Countries with No Indians: ಈ ದೇಶದಲ್ಲಿ ಹುಡುಕಿದ್ರೂ ಒಬ್ಬೇ ಒಬ್ಬ ಭಾರತೀಯ ಸಿಗೋದಿಲ್ಲ !

Published : May 24, 2025, 12:00 PM IST
Travel

ಸಾರಾಂಶ

ಭಾರತೀಯರಿರ್ತಾರೆ, ಭಾರತೀಯ ರೆಸ್ಟೋರೆಂಟ್ ಇರುತ್ತೆ ಅಂತ ಈ ದೇಶಗಳಿಗೆ ಹೋದ್ರೆ ನಿಮ್ಮ ಕೆಲ್ಸ ಕೆಟ್ಟಂತೆ. ನಾವು ಹೇಳ್ತಿರೋ ಕೆಲ ದೇಶಗಳಲ್ಲಿ ಭಾರತೀಯರ ವಾಸ ಶೂನ್ಯ. ಪ್ರವಾಸಕ್ಕೆ ಹೋಗುವ ಮುನ್ನ ದೇಶದ ಹೆಸ್ರನ್ನು ತಿಳಿದಿಟ್ಟುಕೊಳ್ಳಿ.

ಶಿಕ್ಷಣ, ಉದ್ಯೋಗಕ್ಕಾಗಿ ಭಾರತೀಯರು ವಿದೇಶಗಳಿಗೆ ವಲಸೆ ಹೋಗ್ತಿದ್ದಾರೆ. ವಿಶ್ವದ ಅನೇಕ ದೇಶಗಳಲ್ಲಿ ಭಾರತೀಯ (Indian)ರ ಸಂಖ್ಯೆ ಹೆಚ್ಚಿದೆ. ಅಮೆರಿಕ, ಕೆನಡಾ, ಯುಕೆ, ಸಿಂಗಾಪುರ, ಆಸ್ಟ್ರೇಲಿಯಾದಂತಹ ರಾಷ್ಟ್ರದಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣ ಸಿಗ್ತಾರೆ. ಭಾರತೀಯರಿಲ್ಲದ ದೇಶ ಇಲ್ಲ ಅಂತ ನಾವು ಭಾವಿಸಿದ್ದೆವೆ. ಆದ್ರೆ ನಮ್ಮ ನಂಬಿಕೆ ತಪ್ಪು. ಭಾರತೀಯರು ವಾಸ ಮಾಡದ ಕೆಲ ದೇಶಗಳಿವೆ. ಬಹಳ ಚಿಕ್ಕದಾಗಿರುವ ಕಾರಣ ಇಲ್ಲವೆ ಅಲ್ಲಿನ ರಾಜಕೀಯ, ಭೌಗೋಳಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ ಭಾರತೀಯರಿಗೆ ಆ ದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ. ಭಾರತೀಯರಿಲ್ಲದ ಇಲ್ಲ ತೀರ ಅಪರೂಪವಾದ ಕೆಲ ದೇಶ (country)ಗಳ ಪಟ್ಟಿ ಇಲ್ಲಿದೆ.

ಈ ದೇಶಗಳಲ್ಲಿಲ್ಲ ಭಾರತೀಯರು :

ವ್ಯಾಟಿಕನ್ ಸಿಟಿ : ವಿಶ್ವದ ಅತ್ಯಂತ ಚಿಕ್ಕ ದೇಶವಾದ ವ್ಯಾಟಿಕನ್ ಸಿಟಿ, ಇಟಲಿಯ ರಾಜಧಾನಿ ರೋಮ್ನ ಹೃದಯಭಾಗದಲ್ಲಿದೆ. ಇದನ್ನು ಕ್ಯಾಥೊಲಿಕ್ ಧರ್ಮದ ಜಾಗತಿಕ ಕೇಂದ್ರವೆಂದು ಪರಿಗಣಿಸಲಾಗಿದೆ. ಚರ್ಚ್ಗೆ ಸಂಬಂಧಿಸಿದ ಜನರು ಅಥವಾ ನೌಕರರು ಮಾತ್ರ ಇಲ್ಲಿ ವಾಸಿಸುತ್ತಾರೆ. ಭಾರತೀಯರು ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಾರೆ, ಆದರೆ ಇಲ್ಲಿ ಶಾಶ್ವತವಾಗಿ ವಾಸಿಸುವ ಭಾರತೀಯರ ಸಂಖ್ಯೆ ಶೂನ್ಯ.

