ಪ್ರಯಾಣಿಕರ ಈ ಬೇಡಿಕೆಯನ್ನು ಎಂದೂ ಈಡೇರಿಸಲ್ಲ ಗಗನಸಖಿಯರು!

By Roopa Hegde  |  First Published Nov 5, 2024, 6:35 PM IST

ಸುಂದರ ಬಟ್ಟೆ ಧರಿಸಿ, ನಗ್ತಾ ಮಾತನಾಡುವ ಚೆಂದದ ಹುಡುಗಿ ಗಗನಸಖಿಯಿಂದ ಎಲ್ಲ ಕೆಲಸ ಮಾಡಿಸಿಕೊಳ್ಬಹುದು ಅಂತ ಪ್ರಯಾಣಿಕರು ಭಾವಿಸಿದ್ದಾರೆ. ಆದ್ರೆ ನಿಮ್ಮ ನಂಬಿಕೆ ತಪ್ಪು. ನೀವು ಸೂಚಿಸಿದ ಈ ಕೆಲಸವನ್ನು ಗಗನಸಖಿ ಸಾರಾಸಗಟಾಗಿ ತಳ್ಳಿ ಹಾಕ್ಬಹುದು. 
 


ಗಗನ ಸಖಿಯರು (air hostess) ಸದಾ ಪ್ರಯಾಣಿಕರ ಸೇವೆಗೆ ಸಿದ್ಧವಾಗಿರ್ತಾರೆ. ಪ್ರಯಾಣಿಕರು ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಪ್ರಯಾಣಿಕರ (Passengers) ಬಳಿ ಬಂದು ನಿಲ್ಲುವ ಗಗನಸಖಿಯರು ಅವರ ಕೆಲಸ ಮಾಡಿಕೊಡ್ತಾರೆ. ಅವರಿಗೆ ಅಗತ್ಯವಿರುವ ಆಹಾರವನ್ನು ನೀಡ್ತಾರೆ. ಆದ್ರೆ ಗಗನ ಸಖಿಯರು ಮಾಡದ ಕೆಲಸ ಕೂಡ ಇದೆ. ಪ್ರಯಾಣಿಕರು ಹೇಳಿದ ಈ ಕೆಲಸವನ್ನು ಅವರು ಅಪ್ಪಿತಪ್ಪಿಯೂ ಮಾಡೋದಿಲ್ಲ. ನಾವಿಂದು ಅವರು ಯಾವ ಕೆಲಸ ಮಾಡೋದಿಲ್ಲ ಎಂಬುದನ್ನು ನಿಮಗೆ ಹೇಳ್ತೇವೆ. 

ಅಮೆರಿಕದ ಮಾಜಿ ಫ್ಲೈಟ್ ಅಟೆಂಡೆಂಟ್, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಫ್ಲೈಟ್ ಅಟೆಂಡೆಂಟ್‌ಗಳು ಎಂದಿಗೂ ಮಾಡದ ಕೆಲಸ ಯಾವುದು ಎಂಬುದನ್ನು ಹೇಳಿದ್ದಾರೆ. ಕ್ಯಾಟ್ ಕಮಲಾನಿ ಎಂಬುವವರು ಟಿಕ್ ಟಾಕ್ (Tik Tok) ನಲ್ಲಿ ಈ ಸಂಗತಿ ಬಿಚ್ಚಿಟ್ಟಿದ್ದಾರೆ, ಕ್ಯಾಟ್ ಕಮಲಾನಿ 6 ವರ್ಷಗಳ ಕಾಲ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡಿದ್ದರು. ಈಗ ಕ್ಯಾಟ್, ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡ್ತಿದ್ದಾರೆ. ಟಿಕ್ ಟಾಕ್ ನಲ್ಲಿ ಒಂದು ಮಿಲಿಯನ್ ಗಿಂತಲೂ  ಹೆಚ್ಚು ಫಾಲೋವರ್ಸ್ ಹೊಂದಿರುವ ಅವರು, ಗಗನಸಖಿಯರ ಬಗ್ಗೆ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. 

Tap to resize

Latest Videos

undefined

ವಂದೇ ಭಾರತ್‌, ರಾಜಧಾನಿ ಎಕ್ಸ್‌ಪ್ರೆಸ್‌ ಆಗಲಿ 160 kmph ವೇಗದ ಈ ರೈಲಿಗೆ ದಾರಿ

ವಿಮಾನ (Flight)ದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ವಿಮಾನ ಕಂಪನಿಗಳು, ವಿಮಾನ ಹಾರಾಟವನ್ನು ಹೆಚ್ಚು ಮಾಡಿದ್ದು, ಆರಾಮದಾಯಕ ಹಾಗೂ ಸಮಯ ಉಳಿಯುವ ಕಾರಣ, ಬಹುತೇಕರು ವಿಮಾನ ಪ್ರಯಾಣವನ್ನು ಇಷ್ಟಪಡ್ತಾರೆ. ಮಧ್ಯಮ ವರ್ಗದವರೂ ಇದರ ಬಳಕೆ ಹೆಚ್ಚು ಮಾಡಿದ್ದಾರೆ. ವಿಮಾನದಲ್ಲಿ ಆಗಾಗ ಪ್ರಯಾಣ ಮಾಡ್ತಿದ್ದರೂ ಅನೇಕರಿಗೆ ವಿಮಾನದ ಕೆಲ ವಿಷ್ಯಗಳು ತಿಳಿದಿಲ್ಲ. ಅದ್ರಲ್ಲಿ ಗಗನಸಖಿ ವಿಷ್ಯ ಕೂಡ ಸೇರಿದೆ. 

