ವಿಮಾನ ಪ್ರಯಾಣಿಕರ ಗಮನಕ್ಕೆ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ 100 ಗ್ರಾಮ್‌ ಎಕ್ಸ್ಟ್ರಾ ಬ್ಯಾಗೇಜ್‌ ಇದ್ರೂ ರಿಜೆಕ್ಟ್‌!

By Santosh Naik  |  First Published Oct 20, 2023, 8:00 PM IST


ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕರು 100 ಗ್ರಾಂ ಹೆಚ್ಚುವರಿ ತೂಕವನ್ನು ಸಾಗಿಸಲು ಈಗ ಸುತಾರಾಂ ಅನುಮತಿ ನೀಡಲಾಗುವುದಿಲ್ಲ. ಅದಕ್ಕೆ ಕಾರಣ, ಅಟೋಮೇಟೆಡ್‌ ಬ್ಯಾಗೇಜ್‌ ಡ್ರಾಪ್‌ ಮಷಿನ್‌ಗಳಲ್ಲಿ ಏರ್‌ಪೋರ್ಟ್‌ನಲ್ಲ ಹಾಕಲಾಗಿದ್ದು, 100 ಗ್ರಾಂ ಹೆಚ್ಚಿನ ತೂಕವಿದ್ದರೂ ಆ ಬ್ಯಾಗೇಜ್‌ ರಿಜೆಕ್ಟ್‌ ಆಗಲಿದೆ.
 


ಬೆಂಗಳೂರು (ಅ.20): ಕಳೆದ ವಾರ ಮಹಿಳೆಯೊಬ್ಬರು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ತಮ್ಮ ಲಗೇಜ್‌ಅನ್ನು ಇರಿಸಿದಾಗ ಅದು ರಿಜೆಕ್ಟ್‌ ಆಗಿದೆ. ಅದಕ್ಕೆ, ಬ್ಯಾಗೇಜ್‌ನ ಭಾರ 100 ಗ್ರಾಂ ಜಾಸ್ತಿ ಇದೆ. ಅದನ್ನು ಕಡಿಮೆ ಮಾಡಿ ಪ್ರಯಾಣ ಮಾಡಿ ಎನ್ನುವ ಉತ್ತರ ಸಿಕ್ಕಿದೆ. ಹೌದು, ಇನ್ನು ಮುಂದೆ ಬೆಂಗಳೂರು ಏರ್‌ಪೋರ್ಟ್‌ನಿಂದ ಪ್ರಯಾಣ ಬೆಳೆಸಬೇಕಾದಲ್ಲಿ ಈ ಎಚ್ಚರಿಕೆ ನಿಮಗೆ ಅನಿವಾರ್ಯ. ನಿಮ್ಮ ಬ್ಯಾಗೇಜ್‌ ಕನಿಷ್ಠ 100 ಗ್ರಾಮ್‌ ಜಾಸ್ತಿ ಇದ್ದರೂ ಅದನ್ನು ಏರ್‌ಲೈನ್ಸ್‌ ರಿಜೆಕ್ಟ್‌ ಮಾಟಲಿದೆ. ಅದಕ್ಕೆ ಕಾರಣ, ಏರ್‌ಪೋರ್ಟ್‌ನಲ್ಲಿ ಅಳವಡಿಸಲಾಗಿರುವ ಅಟೋಮೇಟೆಡ್‌ ಬ್ಯಾಗೇಜ್‌ ಡ್ರಾಪ್‌ ಮಷಿನ್‌ಗಳು. ಬ್ಯಾಗೇಜ್‌ನ ತೂಕದಲ್ಲಿ ಕೊಂಚ ಪ್ರಮಾಣದ ಏರಿಕೆಯಿದ್ದರೂ ಅದನ್ನು ಸಾರಾಸಗಟಾಗಿ ತಿರಸ್ಕಾರ ಮಾಡಲಿದೆ. ಗ್ರಾಫಿಕ್ ಡಿಸೈನರ್ ಒಬ್ಬರು ಕಳೆದ ಗುರುವಾರ ಬೆಂಗಳೂರಿನಲ್ಲಿ ತನ್ನ ಘಟಿಕೋತ್ಸವದಲ್ಲಿ ಭಾಗವಹಿಸಿ ತನ್ನ ಸ್ನೇಹಿತರೊಂದಿಗೆ ದೆಹಲಿಗೆ ಹಿಂದಿರುಗುತ್ತಿದ್ದಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಟರ್ಮಿನಲ್ 1 ರಲ್ಲಿದ್ದ ಅಟೋಮೇಟೆಡ್‌ ಲಗೇಜ್‌ ಡ್ರಾಪ್‌ ಮಷಿನ್‌ನಲ್ಲಿ ತಮ್ಮ ಲಗೇಜ್‌ಅನ್ನು ಇರಿಸಿದ್ದರು. ಈ ವೇಳೆ 100 ಗ್ರಾಮ್‌ ಜಾಸ್ತಿ ಇದ್ದು, ಲಗೇಜ್‌ ಕಡಿಮೆ ಮಾಡುವಂತೆ ಉತ್ತರ ಸಿಕ್ಕಿದೆ.

