ಅರಬ್​ ದೇಶ ಲೆಬಿನಾನ್​ನಲ್ಲಿ ಅರಳಿದ ಕಮಲ! ಒಂದೇ ದಿನ 8 ಲಕ್ಷ ವ್ಯೂಸ್​ ಕಂಡ ಡಾ.ಬ್ರೋ ವಿಡಿಯೋದಲ್ಲೇನಿದೆ?

By Suchethana D  |  First Published Jul 21, 2024, 2:36 PM IST

ಅರಬ್​ ದೇಶ ಲೆಬನಾನ್​ ಪ್ರವಾಸದಲ್ಲಿರುವ ಡಾ.ಬ್ರೋ ಅರ್ಥಾತ್​ ಗಗನ್​, ಅಲ್ಲಿರುವ ಕುತೂಹಲದ ಮಾಹಿತಿ ತೆರೆದಿಟ್ಟಿದ್ದಾರೆ. ಏನದು? 
 


ಡಾ.ಬ್ರೋ. ಹೆಸರು ಕೇಳಿದರೆ ಕನ್ನಡಿಗರಿಗೆ ಅದೇನೋ ರೋಮಾಂಚನ  ಆಗುವುದು ಸಹಜವೇ. 20ಕ್ಕೂ ಅಧಿಕ ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಮಾಹಿತಿ ನೀಡಿದ್ದಾರೆ.  ಇವರ ಹೆಸರು ಗಗನ್​.  ತಮ್ಮದೇ ಆದ ಹಾಸ್ಯದ ಶೈಲಿಯಲ್ಲಿ ಕನ್ನಡದಲ್ಲಿಯೇ ಹಲವು ವಿಷಯಗಳ ಮಾಹಿತಿ ನೀಡುತ್ತಾ ಲಕ್ಷಾಂತರ ಮಂದಿಗೆ ಹತ್ತಿರವಾಗಿದ್ದಾರೆ.  ಅಷ್ಟಕ್ಕೂ, ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ  ನಮಸ್ಕಾರ​ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. 

ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇದೀಗ ಇನ್ನೊಂದು ಮುಸ್ಲಿಂ ರಾಷ್ಟ್ರ ಲಿಬಿನಾನ್​ಗೆ ಹೋಗಿರುವ ಡಾ.ಬ್ರೋ ಅಲ್ಲಿಯ ವಿಶೇಷ ಮಾಹಿತಿಗಳನ್ನು ಕನ್ನಡದಲ್ಲಿಯೇ ನೀಡಿದ್ದಾರೆ. ಮಧ್ಯ ಪ್ರಾಚೀನ ರಾಷ್ಟ್ರವಾಗಿರುವ ಲೆಬಿನಾನ್​ನಲ್ಲಿ   ಅಂದಾಜಿನ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯ 63% ಜನರು ಇಸ್ಲಾಂ ಅನುಸರಿಸುತ್ತಿದ್ದಾರೆ.  ಸುನ್ನಿಗಳು 31.9% ರಷ್ಟಿದ್ದಾರೆ, ಟ್ವೆಲ್ವರ್ ಶಿಯಾ 31.2% ರಷ್ಟಿದ್ದಾರೆ, ಅಲಾವೈಟ್ಸ್ ಮತ್ತು ಇಸ್ಮಾಯಿಲಿಗಳಂತಹ ಇತರ ಶಿಯಾ ಶಾಖೆಗಳ ಜನರೂ ಇದ್ದಾರೆ. ಆದರೆ  ಕುತೂಹಲದ ಸಂಗತಿ ಎಂದರೆ, ಇಲ್ಲಿ ಕಮಲ ಅರಳಿದೆ. ಇದರ ಕುತೂಹಲದ ಮಾಹಿತಿಯನ್ನು ಡಾ.ಬ್ರೋ ನೀಡಿದ್ದು, ಈ ವಿಡಿಯೋ ಒಂದೇ ದಿನ ಎಂಟು ಲಕ್ಷ ವ್ಯೂಸ್​ ಕಂಡಿದೆ. 

