ವಿಶ್ವದ ಅತಿ ಎತ್ತರದಲ್ಲಿ ಬಂಗೀ ಜಂಪ್ ಮಾಡಿ ಜೀವ ತೆತ್ತ ಸಾಹಸಿಗ!

By Suvarna NewsFirst Published Dec 6, 2023, 11:02 AM IST
Highlights

ಕೆಲವೊಂದು ಸಾಹಸ ಭಯಾನಕವಾಗಿರುತ್ತದೆ. ಅದನ್ನು ಮಾಡಲು ಎರಡು ಗುಂಡಿಗೆ ಬೇಕು. ಅದೃಷ್ಟ ಚೆನ್ನಾಗಿದ್ರೆ ಸಾಹಸ ಮೋಜು ನೀಡುತ್ತೆ. ಅದೇ ಅದೃಷ್ಟ ಕೈಕೊಟ್ರೆ ಸಾವು ಕರೆಯುತ್ತೆ. ಜಪಾನ್ ವ್ಯಕ್ತಿಗೂ ಇದೇ ಆಗಿದೆ.

ವಿಶ್ವದ ಅತಿ ಎತ್ತರದ ಬಂಗೀ ಜಂಪ್ ಗೆ ಚೀನಾದ ಮಕಾವು ಟವರ್ ಪ್ರಸಿದ್ಧಿ ಪಡೆದಿದೆ. ಮಕಾವು ಟವರ್ ನಿಂದ ಬಂಗೀ ಜಂಪ್ ಮಾಡಿ ಪ್ರವಾಸಿಗರು ಎಂಜಾಯ್ ಮಾಡ್ತಾರೆ. ಚೀನಾಗೆ ಹೋದಾಗ ಇದನ್ನು ಮಿಸ್ ಮಾಡ್ಬೇಡಿ ಎನ್ನುವ ಮಾತುಗಳನ್ನು ನೀವು ಆಗಾಗ ಕೇಳಿರ್ತೀರಿ. ಆದ್ರೆ ನಮ್ಮ ಸಾಹಸವೇ ನಮ್ಮ ಜೀವಕ್ಕೆ ದುಬಾರಿಯಾಗ್ಬಾರದು. ಆರೋಗ್ಯ, ನಮ್ಮ ವಯಸ್ಸು ಎಲ್ಲವನ್ನು ಪರಿಗಣಿಸಿ ನಾವು ಇಂಥ ಸಾಹಸಕ್ಕೆ ಕೈ ಹಾಕ್ಬೇಕು. ಇಲ್ಲ ಅಂದ್ರೆ ಜಪಾನ್ ಪ್ರವಾಸಿಗನ ರೀತಿ ಅದೇ ಕೊನೆ ಬಂಗೀ ಜಂಪ್ ಆಗುತ್ತದೆ.

ಬಂಗೀ ಜಂಪ್ (Bungee Jump) ಮಾಡಿ ಸಾವು: ಚೀನಾದ ಮಕಾವು ಟವರ್ ನಲ್ಲಿ ಬಂಗೀ ಜಂಪ್ ಮಾಡಿ ಜಪಾನ್ (Japan) ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಮಕಾವು ಗೋಪುರದ ಎತ್ತರ 764 ಅಡಿ. 56 ವರ್ಷದ ವ್ಯಕ್ತಿ ಸಂಜೆ 4.30 ರ ಸುಮಾರಿಗೆ 764 ಅಡಿ ಎತ್ತರದಿಂದ ಜಿಗಿದಿದ್ದಾರೆ. ಈ ಸಾಹಸ ಮಾಡುವ ವೇಳೆ ವ್ಯಕ್ತಿಗೆ ಯಾವುದೇ ಸಮಸ್ಯೆ ಆಗ್ಲಿಲ್ಲ. ಬಂಗೀ ಜಂಪ್ ಮುಗಿಸಿ ಬಂದ್ಮೇಲೆ ಅವರಿಗೆ ಉಸಿರಾಟದ ತೊಂದರೆ ಶುರುವಾಗಿದೆ. ಸ್ವಲ್ಪ ಸಮಯದ ನಂತರ ಅವರ ಉಸಿರಾಟವು ಸಂಪೂರ್ಣವಾಗಿ ನಿಂತುಹೋಗಿದೆ. ಅವರನ್ನು ಮಕಾವುನಲ್ಲಿರುವ ಕಾಂಡೆ ಎಸ್. ಜನುವರಿಯೊ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಅವರ ಹೃದಯ ಬಡಿತ ನಿಂತಿತ್ತು. ವೈದ್ಯರು, ಪ್ರವಾಸಿಗ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪ್ರವಾಸಿಗನಿಗೆ ದೇಹದ ಯಾವುದೇ ಭಾಗದಲ್ಲಿ ಗಾಯವಾಗಿಲ್ಲ. 

Latest Videos

ಬ್ರೆಜಿಲ್‌ ಬುಡಕಟ್ಟಿನ ಕೊನೆ ಪುರುಷನ ಸಾವು, ಜನಾಂಗ ಉಳಿಸಲು ಹೆಣ್ಮಕ್ಕಳ ಪ್ರಯತ್ನ!

