ಭಾರತ ಮಾತ್ರವಲ್ಲ ವಿದೇಶದಲ್ಲೂ ಇವೆ ಭಾರತೀಯ ಊರಿನ ಹೆಸರು!

By Suvarna News  |  First Published May 26, 2022, 2:36 PM IST

ವಿದೇಶಕ್ಕೆ ಹೋಗಿ ನಮ್ಮೂರು ಕೊಚ್ಚಿ ಅಂದಾಗ ಅವರು ಕನ್ಫ್ಯೂಸ್ ಆಗ್ಬಹುದು. ನೀವು ಕೊಚ್ಚಿ ಮುಂದೆ ಇಂಡಿಯಾ ಅಂತಾ ಸೇರಿಸ್ಲೇಬೇಕು. ಯಾಕೆಂದ್ರೆ ಕೊಚ್ಚಿ ಹೆಸರಿನ ಇನ್ನೊಂದು ಊರು ಜಪಾನ್ ನಲ್ಲಿದೆ. ಇದೊಂದೇ ಅಲ್ಲ ಇನ್ನೂ ಅನೇಕ ಭಾರತೀಯ ಊರುಗಳ ಹೆಸರನ್ನು ನೀವು ವಿದೇಶದಲ್ಲಿ ನೋಡ್ಬಹುದು.


ಈ ದೊಡ್ಡ ಪ್ರಪಂಚದಲ್ಲಿ ನಾವೊಂದು ಅತಿ ಸೂಕ್ಷ್ಮ ಬಿಂದು ಅಂದ್ರೆ ತಪ್ಪಾಗೋದಿಲ್ಲ. ಇಲ್ಲಿ ಎಷ್ಟೋ ಹಳ್ಳಿ (Village) ಗಳಿವೆ. ಅದೆಷ್ಟೋ ನಗರ (City) ಗಳಿವೆ. ಅದೆಷ್ಟೋ ಜಿಲ್ಲೆಗಳಿವೆ. ಅದೆಷ್ಟೋ ದೇಶಗಳಿವೆ. ನಮ್ಮ ಪಕ್ಕದ ಊರು ಯಾವುದು? ಬೇರೆ ಜಿಲ್ಲೆಯಲ್ಲಿ ಎಷ್ಟು ತಾಲೂಕಿದೆ ಎಂಬುದೇ ನಮಗೆ ಸರಿಯಾಗಿ ತಿಳಿದಿರೋದಿಲ್ಲ. ಇನ್ನು ಪ್ರಪಂಚದಲ್ಲಿರುವ ಊರು, ಅದ್ರ ಹೆಸರು ಗೊತ್ತಿರಲು ಸಾಧ್ಯವೆ ?. ಒಂದೇ ಹೆಸರನ್ನು ಅನೇಕರಿಗೆ ಇಟ್ಟಿರ್ತಾರೆ. ಹಾಗೆ ಒಂದೇ ಹೆಸರಿರುವ ಊರುಗಳು ಇದೆ ಅಂದ್ರೆ ನಾವು ನಂಬ್ಲೇಬೇಕು. ದೇಶದಲ್ಲಿಯೇ ಅನೇಕ ಊರುಗಳ ಹೆಸರು ರಿಪಿಟ್ ಆಗುತ್ತೆ. ಅದು ನಿಮಗೆ ಗೊತ್ತಿರಬಹುದು. ಆದ್ರೆ ವಿದೇಶಗಳಲ್ಲೂ ನಮ್ಮ ಊರಿನ ಹೆಸರಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ದೆಹಲಿಯವರು ಅಂದು ನೀವು ಹೇಳಿದಾಗ, ಇನ್ನೊಬ್ಬ ವ್ಯಕ್ತಿ ಯಾವ ದೆಹಲಿ ಅಂದ್ರೆ ನಿಮಗೆ ಕನ್ಫೂಸ್ ಆಗ್ಬಹುದು. ದೆಹಲಿ ಒಂದೇ ಇರೋದಲ್ವಾ ಅಂತ. ಆದ್ರೆ ದೆಹಲಿ ಹೆಸರಿನ ಊರು ಬೇರೆ ದೇಶದಲ್ಲೂ ಇದೆ. ಬರೀ ದೆಹಲಿ ಮಾತ್ರವಲ್ಲ ನಮ್ಮ ದೇಶದ ಅನೇಕ ಊರುಗಳ ಹೆಸರು ಬೇರೆ ದೇಶದ ಊರುಗಳಲ್ಲೂ ಇದೆ. ಇಂದು ನಾವು ದೇಶದ ಯಾವ ಊರುಗಳ ಹೆಸರು ವಿದೇಶದಲ್ಲಿದೆ ಎಂಬುದನ್ನು ಹೇಳ್ತೇವೆ.