ಅಟೋಮೇಟೆಡ್‌ ಬ್ಯಾಗೇಜ್‌ ಡ್ರಾಪ್‌ ಮಷಿನ್‌ನಲ್ಲಿ ಮಹಿಳೆ ತನ್ನ ಚೆಕ್‌ ಇನ್‌ ಲಗೇಜ್‌ಅನ್ನು ಇರಿಸಿದ್ದಾರೆ. ಈ ವೇಳೆ ಬ್ಯಾಗ್‌ನ ತೂಕ 15.1 ಕೆಜಿ ಎಂದು ತೋರಿಸಿದೆ. ಏರ್‌ಲೈನ್‌ನಲ್ಲಿ ಪ್ರತಿ ಪ್ಯಾಸೆಂಜರ್‌ ಚೆಕ್‌ಇನ್‌ ಲಗೇಜ್‌ನಲ್ಲಿ 15 ಕೆಜಿ ಭಾರ ಹೊತ್ತೊಯ್ಯಬಹುದು. ಆದರೆ, ಅದಕ್ಕಿಂತ 100 ಗ್ರಾಮ್‌ ತೂಕ ಜಾಸ್ತಿ ಇತ್ತು.  ಹೆಚ್ಚುವರಿ 100 ಗ್ರಾಂ ಅನ್ನು ತನ್ನ ಇಬ್ಬರು ಸ್ನೇಹಿತರ ಬ್ಯಾಗ್‌ಗಳೊಂದಿಗೆ ಹೊಂದಿಸಬಹುದೇ ಎಂದು ಕೇಳಿದ್ದಳು.  ಅವರ ಬ್ಯಾಗ್‌ಗಳು ನಿಗದಿತ ತೂಕದ ಮಿತಿಯಲ್ಲಿದ್ದವು.

ಆದರೆ, ಏರ್‌ಲೈನ್‌ ಸ್ಟಾಫ್‌ಗಳು ಇದಕ್ಕೆ ನಿರಾಕರಿಸಿದ್ದಾರೆ. ಅಟೋಮೇಟಿಕ್‌ ಬ್ಯಾಗ್‌ ಡ್ರಾಪ್‌ ಮಷಿನ್‌ಗಳು ಆಯಾ ಪ್ಯಾಸೆಂಜರ್‌ನ ಬ್ಯಾಂಗ್‌ಗಳು 15 ಕೆಜಿ ಹಾಗೂ ಅದಕ್ಕಿಂತ ಒಳಗಿನ ತೂಕವಷ್ಟೇ ಹೊಂದಿರಬೇಕು ಎನ್ನುವ ನಿಯಮವಿದೆ. ಇದನ್ನು ಇತರ ಪ್ಯಾಸೆಂಜರ್‌ಗಳ ಬ್ಯಾಗ್‌ನ ತೂಕದೊಂದಿಗೆ ಹೊಂದಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Tap to resize

