ಹಾವು ಕಚ್ಚಿದ್ರೆ ಮೊದಲು ಹೋಗೋದು ಆಸ್ಪತ್ರೆಗೆ. ಆದ್ರೆ ಮಧ್ಯಪ್ರದೇಶದ ಜನರು ಹಾಸ್ಪಿಟಲ್ ಬದಲು ದೇವಸ್ಥಾನಕ್ಕೆ ಓಡ್ತಾರೆ. ಎಂಥ ಹಾವು ಕಚ್ಚಿದ್ರೂ ವ್ಯಕ್ತಿ ಬದುಕ್ತಾನೆ ಎನ್ನುವ ಜನರು, ಬಾಬಾ ಪವಾಡದ ಮೇಲೆ ನಂಬಿಕೆ ಇಟ್ಟಿದ್ದಾರೆ.
ಹಾವು (snake) ಎಂದ ತಕ್ಷಣ ಮೈ ಜುಮ್ ಅನ್ನೋದು ಸಹಜ. ಭಾರತದಲ್ಲಿರುವ ಎಲ್ಲ ಹಾವು ಕಚ್ಚಿದ್ರೆ ಮನುಷ್ಯ ಸಾಯೋದಿಲ್ಲ. ವಿಷವಲ್ಲದ ಅನೇಕ ಹಾವುಗಳು ನಮ್ಮಲ್ಲಿವೆ. ಆದ್ರೆ ಜನರಿಗೆ ಯಾವುದು ವಿಷಯುಕ್ತ ಹಾವು (poisonous snake), ಯಾವುದು ಅಲ್ಲ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹಾವು ಕಚ್ತು ಎನ್ನುವ ಟೆನ್ಷನ್ ಗೆ ಕೆಲವರು ಸಾವನ್ನಪ್ಪಿರ್ತಾರೆ. ಇನ್ನು ಕೆಲವರು ನಿರ್ಲಕ್ಷ್ಯಕ್ಕೆ ಬಲಿಯಾಗ್ತಾರೆ. ಮಳೆಗಾಲದಲ್ಲಿ ಈ ಹಾವಿನ ಕಾಟ ಹೆಚ್ಚು. ಪ್ರತಿ ವರ್ಷ ಹಾವು ಕಡಿತಕ್ಕೆ 45 ಸಾವಿರಕ್ಕೂ ಹೆಚ್ಚು ಮಂದಿ ಸಾಯ್ತಾರೆ. ಈಗ ನಾವು ಹೇಳ್ತಿರೋ ಪ್ರದೇಶದಲ್ಲಿ ಮಾತ್ರ ಒಬ್ಬೇ ಒಬ್ಬರು ಹಾವು ಕಚ್ಚಿ ಸಾಯೋದಿಲ್ಲ. ಅದಕ್ಕೆ ಕಾರಣ ಅಲ್ಲಿರುವ ದೇವಸ್ಥಾನ.
ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಮಹಾರಾಜಪುರದ ಗ್ರಾಮ ಹಾವಿನ ವಿಚಾರದಲ್ಲಿ ಸುದ್ದಿ ಮಾಡ್ತಿದೆ. ಈ ಗ್ರಾಮದಲ್ಲಿ ಹಾವು ಕಡಿದ ಯಾವುದೇ ವ್ಯಕ್ತಿ ಸಾವನ್ನಪ್ಪಿದ ದಾಖಲೆ ಇಲ್ಲ. ಹಾವು ಕಚ್ಚುತ್ತಿದ್ದಂತೆ ನಾವು ಮೊದಲು ಮಾಡುವ ಕೆಲಸ ಆತನನ್ನು ಆಸ್ಪತ್ರೆಗೆ ಕರೆದೊಯ್ಯೋದು. ಆದ್ರೆ ಇಲ್ಲಿನ ಜನರು, ಬಿದೇಹಿ ಬಾಬಾ (Bidehi Baba ) ದೇವಸ್ಥಾನಕ್ಕೆ ಕರೆದುಕೊಂಡು ಬರ್ತಾರೆ. ಇಲ್ಲಿಗೆ ಬಂದ್ರೆ ಹಾವು ಕಚ್ಚಿನದ ವ್ಯಕ್ತಿ ಹುಷಾರಾಗಿ ಮನೆಗೆ ಹೋಗ್ತಾನೆ ಎನ್ನುವ ನಂಬಿಕೆ ಇದೆ.
ಡೆಮು & ಮೆಮು ರೈಲುಗಳ ನಡುವಿನ ವ್ಯತ್ಯಾಸ ಏನು? ಇವುಗಳ ಸಾಮಾರ್ಥ್ಯ ಎಷ್ಟು?
