ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನ ನೀಡ್ಬೇಕು. ಹಾಗಂತ ಅತಿಯಾದ್ರೆ? ಈ ದೇಶದ ಜನರು ಸ್ವಚ್ಛತೆ ಬಗ್ಗೆ ಸ್ವಲ್ಪ ಅತಿಯಾಗೇ ಆಲೋಚನೆ ಮಾಡ್ತಾರೆ. ಯಾರವರು? ಅವರ ರೂಢಿಗಳೇನು ಎಂಬ ವಿವರ ಇಲ್ಲಿದೆ.
ಪ್ರತಿಯೊಂದು ದೇಶವೂ ತನ್ನದೇ ಆತ ನೀತಿ, ಪದ್ಧತಿಗಳನ್ನು ಹೊಂದಿದೆ. ನಮಗೆ ನಮ್ಮ ದೇಶದ ರೂಢಿಗಳು ಗೊತ್ತಿರೋ ಕಾರಣ ಅದು ವಿಶೇಷ ಎನ್ನಿಸೋದಿಲ್ಲ. ಅದೇ ಬೇರೆ ದೇಶದ ಹೆಸರು, ಪದ್ಧತಿ, ಸಂಸ್ಕೃತಿಗಳು ಹುಬ್ಬೇರಿಸುವಂತೆ ಮಾಡುತ್ತವೆ. ಊಟ ಮಾಡುವುದ್ರಿಂದ ಹಿಡಿದು ಮಲಗುವವರೆಗೆ ಅನೇಕ ವಿಧಾನಗಳಲ್ಲಿ ಭಿನ್ನತೆಯನ್ನು ನಾವು ನೋಡ್ಬಹುದು. ನಿತ್ಯದ ದಿನಚರಿಯಲ್ಲಿ ಒಂದಾದ ಹಲ್ಲುಜ್ಜುವ ಕೆಲಸದಲ್ಲೂ ನಾವು ಭಿನ್ನತೆಯನ್ನು ಕಾಣ್ಬಹುದು.
ಭಾರತದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಬಹುತೇಕ ಎಲ್ಲರೂ ಹಲ್ಲುಜ್ಜುತ್ತಾರೆ. ಹಲ್ಲಿನ ಸ್ವಚ್ಛತೆ ಬಹಳ ಮುಖ್ಯ. ಹಲ್ಲು ಸ್ವಚ್ಛವಾಗಿದ್ದರೆ ಇಡೀ ನಮ್ಮ ಶರೀರ ಆರೋಗ್ಯವಾಗಿರುತ್ತದೆ ಎಂಬ ಮಾಹಿತಿ ತಜ್ಞರಿಂದ ಸಿಗ್ತಿರುವ ಕಾರಣ ಕೆಲವರು ದಿನದಲ್ಲಿ ಎರಡು ಬಾರಿ ಹಲ್ಲುಜ್ಜುವ ರೂಢಿ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜುತ್ತಿದ್ದಾರೆ. ದಿನದಲ್ಲಿ ಎರಡು ಬಾರಿ ಹಲ್ಲುಜ್ಜೋದೇ ಕಷ್ಟ ಎನ್ನುವ ಜನರಿಗೆ ಅಚ್ಚರಿಯ ಸುದ್ದಿಯೊಂದಿದೆ. ಈಗ ನಾವು ಹೇಳಲು ಹೊರಟಿರುವ ದೇಶದಲ್ಲಿ ಜನರು ದಿನದಲ್ಲಿ ಅನೇಕ ಬಾರಿ ಹಲ್ಲುಜ್ಜುತ್ತಾರೆ. ಕಚೇರಿಗೆ ನಾವು ಟಿಫನ್ ಬಾಕ್ಸ್, ಮೊಬೈಲ್, ನೀರು, ಪರ್ಸ್, ಹುಡುಗಿಯರಾದ್ರೆ ಸ್ವಲ್ಪ ಮೇಕಪ್ ಕಿಟ್ಸ್ ತೆಗೆದುಕೊಂಡು ಹೋದ್ರೆ ಆ ದೇಶದ ಜನ ಬ್ರಷ್ ಕೂಡ ಕಚೇರಿಗೆ ತೆಗೆದುಕೊಂಡು ಹೋಗ್ತಾರೆ. ಅದ್ಯಾವ ದೇಶ ಅಂದ್ರಾ? ಇಲ್ಲಿದೆ ಉತ್ತರ.
ವಿಶ್ವದ ಅತಿ ಎತ್ತರದಲ್ಲಿ ಬಂಗೀ ಜಂಪ್ ಮಾಡಿ ಜೀವ ತೆತ್ತ ಸಾಹಸಿಗ!
