* ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ BMTC ಒನ್ ಡೆ ಟ್ರಿಪ್
* ಬೆಂಗಳೂರು ದರ್ಶಿನಿ ಮೂಲಕ ಸಿಲಿಕಾನ್ ಸಿಟಿ ರೌಂಡ್ಸ್
* BMTC ಯಿಂದ ಪ್ರವಾಸಿಗರಿಗೆ ಬಂಪರ್ ಆಫರ್
ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು, (ಮೇ.27): ವೀಕೆಂಡ್ ಅಂತಂದ್ರೆ ಜನ ಟ್ರಿಪ್ ಮಾಡ್ತಾರೆ. ವೀಕೆಂಡ್ ಟ್ರಿಪ್ ಅಂದ್ರೆ ಹೇಳ್ಬೇಕಾ? ಜನಜಂಗುಳಿ ಕೊಂಚ ಜಾಸ್ತಿಯೆ. ಅದಕ್ಕಾಗಿಯೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವೀಕ್ ಡೇಸಲ್ಲಿ ಒನ್ ಡೇ ಟ್ರಿಪ್ ಮಾಡೋರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸ್ತಿದೆ. ಒಂದು ದಿನದ ಪಿಕ್ ನಿಕ್ ಮಾಡೋರಿಗೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಹೇಳಿ ಮಾಡಿಸಿದಂತಿದೆ. ಅದಕ್ಕಾಗಿಯೇ BMTC ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಯಶವಂತಪುರ ಟಿಟಿಎಂಸಿಯಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ಸಾರಿಗೆ ಸೌಲಭ್ಯ ಒದಿಗಿಸ್ತಿದೆ.
ಬಸ್ ಯಾವ ಸಮಯಕ್ಕೆ ಹೊರಡಲಿದೆ?
ಪ್ರತಿನಿತ್ಯ ಬೆಳಗ್ಗೆ 8.30ರಿಂದ 9 ಗಂಟೆ ಒಳಗೆ ಯಶವಂತಪುರ ಟಿಟಿಎಂಸಿಯಿಂದ ವೋಲ್ವೊ ಬಸ್ ಹೊರಡಲಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದುರಿಸ್ಬಹುದು ಅಥವಾ ನೇರವಾಗಿ ಟಿಕೆಟ್ ಪಡೆಯಲು ಅವಕಾಶವಿದೆ. ಯಶವಂತಪುರದಿಂದ ಹೊರಡುವ ಬಸ್ ನೇರವಾಗಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ತಲುಪಲಿದೆ. ಇದಕ್ಕೆ 40 ರೂ ಟಿಕೆಟ್ ದರ ಫಿಕ್ಸ್ ಮಾಡಲಾಗಿದೆ. ನ್ಯಾಷನಲ್ ಪಾರ್ಕ್ ಒಳಗೆ ವೀಕ್ಷಿಸಲು ಪ್ರಯಾಣಿಕರು ತಾವೇ ಟಿಕೆಟ್ ಖರೀದಿ ಮಾಡಿ ಒಂದಷ್ಟು ಸಮಯ ಕಳೆಯಬಹುದು. ಸಂಜೆ 4.30ರಿಂದ 5 ಗಂಟೆಗೆ ಬಸ್ ವಾಪಾಸಾಗಲಿದ್ದು, ಬರುವ ರಸ್ತೆಯಲ್ಲಿ ಪ್ರಯಾಣಿಕರು ಇಳಿಯಲು ಅವಕಾಶ ಮಾಡಿಕೊಟ್ಟಿದೆ ಬಿಎಂಟಿಸಿ. ಇನ್ನು ಮೆಜೆಸ್ಟಿಕ್ ನಿಂದ ನಿತ್ಯ ಪ್ರತಿ 20 ನಿಮಿಷಕ್ಕೊಂದು ವೋಲ್ವೋ ಬಸ್ ಹೊರಡಲಿದ್ದು ಪ್ರಯಾಣಿಕರು ಟ್ರಿಪ್ ಪ್ಲಾನ್ ಮಾಡ್ಕೊಬಹುದು.
ಬನ್ನಿ ಹುಡುಕೋಣ ಕರ್ನಾಟಕದ 7 ಅದ್ಭುತಗಳನ್ನು, ವಿಶೇಷ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ!