ದೇವಸ್ಥಾನದ ಇತಿಹಾಸ (Temple History) ಏನು? : ಈ ದೇವಸ್ಥಾನದ ಅರ್ಚಕ ರಾಜ್‌ಕುಮಾರ್ ತಿವಾರಿ ಪ್ರಕಾರ, ರಾಜನೊಬ್ಬ ಲೌಕಿಕ ಜಗತ್ತನ್ನು ಬಿಟ್ಟು ಏಕಾಂಗಿಯಾಗಿ ವಾಸಿಸಲು ಕಾಡಿಗೆ ಹೋಗ್ತಾರೆ. ಅಲ್ಲಿ ತಪಸ್ಸನ್ನು ಮಾಡುವ ಅವರು, ಸಮಾಧಿಯಾಗ್ತಾರೆ. ಅವರ ಸಮಾಧಿಯಾದ ಜಾಗದಲ್ಲೇ ಈ ದೇವಸ್ಥಾನ ಕಟ್ಟಲಾಗಿದೆ. ಬಿದೇಹಿ ಬಾಬಾ ಬದುಕಿದ್ದ ಸಮಯದಲ್ಲಿ, ಬಡ ವೃದ್ಧೆಯೊಬ್ಬಳು ಹಾವು ಕಚ್ಚಿದ ತನ್ನ ಮಗನನ್ನು ಬಿದೇಹಿ ಬಾಬಾ ಬಳಿ ಕರೆದುಕೊಂಡು ಬರ್ತಾಳೆ. ಆಕೆಗೆ ಬಾಬಾ, ಮಗನನ್ನು ಬದುಕಿಸುವ ವಚನ ನೀಡ್ತಾರೆ. ಅಲ್ಲಿಂದ, ಹಾವು ಕಚ್ಚಿದವರನ್ನು ಇಲ್ಲಿಗೆ ಕರೆತರಲಾಗುತ್ತದೆ. ಇಲ್ಲಿ ಬರೀ ಹಾವು ಕಚ್ಚಿದ್ರೆ ಮಾತ್ರವಲ್ಲ ವಿಷಕಾರಿ ಯಾವುದೇ ಪ್ರಾಣಿ ಕಚ್ಚಿದ್ರೂ ಚಿಕಿತ್ಸೆ ನೀಡಲಾಗುತ್ತದೆ. ಪ್ರೇತಾತ್ಮಗಳ ಕಾಟದಿಂದ ಬಳಲುತ್ತಿರುವ ಜನರು ಕೂಡ ಇಲ್ಲಿಗೆ ಬರ್ತಾರೆ.
ಈ ದೇವಸ್ಥಾನದಲ್ಲಿ ಹಾವೊಂದು ನೆಲೆಸಿದೆ. ಅದು ಹಾವು ಕಚ್ಚಿ, ಸಾವು ಬದುಕಿನ ಮಧ್ಯೆ ಹೋರಾಡುವ ಜನರನ್ನು ರಕ್ಷಿಸುತ್ತದೆ ಎಂದು ಭಕ್ತರು ನಂಬಿದ್ದಾರೆ. ಈ ವಿಷ್ಯವನ್ನು ಅರ್ಚಕರು ಕೂಡ ಸ್ಪಷ್ಟಪಡಿಸಿದ್ದಾರೆ. ಪ್ರತಿ ದಿನ ಇಲ್ಲಿಗೆ 20 -25 ಜನರು ಚಿಕಿತ್ಸೆ ಪಡೆಯಲು ಬರ್ತಾರೆ.
ಹಾವಿನಿಂದ ಕಚ್ಚಿಸಿಕೊಂಡು ಇಲ್ಲಿಗೆ ಬರುವ ಜನರ ಕೂದಲನ್ನು ಮುಡಿಕಟ್ಟಲಾಗುತ್ತದೆ. ಅವರಿಗೆ ನೀರಿನ ಬದಲು ತುಪ್ಪ ಹಾಗೂ ಕರಿಮೆಣಸು ಬೆರೆಸಿದ ನೀರನ್ನು ಕುಡಿಯಲು ಹೇಳ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಪ್ರತಿ ವರ್ಷ 5 ಮಿಲಿಯನ್ ಹಾವು ಕಡಿತ ಪ್ರಕರಣಗಳು ವರದಿಯಾಗುತ್ತವೆ. ಹಾವು ಕಡಿತದಿಂದ ಸಾವು ಮಾತ್ರ ಸಂಭವಿಸೋದಿಲ್ಲ, ಶಾಶ್ವತ ಅಂಗವೈಕಲ್ಯ ಉಂಟಾಗುತ್ತದೆ. ಭಾರತದಲ್ಲಿ ನಾಲ್ಕು ಅತ್ಯಂತ ವಿಷಕಾರಿ ಹಾವುಗಳಿವೆ, ಇದನ್ನು ಬಿಗ್ ಫೋರ್ ಎಂದು ಕರೆಯಲಾಗುತ್ತದೆ. ಇಂಡಿಯನ್ ಕೋಬ್ರಾ, ಕಾಮನ್ ಕ್ರೈಟ್, ರಸ್ಸೆಲ್ಸ್ ವೈಪರ್ ಮತ್ತು ಸಾ-ಸ್ಕೇಲ್ಡ್ ವೈಪರ್ ಹಾವು ಕಚ್ಚಿದ್ರೆ ಮನುಷ್ಯ ಬದುಕೋದು ಕಷ್ಟ.
ಕಾಶ್ಮೀರ-ಶಿಮ್ಲಾವಲ್ಲ, ಈ ಹಳ್ಳಿ ಬಾಲಿವುಡ್ ಶೂಟಿಂಗ್‌ಗೆ ಮೊದಲ ಆಯ್ಕೆ
ಹಾವುಗಳು ಸಾಮಾನ್ಯವಾಗಿ ಬೆಳಿಗ್ಗೆ ಅಥವಾ ಕತ್ತಲೆಯಲ್ಲಿ ಅವು ಆಹಾರ ಹುಡುಕಲು ಹೊರಟಾಗ ಕಚ್ಚುತ್ತವೆ. ಆದ್ದರಿಂದ ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಹಾವುಗಳ ಬಗ್ಗೆ ಜನರಲ್ಲಿ ಹಲವು ತಪ್ಪು ಕಲ್ಪನೆಗಳಿದ್ದು, ಜಾಗೃತಿ ಮೂಡಿಸುವ ಕೆಲಸ ಆಗ್ಬೇಕಿದೆ.