ಮಕಾವು ಗೋಪುರದ ವಿಶೇಷ : ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿರುವ ಸ್ಕೈಟವರ್‌ನ ಮಾದರಿಯಲ್ಲಿ ಮಕಾವು ಗೋಪುರದ ನಿರ್ಮಾಣ ಮಾಡಲಾಗಿದೆ. ಇದರ ನಿರ್ಮಾಣ 1998 ರಲ್ಲಿ ಶುರುವಾಯ್ತು. ಸಾಹಸಿಗಳಿಗೆ ಇದೊಂದು ಅಧ್ಬುತ ಅನುಭವ ಎನ್ನಬಹುದು.  ಗಂಟೆಗೆ 200 ಕಿಮೀ ವೇಗದಲ್ಲಿ 233 ಮೀಟರ್ ಎತ್ತರದ ಪ್ಲಾಟ್‌ಫಾರ್ಮ್‌ನಿಂದ ಅಂದ್ರೆ 61 ನೇ ಮಹಡಿಯಿಂದ ಕೆಳಗಿ  ಬೀಳುತ್ತೀರಿ. ನೆಲದಿಂದ ಸುಮಾರು 30 ಮೀಟರ್‌ಗಳಷ್ಟು ಎತ್ತರದಲ್ಲಿ ಪುಟಿಯುತ್ತೀರಿ.  

ಮಕಾವು ಗೋಪುರವು 338m (1100ft) ಎತ್ತರವಾಗಿದೆ. ಆದರೆ ಬಂಗೀ ಜಂಪಿಂಗ್ 233m (764ft) ಎತ್ತರದಿಂದ ನಡೆಯುತ್ತದೆ. ಬಂಗೀ ಜಂಪ್ ಮಾಡುವ ಬದಲು ಸುರಕ್ಷತೆ ಬಗ್ಗೆ ಅಲ್ಲಿನ ಸಿಬ್ಬಂದಿ ಗಮನ ಹರಿಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಮೆಡಿಕಲ್ ದಾಖಲೆಯನ್ನು ನೀಡಬೇಕಾಗುತ್ತದೆ. ಅಧಿಕ ರಕ್ತದೊತ್ತಡ, ಅಸ್ತಮಾ ಮತ್ತು ಮಧುಮೇಹ, ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗಳಿಗೆ ಬಂಗೀ ಜಂಪ್ ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ. 

ಈ ಟವರ್ ಮಕಾವು ಪೆನಿನ್ಸುಲಾ, ತೈಪಾ ಮತ್ತು ಕೊಲೋನ್‌ನ 360-ಡಿಗ್ರಿ ವೀಕ್ಷಣೆಗಳನ್ನು ನೀಡುತ್ತವೆ. ಗೋಪುರವು ಹಲವಾರು ರೆಸ್ಟೋರೆಂಟ್‌ಗಳು, ಸಿನಿಮಾ, ಕ್ಯಾಸಿನೊ, ನೆಲ ಅಂತಸ್ತಿನ ಹೊರಾಂಗಣ ಪ್ಲಾಜಾದಲ್ಲಿ ವಾಟರ್‌ಫ್ರಂಟ್ ವೀಕ್ಷಣೆಗಳು ಮತ್ತು ಟಾಯ್ಸ್‌ಆರ್'ಯುಸ್ ಮತ್ತು ಐಎಸ್‌ಎ ಔಟ್‌ಲೆಟ್‌ಗಳನ್ನು ಒಳಗೊಂಡಿರುವ ಶಾಪಿಂಗ್ ಅನ್ನು ಒಳಗೊಂಡಿದೆ. ಇದ್ರಲ್ಲಿ ಪಾಲ್ಗೊಳ್ಳಲು ಮೊದಲೇ ಬುಕ್ಕಿಂಗ್ ನಡೆಯುತ್ತದೆ. ಒಬ್ಬ ವ್ಯಕ್ತಿ 2,888 ಮಕಾನೀಸ್ ಪಟಾಕಾ ಅಂದಾಜು 30,000 ರೂಪಾಯಿ ಪಾವತಿಸಬೇಕಾಗುತ್ತದೆ. 

ಗಂಡ ಬರದಿದ್ದರೆ ಅಷ್ಟೇ, ಅಮ್ಮ-ಮಕ್ಕಳ ಹೊಸ ಟ್ರಾವೆಲ್ ಈಗ ಟ್ರೆಂಡ್!

ಹಿಂದೂ ನಡೆದಿತ್ತು ಇಂಥ ಅನಾಹುತ : ಜಪಾನ್ ವ್ಯಕ್ತಿ ಮಾತ್ರವಲ್ಲ ಈ ಹಿಂದೆ ಬಂಗೀ ಜಂಪ್ ವೇಳೆ ಕೆಲವರು ಮೃತಪಟ್ಟಿದ್ದಾರೆ. ವಿಶ್ವದಾದ್ಯಂತ ಅನೇಕ ಬಂಗೀ ಜಂಪಿಂಗ್ ಸ್ಥಳಗಳಿವೆ. ಜುಲೈ 2021 ರಲ್ಲಿ ಕೊಲಂಬಿಯಾದ ಮಹಿಳೆಯೊಬ್ಬರು ಬಂಗೀ ಜಂಪಿಂಗ್ ಮಾಡುವಾಗ 164 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಜನವರಿ 2018 ರಲ್ಲಿ, ಕೊಲೊರಾಡೋದ ಒಳಾಂಗಣ ಉದ್ಯಾನವನದಲ್ಲಿ ಬಂಗೀ ಜಂಪಿಂಗ್ ನಂತರ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. 
 

click me!