ಮನೋಕಾಮನೆ ಈಡೇರಿಸೋ ಸಂತಾನೇಶ್ವರ ಮಹಾದೇವ...

Published : Mar 08, 2019, 05:01 PM IST
ಮನೋಕಾಮನೆ ಈಡೇರಿಸೋ ಸಂತಾನೇಶ್ವರ ಮಹಾದೇವ...

ಸಾರಾಂಶ

ಭಾರತದಲ್ಲಿರೋ ಒಂದೊಂದು ದೇವಾಲಯಕ್ಕೂ ತನ್ನದೇ ಆದ ವಿಶೇಷತೆಗಳಿವೆ. ಉತ್ತರ ಪ್ರದೇಶದಲ್ಲಿರೋ ಈ ದೇವಸ್ಥಾನಕ್ಕೆ ಹೋಗಿ ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುತ್ತಂತೆ. ಮತ್ತೆ?

ಭಾರತದಲ್ಲಿ ಹಲವು ದೇವಸ್ಥಾನಗಳಿವೆ. ಅಲ್ಲಿ ಹೋಗಿ ಬೇಡಿಕೊಂಡರೆ ಮನೋಕಾಮನೆಗಳು ಈಡೇರುತ್ತದೆ ಎಂದೇ ಜನರು ನಂಬುತ್ತಾರೆ. ಅಂಥ ಮಂದಿರಗಳಲ್ಲಿ ಉತ್ತರ ಪ್ರದೇಶದಲ್ಲಿರುವ ಈ ಸಂತಾನೇಶ್ವರ ಮಹಾದೇವನ ಮಂದಿರವೂ ಒಂದು. ಈ ದೇವರನ್ನು ಬೇಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ. ಪತಿ -ಪತ್ನಿ ಈ ದೇವರ ಬಳಿ ಹೋಗಿ ಪೂಜಿಸಿದರೆ ಸಂತಾನ ಪ್ರಾಪ್ತಿಯಾಗುವಂತೆ ಬೇಡಿಕೊಂಡರೆ, ಬೇಗ ಮಗುವಾಗುತ್ತಂತೆ. 

ಇಲ್ಲಿಗೆ ಪ್ರತಿದಿನ ನೂರಾರು ಭಕ್ತರು ಸಂತಾನೇಶ್ವರನ ದರ್ಶನಕ್ಕೆ ಬರುತ್ತಾರೆ. ಸೋಮವಾರ ಈ ಮಂದಿರದಲ್ಲಿ ಸಂತಾನ ಪ್ರಾಪ್ತಿಗಾಗಿ ಬರುವ ಜೋಡಿಗಳ ಸಂಖ್ಯೆ ಅಧಿಕವಾಗಿರುತ್ತದೆ.  ಈ ದಿನ ಅಲ್ಲಿ ರುದ್ರಾಭಿಷೇಕ ಮಾಡುವುದು ಅಲ್ಲಿನ ವಿಶೇಷ. 

ಈ ಮಂದಿರ ನಿರ್ಮಾಣದ ಕುರಿತಂತೆ ಯಾವುದೇ ಸ್ಪಷ್ಟ ಇತಿಹಾಸವೂ ಇಲ್ಲ. ಆದರೆ ಸ್ಕಂದ ಪುರಾಣದ ಪ್ರಕಾರ ಕಾಶಿ ಖಂಡದಲ್ಲಿ ಸಂತಾನೇಶ್ವರ ಮಹಾದೇವನ ಉಲ್ಲೇಖನವಿದೆ. 

ಶಿವ ಪುರಾಣದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಇದರ ಅನುಸಾರ ಕಾಶಿಯ ಸಂತಾನೇಶ್ವರ ಮಹಾದೇವನ ಮುಂದೆ ಯಾವುದೇ ಮಕ್ಕಳಿಲ್ಲದ ದಂಪತಿ ಬಂದು ಜಲಾಭಿಷೇಕ ಮಾಡಿ, ಶಿವನಿಗೆ ಬಿಲ್ವ ಪತ್ರೆ ಸಮರ್ಪಿಸಿದರೆ, ಸಂತಾಸ ಸುಖ ಸಿಗುತ್ತದೆ. 

ಮಂದಿರದ ಪರಿಸರದೊಳಗೇ ಅಮೃತೇಶ್ವರ ಮಹಾದೇವನ ಮಂದಿರವಿದೆ. ಈ ದೇವನ ದರ್ಶನ ಪಡೆದರೆ ಜ್ಯೋತಿಷ್ಯದಲ್ಲಿ ಅಲ್ಪಾಯು ಯೋಗವಿದ್ದವರು ಮುಕ್ತಿ ಪಡೆಯಬಹುದೆಂಬ ನಂಬಿಕೆ ಇದೆ. ಜೊತೆಗೆ ಧೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ. 

ಈ ಮಂದಿರ ಕಾಶಿಯ ಕಾಲಭೈರವದಿಂದ ಚೌಖಂಬಾ ಕಡೆಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಜಗತ್ತು ಸುತ್ತಬಲ್ಲ ಟಾಪ್- 3 ವ್ಯಕ್ತಿಗಳಿವರು!
ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!