ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಹಿತ ನೀಡೋ ಈ ಪ್ಲೇಸ್‌ಗಳಿಗೆ ಜೀವನದಲ್ಲಿ ಒಮ್ಮೆ ವಿಸಿಟ್ ಮಾಡಿ!

By Suvarna NewsFirst Published Nov 15, 2022, 6:06 PM IST
Highlights

ವಿಶ್ವದಲ್ಲಿ ಸುಂದರ ಪ್ರವಾಸಿ ತಾಣಗಳ ಸಂಖ್ಯೆ ಸಾಕಷ್ಟಿದೆ. ಆಯಾ ಪ್ರದೇಶಗಳು ತಮ್ಮದೆ ನಿಯಮಗಳನ್ನು ಜಾರಿಗೆ ತರುತ್ತವೆ. ಕೆಲ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮಾತ್ರವಲ್ಲ ಸ್ಥಳಿಯರು ಕೂಡ ಕಾರು ಚಲಾಯಿಸುವಂತಿಲ್ಲ. ವಾಹನದ ಗಲಾಟೆಯಿಲ್ಲದ ಪ್ರದೇಶ ಎಲ್ಲರ ಗಮನ ಸೆಳೆಯುತ್ತದೆ. 
 

ನಗರವಿರಲಿ ಈಗ ಹಳ್ಳಿ ಹಳ್ಳಿಗಳಲ್ಲೂ ವಾಹನಗಳನ್ನು ನೋಡಬಹುದು. ಪ್ರಯಾಣ ಸುಗಮವಾಗಲಿ ಎನ್ನುವ ಕಾರಣಕ್ಕೆ ಜನರು ಬೈಕ್, ಕಾರು, ರಿಕ್ಷಾ, ಜೀಪ್ ಹೀಗೆ ತಮಗೆ ಅನುಕೂಲವೆನಿಸುವ ವಾಹನಗಳನ್ನು ಖರೀದಿ ಮಾಡ್ತಾರೆ. ಪ್ರವಾಸಿ ತಾಣಗಳಿಗೆ ಜನರು ಸಾರ್ವಜನಿಕ ಸಾರಿಗೆ ಬದಲು ಸ್ವಂತ ವಾಹನದಲ್ಲಿ ಪ್ರಯಾಣ ಬೆಳೆಸಲು ಹೆಚ್ಚು ಆದ್ಯತೆ ನೀಡ್ತಾರೆ. ಇದೇ ಕಾರಣಕ್ಕೆ ಪ್ರವಾಸಿ ತಾಣಗಳಲ್ಲಿ ನೀವು ಬೈಕ್, ಕಾರು ಸೇರಿದಂತೆ ವಾಹನಗಳ ಶಬ್ಧವನ್ನು ಇಡೀ ದಿನ ಕೇಳಬೇಕಾಗುತ್ತದೆ. ಗಿಜಿಗಿಡುವ ಜನರ ಜೊತೆ ಶಬ್ಧ ಮಾಲಿನ್ಯ ಹಾಗೂ ವಾಯು ಮಾಲಿನ್ಯ ಮಾಡುವ ವಾಹನಗಳು ಪ್ರವಾಸಿ ಸ್ಥಳದ ಸೌಂದರ್ಯ ಹಾಳು ಮಾಡುತ್ತವೆ. ಆದ್ರೆ ವಿಶ್ವದಲ್ಲಿ ಕೆಲ ಪ್ರದೇಶಗಳು ಭಿನ್ನವಾಗಿವೆ. ಅಲ್ಲಿಗೆ ನೀವು ಕಾರಿನಲ್ಲಿ ಪ್ರಯಾಣ ಬೆಳೆಸುವಂತಿಲ್ಲ. ವಾಹನಗಳು ಅಲ್ಲಿ ನಿಷಿದ್ಧ. ಪ್ರವಾಸಕ್ಕೆ ಹೋಗುವ ಮುನ್ನ ಕಾರು ಓಡಿಸುವುದನ್ನು ನಿಷೇಧಿಸಿರುವ ಸ್ಥಳಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.

ಕಾರು (Car) ಚಲಾಯಿಸೋದು ಇಲ್ಲಿ ನಿಷಿದ್ಧ :
ಮ್ಯಾಕಿನಾಕ್ ದ್ವೀಪ (Mackinac Island) :
ಯಾವುದೇ ವಾಹನಕ್ಕೆ ಅವಕಾಶ ನೀಡದ ದ್ವೀಪ ಮ್ಯಾಕಿನಾಕ್ ಐಸ್ಲ್ಯಾಂಡ್. ಇಲ್ಲಿ ಯಾವುದೇ ವ್ಯಕ್ತಿಗೆ ಕಾರು ಓಡಿಸಲು ಸರ್ಕಾರ ಅನುಮತಿ ನೀಡುವುದಿಲ್ಲ. ಇಲ್ಲಿನ ಜನರು ಹಾಗೂ ಪ್ರವಾಸಿಗ (Tourist) ರು ಕುದುರೆಯ ಮೇಲೆ ಸವಾರಿ ಮಾಡಬೇಕು. ಇಲ್ಲವೆ ಪ್ರಯಾಣಿಕರು ಸೈಕಲ್ (Cycle) ಬಳಸಬೇಕು. ಇಲ್ಲಿರುವ ಕುದುರೆ (Horse) ಗಳ ಸುರಕ್ಷತೆ ದೃಷ್ಟಿಯಿಂದ 1898 ರಲ್ಲಿ ಇಲ್ಲಿನ ಸರ್ಕಾರ, ಕಾರುಗಳನ್ನು ನಿಷೇಧಿಸಿತ್ತು. ಈಗ್ಲೂ ಈ ನಿಯಮ ಮ್ಯಾಕಿನಾಕ್ ದ್ವೀಪ (Island) ದಲ್ಲಿ ಜಾರಿಯಲ್ಲಿದೆ. ಕುದುರೆಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಅಲ್ಲಿನ ಜನರು ಈಗ್ಲೂ ಕಾರಿನಲ್ಲಿ ಓಡಾಟ ನಡೆಸುವುದಿಲ್ಲ.

