
ಶಿವಮೊಗ್ಗ (ಏ.28): ಜೋಗ ಜಲಪಾತದ ಪ್ರವೇಶ ದ್ವಾರದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಏಪ್ರಿಲ್ 30ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದ ಪ್ರವಾಸಿಗರ ಹಾಗೂ ಸಾರ್ವಜನಿಕರ ಪ್ರವೇಶವನ್ನು ಮೇ 1ರಿಂದ ಪುನರಾರಂಭಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತದ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಪ್ರವೇಶವನ್ನು ಮೇ 1 ರಿಂದ ಪುನರಾರಂಭಿಸಲಾಗುತ್ತಿದೆ. ಬರೋಬ್ಬರಿ ನಾಲ್ಕು ತಿಂಗಳ ಕಾಮಗಾರಿ ಮುಕ್ತಾಯದ ನಂತರ ಮೇ 1ರಿಂದ ಜೋಗ ಜಲಪಾತ ಪ್ರವಾಸಿಗರಿಗೆ ಮುಕ್ತವಾಗಲಿದೆ.
ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗಳಲ್ಲಿ ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿಯೂ ಒಂದಾಗಿರುವ ಕಾರಣ ಜನವರಿ 1ರಿಂದ ಮಾರ್ಚ್ 30ರ ತನಕ ಜೋಗ ಜಲಪಾತದ ಬಳಿ ವಿವಿಧ ಕಾಮಗಾರಿಗಳ ನಡೆಯಬೇಕಿದ್ದ ಕಾರಣ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಪ್ರವೇಶ ಬಂದ್ ಮಾಡಲಾಗಿತ್ತು. ಜೋಗದಲ್ಲಿ ಪ್ರವಾಸಿಗರಿಗೆ ವೀಕ್ಷಣಾ ಗೋಪುರ, ಪಾರ್ಕಿಂಗ್, ಪ್ರವೇಶ ದ್ವಾರ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಪರಿಸರ ಮಂಡಳಿ ಶಿಫಾರಸಿಗೂ ಕ್ಯಾರೇ ಎನ್ನದ ಕಂಪನಿಗಳು: ಸಮಿತಿ ಆತಂಕ
ಈ ಕಾಮಗಾರಿಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೇ 1ರಿಂದ ಜೋಗ ಜಲಪಾತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಮೊದಲಿಗೆ ಜೋಗ ಜಲಪಾತದ ಪ್ರವೇಶ ದ್ವಾರವನ್ನು ಜ.1 ರಿಂದ ಮಾ.15 ರವರೆಗೆ ಮುಚ್ಚಲಾಗಿತ್ತು. ಆನಂತರ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ಏ.30 ರವರೆಗೆ ಮುಚ್ಚಲಾಗುವುದು ಎಂದು ಘೋಷಿಸಲಾಗಿತ್ತು.
ಜೋಗ ಜಲಪಾತದ ಪ್ರವೇಶ ಶುಲ್ಕವೆಷ್ಟು?: ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿರುವ ಜೋಗ ಜಲಪಾತವು, ಮಳೆಗಾಲದಲ್ಲಿ ತನ್ನ ನಿಜವಾದ ವೈಭವದ ಮೂಲಕ ಜಲಪಾತದ ಪ್ರೇಮಿಗಳನ್ನು ಸೆಳೆಯುತ್ತದೆ. ಜನರು ಈ ಋತುಮಾನದಲ್ಲಿಯೇ ಜಲಪಾತದ ಉಸಿರುಗಟ್ಟುವ ನೋಟವನ್ನು ನೋಡಲು ಕುಟುಂಬದ ಜೊತೆ ಸಂದರ್ಶಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಜೋಗ ಜಲಪಾತ ವೀಕ್ಷಿಸಲು ಪ್ರವೇಶ ಶುಲ್ಕ ವ್ಯಕ್ತಿಗೆ 20 ರು. ಇದರ ಜೊತೆಗೆ ಪಾರ್ಕಿಂಗ್ ದರವನ್ನು ಏರಿಸಲಾಗಿದೆ. ಜಲಪಾತವನ್ನು ಪ್ರವಾಸಿಗರು 2 ಗಂಟೆಗಳ ಕಾಲ ಮಾತ್ರ ವೀಕ್ಷಿಸಿ, ಹಿಂದಿರುಗಬೇಕು. ಈ ಹಿಂದೆ ಗಂಟೆಗಟ್ಟಲೆ ಜಲಪಾತದ ಅದ್ಭುತ ವೀಕ್ಷಣೆಯನ್ನು ನೋಡುವ ಅವಕಾಶವಿತ್ತು. ಆದರೆ ಈಗ 2 ಗಂಟೆಗಳ ಕಾಲ ಮಾತ್ರ ಸೀಮಿತಗೊಳಿಸಲಾಗಿದೆ.
ಶಾಸಕರ ಅಮಾನತು ಪಾಠವೇ ಹೊರತು ಶಿಕ್ಷೆಗಾಗಿ ಅಲ್ಲ: ಯು.ಟಿ.ಖಾದರ್
ಪಾರ್ಕಿಂಗ್ ದರ: ಬಸ್‌ಗೆ - 20 ರು., ಟೆಂಪೊ ಟ್ರಾವೆಲರ್, ಮಿನಿ ಬಸ್ - 150 ರು., ಆಟೋರಿಕ್ಷಾ - 40 ರು., ದ್ವಿಚಕ್ರ ವಾಹನ - 30 ರು., ವಿದೇಶಿ ಪ್ರವಾಸಿಗರಿಗೆ - 100 ರು., ವಿದ್ಯಾರ್ಥಿಗಳಿಗೆ 6 ರಿಂದ 16 ವರ್ಷ - 10 ರು., ಕ್ಯಾಮೆರಾ - 100 ರು, ಡ್ರೋನ್ ಕ್ಯಾಮೆರಾ - 500 ರು. ನಿಗದಿ ಪಡಿಸಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.