
ನವದೆಹಲಿ: ನಾಗರಿಕ ವಿಮಾನಯಾನವು ದಿನೇ ದಿನೇ ಬದಲಾವಣೆಯಾಗುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದು, ಪ್ರಯಾಣಿಕರ ಆಸನ ವ್ಯವಸ್ಥೆಯಲ್ಲಿ ಹೊಸದೊಂದು ಮೈಲುಗಲ್ಲನ್ನು ಈ ಕ್ಷೇತ್ರ ಸಾಧಿಸಿದೆ. 2 ಗಂಟೆಗಿಂತ ಕಡಿಮೆ ಅವಧಿಯ ಪ್ರಯಾಣದ ವಿಮಾನದಲ್ಲಿ ಇನ್ನುಮುಂದೆ 'ನಿಂತು ಪ್ರಯಾಣಿಸುವ ಆಸನಗಳಾದ ಸ್ಕೈರೈಡರ್ 2.0, 2026ರಲ್ಲಿ ಪಾದಾರ್ಪಣೆ ಮಾಡಲಿವೆ. ಈ ಆಸನಗಳು ಸಾಮಾನ್ಯ ಎಕಾನಮಿ ಸೀಟ್‌ಗಳಿಗಿಂತ ಕಡಿಮೆ ವಿಸ್ತೀರ್ಣ ಉಳ್ಳದ್ದಾಗಿದ್ದು, ಅತ್ತ ಪೂರ್ಣ ಕುಳಿತು ಕೊಳ್ಳಲು ಆಗದೇ, ಪೂರ್ತಿ ನಿಲ್ಲಲೂ ಆಗದ ಸ್ಥಿತಿಯಲ್ಲಿ ಇದನ್ನು ವಿನ್ಯಾಸಪಡಿಸಲಾಗಿದೆ. ಇದಕ್ಕೆ ಜಾಗತಿಕ ವಿಮಾನ ಭದ್ರತಾ ಒಪ್ಪಿಗೆಯೂ ಲಭಿಸಿದೆ.
ಏನಿದು ಸ್ಕೈರೈಡರ್ ?: ಸ್ಕೈರೈಡರ್ 3.0 ಎಂಬುದು ಬೈಕ್ ಸೀಟಿಂಗ್ ರೀತಿ ಆಸನ ವ್ಯವಸ್ಥೆ. ಇಲ್ಲಿ ಪ್ರಯಾಣಿಕರು ಪೂರ್ಣವಾಗಿ ಕುಳಿತುಕೊಳ್ಳಲು ಆಗದು. ಬದಲಿಗೆ ಹಿಂಬದಿ ವಾಲಿ ಕುಳಿತು ಕೊಳ್ಳಬೇಕಾಗುತ್ತದೆ. ಇದನ್ನು ಕೇವಲ 2 ಗಂಟೆಗಿಂತಲೂ ಕಡಿಮೆ ಅವಧಿಯ ಪ್ರಯಾಣಕ್ಕಾಗಿ ಮಾತ್ರ ಅನುಮತಿ ಕೊಡಲಾಗಿದ್ದು, ಎರ್‌ಲೈನ್ಸ್ ಗಳು ಇದರ ಮೇಲೆ ಕಣ್ಣಿರಿಸಿವೆ. ಇದರಿಂದ ವಿಮಾನದಲ್ಲಿ ಶೇ.20 ಹೆಚ್ಚು ಜನರು ಪ್ರಯಾಣಿಸಬಹುದು ಎಂಬ ನಿರೀಕ್ಷೆ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.