ನೈಜೇರಿಯಾದಲ್ಲಿ ಡಾ.ಬ್ರೋಗೆ ಚಾಕು ಇರಿದ್ರು, ಬ್ಲೇಡ್​ನಿಂದ ಬೆರಳು ಕತ್ತರಿಸಿದ್ರು! ವಿಡಿಯೋ ನೋಡಿ ಫ್ಯಾನ್ಸ್ ಶಾಕ್​

By Suchethana D  |  First Published Nov 15, 2024, 8:53 PM IST

ನೈಜೇರಿಯಾ ಪ್ರವಾಸದಲ್ಲಿರೋ ಡಾ.ಬ್ರೋ ಅರ್ಥಾತ್​ ಗಗನ್​ಗೆ ಈ ಅಸಾಮಿ ಚಾಕು ಇರಿದ, ಬ್ಲೇಡ್​ನಿಂದ ಬೆರಳು ಕಟ್​ ಮಾಡಿದ. ಏನಿದು ವಿಷ್ಯ? 
 


ದೇಶ-ವಿದೇಶಗಳನ್ನು ಸುತ್ತುತ್ತಲೇ ಮನೆ ಮಾತಾಗಿರೋ  ಡಾ.ಬ್ರೋ ಈಗ ನೈಜೇರಿಯಾಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಹಿಂದಿನ ವಿಡಿಯೋಗಳಲ್ಲಿ, ಅಲ್ಲಿರುವ  ವಿಚಿತ್ರ ಜನರ ಪರಿಚಯ ಮಾಡಿಸಿದ್ದರು. ಚರಂಡಿ ಮೇಲೆಯೇ ಜನರು ಹೇಗೆ ಬದುಕಿತ್ತಿದ್ದಾರೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದರು. ಅದರಲ್ಲಿಯೂ ವಿಶೇಷವಾಗಿ ನೈಜೇರಿಯಾ ಮಕ್ಕಳಿಗೆ ಕನ್ನಡ ಕಲಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ರಾಷ್ಟ್ರಭಾಷೆ ಕನ್ನಡ ಎಂದು ಹೇಳುವ ಮೂಲಕ ಕನ್ನಡಿಗರ ಮನ ಗೆದ್ದವರು ಡಾ.ಬ್ರೋ ಅರ್ಥಾತ್​ ಗಗನ್​. ಅ,ಆ,ಇ, ಈ ಎಂದು ಮಕ್ಕಳ ಬಾಯಲ್ಲಿ ಸ್ಪಷ್ಟವಾಗಿ ಹೇಳಿಸಿ ಅಬ್ಬಬ್ಬಾ ಹೀಗೂ ಸಾಧ್ಯನಾ ಎಂದು ತೋರಿಸಿಕೊಟ್ಟಿದ್ದಾರೆ. ಇದೀಗ ಮತ್ತಷ್ಟು ಕುತೂಹಲದೊಂದಿಗೆ ನೈಜೇರಿಯಾದ ಆದಿವಾಸಿಗಳ ಪರಿಚಯ ಮಾಡಿಸಿದ್ದಾರೆ ಇವರು.

ಕತ್ತೆ ಕಿರುಬ ಸೇರಿದಂತೆ ಭಯಾನಕ ಕಾಡು ಪ್ರಾಣಿಗಳ ಹಾಗೂ ವಿಷ ಸರ್ಪಗಳ ಜೊತೆ ನೈಜೇರಿಯಾದ ಮಕ್ಕಳೂ ಸೇರಿದಂತೆ ದೊಡ್ಡವರು ಹೇಗೆ ಪರಿಚಿತರಾಗಿದ್ದಾರೆ. ಕಾಡು ಪ್ರಾಣಿಗಳನ್ನು ಇಲ್ಲಿಯ ಜನರು ಹೇಗೆ ಪ್ರೀತಿಸುತ್ತಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.ಕತ್ತೆ ಕಿರುಬದ ಬಾಯಲ್ಲಿ ಸಲೀಸಾಗಿ ಜನರು ಕೈ ಹಾಕುತ್ತಾರೆ. ಆದರೆ ಅಪ್ಪಿ ತಪ್ಪಿ ಆ ಸಮಯದಲ್ಲಿ ಕತ್ತೆ ಕಿರುಬ ಬಾಯಿ ಮುಚ್ಚಿದರೆ ಅಂದರೆ ಅದರ ಒಂದೇ ಒಂದು ಹಲ್ಲು ಕೈಗೆ ತಾಗಿದರೂ ಮೈ ಪೂರ್ತಿ ಕೊಳೆತು ಹೋಗುತ್ತದೆ. ಇದರ ಹೊರತಾಗಿಯೂ ಅಲ್ಲಿಯ ಜನರು ಹೇಗೆ ಪ್ರಾಣಿಗಳ ಜೊತೆ ಪ್ರೀತಿಯಿಂದ ಇದ್ದಾರೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

Tap to resize

Latest Videos

undefined

ಹಳಿಗಳ ಮೇಲೆ ದಿನವೂ ಸಂತೆ- ರೈಲು ಬರ್ತಿದ್ದಂಗೇ ಎಲ್ಲರೂ ಗಾಯಬ್​- ಮತ್ತೆ ವಾಪಸ್​! ಡಾ.ಬ್ರೋ ರೋಚಕ ವಿಡಿಯೋ

