ಹಣ ನೀಡಿ ಸಾಹಸಕ್ಕೆ ಕೈ ಹಾಕಿ! ಜೇನುನೊಣಗಳ ಜೊತೆ ರಾತ್ರಿ ಕಳೆಯೋ ಆಫರ್

By Suvarna NewsFirst Published Jan 16, 2024, 5:36 PM IST
Highlights

ಜೇನುನೊಣಗಳು ಅಪಾಯಕಾರಿ. ಅವುಗಳಿಗೆ ಸ್ವಲ್ಪ ಡಿಸ್ಟರ್ಬ್ ಆದ್ರೂ ಅವು ಗುಂಪಾಗಿ ದಾಳಿ ಮಾಡುತ್ವೆ. ಅದನ್ನು ಸಹಿಸೋದು ಮಾನವನಿಗೆ ಕಷ್ಟ. ಎಲ್ಲಿದ್ರೂ ಹುಡುಕಿ ಚುಚ್ಚುವ ಈ ಜೇನುನೊಣಗಳ ಜೊತೆ ಸಮಯ ಕಳೆಯೋ ಅವಕಾಶವೊಂದನ್ನು ಈ ವ್ಯಕ್ತಿ ನೀಡ್ತಿದ್ದಾನೆ.
 

ಹಗಲು ಕಂಡ ಬಾವಿಗೆ ಇರುಳು ಬೀಳಲು ಯಾರು ತಯಾರಿ ಇರ್ತಾರೆ ಹೇಳಿ. ಅಲ್ಲೊಂದು ಜೇನುಗೂಡಿದೆ ಎಂಬುದು ಗೊತ್ತಾದ್ರೆ ಸಾಕು ನಾವು ಆ ಕಡೆ ಅಪ್ಪಿತಪ್ಪಿಯೂ ಹೋಗೋದಿಲ್ಲ. ಹೋದ್ರೂ ಅತ್ಯಂತ ಎಚ್ಚರಿಕೆಯನ್ನು ವಹಿಸ್ತೇವೆ. ಎಲ್ಲಿ ಜೇನುನೊಣಕ್ಕೆ ಗಾಯವಾಗಿ ಅಥವಾ ಅವುಗಳ ಶಾಂತಿಗೆ ಭಂಗವಾಗಿ ನಮ್ಮ ಮೈ ಮುತ್ತಿದ್ರೆ ಎಂಬ ಭಯ ಎಲ್ಲರಿಗೂ ಇರುತ್ತದೆ. ಒಂದು ಜೇನುನೊಣ ಒಂದು ಬಾರಿ ಕಚ್ಚಿದ್ರೆ ಸಹಿಸೋದು ಕಷ್ಟ. ಹಾಗಿರುವಾಗ ಗುಂಪು ಗುಂಪು ಜೇನುನೊಣಗಳು ದಾಳಿ ಮಾಡಿದ್ರೆ ಜೀವ ಹೋಗೋದು ಗ್ಯಾರಂಟಿ. ಇದೇ ಕಾರಣಕ್ಕೆ, ಜೇನುನೊಣ ಗೂಡುಕಟ್ಟಿದೆ, ಅಲ್ಲಿಗೆ ಹೋಗ್ಬೇಡಿ ಅಂತಾ ಮಕ್ಕಳಿಗೆ ಅಥವಾ ಮನೆಯಲ್ಲಿರುವ ಜನರಿಗೆ ಎಚ್ಚರಿಕೆ ನೀಡ್ತಿರುತ್ತೇವೆ. 

