ವಂದೇ ಭಾರತ್ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ಗಳು ವೇಗದ ರೈಲುಗಳಾಗಿದ್ದರೂ, ಈ ಎರಡು ರೈಲುಗಳಿಗೆ ದಾರಿ ಬಿಟ್ಟುಕೊಡಬೇಕಾಗುತ್ತದೆ. ಈ ವಿಶೇಷ ರೈಲುಗಳು 160 kmph ವೇಗದಲ್ಲಿ ಚಲಿಸುತ್ತವೆ.
ನವದೆಹಲಿ: ವಂದೇ ಭಾರತ್, ರಾಜಧಾನಿ ಎಕ್ಸ್‌ಪ್ರೆಸ್ ಬಂದ್ರೆ ಬೇರೆ ರೈಲು ದಾರಿ ಬಿಟ್ಟುಕೊಡಬೇಕು. ಹಾಗಾಗಿ ಈ ಎರಡು ವಿಐಪಿ ರೈಲುಗಳು ಎಂದು ಜನರು ಕರೆಯುತ್ತಾರೆ. ಈ ಎರಡು ರೈಲುಗಳು ವೇಗವಾಗಿ ಮತ್ತು ಸೀಮಿತ ನಿಲ್ದಾಣದಲ್ಲಿ ನಿಲುಗಡೆಯಾಗೋದರಿಂದ ಇವುಗಳ ಟಿಕೆಟ್ ಬೆಲೆಯೂ ಅಧಿಕವಾಗಿರುತ್ತದೆ. ಆದರೆ ತುರ್ತು ಸಂದರ್ಭದಲ್ಲಿ ಚಲಿಸುವ ಎರಡು ರೈಲುಗಳಿಗೆ ವಂದೇ ಭಾರತ್, ರಾಜಧಾನಿ ಎಕ್ಸ್‌ಪ್ರೆಸ್ ಸಹ ದಾರಿ ಮಾಡಿಕೊಡುತ್ತವೆ. ಈ ಎರಡು ವಿಶೇಷ ರೈಲುಗಳು 160 ಕಿಮೀ ವೇಗದಲ್ಲಿ ಚಲಿಸುತ್ತವೆ. ಆ ಎರಡು ವಿಶೇಷ ರೈಲುಗಳು ಯಾವವು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
ವಾಹನಗಳ ಅಪಘಾತಕ್ಕೊಳಗಾದ್ರೆ ಪರಿಹಾರ ಮತ್ತು ರಕ್ಷಣಾ ಕಾರ್ಯಚರಣೆ ತ್ವರಿತಗತಿಯಲ್ಲಿ ಸಾಗುತ್ತದೆ. ಅದೇ ರೀತಿ ಭಾರತೀಯ ರೈಲ್ವೆಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ವಿಶೇಷ ಕೋಚ್ ಹೊಂದಿರುವ ರೈಲುಗಳಿವೆ. ರೈಲು ಹಳಿ ತಪ್ಪಿದಾಗ ಅಪಘಾತ ಸಂಭವಿಸಿದ್ರೆ ಈ ಕೋಚ್‌ಗಳನ್ನು ಒಯ್ಯುವ ರೈಲುಗಳಿಗೆ ಎಲ್ಲಾ ಜಂಕ್ಷನ್, ನಿಲ್ದಾಣಗಳಲ್ಲಿ ಗ್ರೀನ್ ಸಿಗ್ನಲ್ ನೀಡಲಾಗುತ್ತದೆ.
ರೈಲು ಅಪಘಾತಗಳನ್ನು ಸಮರ್ಥವಾಗಿ ನಿರ್ವಹಿಲು ಭಾರತೀಯ ರೈಲ್ವೆ ತನ್ನದೇ ವ್ಯವಸ್ಥಿತವಾದ ಸಂಘಟನೆಯನ್ನು ಹೊಂದಿದೆ. ಅಪಘಾತ ಸಂಭವಿಸಿದಾಗ ಸಮೀಪದ ಡಿವಿಸನ್ ಕಂಟ್ರೋಲ್ ರೂಮ್, ಆಕ್ಸಿಡೆಂಟ್ ರಿಲೀಫ್ ಟ್ರೈನ್ ಮತ್ತು ಆಕ್ಸಿಡೆಂಟ್ ಮೆಡಿಕಲ್ ಟ್ರೈನ್‌ಗಳನ್ನು (Accident Relief Trains and Accident Relief Medical train) ಓಡಿಸಲು ನಿರ್ಧರಿಸುತ್ತದೆ. ಈ ಎರಡು ರೈಲುಗಳು ಕಡಿಮೆ ಸಮಯದಲ್ಲಿ ಘಟನಾ ಸ್ಥಳಕ್ಕೆ ತಲುಪಬೇಕಿರೋದರಿಂದ ಎಲ್ಲಾ ನಿಲ್ದಾಣಗಳಲ್ಲಿ ಹಸಿರು ನಿಶಾನೆ ತೋರಿಸಲಾಗುತ್ತದೆ.
