ಭಾರತ ಅಥವಾ 50ಕ್ಕೂ ಹೆಚ್ಚು ಆಫ್ರಿಕನ್ ರಾಷ್ಟ್ರಗಳ ಯಾವುದಾದ್ರೂ ಒಂದು ದೇಶದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುವ ಜನರು 1,000 ಡಾಲರ್ ಶುಲ್ಕವನ್ನು ಪಾವತಿಸಲೇಬೇಕು ಎಂದು ಎಲ್ ಸಾಲ್ವಡಾರ್‌ನ ಬಂದರು ಪ್ರಾಧಿಕಾರವು ತಿಳಿಸಿದೆ.
ನವದೆಹಲಿ (ಅಕ್ಟೋಬರ್ 27, 2023): ಎಲ್ ಸಾಲ್ವಡಾರ್ ಆಫ್ರಿಕಾ ಅಥವಾ ಭಾರತದ ಪ್ರಯಾಣಿಕರಿಗೆ 1,000 ಡಾಲರ್ ಶುಲ್ಕ (ವ್ಯಾಟ್ ಹೊರತುಪಡಿಸಿ) ವಿಧಿಸುವ ತೀರ್ಮಾನ ಮಾಡಿದೆ. ಮಧ್ಯ ಅಮೆರಿಕ ದೇಶವಾದ ಎಲ್ ಸಾಲ್ವಡಾರ್ ಮೂಲಕ ಅಮೆರಿಕಕ್ಕೆ ವಲಸೆ ಹೋಗುವುದನ್ನು ತಡೆಯುವ ಒಂದು ಸ್ಪಷ್ಟ ಪ್ರಯತ್ನ ಎಂದೂ ಈ ಕ್ರಮವನ್ನು ಹೇಳಲಾಗಿದೆ.
ಭಾರತ ಅಥವಾ 50ಕ್ಕೂ ಹೆಚ್ಚು ಆಫ್ರಿಕನ್ ರಾಷ್ಟ್ರಗಳ ಯಾವುದಾದ್ರೂ ಒಂದು ದೇಶದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುವ ಜನರು 1,000 ಡಾಲರ್ ಅಥವಾ ಅಂದಾಜು 83 ಸಾವಿರ ರೂ. ಶುಲ್ಕವನ್ನು ಪಾವತಿಸಲೇಬೇಕು (ವ್ಯಾಟ್ ಹೊರತುಪಡಿಸಿ) ಎಂದು ಎಲ್ ಸಾಲ್ವಡಾರ್‌ನ ಬಂದರು ಪ್ರಾಧಿಕಾರವು ಅಕ್ಟೋಬರ್ 20 ರಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ. ಹಾಗೂ ಸಂಗ್ರಹಿಸಿದ ಹಣವನ್ನು ರಾಷ್ಟ್ರದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಧಾರಿಸಲು ಬಳಸಲಾಗುವುದು ಎಂದೂ ಪ್ರಾಧಿಕಾರ ಹೇಳಿದೆ.
ಇದನ್ನು ಓದಿ: ಅತಿ ಕಡಿಮೆ ಬೆಲೆಯಲ್ಲಿ ಫ್ಲೈಟ್ ಟಿಕೆಟ್ ಖರೀದಿಸೋದು ಹೀಗೆ: ವಿಮಾನದ ಸಿಬ್ಬಂದಿಯಿಂದ್ಲೇ ರಹಸ್ಯ ಬಯಲು!