ಹೀಗಿರುವಾಗ ಜೇನುನೊಣ (Bee) ಗಳ ಮಧ್ಯೆ ವಾಸಿಸುವ, ಒಂದು ರಾತ್ರಿ ಕಳೆಯುವ ಅವಕಾಶ ಸಿಕ್ಕಿದ್ರೆ? ನೀವು ಅದಕ್ಕೆ ಒಪ್ಪಿಗೆ ನೀಡ್ತೀರಾ? ಜೇನುನೊಣದ ಜೊತೆ ನಿದ್ರೆ ಮಾಡಿದ್ದಕ್ಕೆ ಹಣ (Money) ಕೊಟ್ಟರೆ ಟ್ರೈ ಮಾಡ್ತೇನೆ ಎನ್ನುವವರು ಕೆಲವೊಬ್ಬರಿರ್ತಾರೆ. ಆದ್ರೆ ಇಲ್ಲಿ ಹಣ ಅವರು ಕೊಡೊದಿಲ್ಲ. ಜೇನುನೊಣದ ಜೊತೆ ವಾಸಿಸಲು ನೀವು ಹಣ ನೀಡ್ಬೇಕು. ಹೌದು, ಜೇನುಗೂಡಿನ ಮಧ್ಯೆ ಒಂದು ರಾತ್ರಿ ಕಳೆಯುವ ಅವಕಾಶವನ್ನು ಈ ವ್ಯಕ್ತಿ ನೀಡ್ತಿದ್ದಾನೆ. ಧೈರ್ಯವಂತರು, ಸಾಹಸಿಗಳು ನೀವಾಗಿದ್ದರೆ ಒಮ್ಮೆ ಟ್ರೈ ಮಾಡಿ. ಜೇನುಗೂಡು, ಸಾವಿರಾರು ಜೇನುಗಳ ಜೊತೆ ರಾತ್ರಿ ಕಳೆಯಲು ನೀವು ಇಟಲಿಗೆ ಹೋಗ್ಬೇಕು. ಇಟಲಿಯ ಜೇನುಸಾಗಣಿಕೆದಾರರೊಬ್ಬರು ಈ ಆಫರ್ ನೀಡ್ತಿದ್ದಾರೆ. ಅವರ ಜೇನುತುಂಬಿರುವ ಈ ಸ್ಥಳಕ್ಕೆ ವಂಡರ್ ಬೀ & ಬೀ (Wonder Bee & Bee) ಎಂದು ಹೆಸರಿಡಲಾಗಿದೆ.

ಧಾರ್ಮಿಕ ಟೂರಿಸಂಗೆ ಬಂಪರ್‌ ಟೈಮ್‌, ಪುಣ್ಯಕ್ಷೇತ್ರ ನೋಡಲು ಭಾರತೀಯರು ಉತ್ಸುಕ!

ನೀವು ಈ ಸ್ಥಳಕ್ಕೆ ಹೋಗ್ತಿದ್ದಂತೆ ನಿಮಗೆ ಜೇನುಗಳ ಝೇಂಕಾರ ವೆಲ್ ಕಂ ಮಾಡುತ್ತದೆ. ಸಿಂಗಲ್ ಬೆಡ್ ರೂಮಿನ ಕೊಠಡಿಯಲ್ಲಿ ನೀವು ಇರಬೇಕು. ಇಬ್ಬರಿಗೆ ವಾಸಿಸಲು ಇಲ್ಲಿ ಅವಕಾಶವಿದೆ. ನಿಮ್ಮ ಬೆಡ್ ಮೇಲೆ, ಫ್ಯಾನ್ ಮೇಲೆ ನೀವು ಜೇನುಗೂಡುಗಳನ್ನು ನೋಡ್ಬಹುದು. ಕಿಟಕಿಗಳಲ್ಲಿ ಕೂಡ ಜೇನುಗೂಡುಗಳಿವೆ. ನೀವು ನಿದ್ರೆ ಮಾಡ್ತಿದ್ದರೆ ಜೇನುನೊಣಗಳು ನಿಮಗೆ ಲಾಲಿಹಾಡುತ್ತವೆ. ಈ ಮನೆಯಲ್ಲಿ ಒಟ್ಟು 10 ಲಕ್ಷ ಜೇನುನೊಣಗಳಿವೆ. ಅವುಗಳನ್ನು ಒಟ್ಟು 9 ಜೇನುಗೂಡಿನಲ್ಲಿ ಸಾಕಲಾಗ್ತಿದೆ. ರೊಕೊ ಫಿಲೋಮೆನೊ ಹೆಸರಿನ ವ್ಯಕ್ತಿ ಈ ಜೇನು ಮನೆಯ ಮಾಲೀಕರಾಗಿದ್ದಾರೆ. ಕೆಲ ಸ್ವಯಂಸೇವಕರು ಇವರಿಗೆ ಸಹಾಯ ಮಾಡ್ತಿದ್ದಾರೆ. ಈ ವಂಡರ್ ಬೀ & ಬೀಯನ್ನು ಸುಮಾರು 13 ಲಕ್ಷ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ. 

