ಗಮನಿಸಿ ನೋಡಿ, ಇವರು ಯಾರು ಅಂತ ಗೊತ್ತಾಯ್ತಾ? ಫೇಮಸ್‌ ಜೋಡಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

By Mahmad Rafik  |  First Published Jul 10, 2024, 11:05 AM IST

ಮದುವೆ ವಾರ್ಷಿಕೋತ್ಸವಕ್ಕೆ ಬಿಗ್‌ಬಾಸ್ ಶೋ ಮಾಜಿ ಸ್ಪರ್ಧಿಗಳಾದ ಕಿರಿಕ್ ಕೀರ್ತಿ, ನಿರಂಜನ್ ದೇಶಪಾಂಡೆ ವಿಶ್ ಮಾಡಿದ್ದಾರೆ.ನೂರ್ಕಾಲ ಚೆನ್ನಾಗಿರಿ. ಹನ್ನೊಂದು ನೂರಾ ಒಂದಾಗ್ಲಿ. ನಿಮ್ಮ ಪ್ರತಿ ಪ್ರಯಾಣವೂ ಸುರಕ್ಷಿತವಾಗಿರಲಿ ಎಂದು ಕಿರಿಕ್ ಕೀರ್ತಿ ಶುಭ ಹಾರೈಸಿದ್ದಾರೆ.


ಬೆಂಗಳೂರು: ಫ್ಲೈಯಿಂಗ್ ಪಾಸ್‌ಪೋರ್ಟ್ ದಂಪತಿ ಕಿರಣ್ ಮತ್ತು ಆಶಾ ತಮ್ಮ 11ನೇ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ಹಿಂದೆ ವಾರ್ಷಿಕೋತ್ಸವದ ಹಿನ್ನೆಲೆ ಕಿರಣ್ ಮತ್ತು ಆಶಾ ಮದುವೆ ಫೋಟೋಗಳನ್ನು ತಮ್ಮ ವೀಕ್ಷಕರ ಜೊತೆಯಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ನೆಟ್ಟಿಗರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಹೀಗೆ ನೀವಿಬ್ಬರೂ ನಗುತ್ತಾ ಇರಿ, ನಿಮ್ಮಿಂದ ಮತ್ತಷ್ಟು ವಿದೇಶ ಪ್ರವಾಸದ ವಿಡಿಯೋಗಳನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಕಮೆಂಟ್ ಮಾಡಿದ್ದಾರೆ. ಕನ್ನಡಿಗರಾದ ಕಿರಣ್ ಮತ್ತು ಆಶಾ ಪ್ರವಾಸಿ ದಂಪತಿಯಾಗಿದ್ದು, ಪ್ರತಿಯೊಂದು ದೇಶಕ್ಕೆ ತೆರಳಿ ಅಲ್ಲಿಯ ಸಂಸ್ಕೃತಿಯನ್ನು ಅನಾವರಣ ಮಾಡುತ್ತಾರೆ. ಕನ್ನಡದಲ್ಲಿಯೇ ಪ್ರತಿಯೊಂದು ಮಾಹಿತಿಯನ್ನು ನೀಡುವದರಿಂದ ಪ್ರತಿ ಕನ್ನಡ ನೆಟ್ಟಿಗರಿಗೆ ಕಿರಣ್ ಮತ್ತು ಆಶಾ ಚಿರಪರಿಚತರು. 

