Travel Tips: ಸೋಲೋ ಟ್ರಿಪ್ ಹೋಗಿ, ನಿಮ್ಮನ್ನು ನೀವು ಅರಿಯಿರಿ

By Suvarna News  |  First Published Sep 28, 2022, 1:25 PM IST

ಬಹುತೇಕ ಜನರು ಒಬ್ಬಂಟಿಯಾಗಿ ಪ್ರವಾಸ ಮಾಡಲು ಬಯಸುತ್ತಾರೆ. ಯಾಕೆಂದ್ರೆ ಸೋಲೋ ಟ್ರಿಪ್ ನಮಗೆ ಅನೇಕ ಪ್ರಯೋಜನಕಾರಿ. ಒಂಟಿ ಪ್ರಯಾಣದಲ್ಲಿ ಕಲಿತ ಕೌಶಲ್ಯಗಳು ಮತ್ತು ಅನುಭವಗಳು ನಮಗೆ ತುಂಬಾ ಸಹಕಾರಿಯಾಗಲಿವೆ.


ಪ್ರತಿಯೊಬ್ಬರಿಗೂ ಪ್ರವಾಸಕ್ಕೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ. ಅದರಲ್ಲೂ ಸ್ನೇಹಿತರು ಹಾಗೂ ಕುಟುಂಬದ ಜೊತೆ ದೂರ ಪ್ರಯಾಣ ಮಾಡುವುದರಲ್ಲಿರುವ ಮಜಾನೇ ಬೇರೆ. ಶಾಲೆ, ಕಾಲೇಜುಗಳಲ್ಲಿ ನೀವು ಪಿಕ್ನಿಕ್, ಪ್ರವಾಸಕ್ಕೆ ಹೋದಾಗ ಶಾಲೆಯ ಮಕ್ಕಳೆಲ್ಲಾ ಒಟ್ಟಾಗಿ ಒಂದೇ ಬಸ್‌ನಲ್ಲಿ ಹಾಡಿಕೊಂಡು , ಕುಣಿದುಕೊಂಡು ಹೋಗುವುದು ನಿಮಗೆಲ್ಲಾ ಗೊತ್ತೇ ಇದೆ. ಇದೆಲ್ಲಾ ಕಾಮನ್. ಆದರೆ ಯಾವತ್ತಾದರೂ ನೀವು ಸೋಲೋ ಟ್ರಿಪ್ ಹೋಗಿದ್ದೀರಾ? ಇದರಿಂದ ಅನೇಕ ಲಾಭಗಳಿವೆ. ಸೋಲೋ ಟ್ರಿಪ್ ನಮಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡುತ್ತದೆ. ನಮ್ಮ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳಲು ಇದು ಸಹಾಯಕಾರಿ ಕೂಡ. ಇದು ನಮಗಾಗಿ ನಾವು ಸಮಯ ನೀಡುವ ಒಂದು ಅಧ್ಭುತ ಪ್ಲಾನ್. ಅದರಲ್ಲಿ ಮುಖ್ಯವಾಗಿ ನಾವು ಅಂದುಕೊಂಡ ಜಾಗಕ್ಕೆ, ಅಂದುಕೊಂಡ ಸಮಯಕ್ಕೆ ಸಲೀಸಾಗಿ ಹೋಗಿ ಬರಬಹುದು.

ನಮ್ಮನ್ನು ನಾವು ಅರಿಯಲು ಸೋಲೋ ಟ್ರಿಪ್ ಸಹಾಯಕಾರಿ:

Tap to resize

Latest Videos

ಸೋಲೋ ಟ್ರಿಪ್ (solo trip) ಸಂಪೂರ್ಣವಾಗಿ ನಮ್ಮಂದಿಗೆ ನಾವು ಮಾತ್ರ ಹೋಗುವ ಟ್ರಿಪ್. ಆದ್ದರಿಂದ ಇಲ್ಲಿ ನಮಗಾಗಿ ಮಾತ್ರ ಸಮಯ ಮೀಸಲಿರುತ್ತದೆ. ನಾವು ಏನೆಂದು ಅರಿಯಲು ಸೋಲೋ ಟ್ರಿಪ್ ಬಹಳ ಸಹಾಯಕಾರಿ. ವಿಲಕ್ಷಣ ಗಮ್ಯಸ್ಥಳಗಳಲ್ಲಿ (exotic destination) ಏಕಾಂಗಿಯಾಗಿ ಸಮಯವನ್ನು ಕಳೆಯುವುದು. ಗೊತ್ತಿಲ್ಲದ ಜಾಗದಲ್ಲಿ ಸುತ್ತುವುದು ಹೀಗೆ ಅನೇಕ ಸನ್ನಿವೇಶಗಳು ನಮ್ಮನ್ನು ಮರು-ಶೋಧಿಸುತ್ತವೆ. ಏನು ಮಾಡಬೇಕು, ಎಲ್ಲಿಯವರೆಗೆ ಹೋಗಬೇಕು, ಎಲ್ಲಿ ಉಳಿಯಬೇಕು ಮತ್ತು ಹತ್ತಿರದ ಪ್ರದೇಶಗಳಲ್ಲಿ ಎಷ್ಟು ಸಮಯ ಕಳೆಯಬೇಕು ಎಂಬ ಎಲ್ಲವೂ ನಿಮ್ಮ ಕೈಯಲ್ಲಿರುತ್ತದೆ ಇರುತ್ತದೆ. ನಾವೇ ಸಂಪೂರ್ಣ ನಿರ್ಧಾರ ತೆಗೆದುಕೊಳ್ಳುತ್ತೇವೆ. ಇದರಿಂದ ನಮ್ಮ ಬಗ್ಗೆ ನಾವು ತಿಳಿದುಕೊಳ್ಳಬಹುದು. ಸಂಪೂರ್ಣವಾಗಿ ನಾವು ಏನೆಂದು ಅರ್ಥ ಮಾಡಿಕೊಳ್ಳುವ ಪ್ರವಾಸ ಇದು ಎಂದು ಹೇಳಬಹುದು.

