
ಬೆಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಂಪರ್ ಕೊಡುಗೆ ನೀಡಿದೆ. ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ದಿನಾಂಕ 28/11/2026 ರಿಂದ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ಮಾರ್ಗದಲ್ಲಿ ನೂತನ 'ಐರಾವತ ವೋಲ್ವೋ' (Airavat Volvo) ಬಸ್ ಸಾರಿಗೆಯನ್ನು ಆರಂಭಿಸಲಾಗುತ್ತಿದೆ.
ಈ ಐಷಾರಾಮಿ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಮೈಸೂರು, ಕೋಯಿಕ್ಕೋಡ್, ತ್ರಿಶೂರ್, ಕೊಟ್ಟಾಯಂ ಹಾಗೂ ಏರುಮೇಲಿ ಮಾರ್ಗವಾಗಿ ನೀಲಕ್ಕಲ್ (ಪಂಪಾ-ಶಬರಿಮಲೆ) ತಲುಪಲಿದೆ.
- ಬೆಂಗಳೂರು (ಶಾಂತಿನಗರ ಬಸ್ ನಿಲ್ದಾಣ) ದಿಂದ ನೀಲಕ್ಕಲ್ (ಪಂಪಾ-ಶಬರಿಮಲೆ): ₹1,980/-
- ಮೈಸೂರಿನಿಂದ ನೀಲಕ್ಕಲ್ (ಪಂಪಾ-ಶಬರಿಮಲೆ): ₹1,880/-
ಶಬರಿಮಲೆ ಯಾತ್ರಾರ್ಥಿಗಳು ಈ ನೂತನ ಐರಾವತ ವೋಲ್ವೋ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ KSRTC ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.