ಸಮುದ್ರಕ್ಕೆ ಉಚ್ಚೆ ಹೊಯ್ದರೆ 67,000 ರೂ ದಂಡ, ಪತ್ತೆ ಹಚ್ಚುವುದು ಯಾರು ಎಂದ ನೆಟ್ಟಿಗರು!

By Chethan Kumar  |  First Published Jul 7, 2024, 5:16 PM IST

ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ 67,000 ರೂಪಾಯಿ ದಂಡ, ಮತ್ತೆ ತಪ್ಪು ಮಾಡಿದರೆ ದಂಡದ ಮೊತ್ತ 1 ಲಕ್ಷ ರೂಪಾಯಿ. ಸಮುದ್ರದ ನೀರು ಶುಚಿಯಾಗಿಡಲು ಈ ಕ್ರಮ ಜಾರಿಗೊಳಿಸಲಾಗಿದೆ. ಆದರೆ ಇದನ್ನು ಪತ್ತೆ ಹಚ್ಚವುದು ಯಾರು? ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
 


ಮಾರ್ಬೆಲ್ಲಾ(ಜು.07) ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ನಿಯಮ ಮರೆತು ಶುಚಿತ್ವವನ್ನು ನಿರ್ಲಕ್ಷಿಸುವುದು ಹೊಸದೇನಲ್ಲ. ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬೀಸಾಡಿ ಗಲೀಜು ಮಾಡಿದ ಘಟನೆಗಳು ನಡೆಯುತ್ತಲೇ ಇರುತ್ತದೆ. ಇದೀಗ ಪ್ರವಾಸಿ ತಾಣದ ಬೀಚ್‌ಗಳ ಶುಚಿತ್ವ ಕಾಪಾಡಲು ಹೊಸ ನಿಮಯ ಜಾರಿಗೆ ತರಲಾಗಿದೆ. ಸಮುದ್ರದಲ್ಲಿ ಆಟವಾಡುತ್ತಾ, ಬೀಚ್ ಬದಿಯಲ್ಲಿ, ಅಥವಾ ಸಮುದ್ರಕ್ಕೆ ಮೂತ್ರ ವಿಸರ್ಜನೆ ಮಾಡಿದರೆ ಬರೋಬ್ಬರಿ 67,000 ರೂಪಾಯಿ ದಂಡ. 2ನೇ ಬಾರಿ ಈ ತಪ್ಪು ಮಾಡಿದರೆ 1 ಲಕ್ಷ ರೂಪಾಯಿ ದಂಡ. ಈ ನಿಯಮ ಜಾರಿಯಾಗಿರುವುದು ಸ್ಪೇನ್‌ನ ಮಾರ್ಬೆಲ್ಲಾದಲ್ಲಿ. ಇಲ್ಲಿಗೆ ಪ್ರವಾಸದ ಪ್ಲಾನ್ ನಿಮ್ಮದಾಗಿದ್ದರೆ ಎಚ್ಚರವಹಿಸುವುದು ಸೂಕ್ತ.

ಮಾರ್ಬೆಲ್ಲಾ ಸಿಟಿಯಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ. ಸುಂದರ ಬೀಚ್‌ಗಳನ್ನು ಹೊಂದಿರುವ ಈ ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಕಿಕ್ಕಿರಿದು ತುಂಬುತ್ತಾರೆ. ವೀಕೆಂಡ್‌ಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರವಾಸಿಗರು ತುಂಬುತ್ತಾರೆ. ಆದರೆ ಬೀಚ್‌ನಲ್ಲಿ ಆಟವಾಡುತ್ತಾ ಕಾಲಕಳೆಯುವ ಪ್ರವಾಸಿಗರು, ಸಮುದ್ರ ನೀರಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ನೀರಿನ ಶುಚಿತ್ವ, ಹೈಜೀನ್ ಸಮಸ್ಯೆಯಾಗುತ್ತಿದೆ. ಹಲವರು ಪ್ರವಾಸಿಗರು ಈ ಕುರಿತು ದೂರು ನೀಡಿದ್ದಾರೆ. ಹೀಗಾಗಿ ಮಾರ್ಬೆಲ್ಲಾ ನಗರ ಕಠಿಣ ನಿಯಮ ಜಾರಿಗೊಳಿಸಿದೆ.

Tap to resize

Latest Videos

undefined

Ettina Bhuja: ಕಾಫಿನಾಡ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ: ಕಾರಣವೇನು?

ಸ್ಥಳೀಯ ಕೋಸ್ಟಲ್ ಸಿಬ್ಬಂದಿಗೆ ಅಧಿಕಾರ ನೀಡಲಾಗಿದೆ. ಆದರೆ ಈ ನಿಯಮ ಜಾರಿಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕಿಕ್ಕಿರಿದು ಸೇರಿದ ಜನಸಂದಣಿಯಲ್ಲಿ ಸಮುದ್ರದ ನೀರಿನಲ್ಲಿ ಯಾರು ಮೂತ್ರ ವಿಸರ್ಜನೆ ಮಾಡುತ್ತಾರೆ ಅನ್ನೋದು ಪತ್ತೆ ಹಚ್ಚುವುದು ಹೇಗೆ? ಬೀಚ್ ನೀರಿನೊಳಗೆ ನಿಂತು ಮೂತ್ರ ವಿಸರ್ಜನೆ ಮಾಡಿದರೆ ಪತ್ತೆ ಹಚ್ಚುವುದು ಹೇಗೆ? ಪ್ರತಿಯೊಬ್ಬರ ಮೇಲೆ ನಿಗಾ ಇಡಲು ಸಾಧ್ಯವಿಲ್ಲ. ಹೀಗಾಗಿ ಈ ನಿಯಮ ಜಾರಿಯಲ್ಲಿ ಲೋಪಗಳಿವೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಮಾರ್ಬೆಲ್ಲಾ ಸಿಟಿ ಆಡಳಿತ ತಂದಿರುವ ಹೊಸ ನಿಯಮ ಇದೀಗ ಕರಾವಳಿ ಸಿಬ್ಬಂಧಿಗಳಿಗೂ ತಲೆನೋವಾಗಿದೆ. ಯಾರು ನೀರಿನಲ್ಲಿ ಆಟವಾಡುತ್ತಿದ್ದಾರೆ? ಯಾರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ ಅನ್ನೋದು ಪತ್ತೆ ಹಚ್ಚುವುದು ಸುಲಭದ ಮಾತಲ್ಲ. ಹೀಗಾಗಿ ಇದು ಕಷ್ಟ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇತ್ತ ಪ್ರವಾಸಿಗರಲ್ಲಿ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿದೆ. ಕೆಲವರು ಈ ನಿಯಮ ಜಾರಿ ಸಾಧ್ಯವಿಲ್ಲ ಎಂದರೆ ಮತ್ತೆ ಕೆಲವರು ಜಾರಿ ಮಾಡಿದ ಬಳಿಕ ಎದುರಾಗುವ ಸವಾಲು ಆಧರಿಸಿ ತಿದ್ದುಪಡಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನಿಯಮಗಳ್ನು ಪ್ರವಾಸಿಗರು ಪಾಲಿಸಬೇಕು ಎಂದು ಹಲವರು ಸೂಚಿಸಿದ್ದಾರೆ.

ಹಿಮಾಲಯದ ತಪ್ಪಲಿನಲ್ಲಿರೋ ಈ ರಹಸ್ಯಮಯ ತಾಣದ ಬಗ್ಗೆ ಗೊತ್ತಿದ್ಯಾ?
 

click me!