ಇದನ್ನೂ ಓದಿ: Travel Plan: ಪ್ರವಾಸಕ್ಕೆ ಹೋಗ್ತೀರಾ? ಈ ತಪ್ಪುಗಳನ್ನ ಮಾಡ್ಲೇಬೇಡಿ

ಒಬ್ಬಂಟಿ ಪ್ರಯಾಣ ಆತ್ಮವಿಶ್ವಾಸ ಬೆಳೆಸುತ್ತದೆ:

ಒಂಟಿಯಾಗಿ ಪ್ರಯಾಣಿಸುವುದರಿಂದ ನಾವು ಸ್ವತಂತ್ರವಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಇವು ನಮ್ಮಲ್ಲಿ ಆತ್ಮವಿಶ್ವಾಸವನ್ನು (Confidence) ತುಂಬುತ್ತವೆ. ಮೊದಲ ಬಾರಿಗೆ ಅಪರಿಚಿತರು ಹಾಗೂ ಗೊತ್ತಿಲ್ಲದ ಸ್ಥಳದ ಭಯ ಸಾಮಾನ್ಯವಾಗಿ ಇರುತ್ತದೆ. ಆದರೆ ಮನೆಯಿಂದ ದೂರದಲ್ಲಿರುವ ಗಮ್ಯಸ್ಥಾನದಲ್ಲಿ ನಾವು ಹೋದಾಗ ಇದೆಲ್ಲವನ್ನು ಎದುರಿಸಿ ನಡೆಯಬೇಕಾಗುತ್ತದೆ. ಆಗ ನಮ್ಮ ನಿರ್ಧಾರಗಳು ನಮ್ಮಲ್ಲಿ ಛಲ ನೀಡುತ್ತವೆ. ಇಂತಹ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಾಗ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಾವು ಸಂಪೂರ್ಣವಾಗಿ ಅಪರಿಚಿತ ಸ್ಥಳಕ್ಕೆ ಹೋದಾಗ ಸಮಸ್ಯೆಗಳು (problems) ಅಥವಾ ಗೊಂದಲಗಳು ಅನಿವಾರ್ಯ. ಆದರೆ ಸಮಸ್ಯೆಗಳು ಮತ್ತು ಅನಿರೀಕ್ಷಿತ ಸಂದರ್ಭಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಜೊತೆಗೆ ಇದು ನಮ್ಮ ಸಾಮರ್ಥ್ಯದ ಅರಿವನ್ನು ಮೂಡಿಸುತ್ತದೆ.ನಮ್ಮಲ್ಲಿ ನಂಬಿಕೆ ಮೂಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Travel Tips in Kannada: ಏಕಾಂಗಿ ಪ್ರಯಾಣ ಇಷ್ಟನಾ? ಕರ್ನಾಟಕದ ಈ ಸ್ಥಳಗಳಿಗೆ ಹೋಗಿ

ಹೊಸ ಕಲಿಕೆ, ಹೊಸ ಪರಿಚಯಕ್ಕೆ ದಾರಿ:

ಒಬ್ಬಂಟಿ ಪ್ರವಾಸ ಮಾಡುವಾಗ  ದಾರಿಯಲ್ಲಿ ಅನೇಕ ಅಪರಿಚಿತರು ನಮಗೆ ಸಿಗುತ್ತಾರೆ. ಬಸ್ಸುಗಳು, ರೈಲುಗಳಲ್ಲಿ ಹಾಗೂ ಆಟೋಗಳಲ್ಲಿ ನಾವು ಅನೇಕ ಜನರನ್ನು ಭೇಟಿಯಾಗುತ್ತೇವೆ. ಅವರ ಜೊತೆ ಮಾತುಕತೆ, ಅವರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದು ಮತ್ತು ನಮ್ಮ ಮಾತುಗಳನ್ನು ಹಂಚಿಕೊಳ್ಳುತ್ತೇವೆ. ಇದು ನಾವು ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯಲು ನಮಗೆ ಸಹಾಯ ಮಾಡುತ್ತದೆ. ಜೊತೆಗೆ ಬೇರೆ ಭಾಷೆಗಳ ಪರಿಚಯ ಹಾಗೂ ಸಂವಹನ ಕೂಡ ಸುಧಾರಿಸುತ್ತದೆ. ಬೇರೆ ಸ್ಥಳದಲ್ಲಿನ ಆಹಾರ ಪದ್ಧತಿಯಿಂದ ಹಿಡಿದು ಉಡುಗೆ-ತೊಡುಗೆ (dress),  ಭಾಷೆ ಎಲ್ಲವೂ ವಿಭಿನ್ನವಾಗಿರುತ್ತದೆ. ಅವುಗಳನ್ನು ನಾವು ಒಬ್ಬಂಟಿಯಾಗಿ ಅನುಭವಿಸಬಹದು. ಹೊಸ ಜನರು ಜೀವನದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡುತ್ತಾರೆ. ಯಾರಿಗೆ ಗೊತ್ತು ಕೆಲವೊಮ್ಮೆ ನಮಗೆ ಉತ್ತಮ ಸ್ನೇಹಿತರೂ (Friends) ಸಿಗಬಹುದು.

click me!