ನೀವೆಷ್ಟು ದೇಶ ಸುತ್ತಿದ್ದೀರಿ ಅಂತಾ ನಮ್ಮನ್ನು ಕೇಳಿದ್ರೆ ಒಂದು ಇಲ್ಲ ಶೂನ್ಯ ಎಂಬ ಉತ್ತರ ಬರುತ್ತೆ. ಆದ್ರೆ ಕೆಲವರು ತಮ್ಮ ಜೀವನವನ್ನು ಸುತ್ತಾಡೋಕೆ ಮೀಸಲಿಡ್ತಾರೆ. ಸ್ವಂತ ಕಾರನ್ನೂ ಹೊಂದಿರದ ಈ ಜೋಡಿ, ಮಗಳಿಗಾಗಿ ದೇಶ ಸುತ್ತುತ್ತಿದ್ದಾರೆ.
ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಪರಿಸರ, ಅವರ ಸಂಸ್ಕೃತಿ, ಆಹಾರ ಪದ್ಧತಿ ನಮಗೆ ತಿಳಿಯುತ್ತದೆ. ಜನರ ಜೊತೆ ಹೇಗೆ ಬೆರೆಯಬೇಕು, ಜೀವನ ಹೇಗಿರುತ್ತೆ ಎಂಬುದು ಅರ್ಥವಾಗುತ್ತದೆ. ಓದು ಮುಗಿನ ನೌಕರಿ ಹಿಡಿದ ಮೇಲೆ ಜನರು ಊರುರು ಸುತ್ತುವ ತಮ್ಮ ಪ್ಲಾನ್ ಗೆ ಜೀವ ನೀಡ್ತಾರೆ. ಆದ್ರೆ ಈ ಹುಡುಗಿ ತನ್ನ ಪಾಲಕರ ಕೃಪೆಯಿಂದ 10 ವರ್ಷದಲ್ಲೇ 50ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾಳೆ. ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದೇಶ ನೋಡಿ ಬಂದ್ರೂ ಆಕೆ ಒಂದು ದಿನವೂ ಸ್ಕೂಲ್ ಮಿಸ್ ಮಾಡಿಲ್ಲ ಅನ್ನೋದೇ ವಿಶೇಷ. ಸ್ಕೂಲ್ ತಪ್ಪಿಸದೆ 50ಕ್ಕೂ ಹೆಚ್ಚು ದೇಶ ಓಡಾಡಿ ಬಂದ ಬಾಲಕಿ ಈಗ ಸುದ್ದಿಯಲ್ಲಿದ್ದಾಳೆ.
10 ವರ್ಷದಲ್ಲಿ 50 ದೇಶ ನೋಡಿದ ಬಾಲಕಿ ಯಾರು? : ಬಾಲಕಿ ಹೆಸರು ಅದಿತಿ. ಆಕೆಗೆ ಈಗ 10 ವರ್ಷ. ದಕ್ಷಿಣ ಲಂಡನ್ (South London) ನಲ್ಲಿ ತನ್ನ ತಂದೆ ದೀಪಕ್ ಮತ್ತು ತಾಯಿ ಅವಿಲಾಶಾ ಅವರೊಂದಿಗೆ ಅದಿತಿ ವಾಸಿಸುತ್ತಿದ್ದಾಳೆ. ಯುರೋಪ್ (Europe) ನ ಹೆಚ್ಚಿನ ಭಾಗಗಳನ್ನು ವೀಕ್ಷಿಸಿರುವ ಅದಿತಿ (Aditi), ನೇಪಾಳ, ಸಿಂಗಾಪುರ್ ಮತ್ತು ಥೈಲ್ಯಾಂಡ್ ದೇಶಗಳಿಗೆ ಅದಿತಿ ಭೇಟಿ ನೀಡಿದ್ದಾಳೆ. ಅದಿತಿ ಮೊದಲ ಬಾರಿ ಜರ್ಮನಿಗೆ ಪ್ರವಾಸ ಬೆಳೆಸಿದ್ದಳು. ಆಕೆ ಮೂರು ವರ್ಷದವಳಿದ್ದಾಗ ಪಾಲಕರು ಆಕೆಯನ್ನು ಜರ್ಮನಿಗೆ ಕರೆದೊಯ್ದಿದ್ದರು. ಜರ್ಮನಿ ಭೇಟಿಯಿಂದ ಖುಷಿಗೊಂಡ ಅವರು ಶೀಘ್ರದಲ್ಲೇ ಫ್ರಾನ್ಸ್, ಇಟಲಿ ಮತ್ತು ಆಸ್ಟ್ರಿಯಾಗಳಿಗೆ ಭೇಟಿ ನೀಡಿದ್ದರು. ಅಲ್ಲಿಂದ ಅವರ ವಿದೇಶಿ ಪ್ರವಾಸ ಶುರುವಾಗಿತ್ತು.