ಈಗ ನಾವು ಹೇಳಲು ಹೊರಟಿರುವ ದೇಶ ವಿಶ್ವದ ಐದನೇ ದೊಡ್ಡ ದೇಶ ಬ್ರೆಜಿಲ್ (Brazil) ಬಗ್ಗೆ. ಇಲ್ಲಿ ದಿನದಲ್ಲಿ ಅನೇಕ ಬಾರಿ ಹಲ್ಲುಜ್ಜು (Brush) ತ್ತಾರೆ. ಇಲ್ಲಿನ ಜನರು ಕೆಲವು ಅಚ್ಚರಿ ಪದ್ಧತಿಗಳನ್ನು ರೂಢಿಸಿಕೊಂಡಿದ್ದಾರೆ. ಹಲ್ಲಿನ ಆರೋಗ್ಯದ ಬಗ್ಗೆ ಇಲ್ಲಿನ ಜನ ಅತಿ ಹೆಚ್ಚು ಕಾಳಜಿವಹಿಸ್ತಾರೆ. ಇದೇ ಕಾರಣಕ್ಕೆ ಅವರು ದಿನದಲ್ಲಿ ಎರಡು ಬಾರಿಯಲ್ಲ ಅನೇಕ ಬಾರಿ ಹಲ್ಲುಜ್ಜುತ್ತಾರೆ. ನಿಮಗೆ ಅಚ್ಚರಿ ಎನ್ನಿಸಬಹುದು, ಅವರು ಕಚೇರಿ (Office) ಯಲ್ಲಿ ಊಟವಾದ್ಮೇಲೆ ಹಲ್ಲುಜ್ಜುವ ಅಭ್ಯಾಸ ಹೊಂದಿದ್ದಾರೆ. ಇದೇ ಕಾರಣಕ್ಕೆ ಕಚೇರಿಗೆ ಬ್ರೆಷ್ ತೆಗೆದುಕೊಂಡು ಹೋಗ್ತಾರೆ. ಊಟದ ನಂತ್ರ ಹಲ್ಲಿನಲ್ಲಿರುವ ಕೊಳೆ ತೆಗೆಯಲು ಬ್ರೆಷ್ ಮಾಡೋದು ಅತ್ಯಗತ್ಯವೆಂದು ಅವರು ನಂಬಿದ್ದಾರೆ. ಬ್ರೆಜಿಲ್ ನ ಶಾಪಿಂಗ್ ಮಾಲ್ ಶೌಚಾಲಯಗಳಲ್ಲಿ ಜನರು ಹಲ್ಲುಜ್ಜೋದನ್ನು ನೀವು ಕಾಣ್ಬಹುದು.
2024ಕ್ಕೆ ಲಾಂಗ್ ವೀಕೆಂಡ್ಸ್ ಸುಮಾರು ಇವೆ, ಹೀಗ್ ಟ್ರಾವೆಲ್ ಪ್ಲ್ಯಾನ್ ಮಾಡಬಹುದು!
ದೇಹದ ಸ್ವಚ್ಛತೆಗೆ ಆದ್ಯತೆ: ಬ್ರೆಜಿಲ್ ಜನ ಬರೀ ಹಲ್ಲುಜ್ಜೋದು ಮಾತ್ರವಲ್ಲ ತಮ್ಮ ದೇಹದ ಸ್ವಚ್ಛತೆಗೂ ಹೆಚ್ಚು ಗಮನ ನೀಡ್ತಾರೆ. ಇದೇ ಕಾರಣಕ್ಕೆ ಅವರು ಅನೇಕ ಬಾರಿ ಸ್ನಾನ ಮಾಡ್ತಾರೆ. ಬೆಳಿಗ್ಗೆ ಮತ್ತೆ ಸಂಜೆ ಸ್ನಾನ ಮಾಡೋದು ನಮ್ಮಲ್ಲೂ ಮಾಮೂಲು. ಬ್ರೆಜಿಲ್ ನಲ್ಲಿ ಸಂಜೆ – ಬೆಳಿಗ್ಗೆ ಮಾತ್ರವಲ್ಲ ಹಗಲಿನಲ್ಲೂ ಅನೇಕ ಬಾರಿ ಸ್ನಾನ ಮಾಡ್ತಾರೆ. ಬೇಸಿಗೆ ಋತುವಿನಲ್ಲಿ ಇಲ್ಲಿನ ಜನರ ಸ್ನಾನ ಡಬಲ್ ಆಗುತ್ತದೆ.
ಬ್ರೆಜಿಲ್ ಜನರ ಬಗ್ಗೆ ತಿಳಿದುಕೊಳ್ಳೋದು ಸಾಕಷ್ಟಿದೆ. ಅವರು ಬರಿಗೈನಲ್ಲಿ ಆಹಾರ ಸೇವನೆ ಮಾಡೋದಿಲ್ಲ. ಫಿಜ್ಜಾ (Pizza), ಬರ್ಗರ್ (Burger) ಸೇವನೆ ಮಾಡುವಾಗ ನ್ಯಾಪ್ಕಿನ್ ಬಳಕೆ ಮಾಡ್ತಾರೆ. ಒಂದ್ವೇಳೆ ನ್ಯಾಪ್ಕಿನ್ ಸಿಕ್ಕಲ್ಲ ಎಂದಾದ್ರೆ ಅವರು ಚಾಕು ಮತ್ತು ಫೋರ್ಕ್‌ನಿಂದ ಆಹಾರವನ್ನು ತಿನ್ನುತ್ತಾರೆ. ಬರಿಗೈನಿಂದ ಆಹಾರ ಮುಟ್ಟಿದ್ರೆ ಅದು ಕೊಳಕಾಗುತ್ತದೆ ಎಂಬ ನಂಬಿಕೆ ಅವರದ್ದು. ಬ್ರೆಜಿಲಿಯನ್ನರು ವರ್ಷಕ್ಕೆ 30 ದಿನಗಳ ರಜೆಯನ್ನು ತೆಗೆದುಕೊಳ್ಳುತ್ತಾರೆ. ಅದು ಒಂದೇ ಬಾರಿ ಎನ್ನುವುದು ಅಚ್ಚರಿ. ಪ್ರಯಾಣಿಸಲು, ವಿಶ್ರಾಂತಿ ಪಡೆಯಲು ಮತ್ತು ತಮ್ಮ ಬಿಡುವಿನ ಸಮಯವನ್ನು ಆನಂದಿಸಲು ಅವರು ಒಟ್ಟಿಗೆ ಇಷ್ಟು ರಜೆಯನ್ನು ಪಡೆಯುತ್ತಾರೆ. ಅವರಿಗೆ ವರ್ಷದಲ್ಲಿ 12 ರಾಷ್ಟ್ರೀಯ ರಜೆ ಸಿಗುತ್ತದೆ.