ಮಧ್ಯರಾತ್ರಿ ವಿಚಿತ್ರ ಕೂಗು- ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ.ಬ್ರೋ

By Suchethana DFirst Published Jul 4, 2024, 12:37 PM IST
Highlights

ಜಾರ್ಜಿಯಾ ಪ್ರವಾಸದಲ್ಲಿರುವ ಡಾ.ಬ್ರೋ ಅರ್ಥಾತ್​ ಗಗನ್ ಶ್ರೀನಿವಾಸ್​ ಅವರು, ಅಲ್ಲಿಯ ಭಯಾನಕ ಹಾಗೂ ಸುಂದರ ಅನುಭವಗಳ ಬುತ್ತಿಯನ್ನು ವಿವರಿಸಿದ್ದು ಹೀಗೆ...
 

 ಸದ್ಯ ಜಾರ್ಜಿಯಾ ಪ್ರವಾಸದಲ್ಲಿದ್ದಾರೆ ಡಾ.ಬ್ರೋ  ಅರ್ಥಾತ್​ ಗಗನ್​ ಶ್ರೀನಿವಾಸ್​.  ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ಕನ್ನಡದಲ್ಲಿಯೇ ಜಾರ್ಜಿಯಾದ ವಿವಿಧ ಸ್ಥಳಗಳ ಮಾಹಿತಿ ನೀಡಿರುವ ಅವರು ಕುತೂಹಲದ ವಿಷಯವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಮಧ್ಯರಾತ್ರಿ ಟೆಂಟ್​ನಲ್ಲಿ ಇರುವ ಡಾ.ಬ್ರೋ ಅಲ್ಲಿ ಕೇಳಿಸುವ ವಿಚಿತ್ರ ಕೂಗುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಪ್ಪೆಗಳ ಶಬ್ದ ಇದು ಎಂದು ತೋರಿಸಿದರೂ ಮಧ್ಯರಾತ್ರಿಯ ಆ ಶಬ್ದ, ವಿಚಿತ್ರ ಕೂಗುಗಳು ನಡುಕ ಹುಟ್ಟಿಸುವಂತಿದೆ. ಟೆಂಟ್​ನಲ್ಲಿ ಈ ಭಯಾನಕ ದೃಶ್ಯಗಳನ್ನು ತೋರಿಸಿರುವ ಡಾ.ಬ್ರೋ ಬೆಳಗಿನ ಸುಂದರಿಯ ಬಗ್ಗೆಯೂ ತೋರಿಸಿಕೊಟ್ಟಿದ್ದಾರೆ. ಸುಂದರ ಪ್ರಕೃತಿಯ ರಮ್ಯಕಾವ್ಯವನ್ನು ಗಗನ್​ ತೋರಿಸಿದ್ದಾರೆ. ಸ್ವರ್ಗದಲ್ಲಿ ಇರುವಂತೆಯೇ ಭಾಸವಾಗುತ್ತದೆ. ಕಣ್ಮನ ಸೆಳೆಯುವ ಪ್ರಕೃತಿಯ ಅಂದವನ್ನು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸುಂದರವಾಗಿ ಸೆರೆ ಹಿಡಿದಿದ್ದಾರೆ ಡಾ. ಬ್ರೋ. 

ಅಷ್ಟಕ್ಕೂ, ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ  ನಮಸ್ಕಾರ​ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ  ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. 

ಅಂತರ್​ಧರ್ಮೀಯ ಪ್ರೇಮಿಗಳ ಕೌತುಕದ ಕಥೆ: ಗಂಟೆಗೊಮ್ಮೆ ಸ್ಮಾರಕಗಳ ಸಮಾಗಮ! ಡಾ.ಬ್ರೋ ಬಾಯಲ್ಲಿ ಕೇಳಿ...

