ಧುಮ್ಮಿಕ್ಕುತ್ತಿರುವ ಜೋಗದ ಸೊಬಗು: ರಾಜ, ರಾಣಿ, ರೋರರ್‌, ರಾಕೆಟ್‌, ಲೇಡಿ ನೋಡಲು ಪ್ರವಾ​ಸಿ​ಗ​ರ ದಂಡು

By Kannadaprabha News  |  First Published Jul 10, 2023, 11:26 AM IST

ಕಳೆದೊಂದು ವಾರದಿಂದ ತಾಲೂಕು ಸೇರಿ​ದಂತೆ ಜಿಲ್ಲೆಯ ಬಹು​ತೇಕ ಕಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆ ಕೊರತೆಯಿಂದ ಜೋಗದ ಗುಂಡಿ ಬರಡಾಗಿ ನಿಂತಿತ್ತು. ಈಗ ವರು​ಣನ ಕೃಪೆ​ಯಿಂದಾಗಿ ತನ್ನ ವೈಭವ ಮರಳಿ ಪಡೆದಿದೆ.


ಸಾಗರ (ಜು.10): ಕಳೆದೊಂದು ವಾರದಿಂದ ತಾಲೂಕು ಸೇರಿ​ದಂತೆ ಜಿಲ್ಲೆಯ ಬಹು​ತೇಕ ಕಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಳೆ ಕೊರತೆಯಿಂದ ಜೋಗದ ಗುಂಡಿ ಬರಡಾಗಿ ನಿಂತಿತ್ತು. ಈಗ ವರು​ಣನ ಕೃಪೆ​ಯಿಂದಾಗಿ ತನ್ನ ವೈಭವ ಮರಳಿ ಪಡೆದಿದೆ. ಪ್ರಮು​ಖ​ವಾಗಿ ನಾಲ್ಕು ಭಾಗ​ಗ​ಳಲ್ಲಿ ಧುಮ್ಮಿ​ಕ್ಕುವ ಜೋಗ್‌​ಫಾಲ್ಸ್‌ ತನ್ನ ರುದ್ರ​ರ​ಮ​ನೀ​ಯ​ತೆ ಕಣ್ತುಂಬಿ​ಕೊ​ಳ್ಳಲು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಈ ವರ್ಷ ಮಲೆನಾಡಿನಲ್ಲೂ ಮಳೆ ಕೊರತೆ ಕಾಡಿತ್ತು. ಜೂನ್‌ನಲ್ಲಿ ಆರಂಭ ಆಗಬೇಕಿದ್ದ ಮಳೆ ಜುಲೈನಲ್ಲಿ ಆರಂಭಗೊಂಡಿದೆ. ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಭಾರೀ ಮಳೆಯಾಗಿದ್ದು, ನದಿಗಳಲ್ಲಿ ನೀರಿನಮಟ್ಟ ಹೆಚ್ಚತೊಡಗಿದೆ. ನೂರಾರು ಅಡಿ ಮೇಲಿಂದ ಧುಮ್ಮಿಕ್ಕುವ ಜೋಗ ಜಲಪಾತ ವೈಭ​ವ ನೋಡಲು ಪ್ರವಾಸಿ ಮುಗಿಬೀಳುತ್ತಿದ್ದಾರೆ.

ದೇಶಾ​ದ್ಯಂತ ಪ್ರವಾ​ಸಿ​ಗರ ಭೇಟಿ: ವಾರದಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಕಳೆದೆರಡು ದಿನಗಳಿಂದ ಬಿಡುವು ನೀಡಿದೆ. ವಾರಾಂತ್ಯ ದಿನದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಆಗುತ್ತಿದೆ. ಭಾನುವಾರ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜೋಗವನ್ನು ಕಣ್ತುಂಬಿಕೊಳ್ಳಲು ರಾಜ್ಯವಲ್ಲದೇ ಬೇರೆ ರಾಜ್ಯ ಮತ್ತು ದೇಶಗಳಿಂದಲೂ ಬರುತ್ತಿದ್ದಾರೆ.