ದೆಹಲಿ Delhi (India) (Canada) : ಭಾರತೀಯರಿಗೆ ದೆಹಲಿ (Delhi) ಬಗ್ಗೆ ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ದೆಹಲಿ ನಮ್ಮ ದೇಶದ ರಾಜಧಾನಿ. ಇತಿಹಾಸ, ಸಾಂಸ್ಕೃತಿಯಿಂದ ಪ್ರಸಿದ್ಧಿ ಪಡೆದ ಪ್ರದೇಶ. ಸ್ಟ್ರೀಟ್ ಫುಡ್ ಗೆ (Street Food) ದೆಹಲಿ ಪ್ರಸಿದ್ಧಿ ಪಡೆದಿದೆ. ಆದ್ರೆ ದೆಹಲಿ ಹೆಸರಿನ ಊರು ಕೆನಡಾದಲ್ಲೂ ಇದೆ. ಕೆನಡಾದ ಒಂಟಾರಿಯೊದಲ್ಲಿದೆ. ಈ ದೆಹಲಿಯನ್ನು "heart of Tobacco country" ಎಂದು ಕರೆಯಲಾಗುತ್ತದೆ. ಈ ಎರಡು ದೆಹಲಿ ಸ್ಪೆಲಿಂಗ್ ಒಂದೇ ಇದ್ದು, ಉಚ್ಚಾರಣೆ ಕೂಡ ಒಂದೇ ಆಗಿದೆ.

Tap to resize

Latest Videos

ಜೂ.21ರಿಂದ ರಾಮಾಯಣ ಯಾತ್ರಾ ರೈಲು ಆರಂಭ!

ಕೊಚ್ಚಿ (Kerala) Kochi(Japan) : ಕೊಚ್ಚಿಯನ್ನು ಹಿಂದೆ ಕೊಚ್ಚಿನ್ ಎಂದು ಕರೆಯಲಾಗುತ್ತಿತ್ತು. ಇದು ಪ್ರಮುಖ ಬಂದರು ನಗರವಾಗಿದೆ. ಇದನ್ನು ಅರೇಬಿಯನ್ ಸಮುದ್ರದ ರಾಣಿ ಎಂದು ಕರೆಯಲಾಗುತ್ತದೆ. ಇದು ಕೇರಳದ ಒಂದು ಸುಂದರವಾದ ತಾಣವಾಗಿದೆ. ಕೊಚ್ಚಿ ಹೆಸರಿನ ಸ್ಥಳ ಜಪಾನ್‌ನಲ್ಲಿಯೂ ಇದೆ. ಕೊಚ್ಚಿ, ಕೊಚ್ಚಿ ಪ್ರಿಫೆಕ್ಚರ್‌ನ ರಾಜಧಾನಿ. ರಮಣೀಯ ಪ್ರಕೃತಿ ಸೌಂದರ್ಯ, ಶ್ರೀಮಂತ ಇತಿಹಾಸಕ್ಕೆ ಹಾಗೂ ಸಮುದ್ರ ಆಹಾರಕ್ಕೆ ಹೆಸರುವಾಸಿಯಾಗಿದೆ.  