ಇದೇ ವೇಳೆ, ನೈಜೇರಿಯಾದ ಜಾದೂಗಾರರೊಬ್ಬನ್ನು ಭೇಟಿಯಾಗಿದ್ದಾರೆ ಡಾ.ಬ್ರೋ. ಈ ಜಾದೂಗಾರ ಚಾಕುವಿನಿಂದ ಡಾ.ಬ್ರೋಗೆ ಇರಿದಿದ್ದಾನೆ, ಬ್ಲೇಡ್​ನಿಂದ ಕೊಯ್ದಿದ್ದಾನೆ. ಆದರೆ ಏನೂ ಆಗಲಿಲ್ಲ.  ಆದರೆ ಕುತೂಹಲದ ವಿಷಯ ಎಂದರೆ, ಅದೇ ಚಾಕು ಮತ್ತು ಬ್ಲೇಡ್​ನಿಂದ ಬೇರೆ ಕಡೆ ಕತ್ತರಿಸಿದಾಗ ಅದು ಕತ್ತರಿಸಿ ಹೋಗಿದೆ. ಇಂಥ ಭಯಾನಕ ಹಾಗೂ ಹಾಸ್ಯಮಯ ಸನ್ನಿವೇಶವನ್ನು ವಿಡಿಯೋದಲ್ಲಿ ತೋರಿಸಿದ್ದಾರೆ ಗಗನ್​. ಈ ಹಿಂದಿನ ವಿಡಿಯೋದಲ್ಲಿ ಅವರು, ಎಲ್ಲಕ್ಕಿಂತಲೂ ವಿಚಿತ್ರ ಎನಿಸಿರೋ ನೈಜೇರಿಯಾದ ಟ್ರೈನ್​ ಮಾರ್ಕೆಟ್​ ತೋರಿಸಿದ್ರು. ಟ್ರೇನ್​ ಮಾರ್ಕೆಟ್​ ಅಂದ್ರೆ ಪ್ರತಿನಿತ್ಯವೂ ಹಳಿಗಳ ಮೇಲೆಯೇ ಇಲ್ಲಿ ಸಂತೆ ನಡೆಯುತ್ತದೆ. ಅದ್ಯಾವ ಪರಿಯ ಸಂತೆ ಎಂದ್ರೆ ನೂರಾರು ಮಂದಿ ಈ ಸಂತೆಗೆ ಬರ್ತಾರೆ. ಅಲ್ಲಿಯೇ ಗಾಡಿಗಳೂ ಓಡಾಡ್ತಾ ಇರುತ್ತವೆ. ಭಾರತ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿ ರೈಲು ಬರುವಾಗ ಬಾಗಿಲು ಹಾಕುವುದು, ಐದು ನಿಮಿಷ ಅತ್ತಿತ್ತ ಕಡೆ ವಾಹನ ಸವಾರರು ಕಾಯುವುದು... ಎಲ್ಲವೂ ಮಾಮೂಲಿ. ಇದು ಇಲ್ಲದ ಕಡೆ ಎಷ್ಟೋ ಬಾರಿ ಅಪಘಾತಗಳೂ ಆಗಿರುವುದು ಉಂಟು.  

ಆದರೆ ಇಲ್ಲಿ, ಹಳಿಗಳ ಮೇಲೆ ಪ್ರತಿನಿತ್ಯ ಸಂತೆ ನಡೆಯುತ್ತೆ. ದೂರದಿಂದ ಟ್ರೈನ್​ ಬರುವ ಶಬ್ದ ಆಗುತ್ತಲೇ ಸೆಕೆಂಡ್​ ಒಳಗೆಯೇ ಸಂತೆ ಗಾಯಬ್​ ಆಗುತ್ತೆ. ಮಾರುವವರು, ಕೊಳ್ಳುವವರು ಎಲ್ಲರೂ ಎಸ್ಕೇಪ್​  ಆಗುತ್ತಾರೆ. ಅಲ್ಲಿ ಏನೂ ಇಲ್ಲವೇನೋ ಎನ್ನುವಂತೆ  ಕಾಣಿಸುತ್ತದೆ. ರೈಲು ಅತ್ತ ಹೋದ ಮೇಲೆ ಮತ್ತೆ ರಪರಪ ಎಂದು ಎಲ್ಲರೂ ಮುತ್ತಿಗೆ ಹಾಕುತ್ತಾರೆ. ಪುನಃ ರೈಲು ಬಂದರೆ ಹೋಗುತ್ತಾರೆ. ಈ ರೈಲಿನ ಮುಂಭಾಗ ಸೇರಿದಂತೆ ಎಲ್ಲೆಂದರಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವುದು ನೋಡಿದರೆ, ಅಬ್ಬಬ್ಬಾ ಹೀಗೂ ಒಂದು ದೇಶ ಇರುತ್ತಾ ಎಂದು ಹುಬ್ಬೇರಿಸುವುದು ಗ್ಯಾರೆಂಟಿ. ಇವೆಲ್ಲಾ ಕುತೂಹಲದ ವಿಷಯವನ್ನು ಡಾ.ಬ್ರೋ ಹೇಳಿದ್ದು. ಅದರ ವಿಡಿಯೋ ಲಿಂಕ್​ ಈ ಕೆಳಗೆ ಇದೆ. 

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...
 

click me!