Tap to resize

Latest Videos

ಎಚ್‌.ಡಿ.ಕುಮಾರಸ್ವಾಮಿಗೆ ಒಕ್ಕಲಿಗರು ಬೆಳೆಯೋದು ಇಷ್ಟವಿಲ್ಲ: ಸ​ಚಿವ ಚ​ಲು​ವ​ರಾ​ಯ​ಸ್ವಾಮಿ

ಜೋಗ್‌ಫಾಲ್ಸ್‌ ವೈಭವ: ಮುಂಗಾರು ಮಳೆ ಅಬ್ಬರ ಸ್ವಲ್ಪ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮಾತ್ರವಲ್ಲದೇ, ರಾಣಿ (ಲೇಡಿ), ರಾಜ, ರೋರರ್‌ ಹಾಗೂ ರಾಕೆಟ್‌ ​ಹೆ​ಸ​ರಿನಿಂದ ಧುಮ್ಮಿ​ಕ್ಕುವ ಜೋಗ ಜಲಪಾತ ವೀಕ್ಷಿಸಲು ಮಳೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದೆ. ಮತ್ತೆ ಇಂಥ ವೈಭೋಗ ನೋಡಲು ಸಿಗುವುದೋ, ಇಲ್ಲವೋ ಎಂಬಂತೆ ಪ್ರವಾಸಿಗರು ಜೋಗದತ್ತ ಪಯಣ ಬೆಳೆಸುತ್ತಿದ್ದಾರೆ. ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸದ್ಯ ಮಳೆ ಜೋರಾಗಿದ್ದು, ‘ಶರಾವತಿ’ ಮೈದುಂಬಿ ಹರಿಯುತ್ತಿದ್ದಾಳೆ. ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. 

ಮಳೆ ಇದೇ ರೀತಿ ಮುಂದುವರಿದರೆ ಈ ವರ್ಷ ಜುಲೈ ಅಂತ್ಯದಲ್ಲಿ ಜಲಪಾತದ ವೈಭವ ಮತ್ತಷ್ಟುಮರುಕಳಿಸುವ ಸಾಧ್ಯತೆ ಇದೆ. ಮಳೆ ಇಲ್ಲದೇ ಕಳೆಗುಂದಿದ್ದ ಜೋಗ ಈಗ ನಯನ ಮನೋಹರ ದೃಶ್ಯಕ್ಕೆ ಸಾಕ್ಷಿಯಾಗಿದೆ. ಈ ನಯನ ಮನೋಹರ ದೃಶ್ಯ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಸತತ ಮಳೆಯಿಂದಾಗಿ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಶಿರಸಿ, ಶಿವಮೊಗ್ಗ, ಗದಗ, ಬಾಗಲಕೋಟೆ ರಾಯಚೂರು ಮೊದಲಾದ ಭಾಗಗಳಿಂದ ಪ್ರವಾಸಿಗರ ದಂಡು ಹರಿದುಬರುತ್ತಿದೆ. ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಗತ್ೊ್ರಸಿದ್ಧ ಜೋಗ ಜಲಪಾತಕ್ಕೆ ಮತ್ತೆ ಜೀವಕಳೆ ಬಂದಿದೆ.

ಮಂಜಿನ ಮಧ್ಯೆ ಆಗಾಗ ಫಾಲ್ಸ್‌ ದರ್ಶ​ನ: ಮಳೆಗಾಲ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಜೋಗದ ಪ್ರದೇಶ ಪ್ರವಾ​ಸಿ​ಗ​ರಿಂದ ತುಂಬಿತ್ತು. ಮಳೆಯಿಂದ ಮಂಜು ತುಂಬಿಕೊಳ್ಳುತ್ತಿರುವುದರಿಂದ ಜೋಗದ ರಮಣೀಯ ದೃಶ್ಯ ನೋಡಲು ಪ್ರವಾಸಿಗರು ಗಂಟೆಗಟ್ಟಲೆ ಕಾಯಬೇಕಿತ್ತು. ಆದರೂ ಆಗಾಗ ಮಂಜಿನ ನಡುವೆ ಜಲಪಾತ ಗೋಚರವಾದಾಗ ಜನರ ಹರ್ಷೋದ್ಘಾರ ಮುಗಿಲುಮುಟ್ಟುತ್ತಿತ್ತು. 

ಈ ಬಾರಿ ಅದ್ದೂರಿಯಾಗಿ ನಡೆಯುತ್ತಾ ಮಹಿಷಾ ದಸರಾ?: ಸುಳಿವು ನೀಡಿದ ಸಚಿವ ಮಹದೇವಪ್ಪ

ಜೋಗದ ವೈಭವ ಕಂಡು ಸಂಭ್ರಮಿಸಿದ ಪ್ರವಾಸಿಗರು ಜಲಪಾತದ ಮುಂದೆ ನಿಂತು ಸೆಲ್ಪಿ ಕಿಕ್ಲಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿ ವರ್ಷದಂತೆ ಜೂನ್‌ ತಿಂಗಳಿನಲ್ಲಿಯೇ ಮಳೆಗಾಲ ಆರಂಭವಾಗಿದ್ದರೆ ಈ ದಿನಗಳಲ್ಲಿ ಜೋಗದ ವೈಭವ ರುದ್ರರಮಣೀಯ ಆಗಿರುತ್ತಿತ್ತು. ಆದರೆ, ಈ ಬಾರಿ ಸುಮಾರು ಒಂದು ತಿಂಗಳು ತಡವಾಗಿ ಮಳೆ ಆರಂಭ ಆಗಿದೆ. ಆದ್ದ​ರಿಂದ ಜಲಪಾತ ಈಗಷ್ಟೇ ಮೈತುಂಬಿಕೊಳ್ಳುತ್ತಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನೇದಿನೇ ಜಾಸ್ತಿಯಾಗುತ್ತಿದೆ.

click me!