ಪಾಟ್ನಾ (Bihar)  Patna(Scotland) : ಬಿಹಾರದ ರಾಜಧಾನಿ ಪಾಟ್ನಾ ಇತಿಹಾಸದಲ್ಲಿ ಶ್ರೀಮಂತವಾಗಿದೆ. ಅನೇಕ ರಾಜವಂಶರುಗಳು ಈ ಸ್ಥಳವನ್ನು ನಿರ್ಮಿಸಿದ್ದಾರೆ. ವಾತ್ಸ್ಯಾಯನ ಮತ್ತು ಚಾಣಕ್ಯ ಸೇರಿದಂತೆ ಅನೇಕ ವಿದ್ವಾಂಸರು ಮತ್ತು ಖಗೋಳಶಾಸ್ತ್ರಜ್ಞರಿಗೆ ಜನ್ಮ ನೀಡಿದ ಸ್ಥಳವಿದು. ಇದು ಪ್ರವಾಸಿ ತಾಣವೂ ಹೌದು. ಸ್ಕಾಟ್ಲೆಂಡ್ ನಲ್ಲಿಯೂ ಪಾಟ್ನಾ ಹೆಸರಿನ ಊರಿದೆ. ಬಿಹಾರದ ಪಾಟ್ನಾದಿಂದ ಪ್ರೇರಿತವಾಗಿದೆ ಸ್ಕಾಟ್ಲೆಂಡ್‌ನಲ್ಲಿ ಊರೊಂದಕ್ಕೆ ಪಾಟ್ನಾ ಎಂಬ ನಾಮಕರಣ ಮಾಡಲಾಗಿದೆ. ವಿಲಿಯಂ ಫುಲ್ಲರ್ಟನ್ ಸ್ಥಾಪಿಸಿದ ಪಾಟ್ನಾ, ಪೂರ್ವ ಐರ್‌ಶೈರ್‌ನಲ್ಲಿರುವ ಒಂದು ಹಳ್ಳಿಯಾಗಿದೆ. ಫುಲ್ಲರ್ಟನ್  ತಂದೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸೇನಾ ಅಧಿಕಾರಿಯಾಗಿದ್ದರು. ಅವರು ಬಿಹಾರದಲ್ಲಿ ಕೆಲಸ ಮಾಡ್ತಿದ್ದರು. ಫುಲ್ಲರ್ಟನ್ ಭಾರತದ ಪಾಟ್ನಾದಲ್ಲಿಯೇ ಜನಿಸಿದ್ದರು. ಆದ್ದರಿಂದ ಅವರು ತಮ್ಮ ಜನ್ಮಭೂಮಿಗೆ ಗೌರವಾರ್ಥವಾಗಿ ಹಳ್ಳಿಗೆ ಪಾಟ್ನಾ ಎಂದು ಹೆಸರಿಟ್ಟರು. 

ವಿಮಾನದಲ್ಲಿ ಸಂಗಾತಿ ಜೊತೆಯಾಗಿ ಪ್ರಯಾಣಿಸಲು ಸೀಟು ಕಾಯ್ದಿರಿಸುವುದು ಹೇಗೆ ?

ಬರೋಡಾ (Gujarat) Baroda (US) : ಬರೋಡಾ ಎಂದೂ ಕರೆಯಲ್ಪಡುವ ವಡೋದರಾ ಗುಜರಾತ್‌ನ ಎರಡನೇ ಅತಿದೊಡ್ಡ ನಗರವಾಗಿದೆ.  ಅಮೇರಿಕಾ ರಾಜ್ಯದ ಬೆರಿಯನ್ ಕೌಂಟಿಯಲ್ಲಿ ಬರೋಡಾ ಎಂಬ ಹೆಸರಿನ ಹಳ್ಳಿಯಿದೆ. ಬರೋಡಾದ ಸಂಸ್ಥಾಪಕ ಮೈಕೆಲ್ ಹೌಸರ್ ಇದನ್ನು ಪೊಮೊನಾ ಎಂದು ಹೆಸರಿಸಲು ಬಯಸಿದ್ದರು, ಆದರೆ ನಂತ್ರ ಅದನ್ನು ಬರೋಡಾ ಎಂದು ಬದಲಾಯಿಸಿದರು. ಈ ಹೆಸರನ್ನು ಸೂಚಿಸಿದವರು ಸಿ.ಎಚ್. ಪಿಂಡಾರ್ ಅವರ ಜನ್ಮಸ್ಥಳ ಭಾರತದ ಬರೋಡಾ.

ಸೇಲಂ (Tamil Nadu) Salem (Massachusetts) : ಸೇಲಂ ತಿರುಮಣಿಮುತಾರು ನದಿಯ ದಡದಲ್ಲಿದೆ. ಇದು ತಮಿಳುನಾಡಿನ ಒಂದು ನಗರ. ಈ ನಗರವು ಉಕ್ಕಿಗೆ ಹೆಸರುವಾಸಿಯಾಗಿದೆ. ಸೇಲಂ ಹೆಸರಿನ ಇನ್ನೊಂದು ಊರು ಮ್ಯಾಸಚೂಸೆಟ್ಸ್ ನಲ್ಲಿದೆ. ಇದು ಐತಿಹಾಸಿಕ ನಗರವಾಗಿದೆ.  

