ಹೆಡ್‌ಸೆಟ್ ಬಳಸಲೊಪ್ಪದೇ ಕಂಠಪೂರ್ತಿ ಕುಡಿದು ಜೋರಾಗಿ ಸೌಂಡ್ ಇಟ್ಟು ವೀಡಿಯೋ ನೋಡ್ತಿದ್ದ ಮಹಿಳೆ ವಿಮಾನದಿಂದ ಕಿಕ್‌ಔಟ್

Published : Mar 12, 2026, 01:09 PM IST
Woman removed from flight for playing video

ಸಾರಾಂಶ

ವಿಮಾನದಲ್ಲಿ, ಇಯರ್ ಫೋನ್ ಬಳಸಲು ನಿರಾಕರಿಸಿ ಜೋರಾಗಿ ಸೌಂಡ್ ಕೊಟ್ಟು ವೀಡಿಯೋ ನೋಡುತ್ತಿದ್ದ ಮಹಿಳೆಯನ್ನು ಸಿಬ್ಬಂದಿ ವಿಮಾನದಿಂದ ಕೆಳಗಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಕೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.

ಇಯರ್ ಫೋನ್ ಹಾಕುವುದಕ್ಕೆ ನಕ್ರಾ ಮಾಡಿದ ಮಹಿಳೆ

ಇಯರ್ ಫೋನ್ ಹಾಕುವುದಕ್ಕೆ ಒಪ್ಪದೇ ವಿಮಾನದಲ್ಲಿ ಜೋರಾಗಿ ಸೌಂಡ್ ಕೊಟ್ಟು ವೀಡಿಯೋ ನೋಡುತ್ತಾ ಇತರ ಪ್ರಯಾಣಿಕರಿಗೂ ಕಿರಿಕಿರಿ ಮಾಡುತ್ತಿದ್ದ ಮಹಿಳೆಯನ್ನು ವಿಮಾನದ ಸಿಬ್ಬಂದಿ ವಿಮಾನದಿಂದ ಕೆಳಗಿಳಿಸಿದ ಘಟನೆ ನಡೆದಿದೆ. ಮಿಯಾಮಿಯಿಂದ ತಂಪಾಗೆ ಹೊರಟಿದ್ದ ಅಮೆರಿಕನ್ ಏರ್‌ಲೈನ್ಸ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬಳು ವಿಮಾನದಲ್ಲಿ ಕುಳಿತು ವೀಡಿಯೋ ನೋಡುತ್ತಿದ್ದು ಕಿವಿಗೆ ಹೆಡ್‌ಸೆಟ್ ಹಾಕುವುದಕ್ಕೆ ನಿರಾಕರಿಸಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಸಿಬ್ಬಂದಿ ಆಕೆಯನ್ನು ವಿಮಾನದಿಂದ ಕೆಳಗಿಳಿಸಿದ್ದು, ಘಟನೆ ಬಗ್ಗೆ ಮಹಿಳೆ ಆಘಾತಗೊಂಡಿದ್ದಾಳೆ.

ಜೋರಾಗಿ ಸೌಂಡ್ ಕೊಟ್ಟು ವೀಡಿಯೋ ನೋಡ್ತಿದ್ದವಳ ಕೆಳಗಿಳಿಸಿದ ಸಿಬ್ಬಂದಿ

ಈ ಘಟನೆಯ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಪ್ರಕಾರ ಮಹಿಳೆ ಕಂಠಪೂರ್ತಿ ಕುಡಿದಿದ್ದು, ವೀಡಿಯೋ ನೋಡುವಾಗ ಹೆಡ್‌ಸೆಟ್ ಹಾಕುವಂತೆ ಹೇಳಿದಾಗ ಹೆಡ್‌ಸೆಟ್ ಹಾಕುವುದಕ್ಕೆ ನಿರಾಕರಿಸಿ ಜೋರಾಗಿ ಸೌಂಡ್ ಇಟ್ಟು ವಿಡಿಯೋ ನೋಡಿದ್ದಾಳೆ.

ಮಿಯಾಮಿಯಿಂದ ತಂಪಾಗೆ ಹೋಗುವ ಅಮೇರಿಕನ್ ಏರ್ಲೈನ್ಸ್ ವಿಮಾನದಲ್ಲಿ ಕುಡಿದ ಮತ್ತಿನಲ್ಲಿದ್ದ ಮಹಿಳೆಯೊಬ್ಬರು ಹೆಡ್‌ಫೋನ್‌ಗಳನ್ನು ಬಳಸಲು ನಿರಾಕರಿಸಿದರು ಮತ್ತು ಅವರ ಫೋನ್‌ನಿಂದ ವೀಡಿಯೊಗಳನ್ನು ಜೋರಾಗಿ ಪ್ಲೇ ಮಾಡುತ್ತಿದ್ದರು ಎಂದು ಆ ವ್ಯಕ್ತಿ ಟಿಕ್‌ಟಾಕ್‌ನಲ್ಲಿ ಹೇಳಿರುವುದಾಗಿ ಎಕ್ಸ್ ಬಳಕೆದಾರ ಕಾಲಿನ್ ರಗ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:  Prison break:ಜೈಲಿನಿಂದ ತಪ್ಪಿಸಿಕೊಳ್ಳಲು ನಿರಂತರ 5 ವರ್ಷ ಸುರಂಗ ಕೊರೆದ ಕೈದಿ ತಲುಪಿದ್ದು ಎಲ್ಲಿಗೆ?

