ವ್ಯಾಲಂಟೈನ್ಸ್ ಡೇ ದಿನ ಮ್ಯಾಜಿಕ್ ಮಾಡಲಿದೆ ಕ್ಯಾಡ್ಬರಿ 5 ಸ್ಟಾರ್ ಫೆ. 14ರ ಸ್ಪೆಷಲ್ ಇದು!

By Suvarna News  |  First Published Feb 5, 2024, 3:38 PM IST

ಪ್ರೇಮಿಗಳ ದಿನ ಬೇಡ್ವೆ ಬೇಡ ಎನ್ನುವವರಿಗೊಂದು ಸುದ್ದಿ ಇದೆ. ಈ ದಿನವನ್ನು ಮಾಯ ಮಾಡಲು ಕ್ಯಾಡ್ಬರಿ 5 ಸ್ಟಾರ್ ಮುಂದಾಗಿದೆ. ಟೈಂ ಟ್ರಾವೆಲ್ ಈ ಮಶಿನ್ ಏನೇನು ಮಾಡುತ್ತೆ ಎನ್ನುವ ವಿವರ ಇಲ್ಲಿದೆ.
 


ವ್ಯಾಲಂಟೈನ್ಸ್ ಡೇ ಬರಲು ಇನ್ನೇನು ಕೆಲವೇ ದಿನಗಳ ಬಾಕಿ ಇವೆ. ಈಗಾಗಲೇ ಪ್ರೇಮಿಗಳು ಆ ದಿನದ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಎಲ್ಲಿ ನೋಡಿದ್ರೂ ವ್ಯಾಲಂಟೈನ್ಸ್ ಡೇ ಉಡುಗೊರೆ, ವಿಶೇಷ ಕಾರ್ಯಕ್ರಮಗಳನ್ನು ನಾವು ನೋಡ್ಬಹುದು. ಬಹುತೇಕ ಇ – ಕಾಮರ್ಸ್ ಕಂಪನಿಗಳು ಪ್ರೇಮಿಗಳ ದಿನಕ್ಕಾಗಿ ವಿಶೇಷ ಆಫರ್ ಕೂಡ ಬಿಡ್ತಿವೆ. ಪ್ರೇಮಿಗಳಿರೋರಿಗೆ ಈ ದಿನ ವಿಶೇಷ. ಪ್ರೇಮಿಗಳಿಲ್ಲದ, ಒಂಟಿಯಾಗಿರುವ ಜನರಿಗೆ ಇದು ಬೋರಿಂಗ್ ದಿನ. ಕೆಲ ಕೆಟ್ಟ ಘಟನೆಗಳು ವ್ಯಾಲಂಟೈನ್ಸ್ ಡೇ ಅನೇಕರನ್ನು ಕಾಡೋದಿದೆ. ಇನ್ನು ಕೆಲವರಿಗೆ ಒಂಟಿಯಾಗಿರೋದು ಹಿಂಸೆ ಎನ್ನಿಸುತ್ತೆ. ಹಾಗಾಗಿ ವ್ಯಾಲಂಟೈನ್ಸ್ ಡೇ ಕಳೆದ್ರೆ ಸಾಕು ಎನ್ನುವವರಿದ್ದಾರೆ. ಚಾಕೊಲೇಟ್ ಬ್ರಾಂಡ್ ಕ್ಯಾಡ್ಬರಿ 5 ಸ್ಟಾರ್, ಇಂಥವರಿಗೆ ವಿಶೇಷ ಉಡುಗೊರೆ ನೀಡಲು ಸಿದ್ಧವಾಗಿದೆ. ಫೆಬ್ರವರಿ 14 ರಂದು ಕ್ರಾಂತಿ ಮಾಡಲು ಕ್ಯಾಡ್ಬರಿ 5 ಸ್ಟಾರ್ ಸಿದ್ಧವಾಗಿದೆ. ನಿಮಗೆ ವ್ಯಾಲಂಟೈನ್ಸ್ ಡೇ ಕಳೆದಿದ್ದೇ ತಿಳಿಯೋದಿಲ್ಲ. ಆ ದಿನವೇ ಇರದಂತೆ ಮಾಡಲು ಕ್ಯಾಡ್ಬರಿ 5 ಸ್ಟಾರ್ ಮುಂದಾಗಿದೆ. ಈ ಅಭಿಯಾನಕ್ಕೆ ಕ್ಯಾಡ್ಬರಿ 5 ಸ್ಟಾರ್ ಜೊತೆ ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ ಕೈ ಜೋಡಿಸಿದ್ದಾರೆ.

ಕ್ಯಾಡ್ಬರಿ 5 ಸ್ಟಾರ್ (Cadbury Five Star), ವ್ಯಾಲಂಟೈನ್ಸ್ (Valentines) ಡೇ  ವಿರೋಧಿಗಳಿಗಾಗಿ ಟೈಮ್ ಟ್ರಾವೆಲ್ ವೆಸೆಲ್ ತಂದಿದೆ. ಕ್ಯಾಡ್ಬರಿ 5 ಸ್ಟಾರ್ ಅಭಿಯಾನ ಎಲ್ಲಡೆ ಸುದ್ದಿ ಮಾಡ್ತಿದೆ. 