ಮಲೈಕಾ - ಅರ್ಜುನ್‌ಗೆ ಹಾಟ್ ಫೇವರೇಟ್ ಆದ ಈ ಗೋವಾ ಬೀಚ್ ರೆಸಾರ್ಟ್‌ ಒಳಾಂಗಣ ನೋಡಿ..

ಬರ್ಚ್ ಮರದಿಂದ ಈ ರೂಮನ್ನು ನಿರ್ಮಿಸಲಾಗಿದೆ. ಸುತ್ತಮುತ್ತ ಸುಂದರ ಪರಿಸರವನ್ನು ನೋಡುವ ಅವಕಾಶ ನಿಮಗೆ ಸಿಗುತ್ತದೆ. ನೀವು ಜೇನುನೊಣಗಳ ಜೊತೆ ಒಂದು ರಾತ್ರಿ ರೂಮಿನಲ್ಲಿ ಕಳೆಯಲು 11 ಸಾವಿರದಿಂದ 14 ಸಾವಿರ ರೂಪಾಯಿ ನೀಡಬೇಕಾಗುತ್ತದೆ.

ವಂಡರ್ ಬೀ & ಬೀಯಲ್ಲಿ ಎಲ್ಲ ಸೌಲಭ್ಯವಿದೆ ಎಂದು ನಾವು ಹೇಳೋದಿಲ್ಲ. ಇಲ್ಲಿ ಕರೆಂಟ್ ವ್ಯವಸ್ಥೆ ಇಲ್ಲ. ಹಾಗಾಗಿ ಸೋಲಾರ್ ಮೂಲಕ ದೀಪದ ವ್ಯವಸ್ಥೆ ಮಾಡಲಾಗುತ್ತದೆ. ಸ್ನಾನಕ್ಕೆ ನೀವು ಬಿಸಿ ನೀರು ಕೇಳೋ ಹಾಗಿಲ್ಲ. ಒಳ್ಳೆ ಬಾತ್ ರೂಮ್ ನಿರೀಕ್ಷೆ ಮಾಡ್ಬೇಡಿ. ಆಲಿವ್ ಮರದಿಂದ ನೇತಾಡುವ ಶವರ್ ನಲ್ಲಿ ನೀವು ಸ್ನಾನ ಮಾಡಬೇಕು. ಜೇನುನೊಣಗಳು ನಿಮಗೆ ಇಷ್ಟ, ಅವುಗಳ ಬಗ್ಗೆ ಇನ್ನಷ್ಟು ತಿಳಿಯಬೇಕು, ಯಾವುದೇ ನೋವಿಗೆ ನಾವು ಹೆದರೋದಿಲ್ಲ ಎನ್ನುವ ಸಾಹಸಿಗಳು ನೀವಾಗಿದ್ದರೆ ವಂಡರ್ ಬೀ & ಬೀಗೆ ಒಮ್ಮೆ ಭೇಟಿ ನೀಡಿ. ಜೇನುಗಳ ಜೊತೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ದಿನ ಕಳೆಯಿರಿ. 
 

click me!