Latest Videos

undefined

ಮಧ್ಯರಾತ್ರಿ ವಿಚಿತ್ರ ಕೂಗು- ಬೆಳಗಾದರೆ ಸ್ವರ್ಗ ತೋರುವ ಸುಂದರಿ: ಕೌತುಕಗಳ ನಡುವೆ ಡಾ.ಬ್ರೋ

ಅಷ್ಟಕ್ಕೂ ಅರಬ್ ದೇಶಕ್ಕೂ ಕಮಲಕ್ಕೂ ಏನಪ್ಪಾ ಸಂಬಂಧ ಎಂದು ಕೇಳಬಹುದು. ಇದಾಗಲೇ ಹಲವಾರು ದೇಶಗಳಲ್ಲಿ ಭಾರತದ ವಾಸ್ತುಶಿಲ್ಪಗಳನ್ನು ನೋಡಿಯಾಗಿದೆ. ಅಷ್ಟೇ ಏಕೆ, ಭಾರತದಲ್ಲಿ ಹೂತುಹೋಗಿರುವ ಹಿಂದೂ ದೇವಾಲಯಗಳ ಒಂದೊಂದಾಗಿ ಈಗ ಮೇಲೆ ಬರುತ್ತಿವೆ. ಕೆಡವಿ ಭೂಗತವಾಗಿರುವ ಹಿಂದೂ ಮಂದಿರಗಳು ಶತಮಾನಗಳವರೆಗೆ ಅಸ್ತಿತ್ವವನ್ನೇ ಕಳೆದುಕೊಂಡಿದ್ದವು. ಆದರೆ ಇದೀಗ ಅವುಗಳ ಇತಿಹಾಸ ಬೆಳಕಿಗೆ ಬರುತ್ತಿವೆ. ನೆಲದಡಿಯಲ್ಲಿನ ಹಿಂದೂ ವಾಸ್ತುಶಿಲ್ಪಗಳು ಇಷ್ಟು ವರ್ಷ ನಡೆದಿರುವ ದೌರ್ಜನ್ಯ, ದಬ್ಬಾಳಿಕೆ, ಹಿಂದೂಗಳ ಮೇಲೆ ಆಗಿರುವ ಅನ್ಯಾಯಗಳ ಸಂಕೇತವಾಗಿ ಕಾಣಿಸಿಕೊಳ್ಳುತ್ತಿವೆ. ಅತ್ಯಂತ ಪುರಾತನ ಹಾಗೂ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಭಾರತದಲ್ಲಿನ ವಾಸ್ತುಶಿಲ್ಪ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದ ಹಲವು ಕಡೆಗಳಲ್ಲಿಯೂ ಕಾಣಸಿಗಬಹುದಾಗಿದೆ.  ಅದಕ್ಕೆ ಉದಾಹರಣೆಯೇ ಲೆಬಿನಾನ್​! 

ಲೆಬಿನಾನ್​ನ ಹಲವು ಭಾಗಗಳು, ರಾಸಾಯನಿಕ ಕಾರ್ಖಾನೆಗಳು, ಅಲ್ಲಿಯ ಜನರ ನೋವು, ಬವಣೆಗಳು, ದೇಶ ಬಿಟ್ಟು ಓಡಿ ಹೋದ ಜನರ ಹಿನ್ನೆಲೆ, ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ನಗುತ್ತಲೇ ಇರುವ ಕೆಲವು ವರ್ಗಗಳು, ವೈನ್​ ಫ್ಯಾಕ್ಟರಿ... ಹೀಗೆ ಲೆಬಿನಾನ್​ನ ಹತ್ತು-ಹಲವು ವಿಶೇಷತೆಗಳನ್ನು ತಿಳಿಸಿರುವ ಡಾ.ಬ್ರೋ ಅಲ್ಲಿನ ವಾಸ್ತುಶಿಲ್ಪದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಸಾಧ್ಯ ಎಂಬಂಥ ಕಲ್ಲು ಕಂಬಗಳನ್ನು ನಿಲ್ಲಿಸಿರುವುದರ ಬಗ್ಗೆ ತಿಳಿಸುತ್ತಲೇ ಇದು ಭಾರತೀಯ ವಾಸ್ತುಶಿಲ್ಪಿಗಳಿಂದ ತಯಾರಾಗಿರುವ ಮಾಹಿತಿ ನೀಡಿದ್ದಾರೆ. ಅಲ್ಲಿನ ಹಲವಾರು ಕಲ್ಲಿನ ಕೆತ್ತನೆಗಳ ಮೇಲೆ ಭಾರತೀಯ ವಾಸ್ತುಶಿಲ್ಪದ ಛಾಯೆ ಇರುವುದನ್ನು ನೋಡಬಹುದು. ತಮ್ಮ ಮಾತಿಗೆ ಇನ್ನಷ್ಟು ಪುಷ್ಟಿ ನೀಡಲು ಅಲ್ಲಿನ ಕಲ್ಲಿನ ಕಂಬದ ಮೇಲೆ ಇರುವ ಕಮಲದ ಹೂವಿನ ಶಿಲ್ಪವನ್ನು ತೋರಿಸಿದ್ದಾರೆ ಡಾ.ಬ್ರೋ. ಸಾಮಾನ್ಯವಾಗಿ ಭಾರತದ ಶಿಲ್ಪಿಗಳು ಶಿಲ್ಪದ ಆರಂಭಕ್ಕೂ ಮುನ್ನ ಚಿತ್ರಿಸುವ ಕಮಲದ ಹೂವು ಇದಾಗಿದೆ. ಮಧ್ಯ ಪ್ರಾಚೀನ ಅರಬ್​ ರಾಷ್ಟ್ರದವರು ಕಮಲ ಎನ್ನುವ ಹೆಸರೇ ಕೇಳಿರಲಿಕ್ಕಿಲ್ಲ. ಇನ್ನು ಹೂವಿನದ್ದು ದೂರದ ಮಾತು. ಆದ್ದರಿಂದ ಇದು ಭಾರತದ ವಾಸ್ತುಶಿಲ್ಪ ಎನ್ನುವುದಕ್ಕೆ ಸ್ಪಷ್ಟ ಉತ್ತರ ಎಂದಿದ್ದಾರೆ ಡಾ.ಬ್ರೋ. 

ಒಬ್ಬ ಪ್ರವಾಸಿ ಕ್ರಷ್​, ಇನ್ನೊಬ್ಬಾಕೆ ಸ್ಪಿರಿಚುವಲ್​ ಕ್ರಷ್​- ಸೋಷಿಯಲ್​ ಮೀಡಿಯಾದ ಸ್ಟಾರ್​ಗಳಲ್ಲಿ ನಿಮಗ್ಯಾರಿಷ್ಟ?
 

click me!