Latest Videos

undefined

ಫೆಬ್ರವರಿ 14 ರಂದು, ಮೂವರು ಸ್ವಯಂಸೇವಕರು ದಿನವನ್ನು ವೇಗಗೊಳಿಸಲು ಮಿಷನ್‌ (Mission) ನಲ್ಲಿ ಹೊರಡುತ್ತಾರೆ. ಈವೆಂಟ್‌ನ ಮೂಲಕ ಚಮತ್ಕಾರವನ್ನು ವೀಕ್ಷಿಸಲು ಜಗತ್ತನ್ನು ಆಹ್ವಾನಿಸಲಾಗಿದೆ. ಅದನ್ನು ಎಲ್ಲರಿಗೂ ವೀಕ್ಷಿಸುವಂತೆ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಕ್ಯಾಡ್ಬರಿ 5 ಸ್ಟಾರ್ ಅಭಿಯಾನ, ಅಸಾಧ್ಯ ಎಂಬುದನ್ನು ಸಾಧ್ಯ ಮಾಡುವ ಮೂಲಕ ಪ್ರೇಮಿಗಳ ದಿನವನ್ನು ನಿಮ್ಮ ಕ್ಯಾಲೆಂಡ್ ನಿಂದ ತೆಗೆಯುತ್ತದೆ ಎಂದು ಮೊಂಡೆಲೆಜ್ ಇಂಡಿಯಾದ ಮಾರ್ಕೆಟಿಂಗ್ ವಿಪಿ ನಿತಿನ್ ಸೈನಿ ಹೇಳಿದ್ದಾರೆ. ಹಿಂದಿನ ವರ್ಷ ಈ ದಿನ ಕಳೆಯೋದು ಅನೇಕರಿಗೆ ಸುಲಭವಾಗಿರಲಿಲ್ಲ. ಹಾಗಾಗಿ ಈ ಬಾರಿ ಈ ದಿನವನ್ನು ಫಾಸ್ಟ್ ಫಾರ್ವರ್ಡ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. 

ಗುಜರಾತಿನ ಈ ಸಾವಿರಾರು ವರ್ಷ ಹಳೆಯ ಸೂರ್ಯ ದೇವಾಲಯದಲ್ಲಿ ಅಡಗಿವೆ ಬಾಹ್ಯಾಕಾಶದ ರಹಸ್ಯ

ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ ಈ ವಿಶಿಷ್ಟ ಸಮಯ ಪ್ರಯಾಣದ ನೌಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಡಗಿಗೆ ಎಫ್‌ಎನ್‌ಎಸ್ ಕ್ರಿಜ್ ವಿನಾಶ್ ಎಂದು ಹೆಸರಿಡಲಾಗಿದೆ. ಫೆಬ್ರವರಿ 13   ರಂದು ಅಮೆರಿಕನ್ ಸಮೋವಾ ಸಮಯ ರಾತ್ರಿ 11. 59 ಕ್ಕೆ ಅಮೇರಿಕನ್ ಸಮೋವಾ ಮತ್ತು ಸಮೋವಾ ನಡುವಿನ ಇಂಟರ್ನ್ಯಾಷನಲ್ ಡೇಟ್ ಲೈನ್ ಅನ್ನು ಇದು ದಾಟಲಿದೆ. ಅಂದ್ರೆ ಈ ರೇಖೆ ದಾಟಿದ ತಕ್ಷಣ ದಿನಾಂಕ ಒಂದು ದಿನ ಹೆಚ್ಚಾಗಲಿದೆ. 24 ಗಂಟೆಗಳ ಮಿತಿಯನ್ನು ದಾಟಿದಂತಾಗುತ್ತದೆ. ಫೆಬ್ರವರಿ ಹದಿಮೂರರಲ್ಲಿರುವವರು ಈ ರೇಖೆ ದಾಟಿದ ತಕ್ಷಣ ಫೆಬ್ರವರಿ 15 ರ ಬೆಳಿಗ್ಗೆ 12 ಗಂಟೆಯಾಗಲಿದೆ. ಅಂದ್ರೆ ಒಂದು ಕ್ಷಣದಲ್ಲಿ ಸಂಪೂರ್ಣ ಒಂದು ದಿನ ಸ್ಕಿಪ್ ಆದಂತಾಗುತ್ತದೆ. ಪ್ರೇಮಿಗಳ ದಿನ ಮಾಯವಾಗುತ್ತದೆ.  

ಇನ್ನು ಯುಪಿಐ ಮೂಲಕ ಫ್ಯಾರಿಸ್‌ನ ಐಫೆಲ್‌ ಟವರ್‌ ಟಕೆಟ್‌ ಬುಕ್‌ ಮಾಡಿ

ಇಂಟರ್ನ್ಯಾಷನಲ್ ಡೇಟ್ ಲೈನ್ ದಕ್ಷಿಣ (Sourth) ಮತ್ತು ಉತ್ತರ ಧ್ರವಗಳ (North Pole) ಮಧ್ಯೆ ಚಲಿಸುತ್ತದೆ. ಇದು ಫೆಸಿಫಿಕ್ ಮಹಾಸಾಗರದ ಮೂಲಕ ಹಾದು ಹೋಗುತ್ತದೆ. ಈ ಇಂಟರ್ನ್ಯಾಷನಲ್ ಡೇಟ್ ಲೈನ್ (International Dateline) ವಿಶೇಷವೆಂದ್ರೆ ಇದ್ರ ಪೂರ್ವಕ್ಕೆ ದಾಟಿದ್ರೆ ದಿನಾಂಕ ಒಂದು ದಿನ ಕಡಿಮೆ ಆಗುತ್ತದೆ. ಅದೇ ನೀವು ಪಶ್ಚಿಮಕ್ಕೆ ದಾಟಿದ್ರೆ ಒಂದು ದಿನ ಹೆಚ್ಚಾಗುತ್ತದೆ. ಕ್ಯಾಡ್ಬರಿ 5 ಸ್ಟಾರ್ ಅಭಿಯಾನ ಈಗಾಗಲೇ ಚರ್ಚೆಯಾಗ್ತಿದ್ದು, ವಿಡಿಯೋ ವೈರಲ್ ಆಗಿದೆ. 

click me!