ಕ್ಯಾಟ್ ಪ್ರಕಾರ, ವಿಮಾನ ಪ್ರಯಾಣಿಕರು, ಗಗನ ಸಖಿ ಬಳಿ ಬ್ಯಾಗ್ ಇಡುವಂತೆ ಕೇಳಬಾರದು. ವಿಮಾನ ಪ್ರಯಾಣಿಕರು ಪ್ರಯಾಣ ಬೆಳೆಸುವ ವೇಳೆ ತಮ್ಮ ಜೊತೆ ಬ್ಯಾಗ್ ತೆಗೆದುಕೊಂಡು ಬರ್ತಾರೆ. ಈ ಬ್ಯಾಗನ್ನು ಸೀಟ್ ಮೇಲಿರುವ ಲಾಕರ್ ನಲ್ಲಿ ಇಡಬೇಕು. ಕೆಲ ಬಾರಿ ಲಾಕರ್ ನಲ್ಲಿ ಬ್ಯಾಗ್ ಇಡಲು ಪ್ರಯಾಣಿಕರಿಗೆ ಸಾಧ್ಯವಾಗೋದಿಲ್ಲ. ಹಾಗೆಯೇ ಲಾಕರ್ ನಲ್ಲಿ ಬ್ಯಾಗ್ ಹಿಡಿಯೋದಿಲ್ಲ. ಈ ಸಮಯದಲ್ಲಿ, ಗಗನಸಖಿಯರಿಗೆ ಸಹಾಯ ಮಾಡುವಂತೆ ಪ್ರಯಾಣಿಕರು ಕೇಳ್ತಾರೆ. ಕ್ಯಾಟ್ ಪ್ರಕಾರ, ಯಾವುದೇ ಪ್ರಯಾಣಿಕರು, ಗಗನಸಖಿ ಬಳಿ ಬ್ಯಾಗ್ ಇಡುವಂತೆ ಕೇಳಬಾರದು. ಇದು ಗಗನಸಖಿಯರ ಕೆಲಸವಲ್ಲ. ಪ್ರಯಾಣಿಕರೇ ತಮ್ಮ ಬ್ಯಾಗ್ ಗಳಲ್ಲಿ ಭದ್ರವಾಗಿಟ್ಟುಕೊಳ್ಳಬೇಕು. 

ಗಗನ ಸಖಿಯರು, ಬ್ಯಾಗ್ ಇಡಲು ನೆರವಾಗ್ಬೇಕು ಅಂದೇನಿಲ್ಲ. ನೀವು ಅವರ ಸಹಾಯ ಕೇಳಿದಾಗ ಅವರು ಸಹಾಯಕ್ಕೆ ಬರಬಹುದು ಇಲ್ಲ ಬಿಡಬಹುದು. ಅದು ಅವರಿಗೆ ಬಿಟ್ಟ ನಿರ್ಧಾರ. ಒಂದ್ವೇಳೆ ಅವರು ನೆರವು ನೀಡಲು ನಿರಾಕರಿಸಿದ್ರೆ ಅದಕ್ಕೆ ನೀವು ವಿರೋಧ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಾಗುವುದಿಲ್ಲ. 

ವಿಶ್ವದ ಅತಿ ದುಬಾರಿ ಮನೆಯ ಮೌಲ್ಯ ಅಂಬಾನಿ ನಿವಾಸ ಅಂಟಿಲ್ಲಾಗಿಂತಲೂ 2ಪಟ್ಟು ಹಚ್ಚು

ಬ್ಯಾಗ್ ಭಾರವಾಗಿದೆ, ಫ್ಲೈಟ್ ಅಂಟೆಂಡರ್ ಎತ್ತುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ದೊಡ್ಡ ಬ್ಯಾಗನ್ನು ಕ್ಯಾಬಿನ್ ಗೆ ತೆಗೆದುಕೊಂಡು ಹೋಗ್ಬೇಡಿ. ಅಮೆರಿಕಾ ಏರ್ ಲೈನ್ಸ್ ನಲ್ಲಿ ಬ್ಯಾಗ್ ಹೇಗೆ ಇಡಬೇಕು ಎನ್ನುವ ಬಗ್ಗೆ ಸೂಕ್ತವಾದ ಮಾಹಿತಿಯನ್ನು ನೀಡಲಾಗಿದೆ. ಪ್ರಯಾಣಿಕರು ಅದನ್ನು ಗಮನಿಸಿ, ಬ್ಯಾಗ್ ಇಡಬಹುದು. ಒಂದ್ವೇಳೆ ನಿಮ್ಮ ಬ್ಯಾಗ್ ಭಾರವಾಗಿದ್ದರೆ ಅದನ್ನು ಕ್ಯಾಬಿನ್ ಗೆ ತರಬೇಡಿ ಎನ್ನುತ್ತಾರೆ ಕ್ಯಾಟ್. ಗಗನಸಖಿಯರಿಗೆ ಅವರದೇ ಆದ ನಿಯಮಗಳಿವೆ. ಪ್ರತಿಯೊಂದು ವಿಮಾನ ಕಂಪನಿ ಕೂಡ ತನ್ನದೇ ರೂಲ್ಸ್ ಫಾಲೋ ಮಾಡುತ್ತದೆ. ಗಗನಸಖಿಯರಿಗೆ ಸೂಕ್ತ ತರಬೇತಿ ನೀಡುತ್ತದೆ. ಅದನ್ನು ಅವರು ಫಾಲೋ ಮಾಡೋದು ಕಡ್ಡಾಯ.    

click me!