Latest Videos

ಸೆಪ್ಟೆಂಬರ್ 2020 ರಲ್ಲಿ, ಸರ್ಕಾರವು ಬ್ಯಾಗೇಜ್ ಮಿತಿಗೆ ಸಂಬಂಧಿಸಿದ ನಿಬಂಧನೆಗಳನ್ನು ತಿದ್ದುಪಡಿ ಮಾಡಿತು, ವಾಹಕಗಳಿಗೆ ತಮ್ಮ ಆಂತರಿಕ ಅಭ್ಯಾಸಗಳ ಪ್ರಕಾರ ನೀತಿಯನ್ನು ಹೊಂದಿಸುವ ಅಧಿಕಾರವನ್ನು ನೀಡಿತು. ಇದರರ್ಥ ವಿಮಾನಯಾನ ಸಂಸ್ಥೆಗಳು ಚೆಕ್-ಇನ್ ಲಗೇಜ್ ಮಿತಿಯನ್ನು 15 ಕೆಜಿಗೆ ಮರುಹೊಂದಿಸಬಹುದು. ಎಲ್ಲಾ ಪ್ರಮುಖ ವಿಮಾನಯಾನ ಸಂಸ್ಥೆಗಳು ಶೀಘ್ರದಲ್ಲೇ ತಮ್ಮ ಚೆಕ್-ಇನ್ ಲಗೇಜ್ ಮಿತಿಯನ್ನು 15 ಕೆಜಿಗೆ ಮರುಹೊಂದಿಸುತ್ತವೆ. ಚೆಕ್-ಇನ್ ಬ್ಯಾಗೇಜ್ ತೂಕದ ಮಿತಿಯನ್ನು ದಾಟಿದರೆ ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಫ್ಲೈಯರ್‌ಗಳಿಗೆ ಶುಲ್ಕ ವಿಧಿಸುತ್ತವೆ.

'ದೇಶಭಕ್ತ ಎನಿಸಿಕೊಳ್ಳಲು ನೆರೆಯ ದೇಶವನ್ನು ವಿರೋಧಿಸಲೇಬೇಕು ಅಂತೇನಿಲ್ಲ..', ಬಾಂಬೆ ಹೈಕೋರ್ಟ್‌ ತೀರ್ಪು!

ಕೆಂಪೇಗೌಡ ಏರ್‌ಪೋರ್ಟ್‌ನ ಟರ್ಮಿನಲ್ 1 ದೇಶೀಯ ವಿಮಾನಗಳನ್ನು ನಿರ್ವಹಿಸುತ್ತಿದ್ದರೆ, ಬೆಂಗಳೂರು ವಿಮಾನ ನಿಲ್ದಾಣದ ಹೊಸದಾಗಿ ಪ್ರಾರಂಭಿಸಲಾದ ಟರ್ಮಿನಲ್ 2 ಏರ್ ಏಷ್ಯಾ, ಏರ್ ಇಂಡಿಯಾ, ಸ್ಟಾರ್ ಏರ್ ಮತ್ತು ವಿಸ್ತಾರಾ ದೇಶೀಯ ವಿಮಾನಗಳೊಂದಿಗೆ ಅಂತರರಾಷ್ಟ್ರೀಯ ವಿಮಾನಗಳಿಗೆ ಮೀಸಲಾಗಿದೆ. "ಉದ್ಯಾನದಲ್ಲಿ ಟರ್ಮಿನಲ್" ಎಂದು ಕರೆಯಲ್ಪಡುವ ಟರ್ಮಿನಲ್ 2 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 2022 ರಲ್ಲಿ ಉದ್ಘಾಟಿಸಿದರು, ಇದರ ನಿರ್ಮಾಣ ವೆಚ್ಚ ಸುಮಾರು 5,000 ಕೋಟಿ ರೂ. ಇದು ಈ ವರ್ಷದ ಜನವರಿಯಲ್ಲಿ ದೇಶೀಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು.

ಕೆಂಪೇಗೌಡ ಏರ್‌ಪೋರ್ಟ್: ಸೊಂಟದಲ್ಲಿ ಮರೆಮಾಚಿ 2.8 ಕೆಜಿ ಚಿನ್ನ ಸಾಗಾಟ ಯತ್ನ, ಇಬ್ಬರು ವಶಕ್ಕೆ

click me!