ಪರ್ವತಗಳೆಂದರೆ ಮೌಂಟ್ ಫ್ಯೂಜಿ, ಮೌಂಟ್ ಟೇಟ್, ಮೌಂಟ್ ಹಕು ಪರ್ವತಗಳು
ಮೌಂಟ್ ಫ್ಯೂಜಿ: ಮೌಂಟ್ ಫ್ಯೂಜಿ ಜಪಾನ್‌ನಲ್ಲಿ ಅತ್ಯಂತ ಪ್ರಸಿದ್ಧವಾದ ಪರ್ವತವಾಗಿದೆ ಮತ್ತು ಒಳ್ಳೆಯ ಕಾರಣಕ್ಕಾಗಿ. ಇದು 12,388 ಅಡಿ (3776 ಮೀ) ಎತ್ತರದಲ್ಲಿದೆ. ಇದು ಜಪಾನ್‌ನ ಅತಿ ಎತ್ತರದ ಪರ್ವತವಾಗಿದ್ದು, ಶಿಜುವೊಕಾ ಪ್ರಾಂತ್ಯದಲ್ಲಿದೆ. ಇದು ವಿಶ್ವ ಪರಂಪರೆಯ ತಾಣ ಮಾತ್ರವಲ್ಲ, ಇದು ಸಕ್ರಿಯ ಜ್ವಾಲಾಮುಖಿಯಾಗಿದೆ! ಮೌಂಟ್ ಫ್ಯೂಜಿ ಮೌಂಟ್ ಟೇಟ್ ಮತ್ತು ಮೌಂಟ್ ಹಕು ಜೊತೆಗೆ ಜಪಾನ್‌ನ "ಮೂರು ಪವಿತ್ರ ಪರ್ವತಗಳಲ್ಲಿ" ಒಂದಾಗಿದೆ. ಇದು ರಮಣೀಯ ಸೌಂದರ್ಯದ ವಿಶೇಷ ಸ್ಥಳವಾಗಿದೆ ಮತ್ತು ಜಪಾನ್‌ನ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ಇದು ಜಪಾನ್‌ನ ಅತಿ ಎತ್ತರದ ಪರ್ವತವಾಗಿದೆ, ಏಷ್ಯಾದ ದ್ವೀಪದಲ್ಲಿ ಎರಡನೇ ಅತಿ ಎತ್ತರದ ಜ್ವಾಲಾಮುಖಿ ಮತ್ತು ಭೂಮಿಯ ಮೇಲಿನ ದ್ವೀಪದ ಏಳನೇ ಅತಿ ಎತ್ತರದ ಶಿಖರವಾಗಿದೆ. ಇದನ್ನು ಜೂನ್ 22, 2013 ರಂದು ಸಾಂಸ್ಕೃತಿಕ ತಾಣವಾಗಿ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಯಿತು UNESCO ಪ್ರಕಾರ, ಮೌಂಟ್ ಫ್ಯೂಜಿಯು "ಕಲಾವಿದರು ಮತ್ತು ಕವಿಗಳಿಗೆ ಸ್ಫೂರ್ತಿ ನೀಡಿದೆ ಮತ್ತು ಶತಮಾನಗಳಿಂದ ತೀರ್ಥಯಾತ್ರೆಯ ವಸ್ತುವಾಗಿದೆ". ಮೌಂಟ್ ಫ್ಯೂಜಿ ಪ್ರದೇಶದಲ್ಲಿ ಸಾಂಸ್ಕೃತಿಕ ಆಸಕ್ತಿಯ 25 ತಾಣಗಳನ್ನು ಯುನೆಸ್ಕೋ ಗುರುತಿಸಿದೆ. ಈ 25 ಸ್ಥಳಗಳಲ್ಲಿ ಪರ್ವತ ಮತ್ತು ಶಿಂಟೋ ದೇವಾಲಯ, ಫ್ಯೂಜಿಸನ್ ಹೊಂಗು ಸೆಂಗೆನ್ ತೈಶಾ ಸೇರಿವೆ. ಈ ಪರ್ವತಕ್ಕೆ ಪ್ರತಿ ಜೂನ್ ನಿಂದ ಅಕ್ಟೋಬರ್ ವರೆಗೂ ಪ್ರವಾಸಕ್ಕೆ ಅನುವುಮಾಡಿಕೊಂಡಳಾಗುತ್ತದೆ. ಇದು ಏರಲು ಬಹಳ ಜನಪ್ರಿಯವಾದ ಪರ್ವತವಾಗಿದೆ, ಪ್ರತಿ ವರ್ಷ 300,000 ಕ್ಕೂ ಹೆಚ್ಚು ಜನರು ಇದನ್ನು ಏರುತ್ತಾರೆ.