ಬಾಲಿ ( Rajasthan) Bali (Indonesia): ಮಿತ್ತರಿ ನದಿಯ ದಂಡೆಯ ಮೇಲಿರುವ ಬಾಲಿಯು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದೆ. ಬಾಲಿ ಕೋಟೆಯು ಬಾಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇಂಡೋನೇಷ್ಯಾದಲ್ಲೂ ಬಾಲಿ ಹೆಸರಿನ ಊರಿದೆ. ಇಂಡೋನೇಷ್ಯಾದ ಬಾಲಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

ಲಕ್ನೋ (Uttar Pradesh) Lucknow ( Pennsylvania) : ಲಕ್ನೋವನ್ನು ನವಾಬರ ನಗರ ಎಂದು ಕರೆಯಲಾಗುತ್ತದೆ. ಇದು ಉತ್ತರ ಪ್ರದೇಶದ ರಾಜಧಾನಿ. ಲಕ್ನೋ ನಗರವು ಯುನೈಟೆಡ್ ಸ್ಟೇಟ್ಸ್ ನ ಪೆನ್ಸಿಲ್ವೇನಿಯಾದ ಡೌಫಿನ್ ಕೌಂಟಿಯಲ್ಲಿಯೂ ಇದೆ. ಇದನ್ನು ಭಾರತೀಯ ನಗರವಾದ ಲಕ್ನೋದ ನಂತರ ಹೆಸರಿಸಲಾಯಿತು. ಲಕ್ನೋ ಬರೀ ಎರಡು ದೇಶದಲ್ಲಿಲ್ಲ. ಪಶ್ಚಿಮ ವರ್ಜೀನಿಯಾ, ದಕ್ಷಿಣ ಕೆರೊಲಿನಾ ಮತ್ತು ಮಿನ್ನೇಸೋಟದಲ್ಲಿ ಲಕ್ನೋ ಹೆಸರಿನ ಊರಿದೆ.

ಇಂದೋರ್ (Madhya Pradesh) Indore ( US) : ಶ್ರೀಮಂತ ಇತಿಹಾಸ, ಕ್ಷಿಪ್ರ ಕೈಗಾರಿಕೀಕರಣ, ಅದ್ಭುತ ಅರಮನೆಗಳು ಇಂದೋರ್  ನಲ್ಲಿ ಗಮನ ಸೆಳೆಯುತ್ತವೆ. ಪಶ್ಚಿಮ ವರ್ಜೀನಿಯಾದಲ್ಲೂ ಇಂದೋರ್ ಇದೆ.  

ಢಾಕಾ Dhaka (Bihar) Dhaka (Bangladesh) : ಬಾಂಗ್ಲಾದೇಶದ ರಾಜಧಾನಿ ಢಾಕಾ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಸಂಸ್ಕೃತಿ, ಕಲೆ ಮತ್ತು ಹಬ್ಬಗಳು ಢಾಕಾವನ್ನು ಸಾಂಸ್ಕೃತಿಕ ಸಾಮರಸ್ಯದ ಕೇಂದ್ರವನ್ನಾಗಿ ಮಾಡಿದೆ. ಭಾರತದಲ್ಲೂ ಒಂದು ಢಾಕಾ ಇದೆ. ಇದು ಬಾಂಗ್ಲಾದೇಶದ ಢಾಕಾದಷ್ಟು ಪ್ರಸಿದ್ಧವಾಗಿಲ್ಲ. ಆದರೆ ಈ ಸ್ಥಳವು ವಿಧಾನಸಭಾ ಕ್ಷೇತ್ರ.

ಕಲ್ಕತ್ತಾ (West Bengal) Calcutta( US) : ಈಗ ಕೋಲ್ಕತ್ತಾ ಎಂದು ಕರೆಯಲ್ಪಡುವ ಕಲ್ಕತ್ತಾ, ಕಲೆ ಮತ್ತು ಸಂಸ್ಕೃತಿಯ ಸಮ್ಮಿಲನ ಹೊಂದಿರುವ ನಗರ. ಇದು ರವೀಂದ್ರನಾಥ ಠಾಕೂರರ ಜನ್ಮಸ್ಥಳ. ಓಹಿಯೋದಲ್ಲೂ ಕಲ್ಕತ್ತಾ ಎಂಬ ಸ್ಥಳವಿದೆ. ವಿಲಿಯಂ ಫೌಲ್ಕ್ಸ್ ನ ಕಾರಣದಿಂದಾಗಿ ಇದನ್ನು ಕೆಲವು ಸಮಯ  "ಫೌಕ್ಸ್ ಟೌನ್" ಎಂದು ಕರೆಯಲಾಯಿತು. ಮೊದಲ ಇಟ್ಟಿಗೆಯ ಮನೆ ನಿರ್ಮಾಣವಾಗಿದ್ದು ಇಲ್ಲಿಯೇ.  

click me!