ವಿಮಾನವು ಗೇಟ್‌ನಿಂದ ಹೊರಡುವ ಮೊದಲೇ ವಿಮಾನ ಸಿಬ್ಬಂದಿ ಹೆಡ್‌ಫೋನ್‌ಗಳನ್ನು ಬಳಸುವಂತೆ ಕೇಳಿಕೊಂಡರು ಎಂದು ಅವರು ಹೇಳಿದ್ದಾರೆ. ಆದರೆ ಮಹಿಳೆ ತಕ್ಷಣವೇ ಕೋಪಗೊಂಡರು ಅಸಭ್ಯವಾಗಿ ವರ್ತಿಸಿದರು. ಈ ವೇಳೆ ಅಮೇರಿಕನ್ ಏರ್‌ಲೈನ್ಸ್‌ ಉದ್ಯೋಗಿಗಳು ಈ ಸಂದರ್ಭವನ್ನು ಚೆನ್ನಾಗಿ ನಿರ್ವಹಿಸಿದರು ಮತ್ತು ಎಲ್ಲಾ ಸಮಯದಲ್ಲೂ ಗೌರವದಿಂದ ವರ್ತಿಸಿದರು ಎಂದು ಅವರು ಬರೆದುಕೊಂಡಿದ್ದಾರೆ.

ವೈರಲ್ ಆದ ದೃಶ್ಯದಲ್ಲಿ ಮಹಿಳೆ ತನ್ನನ್ನು ಕೆಳಗಿಳಿಸುವುದಕ್ಕೆ ಮುಂದಾದ ವಿಮಾನ ಸಿಬ್ಬಂದಿಯ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ನಾನು 30 ಸೆಕೆಂಡ್‌ಗಳ ವೀಡಿಯೋವನ್ನು 50 ಶೇಕಡಾ ಸೌಂಡ್ ಇಟ್ಟು ಕೇಳುತ್ತಿದೆ ಈ ಫಾ***ಗ್ ಕಾರಣಕ್ಕೆ ನೀವು ನನ್ನನ್ನು ವಿಮಾನದಿಂದ ಹೊರಗೆ ಕಳುಹಿಸುವಿರಾ ಎಂದು ಆಕೆ ವಿಮಾನದ ಸಿಬ್ಬಂದಿ ಜೊತೆ ಜಗಳವಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ನಂತರ ಪೊಲೀಸರು ಹಾಗೂ ವಿಮಾನದ ಸಿಬ್ಬಂದಿ ಆಕೆಯನ್ನು ವಿಮಾನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ:  ದಯವಿಟ್ಟು ನನ್ನ ಬೆಳೆ ಖರೀದಿಸಿ... ನನ್ನ ಮಗಳ ಮದುವೆ ನಾಳೆ: ಮಾರುಕಟ್ಟೆಯಲ್ಲಿ ಅಳಲು ಶುರು ಮಾಡಿದ ರೈತ

ಹೆಡ್‌ಫೋನ್‌ಗಳಿಲ್ಲದೆ ಆಡಿಯೋ ಅಥವಾ ವಿಡಿಯೋವನ್ನು ಜೋರಾಗಿ ಪ್ಲೇ ಮಾಡುವ ಪ್ರಯಾಣಿಕರನ್ನು ವಿಮಾನದಿಂದ ಹೊರದಬ್ಬುವುದು ಅಥವಾ ವಿಮಾನಯಾನ ಮಾಡುವುದನ್ನು ನಿಷೇಧಿಸುವುದು ಸೇರಿದಂತೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಯುನೈಟೆಡ್ ಏರ್‌ಲೈನ್ಸ್ ಎಚ್ಚರಿಕೆ ನೀಡಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ . ಫೆಬ್ರವರಿಯಲ್ಲಿ ಯುನೈಟೆಡ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಯು ತನ್ನ ಸಾರಿಗೆ ನಿರಾಕರಣೆ(refusal to transport)ನೀತಿಯನ್ನು ನವೀಕರಿಸಿದೆ. ಇದರಲ್ಲಿ ವಿಮಾನ ಪ್ರಯಾಣಿಕರನ್ನು ವಿಮಾನ ಹತ್ತಲು ನಿರಾಕರಿಸುವುದಕ್ಕೆ ಕಾರಣವಾಗುವ ಅಂಶಗಳನ್ನು ವಿವರಿಸಲಾಗಿದೆ.

ಪರಿಷ್ಕೃತ ನಿಯಮದ ಪ್ರಕಾರ, ಹೆಡ್‌ಫೋನ್‌ಗಳನ್ನು ಬಳಸದೆ ಆಡಿಯೋ ಅಥವಾ ವಿಡಿಯೋ ಕಂಟೆಂಟ್ ಪ್ಲೇ ಮಾಡುವ ಪ್ರಯಾಣಿಕರನ್ನು ವಿಮಾನದಿಂದ ಇಳಿಸಬಹುದಾಗಿದೆ. ಇದರ ಜೊತೆಗೆ . ವಿಮಾನಯಾನ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು ಅಥವಾ ಬರಿಗಾಲಿನಲ್ಲಿ ಪ್ರಯಾಣಿಸುವುದು ಸೇರಿದಂತೆ ವಿಮಾನದಿಂದ ಹೊರ ಹಾಕಲು ಕಾರಣವಾಗುವ ಹಲವು ಅಂಶಗಳನ್ನು ವಿವರಿಸಲಾಗಿದೆ.

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲು ಪ್ರಯಾಣಿಕರ ಗಮನಕ್ಕೆ: ಎಲ್‌ಪಿಜಿ ಸಿಲಿಂಡರ್ ಅಭಾವ; ರೈಲಿನಲ್ಲಿ ಊಟ ಸಿಗುವುದು ಅನುಮಾನ?
ಪ್ರಪಂಚದ ಅತಿ ದೊಡ್ಡ ಧಾರ್ಮಿಕ ದೇಶ ಯಾವುದು? ಭಾರತ ಅಲ್ವೇ ಅಲ್ಲ…!