Chamarajnagar: ಹಸಿರಿನ ವನರಾಶಿಯಿಂದ ನಳನಳಿಸುತ್ತಿದೆ ಬಂಡೀಪುರ!

By Govindaraj S  |  First Published May 26, 2022, 11:31 PM IST

ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹಸಿರು ಕಾನನದ ನಡುವೆ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ ಮೊದಲಾದ ವನ್ಯಜೀವಿಗಳು ಸ್ವಚ್ಚಂದವಾಗಿ ವಿಹರಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.


ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ‌ ನ್ಯೂಸ್,  ಚಾಮರಾಜನಗರ

ಚಾಮರಾಜನಗರ (ಮೇ.26): ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹಸಿರು ಕಾನನದ ನಡುವೆ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ ಮೊದಲಾದ ವನ್ಯಜೀವಿಗಳು ಸ್ವಚ್ಚಂದವಾಗಿ ವಿಹರಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಈ ವನ್ಯ ಸಂಪತ್ತನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬಂಡೀಪುರಕ್ಕೆ ದಾಂಗುಡಿ ಇಡುತ್ತಿದ್ದಾರೆ. ಇಲ್ಲಿ ಎತ್ತ ನೋಡಿದರು ಹಸಿರು ಬೆಟ್ಟ ಗುಡ್ಡಗಳ ಸಾಲು ಕಣ್ಣು ಹಾಯಿಸಿದಷ್ಟು ಹಸಿರು ಕಾನನ, ವನ್ಯಜೀವಿಗಳ ಸ್ವಚ್ಚಂದ ಓಡಾಟ ನೋಡುವುದೇ ಮನಸ್ಸಿಗೆ ಆನಂದ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Tap to resize

Latest Videos

undefined

ಬಿಸಿಲಿನ ಬೇಗೆ ಇಂದ ತತ್ತರಿಸಿ ಬಂಡಿಪುರ ಕಾಡು ಇನ್ನೇನು ಒಣಗಲಾರಂಭಿಸಿತು ಅನ್ನೊ ಅಷ್ಟರಲ್ಲಿ ಮಳೆರಾಯನ ಆಗಮನದಿಂದಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಅಚ್ಚ ಹಸಿರಿನಿಂದ ಕಂಗೊಳಿಸ್ತಿದೆ. ಕಳೆದ 20 ದಿನಗಳಿಂದ  ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿರಕ್ಷಿತಾರಣ್ಯ ಹಸಿರ ವನರಾಶಿಯಿಂದ ಕಂಗೊಳಿಸುತ್ತಿದೆ. ಕೆರೆಕಟ್ಟೆಗಳು ತುಂಬಲಾರಂಭಿಸಿವೆ. ಇಷ್ಟೆ ಅಲ್ಲದೆ ಎಲ್ಲೆಡೆ ಹಸಿರಿನಿಂದ ಪ್ರಕೃತಿಯ ಸೊಬಗು ಇಮ್ಮಡಿಗೊಂಡಿದೆ. ಸುಮಾರು 1024 ಸಾವಿರ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಪ್ರದೇಶವೂ ಆಗಿದೆ. 

ಸಿದ್ದರಾಮಯ್ಯ ಆಟಿಟ್ಯೂಡ್‌ ಇಲ್ಲಿ ನಡೆಯಲ್ಲ: ಸಚಿವ ನಾಗೇಶ್‌

160 ಕ್ಕೂ ಹೆಚ್ಚು ಹುಲಿಗಳು, ಎರಡು ಸಾವಿರಕ್ಕು ಹೆಚ್ಚು ಆನೆಗಳು ಸೇರಿದಂತೆ ಚಿರತೆ ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ವಾರ್ಷಿಕ 450 ಮಿಲಿ ಮೀಟರ್ ವಾಡಿಕೆ  ಮಳೆಯಾಗುವ ಬಂಡೀಪುರದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಾಂಭಿಸಿದೆ. ಹಸಿರಾಗಿರುವ ಹುಲಿ ಸಂರಕ್ಷಿತ ಪ್ರದೇಶದ ಮಧ್ಯೆ ಸಫಾರಿ ಮಾಡೋದಂತೂ ಮನಸಿಗೆ ಆಹ್ಲಾದ ಉಂಟು ಮಾಡುತ್ತಿದೆ. ಪ್ರವಾಸಿಗರ ದಂಡೇ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದತ್ತ ಹರಿದು ಬರುತ್ತಿದೆ. ಈ ಬಾರಿ ಬೇಸಿಗೆಯಲ್ಲೆ ಅಂದರೆ ಏಪ್ರಿಲ್ ಕೊನೆಯ ವಾರ ಹಾಗು ಮೇ ತಿಂಗಳಿನ ಮೊದಲೆರಡು ವಾರಗಳಿಂದ  ಉತ್ತಮ ಮಳೆಯಾಗಿರುವುದರಿಂದ ಕಾಡ್ಗಿಚ್ಚಿನ ಆತಂಕ ದೂರವಾಗಿದೆ. 