ಬೆಂಗಳೂರು ದರ್ಶಿನಿ ಮೂಲಕವೂ ಸಿಟಿ ರೌಂಡ್ಸ್ ಗೆ ಅವಕಾಶ
ಇನ್ನು ಬೆಂಗಳೂರು ದರ್ಶಿನಿ ಎಂಬ ಸಾರಿಗೆ ಸೌಲಭ್ಯವನ್ನು ಬಿಎಂಟಿಸಿ ಒದಗಿಸಿದೆ. ಇದು ಕೂಡ ಒನ್ ಡೇ ಟ್ರಿಪ್ ಮಾಡೋರಿಗೆ ಹೇಳಿ ಮಾಡಿಸಿದಂತಿದೆ. ನಗರದ ಮೂರು ಕಡೆಗಳಿಂದ ಬಸ್ ಸಂಚರಿಸಲಿದ್ದು ಒಟ್ಟು 28 ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅವಕಾಶವಿದೆ.
ಎಲ್ಲೆಲ್ಲಿಂದ ಬಸ್ ಹೊರಡಲಿದೆ?
ಬೆಂಗಳೂರು ದರ್ಶಿನಿ 1: ಮೆಜೆಸ್ಟಿಕ್ ನಿಂದ 9 ಗಂಟೆಗೆ ಹೊರಡಲಿದ್ದು ಸಂಜೆ 6.55 ಕ್ಕೆ ವಾಪಾಸಾಗಲಿದೆ. ದರ 420 ರೂ
ಸ್ಥಳ(12); ಕೆಂಪೇಗೌಡ ಬಸ್ ನಿಲ್ದಾಣ, ಇಸ್ಕಾನ್, ವಿಧಾನ ಸೌಧ, ಟಿಪ್ಪು ಅರಮನೆ, ಗವಿಗಂಗಾಧರೇಶ್ವರ ಟೆಂಪಲ್, ಬಸವನಗುಡಿ ದೊಡ್ಡಗಣಪತಿ ಟೆಂಪಲ್, ಲಾಲ್ಬಾಗ್ ವೆಸ್ಟ್ ಗೇಟ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಸರ್ಕಾರಿ ವಸ್ತು ಸಂಗ್ರಹಾಲಯ, ಸರ್.ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಪಾರ್ಕ್, ಕೆಂಪೇಗೌಡ ಬಸ್ ನಿಲ್ದಾಣ
ಬೆಂಗಳೂರು ದರ್ಶಿನಿ 2: ಆರ್ಟ್ ಆಫ್ ಲಿವಿಂಗ್ ಹೊರಡುವ ಸಮಯ ಬೆಳಗ್ಗೆ 8.40, ಸಂಜೆ 6.15ಕ್ಕೆ ವಾಪಾಸಾಗಲಿದೆ. ದರ 500ರೂ
ಸ್ಥಳ(8); ಆರ್ಟ್ ಆಫ್ ಲಿವಿಂಗ್, ಗವಿಗಂಗಾಧರೇಶ್ವರ ಟೆಂಪಲ್, ಬಸವನಗುಡಿ ದೊಡ್ಡಗಣಪತಿ ಟೆಂಪಲ್, ಲಾಲ್ಬಾಗ್ ವೆಸ್ಟ್ ಗೇಟ್, ಇಸ್ಕಾನ್ ಟೆಂಪಲ್, ವಿಧಾನ ಸೌಧ, ಸರ್.ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ, ಆರ್ಟ್ ಆಫ್ ಲಿವಿಂಗ್
ಬೆಂಗಳೂರು ದರ್ಶಿನಿ 3: ಜೈನ್ ಗ್ಲೋಬಲ್ ಯುನಿವರ್ಸಿಟಿ; ಹೊರಡುವ ಸಮಯ ಬೆಳಗ್ಗೆ 8.30 ಸಂಜೆ 5.50ಕ್ಕೆ ತಲುಪಲಿದೆ. ದರ 600
ಸ್ಥಳ(೮): ಜೈನ್ ಗ್ಲೋಬಲ್ ಯುನಿವರ್ಸಿಟಿ( ಕನಕಪುರ ರಸ್ತೆ), ಗವಿಗಂಗಾಧರೇಶ್ವರ ಟೆಂಪಲ್, ಬಸವನಗುಡಿ ದೊಡ್ಡಗಣಪತಿ ಟೆಂಪಲ್, ವಿಧಾನ ಸೌಧ, ಸರ್.ಎಂ ವಿಶ್ವೇಶ್ವರಯ್ಯ ಮ್ಯೂಸಿಯಂ, ಕಬ್ಬನ್ ಪಾರ್ಕ್, ಲಾಲ್ಬಾಗ್ ವೆಸ್ಟ್ ಗೇಟ್, ಜೈನ್ ಗ್ಲೋಬಲ್ ಯುನಿವರ್ಸಿಟಿ( ಕನಕಪುರ ರಸ್ತೆ) https://mybmtc.Karnataka.gov.in ಮಾಹಿತಿ ಪಡೆಯಬಹುದು.