ಇತ್ತೀಚೆಗೆ ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಅವರು ಪಶ್ಚಿಮ ಗೋಳಾರ್ಧದ ವ್ಯವಹಾರಗಳ US ಸಹಾಯಕ ಕಾರ್ಯದರ್ಶಿ ಬ್ರಿಯಾನ್ ನಿಕೋಲ್ಸ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ, ಅನಿಯಮಿತ ವಲಸೆಯನ್ನು ಪರಿಹರಿಸುವ ಪ್ರಯತ್ನಗಳು ಸೇರಿ ಇತರ ವಿಷಯಗಳ ಜೊತೆಗೆ ಚರ್ಚಿಸಿದ್ದರು ಎಂದು ತಿಳಿದುಬಂದಿದೆ. ಎಲ್ ಸಾಲ್ವಡಾರ್ ದೇಶದಿಂದ ಸೆಪ್ಟೆಂಬರ್‌ನಲ್ಲಿ ಕೊನೆಗೊಂಡ ಯುಎಸ್ ಕಸ್ಟಮ್ಸ್ ಮತ್ತು ಗಡಿ ಗಸ್ತು 2023 ರ ಆರ್ಥಿಕ ವರ್ಷದಲ್ಲಿ ದಾಖಲೆಯ 3.2 ಮಿಲಿಯನ್ ಅಂದರೆ 32 ಲಕ್ಷ ವಲಸಿಗರು ಅಮರಿಕಕ್ಕೆ ಹೋಗಿದ್ದಾರೆ. ಈ ಪೈಕಿ ಭಾರತ, ಆಫ್ರಿಕಾ ಮತ್ತು ಇತರೆಡೆಗಳಿಂದ ಅನೇಕ ವಲಸಿಗರು ಮಧ್ಯ ಅಮೆರಿಕದ ಮೂಲಕ ಅಮೆರಿಕಕ್ಕೆ ಹೋಗುತ್ತಾರೆ ಎಂದೂ ವರದಿಯಾಗಿದೆ.
ಇನ್ನು, 1,000 ಡಾಲರ್ ಶುಲ್ಕದ ಜತೆಗೆ ವ್ಯಾಟ್ ಅನ್ನು ಸೇರಿಸಿ ಭಾರತ ಹಾಗೂ ಆಫ್ರಿಕಾ ದೇಶಗಳ ಪ್ರಯಾಣಿಕರು 1,130 ಡಾಲರ್ ಹೆಚ್ಚುವರಿ ವೆಚ್ಚ ನೀಡಬೇಕಿದೆ. ಅಂದರೆ, ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಅಂದಾಜು 94 ಸಾವಿರ ರೂ. ಆಗುತ್ತದೆ. ಹೊಸ ಶುಲ್ಕವು ಅಕ್ಟೋಬರ್ 23 ರಿಂದ ಜಾರಿಗೆ ಬಂದಿದೆ ಮತ್ತು ಈ ದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚಿದ ಬಳಕೆಯಿಂದಾಗಿ ಶುಲ್ಕ ವಿಧಿಸಲಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆಟೋ ಓಡಿಸ್ತಾರೆ ಈ ಕಂಪನಿಯ ಉನ್ನತ ಅಧಿಕಾರಿ, ಐಐಎಂ ಪದವೀಧರ!
ಈ ಹಿನ್ನೆಲೆ ಭಾರತ ಮತ್ತು ಆಫ್ರಿಕಾ ಸೇರಿ ಪಟ್ಟಿಯಲ್ಲಿರೋ 57 ದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಪ್ರತಿದಿನ ಸಾಲ್ವಡಾರ್ ಅಧಿಕಾರಿಗಳಿಗೆ ವಿಮಾನಯಾನ ಸಂಸ್ಥೆಗಳು ಮಾಹಿತಿ ನೀಡಬೇಕಿದೆ. ಈ ಹಬ್‌ನ ಅತಿದೊಡ್ಡ ಬಳಕೆದಾರರಲ್ಲಿ ಒಂದಾಗಿರುವ ಕೊಲಂಬಿಯಾದ ಏರ್‌ಲೈನ್ ಅವಿಯಾಂಕಾ, ಈ ದೇಶಗಳಿಂದ ಬರುವ ಪ್ರಯಾಣಿಕರು ಎಲ್ ಸಾಲ್ವಡಾರ್‌ಗೆ ವಿಮಾನಗಳನ್ನು ಹತ್ತುವ ಮೊದಲು ಕಡ್ಡಾಯ ಶುಲ್ಕವನ್ನು ಪಾವತಿಸಬೇಕು ಎಂದು ಪ್ರಯಾಣಿಕರಿಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಇಂಡಿಗೋ ಫ್ಲೈಟ್ ಪ್ರಯಾಣ ಟಿಕೆಟ್‌ಗೆ 1000 ರೂ. ವರೆಗೆ ಹೆಚ್ಚಳ: ಇನ್ಮೇಲೆ ವಿಮಾನದ ಇಂಧನಕ್ಕೂ ಇಷ್ಟು ದುಡ್ಡು ಕೊಡ್ಬೇಕು!