ಇದನ್ನೂ ಓದಿ: 1 ಕಿಲೋಮೀಟರ್ ಚಲಿಸಲು ರೈಲಿಗೆ ಎಷ್ಟು ಲೀಟರ್ ಇಂಧನ ಬೇಕು?
ಪರಿಹಾರ ಮತ್ತು ರಕ್ಷಣಾ ಕಾರ್ಯಚರಣೆ ತ್ವರಿತಗತಿಯ ಕಾರ್ಯಾಚರಣೆಗಾಗಿ ಭಾರತೀಯ ರೈಲ್ವೆ ವ್ಯವಸ್ಥೆಯಲ್ಲಿ 160 kmph ವೇಗದ ಸಾಮರ್ಥ್ಯವನ್ನು ಹೊಂದಿರುವ ಸ್ವಯಂ ಚಾಲಿತ ಅಪಘಾತ ಪರಿಹಾರ ರೈಲುಗಳನ್ನು (SPART- Self Propelled Accident Relief Trains) ಸಹ ಪರಿಚಯಿಸಿದೆ. ಆಕ್ಸಿಡೆಂಟ್ ರಿಲೀಫ್ ಟ್ರೈನ್ ಮತ್ತು ಆಕ್ಸಿಡೆಂಟ್ ಮೆಡಿಕಲ್ ಟ್ರೈನ್‌ಗಳು ತುರ್ತಾಗಿ ಚಲಿಸೋದರಿಂದ ಇದಕ್ಕೆ ಯಾವುದೇ ಸಮಯ ನಿಗಧಿಯಾಗಿರಲ್ಲ. ಎಲ್ಲವೂ ಆ ಕ್ಷಣದಲ್ಲಿಯೇ ನಿರ್ಧಾರವಾಗಿರುತ್ತದೆ. ಹಾಗೆಯೇ ರೈಲ್ವೆ ಇಲಾಖೆ ಅಪಘಾತ ನಡೆದ ಸ್ಥಳದಲ್ಲಿ ಹಳಿ ಸರಿಪಡಿಸಿ ಪುನರ್ ಸಂಚಾರ ಸ್ಥಾಪನೆಗಾಗಿ ಬ್ರೇಕ್‌ಡೌನ್ ಕ್ರೇನ್‌ಗಳನ್ನು ಸಹ ಕಳುಹಿಸುತ್ತದೆ.
ವಿಪತ್ತಿನ ಸಮಯದಲ್ಲಿ ಕಾರ್ಯಾಚರಣೆಯ ವೇಗ ಹೆಚ್ಚಿಸುವ ಉದ್ದೇಶದಿಂದ ಭಾರತೀಯ ರೈಲ್ವೆ, ಲೊಕೊಮೊಟಿವ್ ಹಾಲ್ಡ್ ಆಕ್ಸಿಡೆಂಟ್ ರಿಲೀಫ್ ಮೆಡಿಕಲ್ ವ್ಯಾನ್‌ಗಳನ್ನು (ARMVs) ಸ್ವಯಂ ಚಾಲಿತ ಅಪಘಾತ ಪರಿಹಾರ ವೈದ್ಯಕೀಯ ವ್ಯಾನ್‌ಗಳೊಂದಿಗೆ (SPARMVs) ಬದಲಾಯಿಸುತ್ತಿದೆ. HS-SPARTs ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುವ ಸಾಮಾರ್ಥ್ಯವನ್ನು ಹೊಂದಿದೆ. ಸದ್ಯದ SPARTs 110 ಕಿಮೀ ವೇಗದಲ್ಲಿ ಚಲಿಸುತ್ತವೆ. ಇವುಗಳಲ್ಲಿಯೂ ಬದಲಾವಣೆ ತರಲು ರೈಲ್ವೆ ಮುಂದಾಗಿದೆ.
ಇದನ್ನೂ ಓದಿ: ರೈಲುಗಳ ಮೇಲ್ಭಾಗದಲ್ಲಿ ವೃತ್ತಾಕಾರದ ಮುಚ್ಚಳ ಯಾಕಿರುತ್ತೆ?