ಇಷ್ಟು ಮಾತ್ರವಲ್ಲದೇ ಪ್ರತಿ ದೇಶದಲ್ಲಿ ಕನ್ನಡದ ಬಾವುಟ ಹಾರಿಸುವ ಮೂಲಕ ಕನ್ನಡಾಭಿಮಾನವನ್ನು ಪ್ರವಾಸಿ ದಂಪತಿ ತೋರಿಸಿದ್ದಾರೆ. ವಿದೇಶ ಪ್ರವಾಸ ಕೈಗೊಳ್ಳುವ ಕಿರಣ್-ಆಶಾ ಅಲ್ಲಿಯ ಸಣ್ಣ ಸಣ್ಣ ಗ್ರಾಮಗಳಿಗೂ ಭೇಟಿ ನೀಡುತ್ತಾರೆ. ಅಲ್ಲಿಯ ಜನರ ಜೊತೆ ಮಾತನಾಡಿ ಅವರ ಸಂಸ್ಕೃತಿ, ಜೀವನಶೈಲಿ, ಆಹಾರ ಹೀಗೆ ಹಲವು ವಿಷಯಗಳನ್ನು ಕನ್ನಡಿಗರಿಗೆ ಪರಿಚಯ ಮಾಡಿಸುತ್ತಿರುತ್ತಾರೆ. ಇದುವರೆಗೂ ಯಾರೂ ತೋರಿಸದ ವಿದೇಶದ ಸ್ಥಳಗಳನ್ನು ಕಿರಣ್ ಮತ್ತು ಆಶಾ ತಮ್ಮ ವೀಕ್ಷಕರಿಗೆ ತೋರಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 

Tap to resize

Latest Videos

ಹೇಗಿರುತ್ತೆ ಆಶಾ-ಕಿರಣ್ ಪ್ರವಾಸ

ಪ್ರವಾಸದ ಜೊತೆಯಲ್ಲಿ ಕೆಲಸವನ್ನು ಸಹ ಕಿರಣ್-ಆಶಾ ಮಾಡುತ್ತಿರುತ್ತಾರೆ. ಇದನ್ನು ಹಲವು ಬಾರಿ ಕಿರಣ್ ಮತ್ತು ಆಶಾ ತಮ್ಮ ವಿಡಿಯೋಗಳ ಮೂಲಕ ತೋರಿಸಿದ್ದಾರೆ. ಪ್ರವಾಸದ ಸಂದರ್ಭದಲ್ಲಿ ತಾವು ಹೇಗೆ ಕೆಲಸ ಮಾಡುತ್ತೇವೆ ಮತ್ತು ಎಲ್ಲಿ ಉಳಿದುಕೊಳ್ಳುತ್ತೇವೆ ಎಂಬುದನ್ನು ವಿಡಿಯೋಗಳಲ್ಲಿ ತೋರಿಸಿದ್ದಾರೆ. ಕೆಲವೊಮ್ಮೆ ಎಷ್ಟೇ ದಣಿವು ಆಗಿದ್ದರೂ ಕಚೇರಿಯ ಕೆಲಸ ಮಾಡುತ್ತೇವೆ. ಪ್ರಯಾಣದ ಸಂದರ್ಭದಲ್ಲಿಯೇ ವಿಡಿಯೋಗಳನ್ನು ಎಡಿಟ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಕೆಲಸ ಮಾಡುತ್ತೇವೆ ಎಂದು ಇತ್ತೀಚಿನ ವಿಡಿಯೋವೊಂದರಲ್ಲಿ ಆಶಾ ತಿಳಿಸಿದ್ದರು. 

ಮಧ್ಯರಾತ್ರಿ ವಿಚಿತ್ರ ಕೂಗು- ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ.ಬ್ರೋ

