ಕರಾವಳಿ ಟೂರಿಸಂಗೆ ಬೂಸ್ಟ್ ಮಲ್ಪೆ ಸಮೀಪ 9 ಎಕರೆಯಲ್ಲಿ ‘ಉಡುಪಿ ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್' ಆರಂಭ

Published : Nov 27, 2026, 05:16 PM IST
Sirena Luxury Beach Resort

ಸಾರಾಂಶ

ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತೊಂದು ಆಕರ್ಷಕ ತಾಣ ಸೇರ್ಪಡೆಯಾಗುತ್ತಿದೆ. ಉಡುಪಿಯ ಪ್ರಸಿದ್ಧ ಮಲ್ಪೆ ಕಡಲ ಕಿನಾರೆಯ ಪಡುಕರೆ ಸಮೀಪದ ಶಾಂತಿನಗರದಲ್ಲಿ ಶ್ಯಾಮಿಲಿ ಸಮೂಹ ಸಂಸ್ಥೆಗಳ ವತಿಯಿಂದ ನಿರ್ಮಿಸಲಾಗಿರುವ ‘ಉಡುಪಿ ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್’ ಆರಂಭವಾಗಲಿದೆ.

ಉಡುಪಿ: ಪ್ರಾಕೃತಿಕ ರಮಣೀಯ ಮಲ್ಪೆ ಕಡಲ ಕಿನಾರೆಯ ಪಡುಕರೆ ಸಮೀಪದ ಶಾಂತಿನಗರದಲ್ಲಿ ಸುಮಾರು 9 ಎಕರೆ ವಿಸ್ತೀರ್ಣದಲ್ಲಿ ಶ್ಯಾಮಿಲಿ ಸಮೂಹ ಸಂಸ್ಥೆಯಿಂದ ಕೋಸ್ಟಲ್ ವುಡ್ ರೇಸಾರ್ಟ್ಸ್‌ ಸರಣಿಯ ಇನ್ನೊಂದು ಕೊಡುಗೆ ‘ಉಡುಪಿ ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್“ ನ. 28 ರಂದು ಶುಭಾರಂಭಗೊಳ್ಳಲಿದೆ.

ಭೋರ್ಗೆರೆಯುವ ಕಡಲು ಮತ್ತು ಶಾಂತವಾಗಿ ಹರಿಯುವ ನದಿಯ ಹಿನ್ನೀರು ಸಂಗಮದ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುವಂತೆ ನಿರ್ಮಿಸಲಾಗಿರುವ ಈ ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್ ಜಿಲ್ಲೆಯ ಪ್ರವಾಸೋದ್ಯಕ್ಕೆ ಅತ್ಯವಶ್ಯಕವಾದ ಕೊಡುಗೆಯನ್ನು ನೀಡಲಿದ್ದು, ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟಕುವಂತೆ ಎಲ್ಲಾ ಅತಿಥಿ ಸೌಲಭ್ಯಗಳೊಂದಿಗೆ ಕಾರ್ಯಾರಂಭಿಸುತ್ತಿದೆ.

ನ. 28 ರಂದು ಬೆಳಗ್ಗೆ 11.30 ಕ್ಕೆ ಈ ರೆಸಾರ್ಟ್ ಲೋಕಾರ್ಪಣೆಯಾಗಲಿದೆ. ಇಂಧನ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಕೆ.ಜೆ. ಚಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೆ.ಎಸ್. ಬಸವಂತಪ್ಪ, ಉಪಸಭಾಪತಿ ಮಂಕಾಳ ವೈದ್ಯ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಮತ್ತು ಐವನ್ ಡಿಸೋಜ, ಮಾಜಿ ಶಾಸಕ ಕೆ. ರಘುಪತಿ ಭಟ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಜಿ. ಶಂಕರ್ ತಿಳಿಸಿದ್ದಾರೆ.

ಸ್ಪೈಸ್ ವೇವ್‌ ಲಾಂಜ್ - ಕೋಸ್ಟಾ ಗ್ರಾಂಡೆ

ನಾಡೋಜ ಡಾ. ಜಿ. ಶಂಕರ್ ಅವರ ‘ಅತಿಥಿ ದೇವೋಭವ’ ಆದರ್ಶಕ್ಕನುಗು‍ಣವಾಗಿ ನಿರ್ಮಿಸಲಾಗಿರುವ ಈ ಬೀಚ್ ರೆಸಾರ್ಟ್ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಪ್ರವಾಸಿಗರಿಗೆ ಸಂಪೂರ್ಣ ಆರಾಮದಾಯಕವಾಗಿದೆ.