ಮೌಂಟ್ ಟೇಟ್ :ಜಪಾನ್ ನ ಎರಡನೆಯ ಅದ್ಭುತ ಮತ್ತು ಎತ್ತರದ ಶಿಖರವೆಂದರೆ ಅದು ಮೌಂಟ್ ಟೇಟ್. ಮೌಂಟ್ ಟೇಟ್ ಅನ್ನು ಸಾಮಾನ್ಯವಾಗಿ ಟಟೆಯಾಮಾ ಎಂದು ಕರೆಯಲಾಗುತ್ತದೆ, ಇದು ಜಪಾನ್‌ನ ಟೊಯಾಮಾ ಪ್ರಿಫೆಕ್ಚರ್‌ನ ಆಗ್ನೇಯ ಪ್ರದೇಶದಲ್ಲಿ ನೆಲೆಗೊಂಡಿರುವ ಪರ್ವತವಾಗಿದೆ. ಇದು 3,015 ಮೀ ಎತ್ತರದ ಹಿಡಾ ಪರ್ವತಗಳಲ್ಲಿನ ಅತಿ ಎತ್ತರದ ಪರ್ವತಗಳಲ್ಲಿ ಒಂದಾಗಿದೆ. ಇದು ಮೌಂಟ್ ಫ್ಯೂಜಿ ಮತ್ತು ಮೌಂಟ್ ಹಕು ಜೊತೆಗೆ ಜಪಾನ್‌ನ ಮೂರು ಪವಿತ್ರ ಪರ್ವತಗಳಲ್ಲಿ ಒಂದಾಗಿದೆ.
ಮೌಂಟ್ ಹಕು: ಮೌಂಟ್ ಹಕುವನ್ನು ಮೌಂಟ್ ಹಕುಸನ್ ಎಂದು ಸಹ ಕರೆಯಲಾಗುತ್ತದೆ. ಇದು ಹೊನ್ಶು ದ್ವೀಪದಲ್ಲಿ ಗಿಫು ಮತ್ತು ಇಶಿಕಾವಾ ಗಡಿಯಲ್ಲಿದೆ. ಹಕು ಪರ್ವತವು 300,000 ರಿಂದ 400,000 ವರ್ಷಗಳಷ್ಟು ಹಳೆಯದಾಗಿದೆ. ಸುತ್ತಮುತ್ತಲಿನ ಪರ್ವತಗಳು ಹಿಮವನ್ನು ಕಳೆದುಕೊಂಡರು ಸಹ ಈ ಪರ್ವತದಲ್ಲಿ ಹಿಮ ಹಾಗೆ ಇರುತ್ತದೆ. ಮೌಂಟ್ ಹಕು ಎಂದರೆ ಬಿಳಿ ಪರ್ವತ ಎಂಬ ಅರ್ಥವನ್ನು ಹೊಂದಿದೆ. ಇದು 2,000 ಮೀ (6,562 ಅಡಿ) ಎತ್ತರವಿದ್ದು, ಜಪಾನ್‌ನ ಪಶ್ಚಿಮದ ಪರ್ವತವಾಗಿದೆ.
ಈ ಮೂರು ಪರ್ವತಗಳನ್ನು "ಪವಿತ್ರ ಪರ್ವತಗಳು" ಎಂದು ಕರೆಯಲಾಗುತ್ತದೆ. ಈ ಪರ್ವತದ ಪ್ರವಾಸದಿಂದ ಉತ್ತಮ ಅನುಭವವನ್ನು ಪಡೆಯಬಹುದಾಗಿದೆ. ಜೀವ ಸಂಕುಲಗಳನ್ನು ಒಳಗೊಂಡ ಪರ್ವತದ ಸುತ್ತಮುತ್ತಲಿನ ವಾತಾವರಣವು ಪ್ರಕೃತ್ತಿಯನ್ನು ಆಸ್ವಾದಿಸುವವರಿಗೆ ಸ್ವರ್ಗದಂತೆ ಕಾಣಸಿಗುತ್ತದೆ. ಬೆಟ್ಟ ಏರುವ ಸಾಹಸಿಗಳಿಗೆ ಚಾರಣಕ್ಕೆ ಇವು ಉತ್ತಮ ಆಯ್ಕೆಯಾಗಿದೆ.