ಇನ್ನೂ ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೀಳುತ್ತಿವುದರಿಂದ ಮೇ ತಿಂಗಳಿನಿಂದಲೇ ಹಸಿರಿನಿಂದ ನಳನಳಿಸಿತ್ತಿದೆ ಬಂಡೀಪುರ. ಎತ್ತ ನೋಡಿದರು ಹಸಿರಿನ ಚಿತ್ತಾರ ಪ್ರವಾಸಿಗರ ಕಣ್ಣಿಗಂತು ಹಸಿರಿನ ಹಬ್ಬ ನೀರು ಹಾಗು ಮೇವಿನ ಚಿಂತೆ ಇಲ್ಲದೆ ವನ್ಯಜೀವಿಗಳು ಸ್ವಚ್ಚಂದವಾಗಿ ರಸ್ತೆಯಲ್ಲೆ ವಿಹರಿಸುವ ಆನೆ, ಜಿಂಕೆಗಳ ದೃಶ್ಯ  ಸಾಮಾನ್ಯ ಕಂಡುಬರುತ್ತಿದೆ. ಕೆರೆಕಟ್ಟೆಗಳಿಗೆ ನೀರು ತುಂಬಿದ್ದು, ನೀರು ಕುಡಿಯಲು ಇಲ್ಲವೇ,  ಹಸಿರು ಹುಲ್ಲು ಮೇಯಲು ಬರುವ ಕಾಡಮ್ಮೆ, ಜಿಂಕೆ, ಕಡವೆಯಂತಹ ಪ್ರಾಣಿಗಳನ್ನ ನೋಡಿದರೆ ಮನಸು ಮುದಗೊಳ್ಳುತ್ತದೆ. ಆದ್ರೆ ಹೆಚ್ಚು ಮಳೆಯಾಗ್ತಿರೋ ಹಿನ್ನಲೆ ಪ್ರಾಣಿಗಳ ದರ್ಶನವಾಗ್ತಿಲ್ಲ ಅನ್ನೋ ಕೊಂಚ ಬೇಸರವಿದೆ.

Chamarajanagara ಕೆರೆ ತುಂಬಿದ್ದಕ್ಕೆ ಕ್ರೆಡಿಟ್, ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ

ಒಟ್ಟಾರೆ ನಿರೀಕ್ಷಿತ ಪ್ರಮಾಣದ ಮಳೆಯಿಂದ ಬಂಡೀಪುರದಲ್ಲಿ ಪ್ರಕೃತಿ ಸೊಬಗು ಇಮ್ಮಡಿಗೊಂಡಿದೆ. ನಿತ್ಯ ನೂರಾರು ಪ್ರವಾಸಿಗರು ಹಚ್ಚ ಹಸಿರಿನಿಂದ ಕಂಗೊಳಿಸುವ ಬಂಡಿಪುರ ಹಾಗೂ ಇಲ್ಲಿನ ವನ್ಯಜೀವಿಗಳ ವೀಕ್ಷಣೆಗೆಂದು ಬರತೊಡಗಿದ್ದಾರೆ.ಹೀಗೆ ಬರುವ ಪ್ರವಾಸಿಗರಿಗೆ ಇಲ್ಲಿ ಖಂಡಿತ ನಿರಾಸೆಯಾಗುವುದಿಲ್ಲ. ಸಫಾರಿಗೆ ತೆರಳುವ ಪ್ರವಾಸಿಗರು ಹಸಿರ ಸಿರಿಯನ್ನು ಕಣ್ತುಂಬಿಕೊಂಡು ವನ್ಯಜೀವಿಗಳನ್ನು ನೋಡಿ ಖುಷಿಪಡುತ್ತಾರೆ. ಒಟ್ಟಾರೆ ತನ್ನ ವನ್ಯಸಂಪತ್ತಿನಿಂದ ಕಂಗೊಳಿಸುತ್ತಿರುವ ಬಂಡೀಪುರದ ಹಸಿರು ವನದೇವತೆ  ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದಾಳೆ.

click me!