ಸ್ಯಾನ್ ಮರಿನೋ : ಇಟಲಿಯೊಳಗೆ ನೆಲೆಗೊಂಡಿರುವ ಸ್ವತಂತ್ರ ಗಣರಾಜ್ಯವಾದ ಸ್ಯಾನ್ ಮರಿನೋ ಕೂಡ ವಿಶ್ವದ ಅತ್ಯಂತ ಚಿಕ್ಕ ಮತ್ತು ಹಳೆಯ ದೇಶಗಳಲ್ಲಿ ಒಂದಾಗಿದೆ. ಸುಂದರವಾದ ಬೆಟ್ಟದ ನೋಟಗಳು ಮತ್ತು ಮಧ್ಯಕಾಲೀನ ಕಟ್ಟಡಗಳ ಹೊರತಾಗಿಯೂ, ಇಲ್ಲಿ ಭಾರತೀಯರ ಶಾಶ್ವತ ಜನಸಂಖ್ಯೆ ನಗಣ್ಯ. ಕೆಲವು ಭಾರತೀಯರು ಪ್ರವಾಸಿಗರಾಗಿ ಬರುತ್ತಾರೆ, ಆದರೆ ಯಾರೂ ಇಲ್ಲಿ ನೆಲೆ ನಿಂತಿಲ್ಲ.

ಬಲ್ಗೇರಿಯಾ : ಆಗ್ನೇಯ ಯುರೋಪಿನಲ್ಲಿರುವ ಬಲ್ಗೇರಿಯಾ, ತನ್ನ ಕಡಲತೀರಗಳು ಮತ್ತು ಐತಿಹಾಸಿಕ ತಾಣಗಳಿಗೆ ಹೆಸರುವಾಸಿಯಾಗಿದೆ. ಬಲ್ಗೇರಿಯಾ ಯುರೋಪಿನಲ್ಲಿದ್ದರೂ, ಇಲ್ಲಿ ಭಾರತೀಯ ವಲಸಿಗರ ಸಂಖ್ಯೆ ತುಂಬಾ ಕಡಿಮೆ. ಭಾರತೀಯರು ನೆಲೆಸಲು ಹಿಂಜರಿಯುವ ದೇಶಗಳಲ್ಲಿ ಇದೂ ಒಂದು.

ಪಾಕಿಸ್ತಾನ : ಭಾರತ ಮತ್ತು ಪಾಕಿಸ್ತಾನಗಳು ಒಂದೇ ರೀತಿಯ ಇತಿಹಾಸವನ್ನು ಹಂಚಿಕೊಂಡಿದ್ದರೂ, ಪ್ರಸ್ತುತ ಪರಿಸ್ಥಿತಿ ಮತ್ತು ರಾಜಕೀಯ ಉದ್ವಿಗ್ನತೆಯಿಂದಾಗಿ, ಪಾಕಿಸ್ತಾನದಲ್ಲಿ ವಾಸಿಸುವ ಭಾರತೀಯರ ಸಂಖ್ಯೆ ಬಹಳ ಕಡಿಮೆಯಾಗಿದೆ. ವ್ಯಾಪಾರ, ಶಿಕ್ಷಣ ಅಥವಾ ಇತರ ಕಾರಣಗಳಿಂದಾಗಿ ಕೆಲವೇ ಭಾರತೀಯರು ಅಲ್ಲಿ ವಾಸವಾಗಿದ್ದಾರೆ.

