ನರಕ ಹೇಗಿರುತ್ತೆ? ಇಲ್ಲಿಗೆ ವಿಸಿಟ್ ಮಾಡಿದ್ರೆ ಗೊತ್ತಾಗುತ್ತೆ....

By Web Desk  |  First Published Mar 5, 2019, 3:35 PM IST

ಸ್ವರ್ಗದಂಥ ಅನೇಕ ತಾಣಗಳು ನಮ್ಮಲ್ಲಿವೆ. ಆದರೆ, ನರಕವನ್ನೂ ಪರಚಯಿಸುವಂಥ ತಾಣಗಳಿವೆ ಎಂದರೆ ನಂಬ್ತೀರಾ? ಭಯಾನಕ ಚಿಂತ್ರಹಿಂಸೆಗಳ ಅನುಭವವಾಗಬೇಕೆಂದರೆ ಈ ಸ್ಥಳಗಳಿಗೆ ವಿಸಿಟ್ ಮಾಡಿ...


ನರಕ ಅಂದ್ರೆ ಏನು? ಸಾವಿನ ನಂತರದ ಭಯಾನಕ ಲೋಕ, ಎಂದು ಜನರು ನಂಬುತ್ತಾರೆ. ತನ್ನ ಜೀವಿತಾವಧಿಯಲ್ಲಿ ಕೆಟ್ಟ ಕೆಲಸ ಮಾಡಿದರೆ ನರಕಕ್ಕೆ ಹೋಗುತ್ತಾರೆನ್ನುವ ಭಯ ಜನರಿಗಿದೆ.  ನರಕದಲ್ಲಿ ಆ ಶಿಕ್ಷೆ ಕೊಡ್ತಾರಂತೆ, ಈ ಶಿಕ್ಷೆಯಂತೆ... ಅಬ್ಬಾ ಕುದಿಯೋ ಎಣ್ಣೆ ಕೊಪ್ಪರಿಗೆಯಲ್ಲಿ ಮುಳುಗಿಸಿ, ಏಳಿಸ್ತಾರೆ...ಒಂದಾ, ಎರಡಾ? ನರಕ ಚಿತ್ರಣವೇ ಭಯಾನಕ. ಆದರೆ, ನರಕ, ಸ್ವರ್ಗವನ್ನು ಕಂಡು ಬಂದವರಾರು? ಅನುಭವ ಹೇಳಿಕೊಂಡವರಾರು?

ಆದರೂ, ಭಯಾನಕ ನರಕಲೋಕದ ದೃಶ್ಯಗಳನ್ನು ಕಣ್ಣಾರೆ ಕಾಣಬೇಕೆಂದರೆ ಥೈಲ್ಯಾಂಡ್‌ಗೆ ಭೇಟಿ ನೀಡಿ. ಇಲ್ಲಿ ವಾಂಗ್‌ ಸಾಯಿನ್‌ ಸುಕ್‌ ಹೆಲ್‌ ಗಾರ್ಡನ್‌ ಎಂಬ ನರಕ ದೇವಾಲಯವಿದೆ!

Latest Videos

undefined

ಭೌದ್ಧ ಧರ್ಮದ ನಂಬಿಕೆಯಂತೆ ಮನುಷ್ಯ ಸತ್ತ ನಂತರ ಬೇರೆ ಬೇರೆ ಸ್ತರಗಳನ್ನು ದಾಟುತ್ತಾನೆ. ಮನುಷ್ಯನ ಜೀವನದ ಪ್ರತಿ ಹಂತದ ಬಗ್ಗೆ ರೆಕಾರ್ಡ್ ಮಾಡಿಡಲಾಗುತ್ತದೆ. ಅಲ್ಲಿ ಕೆಟ್ಟದ್ದರ ಬಗ್ಗೆ ಹಾಗೂ ಒಳ್ಳೆಯದರ ಬಗ್ಗೆ ರೆಕಾರ್ಡ್ ಇರುತ್ತದೆ. ನೀವು ಒಳ್ಳೆಯದು ಮಾಡಿದ್ದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೀರಿ. ಕೆಟ್ಟದು ಮಾಡಿದರೆ ನರಕಕ್ಕೆ ಹೋಗುತ್ತೀರಿ. ಈ ನರಕಕ್ಕೆ ಹೋದಾಗ ಏನೆಲ್ಲಾ ಅನುಭವ ಉಂಟಾಗುತ್ತದೆ ಅನ್ನೋದನ್ನು ಈ ನರಕ ದೇವಾಲಯ ತಿಳಿಸುತ್ತದೆ. 

ಥೈಲ್ಯಾಂಡ್‌ ಹೆಲ್‌ ಹಾರರ್‌ ಪಾರ್ಕ್‌ ಎಂದೇ ಜನಪ್ರಿಯವಾಗಿರುವ ಈ ದೇವಾಲಯ ಬ್ಯಾಂಕಾಕ್‌ನಿಂದ ಸ್ವಲ್ಪ ದೂರದಲ್ಲಿದೆ. ಈ ಹೆಲ್‌ ಟೆಂಪಲ್‌ ಅನ್ನು ಬೌದ್ಧ ಧರ್ಮ ಗುರು ಪ್ರಕ್ರು ವಿಶಾಂಜಲಿಕೋನ್‌ ನಿರ್ಮಿಸಿದ್ದಾರೆ. ಅವರಿಗೆ ಈ ಬೌದ್ಧ ದೇವಾಲಯ ನಿರ್ಮಿಸುವಂತೆ ಕನಸು ಬಿತ್ತಿತ್ತಂತೆ. ಇದು ಬೌದ್ಧ ಧರ್ಮದ ದೇವಾಲಯವಾಗಿದೆ.

ಈ ನದಿ ಮೇಲೆ ಸಾಗಿದರೆ ಕನ್ನಡಿ ಮೇಲೆ ನಡೆದಂಥ ಅನುಭವ...

ಈ ದೇವಾಲಯದ ತುಂಬಾ ಭಯಾನಕ ಮೂರ್ತಿಗಳಿವೆ. ನರಕ ಲೋಕದಲ್ಲಿ ನಡೆಯುವಂಥ ಪ್ರತಿಯೊಂದೂ ಸಂಗತಿಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಬೌದ್ಧ ಧರ್ಮದಲ್ಲಿ ತಿಳಿಸಲಾಗಿದೆಯೋ, ಅದೇ ರೀತಿಯ ಚಿತ್ರಣವನ್ನು ಕಾಣಬಹುದು. ಯಾವ ಪಾಪಕ್ಕೆ ಯಾವ ರೀತಿಯ ಹಿಂಸೆಯನ್ನು ನೀಡಲಾಗುತ್ತದೆ ಅನ್ನೋದನ್ನು ಇಲ್ಲಿ ಭಯಾನಕವಾಗಿ ಸೃಷ್ಟಿಸಲಾಗಿದೆ. ಒಟ್ಟಿನಲ್ಲಿ ಈ ದೇವಾಲಯದಲ್ಲಿ ನರಕ ದರ್ಶನವಾಗುವುದು ಗ್ಯಾರಂಟಿ. 

click me!