ಇದಕ್ಕೂ ಮುನ್ನ ಜಾರ್ಜಿಯಾದಲ್ಲಿನ ಮುಸ್ಲಿಂ ಹುಡುಗ ಮತ್ತು ಕ್ರಿಶ್ಚಿಯನ್ ಹುಡುಗಿಯ ಕುತೂಹಲದ ಪ್ರೇಮ ಕಥೆಯ ಬಗ್ಗೆ ವಿವರಿಸಿದ್ದರು. ಪ್ರೀತಿಗೆ ಜಾತಿ-ಧರ್ಮದ ಭೇದವೇ ಇಲ್ಲವಲ್ಲ. ಇವರಿಬ್ಬರೂ ಪ್ರೀತಿಸುತ್ತಾರೆ. ಆದರೆ ಅಲ್ಲಿ ಅವರ  ಪ್ರೀತಿಗೆ ನಿಷೇಧ ಎದುರಾಗುತ್ತದೆ. ಅಷ್ಟಕ್ಕೂ ಹುಡುಗನ ಹೆಸರು ಅಲಿ. ಈಗ ಅಜರ್ಬೇಜಾನಿ (Azerbaijani) ದೇಶದವ. ಹುಡುಗಿ ಜಾರ್ಜಿಯಾದ ರಾಜಕುಮಾರಿ ನಿನೊ. ಇವರಿಬ್ಬರ ನಡುವೆ ಅಂತಸ್ತು, ಐಶ್ವರ್ಯದ ಜೊತೆ ಜೊತೆಗೇ ಧರ್ಮವು ಮದುವೆಗೆ ಅಡ್ಡಿಬರುತ್ತದೆ. ಆದರೆ ಎಲ್ಲಾ ಸವಾಲುಗಳನ್ನು ಎದುರಿಸಿ ಇವರು ಇನ್ನೇನು ಮದುವೆಯಾಗಬೇಕು ಎಂದುಕೊಳ್ಳುತ್ತಾರೆ. ತನ್ನ ದೇಶದಿಂದ ಅಲಿ ಹೊರಟ ತಕ್ಷಣವೇ ವಿಶ್ವ ಯುದ್ಧ ಶುರುವಾಗುತ್ತದೆ. ಅಲ್ಲಿ ಆತ ಪ್ರಾಣ ಕಳೆದುಕೊಳ್ಳುತ್ತಾನೆ.  ನಿನೊ ಕೂಡ ಸಾಯುತ್ತಾಳೆ. ಇವರ ಪ್ರೀತಿಯ ಸಂಕೇತವೆಂದು ಇದನ್ನು ಜಾರ್ಜಿಯಾದಲ್ಲಿ ನಿರ್ಮಿಸಲಾಗಿದೆ. 

ಜಾರ್ಜಿಯಾದಲ್ಲಿನ ಈ ಕುತೂಹಲದ ಮಾಹಿತಿ ತೆರೆದಿಟ್ಟಿದ್ದಾರೆ ಡಾ.ಬ್ರೋ. ನಿನೊ ಮತ್ತು ಅಲಿಯ ಪ್ರೇಮದ ಸಂಕೇತವಾಗಿ ಎರಡು ಆಕೃತಿಗಳನ್ನು ನಿರ್ಮಿಸಲಾಗಿದೆ. ಹತ್ತು ನಿಮಿಷಗಳ ಕಾಲ, ಆಕೃತಿಗಳು ತಮ್ಮ ನೃತ್ಯ ಪ್ರದರ್ಶಿಸುತ್ತವೆ, ಎರಡೂ ಆಕೃತಿಗಳು ಅಲ್ಲಿ ಇಲ್ಲಿ ರೌಂಡ್​ ಹಾಕುತ್ತಾ ಬಂದು ಸಮಾಗಮಗೊಳ್ಳುತ್ತವೆ.  ಗಂಟೆಗೊಮ್ಮೆ ಹೀಗ ಸಮಾಗಮಗೊಳ್ಳುತ್ತವೆ. ಪ್ರತಿಮೆಗಳ ಎತ್ತರವು ಸರಾಸರಿ ಮನುಷ್ಯನಿಗಿಂತ ಸ್ವಲ್ಪ ಎತ್ತರವಾಗಿದೆ, ಆದರೆ ಅವು ನಿಂತಿರುವ ಎತ್ತರದ ಪೀಠವು ಅವುಗಳನ್ನು ಸ್ಮಾರಕವನ್ನಾಗಿಸಲಾಗಿದೆ.  ಬಟುಮಿಯಲ್ಲಿನ ಅತ್ಯಂತ ರೋಮ್ಯಾಂಟಿಕ್ ಪ್ರತಿಮೆ ಇದು ಎನ್ನಲಾಗಿದೆ. ಇವರ ಅಮರ ಪ್ರೀತಿಯನ್ನು  ಚಲನೆಗಳಲ್ಲಿ ಜೀವಂತವಾಗಿದೆ. ಸಮುದ್ರದ ಜೊತೆಯಲ್ಲಿ ಸೂರ್ಯಾಸ್ತದ ಕಿರಣಗಳಲ್ಲಿ ಈ ಆಕೃತಿ ಮೋಡಿ ಮಾಡುತ್ತದೆ. 
  

ಅತಿದೊಡ್ಡ ಮುಸ್ಲಿಂ ರಾಷ್ಟ್ರಕ್ಕೆ ಗಣಪನ ಕಾವಲು! ಜ್ವಾಲಾಮುಖಿಯ ಬದಿ ಕುಳಿತ ಕೌತುಕದ ಸ್ಟೋರಿ ಡಾ.ಬ್ರೋ ಬಾಯಲ್ಲಿ...

 

 

click me!