ತುವಾಲು : ತುವಾಲು ಪೆಸಿಫಿಕ್ ಮಹಾಸಾಗರದ ಮೂಲೆಯಲ್ಲಿರುವ ಅತ್ಯಂತ ಚಿಕ್ಕ ಮತ್ತು ವಿರಳ ಜನಸಂಖ್ಯೆ ಹೊಂದಿರುವ ದೇಶ. ಇದು 9 ಹವಳ ದ್ವೀಪಗಳಿಂದ ಮಾಡಲ್ಪಟ್ಟಿದೆ. ಇಲ್ಲಿನ ಸಮುದ್ರ ಸೌಂದರ್ಯ ಅದ್ಭುತವಾಗಿದೆ. ಭಾರತೀಯರು ಇಲ್ಲಿಗೆ ಭೇಟಿ ನೀಡ್ತಾರೆಯೇ ವಿನಃ ಇಲ್ಲಿ ವಾಸ ಮಾಡೋದಿಲ್ಲ. ಈ ದೇಶ ಪ್ರಪಂಚದ ಇತರ ಭಾಗಗಳಿಂದ ಸಾಕಷ್ಟು ಪ್ರತ್ಯೇಕವಾಗಿರುವುದರಿಂದ ಭಾರತೀಯರು ಇಲ್ಲಿ ವಾಸಿಸಲು ಆಸಕ್ತಿ ತೋರುವುದಿಲ್ಲ.

ಗ್ರೀನ್ಲ್ಯಾಂಡ್ : ಗ್ರೀನ್ಲ್ಯಾಂಡ್ ಶೀತ ಮತ್ತು ಹಿಮಾವೃತ ದೇಶವಾಗಿದೆ. ವಿಶ್ವದ ಅತಿದೊಡ್ಡ ದ್ವೀಪಗಳಲ್ಲಿ ಗ್ರೀನ್ಲ್ಯಾಂಡ್ ಒಂದು. ಇಲ್ಲಿ ಜನಸಂಖ್ಯೆ ತುಂಬಾ ಕಡಿಮೆ. ಭಾರತೀಯರು ಈ ದ್ವೀಪಕ್ಕೆ ಭೇಟಿ ನೀಡ್ತಿರುತ್ತಾರೆ. ಆದ್ರೆ ಯಾವೊಬ್ಬ ಭಾರತೀಯನೂ ಈ ಗ್ರೀನ್ಲ್ಯಾಂಡ್ನಲ್ಲಿ ಶಾಶ್ವತವಾಗಿ ವಾಸಿಸುವುದಿಲ್ಲ. ಇಲ್ಲಿ ವಾಸವಾಗಿರುವ ಒಬ್ಬೇ ಒಬ್ಬ ಭಾರತೀಯ ನಿಮಗೆ ಸಿಗೋದಿಲ್ಲ.

ಉತ್ತರ ಕೊರಿಯಾ : ಒಬ್ಬ ಭಾರತೀಯನೂ ವಾಸಿಸದ ದೇಶದಲ್ಲಿ ಉತ್ತರ ಕೊರಿಯಾ ಸೇರಿದೆ. ಈ ದೇಶದಲ್ಲಿ ಕೆಲ ಕಟ್ಟುನಿಟ್ಟಾದ ನಿಯಮವಿದೆ. ಗಡಿ ಪ್ರದೇಶಗಳನ್ನು ಮುಚ್ಚಲಾಗಿದೆ. ಹಾಗೆಯೇ ವಿಭಿನ್ನ ರೀತಿಯ ಆಡಳಿತ ವ್ಯವಸ್ಥೆಗೆ ಉತ್ತರ ಕೊರಿಯಾ ಹೆಸರುವಾಸಿ. ಉತ್ತರ ಕೋರಿಯಾದಲ್ಲಿ ವಾಸ ಮಾಡೋದಿರಲಿ, ಪ್ರವಾಸಿಯಾಗಿಯೂ ಭಾರತೀಯ ಭೇಟಿ ನೀಡೋದಿಲ್ಲ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇಲ್ಲಿ ಕುಳಿತವರೆಲ್ಲಾ ಶಿವನ ಪಾದ ಸೇರಿದ್ರು ಎನ್ನುತ್ತ ಅಲ್ಲಿಂದ್ಲೇ ವಿಡಿಯೋ ಮಾಡಿದ ಡಾ.ಬ್ರೋ! ಆತಂಕದಲ್ಲಿ ಫ್ಯಾನ್ಸ್​
ಇಂಡಿಗೋ ಅವಾಂತರದ ಬಳಿಕ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಫೋಟೋ ಭಾರಿ ವೈರಲ್