ರೈಲು ಪ್ರಯಾಣದ ಸಂದರ್ಭದಲ್ಲಿ ಒಬ್ಬರು ಮಾತ್ರ ಸೂಪರ್ ಕ್ಲಾಸ್ ಟಿಕೆಟ್ ಖರೀದಿ ಮಾಡಿದ್ರೆ, ಮತ್ತೊಬ್ಬರು ಜನರಲ್ ಕೋಚ್ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿದ್ದರು. ಈ ಮೂಲಕವೂ ನಾವು ಹಣ ಉಳಿಸುತ್ತೇವೆ. ಅಂದು ಆಶಾ ಎಲ್ಲಾ ಐಷಾರಾಮಿ ವ್ಯವಸ್ಥೆ ಹೊಂದಿರುವ ಕೋಚ್‌ನಲ್ಲಿ ಪ್ರಯಾಣಿಸಿದ್ದರು. ಕಿರಣ್ ಅದೇ ರೈಲಿನ ಸಾಮಾನ್ಯ ಬೋಗಿಯಲ್ಲಿದ್ದರು. ಆ ರೈಲು ಹೇಗಿದೆ ಎಂಬುದನ್ನು  ಸಹ ವಿಡಿಯೋದಲ್ಲಿ ತೋರಿಸಿದ್ದರು. ಕೆಲವು ಸಂದರ್ಭದಲ್ಲಿ ಹಣ ಉಳಿಸಲು ಏರ್‌ಪೋರ್ಟ್ ಲಾಂಜ್‌ನಲ್ಲಿಯೇ ಕಿರಣ್ ಮತ್ತು ಆಶಾ ನಿದ್ದೆ ಮಾಡಿದ್ದುಂಟು. 

2 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳು 

ಫ್ಲೈಯಿಂಗ್ ಪಾಸ್‌ಪೋರ್ಟ್‌ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಯನ್ನು ಆಶಾ ಮತ್ತು ಕಿರಣ್ ತೆರೆದಿದ್ದಾರೆ. ಈ ಖಾತೆಯನ್ನು ಎರಡೂವರೆ ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ಯುಟ್ಯೂಬ್‌ನಲ್ಲಿ 5.28 ಲಕ್ಷ ಸಬ್‌ಸ್ಕ್ರೈಬರ್ ಹೊಂದಿದ್ದಾರೆ. ಇದೇ ರೀತಿ ಕನ್ನಡದಲ್ಲಿ ಡಾ.ಬ್ರೋ ಮತ್ತು ಬ್ಯಾಕ್‌ಪ್ಯಾಕ್ ವಿಥ್ ಮಹಾಲಕ್ಷ್ಮಿ ಸೇರಿದಂತೆ ಹಲವರು ವಿದೇಶಕ್ಕೆ ತೆರಳಿ ತಮ್ಮ ಪ್ರವಾಸದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ.

ಡಾ.ಬ್ರೋಗೆ ಏನಾಗಿದೆ? ಎಲ್ಲಾ ಪ್ರಶ್ನೆಗಳಿಗೆ ಸಿಕ್ತು ಉತ್ತರ, ಗ್ಲೋಬಲ್‌ ಕನ್ನಡಿಗ ಯೂಟ್ಯೂಬರ್‌ ಬಿಚ್ಚಿಟ್ರು ಸತ್ಯ!

ಆಶಾ-ಕಿರಣ್ ಮದುವೆ ವಾರ್ಷಿಕೋತ್ಸವಕ್ಕೆ ಬಿಗ್‌ಬಾಸ್ ಶೋ ಮಾಜಿ ಸ್ಪರ್ಧಿಗಳಾದ ಕಿರಿಕ್ ಕೀರ್ತಿ, ನಿರಂಜನ್ ದೇಶಪಾಂಡೆ ವಿಶ್ ಮಾಡಿದ್ದಾರೆ.ನೂರ್ಕಾಲ ಚೆನ್ನಾಗಿರಿ. ಹನ್ನೊಂದು ನೂರಾ ಒಂದಾಗ್ಲಿ. ನಿಮ್ಮ ಪ್ರತಿ ಪ್ರಯಾಣವೂ ಸುರಕ್ಷಿತವಾಗಿರಲಿ ಎಂದು ಕಿರಿಕ್ ಕೀರ್ತಿ ಶುಭ ಹಾರೈಸಿದ್ದಾರೆ. ನೂರು ವರ್ಷ ಚೆನ್ನಾಗಿರಿ ಎಂದು ನಿರಂಜನ್ ದೇಶಪಾಂಡೆ ಕಮೆಂಟ್ ಮಾಡಿದ್ದಾರೆ.

click me!