ಮಾನ್ಸೂನ್ ಟ್ರಿಪ್, ಟ್ರಕ್ಕಿಂಗ್ ಮತ್ತು ಇನ್‌ಸ್ಟಾ ರೀಲ್ಸ್; ಮನುಷ್ಯನ ಹಾವಳಿಗೆ ಹಾಳಾಗ್ತಿದೆ ನಿಸರ್ಗದ ಹಸಿರೊಡಲು
ಮಗಳಿಗಾಗಿ ಈ ಪ್ರವಾಸ : ಅದಿತಿ ಭಾರತೀಯ ಮೂಲದ ಬಾಲಕಿ. ಅದಿತಿಯ ಪೋಷಕರು ತಮ್ಮ ಮಗು ಪ್ರಯಾಣವನ್ನು ಇಷ್ಟಪಡುವ ವ್ಯಕ್ತಿಯಾಗಬೇಕೆಂದು ನಿರ್ಧರಿಸಿದ್ದರು. ಶಾಲೆಗೆ ರಜೆ ಮಾಡದೆ ಅವರು ಮಕ್ಕಳಿಗೆ ಬೇರೆ ಬೇರೆ ದೇಶ, ವಿಭಿನ್ನ ಸಂಸ್ಕೃತಿ, ಆಹಾರ ಮತ್ತು ಜನರನ್ನು ಅರ್ಥಮಾಡಿಸಲು ಬಯಸಿದ್ದರು. ಅದಕ್ಕಾಗಿಯೇ ಪ್ಲಾನ್ ಮಾಡಿ ಅವರು ಪ್ರವಾಸಕ್ಕೆ ಹೋಗ್ತಾರೆ. ಶಾಲಾ ರಜಾದಿನಗಳಲ್ಲಿ ಪ್ರಯಾಣಿಸುವ ಅವರು ಬ್ಯಾಂಕ್ ರಜೆಗಳನ್ನು ಕೂಡ ಬಳಸಿಕೊಳ್ತಾರೆ.
ಹೀಗಿರುತ್ತೆ ಅದಿತಿ ಟೈಂ ಟೇಬಲ್ : ಮೊದಲೇ ಹೇಳಿದಂತೆ ಅದಿತಿ ಮೂರು ವರ್ಷದವಳಾಗಿದ್ದಾಗಲೇ ಪ್ರವಾಸ ಶುರುವಾಗಿತ್ತು. ಆಗ ಆಕೆ ವಾರಕ್ಕೆ ಎರಡೂವರೆ ದಿನ ಶಾಲೆಗೆ ಹೋಗುತ್ತಿದ್ದಳು. ಆಗ ಶುಕ್ರವಾರದಂದು ನೇರವಾಗಿ ಶಾಲೆಯಿಂದ ಪ್ರವಾಸಕ್ಕೆ ಹೊರಡುತ್ತಿದ್ದರು. ಭಾನುವಾರ ತಡರಾತ್ರಿ 11 ಗಂಟೆಗೆ ವಾಪಸ್ ಬರ್ತಿದ್ದರು. ಕೆಲವೊಮ್ಮೆ ಸೋಮವಾರ ಬೆಳಿಗ್ಗೆ ಬರುತ್ತಿದ್ದರಲ್ಲದೆ ವಿಮಾನ ನಿಲ್ದಾಣದಿಂದ ನೇರವಾಗಿ ಅದಿತಿ ಶಾಲೆಗೆ ಹೋಗ್ತಿದ್ದಳು.
ಈ ನಿಗೂಢ ಸ್ಥಳದಲ್ಲಿವೆ 'ಕೋಟಿ' ವಿಗ್ರಹಗಳು; ಇದು ಶಾಪಗ್ರಸ್ತ ದೇವತೆಗಳ ಬೆಟ್ಟ..!
ಪ್ರವಾಸಕ್ಕೆ ಪಾಲಕರ ಉಳಿತಾಯದ ಪ್ಲಾನ್ : ಅದಿತಿಯ ಪೋಷಕರು ವರ್ಷಕ್ಕೆ 20,000 ಡಾಲರ್ ಅಂದ್ರೆ 21 ಲಕ್ಷಕ್ಕೂ ಹೆಚ್ಚು ಹಣವನ್ನು ಪ್ರವಾಸಕ್ಕೆ ಖರ್ಚು ಮಾಡುತ್ತಾರೆ. ಆದ್ರೆ ಪ್ರವಾಸಕ್ಕೆ ಖರ್ಚು ಮಾಡಿದ ಪ್ರತಿಯೊಂದು ಪೈಸೆಯೂ ವ್ಯರ್ಥವಾಗಿಲ್ಲ ಎನ್ನುತ್ತಾರೆ ಪಾಲಕರು. ಅದಿತಿಯ ಪೋಷಕರು ಲೆಕ್ಕಪರಿಶೋಧಕರಾಗಿ ಕೆಲಸ ಮಾಡುತ್ತಾರೆ. ಪ್ರವಾಸಕ್ಕಾಗಿಯೇ ವರ್ಷವಿಡೀ ಉಳಿತಾಯ ಮಾಡುತ್ತಾರೆ. ಹೊರಗೆ ಆಹಾರ ಸೇವನೆ ಮಾಡೋದಿಲ್ಲ. ಸಾರ್ವಜನಿಕ ಸಾರಿಗೆ ಬಳಕೆ ಮಾಡ್ತಾರೆ. ಸ್ವಂತ ಕಾರನ್ನು ಇವರು ಹೊಂದಿಲ್ಲ. ಅದಿತಿಗೆ 2 ವರ್ಷದ ಸಹೋದರಿ ಇದ್ದು, ಆಕೆ ಆರೈಕೆ ಹಾಗೂ ಪ್ರಯಾಣದ ಖರ್ಚು ಉಳಿಸಲು ತಾಯಿ ಮನೆಯಲ್ಲಿಯೇ ಕೆಲಸ ಮಾಡ್ತಾರೆ. ಕೊರೊನಾಗಿಂತ ಮೊದಲು ಒಂದು ವರ್ಷದಲ್ಲಿ ಇವರು 12 ಕಡೆ ಭೇಟಿ ನೀಡಿದ್ದರಂತೆ. ನೇಪಾಳ, ಜಾರ್ಜಿಯಾ, ಅರ್ಮೇನಿಯಾವನ್ನು ಹೆಚ್ಚು ಇಷ್ಟಪಡುವ ಅದಿತಿ, ನೇಪಾಳದಲ್ಲಿ ಉಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ.