ಕಡಲ್ಗಳ್ಳರ ಜೀವನ ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದೆ. ಸಿನಿಮಾ ನೋಡಿ, ಪುಸ್ತಕ ಓದಿ ತಿಳಿಯೋದು ಬೇರೆ. ಸ್ವಂತ ಅನುಭವ ಪಡೆಯೋದು ಬೇರೆ. ಕೆಲವೇ ದಿನಗಳಲ್ಲಿ ಆ ಅನುಭವಪಡೆಯುವ ಅವಕಾಶ ನಿಮಗೆ ಸಿಗಲಿದೆ.
ಸಿನಿಮಾದಿಂದ ಪ್ರಭಾವಿತರಾಗುವ ಜನರು ಅದರ ಪಾತ್ರಗಳಂತೆ ಬದುಕಲು ಪ್ರಯತ್ನಿಸುತ್ತಾರೆ. ಸಿನಿಮಾಗಳಲ್ಲಿ ತೋರಿಸಿದ ಜಾಗಕ್ಕೆ ಹೋಗಲು ಇಷ್ಟಪಡ್ತಾರೆ. ಬರೀ ಸಿನಿಮಾ ಮಾತ್ರವಲ್ಲ ಧಾರಾವಾಹಿ ಮತ್ತು ರಿಯಾಲಿಟಿ ಶೋ ಕೂಡ ಇದ್ರಿಂದ ಹೊರತಾಗಿಲ್ಲ. ಸದ್ಯ ಹೆಚ್ಚು ಸದ್ದು ಮಾಡ್ತಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಅಭಿಮಾನಿಗಳಿಗೂ ಬಿಗ್ ಬಾಸ್ ಮನೆಯಲ್ಲಿ ನಾವಿದ್ರೆ ಏನು ಮಾಡ್ತಿದ್ವಿ ಎಂಬುದನ್ನು ನೋಡುವ ಅವಕಾಶ ಸಿಕ್ಕಿತ್ತು. ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶವನ್ನು ಒಮ್ಮೆ ನೀಡಲಾಗಿತ್ತು. ಇದಲ್ಲದೆ ದಾಖಲೆ ಬರೆದ ಬಾಹುಬಲಿ ಚಿತ್ರದ ಸೆಟ್ ಕೂಡ ಹಾಗೆ ಇದೆ. ಅನೇಕರು ಅದನ್ನು ವೀಕ್ಷಿಸಿ, ತಾವೇ ಚಿತ್ರದ ಪಾತ್ರವೆಂಬಂತೆ ಫೋಟೊ ತೆಗೆಸಿಕೊಂಡು ಬರ್ತಾರೆ. ಈಗ ಮತ್ತೊಂದು ಅವಕಾಶ ಅಭಿಮಾನಿಗಳಿಗೆ ಸಿಗ್ತಿದೆ.
ಕೆರಿಬಿಯನ್ (Caribbean) ಚಿತ್ರಗಳನ್ನು ವೀಕ್ಷಣೆ ಮಾಡುವ ಭಾರತೀಯರ ಸಂಖ್ಯೆ ಸಾಕಷ್ಟಿದೆ. ಇದ್ರಲ್ಲಿ ಪೈರೇಟ್ಸ್ (Pirates) ಆಫ್ ದಿ ಕೆರಿಬಿಯನ್ ಹೆಚ್ಚು ಪ್ರಸಿದ್ಧಿ ಪಡೆದ ಸರಣಿಯಾಗಿದೆ. ಅಲ್ಲಿನ ಪಾತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ತಾವೂ ಕಡಲ್ಗಳ್ಳರಾಗಿದ್ದರೆ ಏನು ಮಾಡ್ತಿದ್ವಿ ಎಂಬುದನ್ನು ಕಲ್ಪಿಸಿಕೊಂಡಿದ್ದಾರೆ. ಇನ್ಮುಂದೆ ನೀವು ಇದನ್ನು ಕಲ್ಪಿಸಿಕೊಳ್ಳುವ ಅಗತ್ಯವಿಲ್ಲ. ಅಲ್ಲಿಗೆ ಹೋಗಿ ಕಡಲ್ಗಳ್ಳರಂತೆ ಇರುವ ಅವಕಾಶ ನಿಮಗೆ ಸಿಗಲಿದೆ.
ಒಂದೇ ದಿನದಲ್ಲಿ ವಿಸಿಟ್ ಮಾಡಿ ಬರಬಹುದಾದ ದೇಶಗಳಿವು, ಮಿಸ್ ಮಾಡ್ಬೇಡಿ
ಯಾವ ದ್ವೀಪ (Island) ದಲ್ಲಿ ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಿತ್ರದ ಚಿತ್ರೀಕರಣ ನಡೆದಿದೆಯೋ ಆ ದ್ವೀಪ ಈಗ ಹೊಸ ಥೀಮ್ ಜೊತೆ ಬಂದಿದೆ. ಚಿತ್ರದ ಕಥೆ ಆಧರಿಸಿ ಥೀಮ್ ಪಾರ್ಕ್ ನಿರ್ಮಿಸಲು ಮುಂದಾಗಿದೆ. ಸೇಂಟ್ ವಿನ್ಸೆಂಟ್ ದ್ವೀಪದಲ್ಲಿ ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಈಗ ಸೇಂಟ್ ವಿನ್ಸೆಂಟ್ ದ್ವೀಪದ ಸರ್ಕಾರ ಅಲ್ಲಿ ಥೀಮ್ ಪಾರ್ಕ್ ನಿರ್ಮಾಣದ ನಿರ್ಧಾರ ಕೈಗೊಂಡಿದೆ. ಪ್ರವಾಸೋದ್ಯಮ ಸಚಿವ ಕಾರ್ಲೋಸ್ ಜೇಮ್ಸ್ ಈ ಉದ್ಯಾನವನ ನಿರ್ಮಾಣ ಮಾಡೋದಾಗಿ ಘೋಷಿಸಿದ್ದಾರೆ. ಈ ಥೀಮ್ ಪಾರ್ಕ್ ಸಾರ್ವಜನಿಕರಿಗೆ ಲಭ್ಯವಿರಲಿದೆ. ಅಲ್ಲಿಗೆ ಹೋಗಿ ನೀವೂ ಚಿತ್ರದ ಪಾತ್ರವಾಗಿದ್ದೀರಿ ಎಂಬ ಅನುಭವ ಪಡೆಯಬಹುದು. ಸುಂದರ ಪರಿಸರವನ್ನು ಆಸ್ವಾದಿಸಬಹುದು.
undefined
ಸೂರ್ಯಾಸ್ತದ ಸೊಬಗ ಕಣ್ತುಂಬಲು ಬಯಸಿದ್ರೆ ಈ ತಾಣಗಳಿಗೆ ಮಿಸ್ ಮಾಡದೆ ಭೇಟಿ ನೀಡಿ
ಕಡಲ್ಗಳ್ಳರ ಜೀವನ ತಿಳಿದುಕೊಳ್ಳುವ ಅವಕಾಶ ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗಲಿದೆ. 2025 ರ ವೇಳೆಗೆ ಇದು ಸಾರ್ವಜನಿಕರಿಗೆ ಸಿಗುವ ಸಾಧ್ಯತೆ ಇದೆ. ಇಲ್ಲಿ ನೀವು ಕೂಡ ಕಡಲ್ಗಳ್ಳರ ಪಾತ್ರ ಧರಿಸಿ, ಫೋಟೋ ತೆಗೆಸಿಕೊಳ್ಳಬಹುದು. ಪೈರೇಟ್ಸ್ ಆಫ್ ದಿ ಕೆರಿಬಿ ಚಿತ್ರ ವೀಕ್ಷಣೆ ಮಾಡಿಲ್ಲ, ಕಡಲ್ಗಳ್ಳರ ಬಗ್ಗೆ ಆಸಕ್ತಿ ಇಲ್ಲ ಎನ್ನುವ ಪ್ರವಾಸಿಗರು ನಿರಾಶೆಯಾಗುವ ಅಗತ್ಯವಿಲ್ಲ. ಎಲ್ಲ ರೀತಿಯ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡೇ ಈ ಥೀಮ್ ಪಾರ್ಕ್ ಸಿದ್ಧವಾಗ್ತಿದೆ. ಇಲ್ಲಿ ಮನರಂಜನೆಗೆ ಆದ್ಯತೆ ನೀಡಲಾಗಿದೆ. ಇಲ್ಲಿ ಬೆಟ್ಟ, ಜಲಪಾತ, ಬೀಚ್ ಎಲ್ಲವನ್ನೂ ನೋಡುವ ಅವಕಾಶ ನಿಮಗೆ ಸಿಗುತ್ತದೆ. ಅಲ್ಲದೆ ಕೆಲವೊಂದು ಆಟ, ಸಾಹಸ ಕ್ರೀಡೆಗಳು ಲಭ್ಯವಾಗಲಿವೆ. ನೀವು ಸೇಂಟ್ ವಿನ್ಸೆಂಟ್ ದ್ವೀಪವನ್ನು ವಿಮಾನದ ಮೂಲಕ ತಲುಪಬಹುದು. ನಿಮಗೆ ಅಮೆರಿಕಾದ ಮಿಯಾಮಿ, ಕೆನಡಾದ ಟೊರೊಂಟೊ ಹಾಗೂ ನ್ಯೂಯಾರ್ಕ್ ಮೂಲಕ ಸೇಂಟ್ ವಿನ್ಸೆಂಟ್ ದ್ವೀಪ ತಲುಪಲು ಅವಕಾಶ ಕಲ್ಪಿಸಲಾಗಿದೆ. ಅಲ್ಲಿಂದ ನೇರ ವಿಮಾನ ಲಭ್ಯವಿದೆ.
ಪೈರೇಟ್ಸ್ ಆಫ್ ದಿ ಕೆರಿಬಿಯನ್ : ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಿತ್ರ ಐದು ಸರಣಿಯನ್ನು ಹೊಂದಿದೆ. ಇದರ ಚಿತ್ರೀಕರಣ 2003ರಲ್ಲಿ ಶುರುವಾಗಿತ್ತು. ಜಾನಿ ಡೆಪ್, ಒರ್ಲ್ಯಾಂಡೊ ಬ್ಲೂಮ್ ಸೇರಿದಂತೆ ಅನೇಕರು ಇದರಲ್ಲಿ ನಟಿಸಿದ್ದಾರೆ. ಈಗ ಚಿತ್ರ ಥೀಮ್ ದ್ವೀಪದಲ್ಲಿ ಕಾಣಸಿಗಲಿದ್ದು, ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದು ಅಲ್ಲಿನ ಸರ್ಕಾರ ನಿರೀಕ್ಷಿಸಿದೆ.