ವಿದೇಶಕ್ಕೆ ಪ್ರಯಾಣಿಸುವ ಮೊದಲು ಈ ದೇಶಗಳ ಹೆಸರನ್ನು ಸರಿಯಾಗಿ ಹೇಳೋದು ಕಲೀರಿ

ನೆದರ್ಲ್ಯಾಂಡ್ ನ ಗೀತೂರ್ನ್‌ (Giethoorn) ನಲ್ಲಿ ಕಾರು ನಿಷೇಧ : ನೆದರ್ಲ್ಯಾಂಡ್ ನ ಗೀತೂರ್ನ್ ನಲ್ಲಿ ಕೂಡ ಪ್ರಯಾಣಿಕರು ಕಾರನ್ನು ಬಳಸುವುದಿಲ್ಲ. ಅಲ್ಲಿನ ಜನರು ದೋಣಿ (Boat) ಯಲ್ಲಿ ಪ್ರಯಾಣ ಬೆಳೆಸುತ್ತಾರೆ. ದೋಣಿಗೆ ದೊಡ್ಡ ಹಾರನ್ ಹಾಕಿರಲಾಗುತ್ತದೆ. ದೋಣಿ ಬಿಟ್ಟರೆ ನೀವು ಇಲ್ಲಿ ಬೇರೆ ಯಾವುದೇ ವಾಹನವನ್ನು ಹೆಚ್ಚಾಗಿ ನೋಡಲು ಸಾಧ್ಯವಿಲ್ಲ.  ವಾಹನಗಳ ಸಂಚಾರವಿರದ ಕಾರಣ ಈ ಜಾಗ ಸದಾ ಶಾಂತವಾಗಿರುತ್ತದೆ. ಈ ಶಾಂತತೆ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.  

ಇಟಲಿ (Italy) ಯ ವೆನಿಸ್‌ (Venice) ನಲ್ಲಿ ಕಾರು ಓಡಿಸ್ಬೇಡಿ : ನಿಮಗೆ ವೆನಿಸ್ ಹೆಸರು ಕೇಳಿದ್ರೆ ಅಚ್ಚರಿಯಾಗ್ಬಹುದು. ಇಟಲಿಯ ಪ್ರಸಿದ್ಧ ಸ್ಥಳಗಳಲ್ಲಿ ಇದು ಒಂದು. ಆದ್ರೆ ಇಲ್ಲಿ ಕೂಡ ಕಾರುಗಳನ್ನು ಓಡಿಸಲು  ಅನುಮತಿ ನೀಡುವುದಿಲ್ಲ. ವೆನಿಸ್ ನಲ್ಲಿ ಕಾರು ಚಲಾಯಿಸಲು ರಸ್ತೆಯೇ ಇಲ್ಲ. ಇಲ್ಲಿ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ದೋಣಿಗಳು ಮತ್ತು ನೀರಿನ ಬಸ್ಸುಗಳನ್ನು ಬಳಸುತ್ತಾರೆ. ಈ ಸ್ಥಳದಲ್ಲಿ ಅನೇಕ ಕಾಲುವೆಗಳಿವೆ. ಇದೇ ಕಾರಣಕ್ಕೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಸಾಕಷ್ಟಿದೆ.  

TRAVEL TIPS : ಹೊಟೇಲ್ ರೂಮ್ ಚೆಕ್ ಔಟ್ ಮಾಡುವಾಗ ಇವೆಲ್ಲಾ ನೆನಪಲ್ಲಿರಲಿ!

ಬಾಲ್ಡ್ ಹೆಡ್ (Bald Head) ಐಲ್ಯಾಂಡ್ : ಉತ್ತರ ಕೆರೊಲಿನಾದ ಬಾಲ್ಡ್ ಹೆಡ್ ಐಲ್ಯಾಂಡ್‌ನಲ್ಲಿ ಕೂಡ ಕಾರು ಪ್ರಯಾಣ ಬೆಳೆಸುವಂತಿಲ್ಲ. ಇಲ್ಲಿನ ಜನರು ಎಲೆಕ್ಟ್ರಿಕ್ ಗಾಲ್ಫ್ ಕಾರ್‌್ಾಗಳು ಮತ್ತು ಬೈಸಿಕಲ್‌ಗಳನ್ನು ಬಳಸುತ್ತಾರೆ. ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಇಲ್ಲಿ ಅವಕಾಶವಿಲ್ಲ. ಬಾಲ್ಡ್ ಹೆಡ್ ಐಲ್ಯಾಂಡ್ ನಲ್ಲಿ ಗಾಲ್ಫ್ ಕೋರ್ಸ್‌ಗಳು ಮತ್ತು ಪ್ರಾಚೀನ ಕಡಲತೀರ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿ ಕೂಡ ಹೆಚ್ಚು ವಾಹನಗಳನ್ನು ಬಳಸದ ಕಾರಣ ಇದನ್ನು ಅತ್ಯಂತ ಶಾಂತ ಸ್ಥಳವೆಂದು ಪರಿಗಣಿಸಲಾಗಿದೆ. 
 

click me!