400 ಮಂದಿ ಆಸೀನರಾಗಬಹುದಾದ ‘ಔರ್‌ಲಿಯಾ ಬ್ಯಾಂಕ್ವೆಟ್ ಹಾಲ್’, ಸಭಾಂಗಣದ ಸನಿಹದಲ್ಲಿ ಪ್ರಸನ್ನಗಣಪತಿ ಮಂದಿರ, ಮೆಹಂದಿ, ಡೆಸ್ಟಿನೇಶನ್ ಮ್ಯಾರೇಜ್, ರಿಸೆಪ್ಶನ್ ಇತ್ಯಾದಿಗಳಿಗೆ ಅನುಕೂಲವಾಗುವಂತೆ ಹಚ್ಚಹಸುರಿನ ‘ಸಿರೆನಾ ಗ್ರೀನ್ಸ್ ಓಪನ್ ಗಾರ್ಡನ್’ನ್ನು ಹೊಂದಿವೆ. ಜೊತೆಗೆ 55 ಹವಾನಿಯಂತ್ರಿತ ಡೀಲಕ್ಸ್ ರೂಮುಗಳು ಕೂಡ ಇವೆ.

ಗ್ರಾಹಕರ ಅಭಿರುಚಿಗೆ ತಕ್ಕಂತೆ ‘ಸ್ಪೈಸ್ ವೇವ್ ಲಾಂಜ್’ ಫ್ಯಾಮಿಲಿ ರೆಸ್ಟೋರೆಂಟ್, ಮಲ್ಟಿ ಕ್ಯುಸಿನ್ ಬಾರ್ ಮತ್ತು ವೆಜ್ ರೆಸ್ಟೋರೆಂಟ್, ಆಕರ್ಷಕ ‘ಕೋಸ್ಟಾ ಗ್ರಾಂಡೆ’ ಕಾಫಿ ಶಾಪ್ ಗಳು ಈ ರೆಸಾರ್ಟ್‌ನ ವೈಶಿಷ್ಟ್ಯಗಳಾಗಿವೆ. ಸಸ್ಯಾಹಾರಿ ಮತ್ತು ಮಾಂಸಹಾರಕ್ಕೆ ವಿಶಾಲವಾದ ಪ್ರತ್ಯೇಕ ಅಡುಗೆ ಕೋಣೆಗಳನ್ನು ನಿರ್ಮಿಸಲಾಗಿದೆ.

ಜೊತೆಗೆ ಕಾರ್ಪೋರೇಟರ್ ಸಂಸ್ಥೆಯ ಸಭೆ, ಸಮಾರಂಭಗಳಿಗೆ ಅನುಕೂಲವಾಗುವಂತಹ ಬೋರ್ಡ್ ರೂಮ್/ಕಾನರೆನ್ಸ್ ಹಾಲ್‌ಗಳೂ ಇವೆ. ಸ್ಪಾ, ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಮಕ್ಕಳ ಆಟದ ಪಾರ್ಕ್‌ಗಳ ಜೊತೆಗೆ 400ಕ್ಕೂ ಅಧಿಕ ಕಾರು/ದ್ವಿಚಕ್ರ ವಾಹನ ಸಾಮಾರ್ಥ್ಯದ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ.

ಉದ್ಘಾಟನೆಗೆ ಸಿನಿ ತಾರೆಯರ ಮೆರಗು

ವೈ‍ಶಿಷ್ಟ್ಯಪೂರ್ಣವಾದ ಈ ರೆಸಾರ್ಟ್‌ನ ಉದ್ಘಾಟನಾ ಕಾರ್ಯಕ್ರಮವನ್ನು ಇನ್ನಷ್ಟು ಸಂಭ್ರಮಪೂರ್ಣಗೊಳಿಸುವುದಕ್ಕಾಗಿ ಚಲನಚಿತ್ರ ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ಸೂಪರ್ ಬಿಟ್ ಪ್ರೇಮದ ಊರಲಿ ಸಿನೆಮಾದ ನಾಯಕ ಶ್ರೀರಾಮ್, ನಾಯಕಿ ತಪಸ್ವಿನಿ ಪೂಣಚ್ಚ ಭಾಗಿಯಾಗಿ ಮೆರಗು ನೀಡಲಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

“ಅಪ್ಪನ ಮುಖ ಕೊನೆಯ ಬಾರಿ ನೋಡಬೇಕು, ದಯವಿಟ್ಟು ಊರಿಗೆ ತಲುಪಿಸಿ!" ಏರ್‌ಪೋರ್ಟ್‌ನಲ್ಲಿ ಕಣ್ಣೀರಿಟ್ಟ ಮಗನ ಮನಕಲಕುವ ದೃಶ್ಯ!
ಭಾರತದ 5 ಅತ್ಯಂತ ಸುಂದರ ರಸ್ತೆಗಳಿವು! ಬೈಕ್‌, ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವವರಿಗೆ ಹೇಳಿ ಮಾಡಿಸಿದ ರಸ್ತೆಗಳು!