ಇದು ಪುನೀತ್ ಅಭಿನಯದ ರೀಲ್ ರಾಜಕುಮಾರ ಅಲ್ಲ ರಿಯಲ್ ರಾಜಕುಮಾರನ ಕಥೆ. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿಕ್ವೇಲ್ ಹೋಲುವ ರಿಯಲ್ ಸ್ಟೋರಿಯೊಂದು ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ (ಫೆ.22): ಇದು ಪುನೀತ್ ಅಭಿನಯದ ರೀಲ್ ರಾಜಕುಮಾರ ಅಲ್ಲ ರಿಯಲ್ ರಾಜಕುಮಾರನ ಕಥೆ. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿಕ್ವೇಲ್ ಹೋಲುವ ರಿಯಲ್ ಸ್ಟೋರಿಯೊಂದು ಬೆಳಗಾವಿಯಲ್ಲಿ ನಡೆದಿದೆ.
ಸಿನೆಮಾದಲ್ಲಿ ಅನಾಥಾಶ್ರಮದಲ್ಲಿದ್ದ ವೃದ್ದರನ್ನು ಗೋವಾ ಕರೆದುಕೊಂಡು ಪುನೀತ್ ರಾಜಕುಮಾರ್ ಹೋಗಿದ್ದರು. ವಯೋವೃದ್ಧರು ಅಲ್ಲಿ ಎಂಜಾಯ್ ಮಾಡಿದ್ದರು. ಇದೇ ರೀತಿ ರಿಯಲ್ ಸನ್ನಿವೇಶ ಬೆಳಗಾವಿಯಲ್ಲೂ ನಡೆದಿದೆ. ಬೆಳಗಾವಿಯ ಶಾಂತಾಯಿ ವೃದ್ದಾಶ್ರಮದ 37 ಜನ ವೃದ್ದರಿಗೆ ವಿಮಾನ ಏರಿ ಮುಂಬೈಗೆ ಹಾರುವ ಭಾಗ್ಯ ದೊರೆತಿದೆ.
ಇಂದು ಮಧ್ಯಾಹ್ನ 2ಗಂಟೆಗೆ ಬೆಳಗಾವಿಯಿಂದ ಮುಂಬೈಗೆ ಒಟ್ಟು 37 ಜನ ವೃದ್ದರು ಹಾರಲಿದ್ದಾರೆ. ವಿಮಾನ ಏರುವುದಕ್ಕೂ ಮುನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ವೃದ್ದಾಶ್ರಮದ ಕಾರ್ಯಾಧ್ಯಕ್ಷ ವಿಜಯ ಮೋರೆ ಮಾತನಾಡಿ, ಆಶ್ರಮದ ಯಾರೂ ವಿಮಾನ ಏರುವುದು ಬಿಡಿ, ಸಮೀಪದಿಂದ ವಿಮಾನವನ್ನೇ ನೋಡಿಲ್ಲ. ಇವರೆಲ್ಲರೂ ಮುಂಬೈ ಹೋಗಿ ತಾಜ್ ಹೋಟೆಲ್ ನಲ್ಲಿ ಎಲ್ಲರೂ ಉಪಹಾರ ಸೇವಿಸಿ ವಾಸ್ತವ್ಯ ಹೂಡಲಿದ್ದಾರೆ. ನಂತರ ಮುಂಬೈನ ಗೇಟ್ ವೇ ಆಫ್ ಇಂಡಿಯಾ, ಸಿದ್ದಿವಿನಾಯಕ ಟೆಂಪಲ್, ಸಮುದ್ರ ಸಪಾರಿ ಸೇರಿದಂತೆ ಸೀ ಲಿಂಕ್ ಬ್ರೀಡ್ಜ್, ಮಹಾರಾಷ್ಟ್ರ ವಿಧಾನಸೌಧ, ನಿಯರಮನ್ ಪಾಯಿಂಟ್ ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ವೃದ್ಧರಿಗೆ ಮುಂಬೈನ ಬೃಹತ್ ಮಾಲ್‌ನಲ್ಲಿ ಮರಾಠಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ಕಾಮಿಡಿ ನಟ ಬಹು ಕದಂ ಶಾಪಿಂಗ್ ಮಾಡಿಸಲಿದ್ದಾರೆ. ನಾಲ್ಕು ದಿನಗಳ ಕಾಲ ಮುಂಬೈ ಪ್ರವಾಸವನ್ನು ಬೆಳಗಾವಿಯ ಹಿರಿ ಜೀವಗಳು ಎಂಜಾಯ್ ಮಾಡಿ ಮುಂಬೈನಿಂದ ಬೆಳಗಾವಿಗೆ ವಾಪಸ್ ಆಗಲಿದ್ದಾರೆ. 81 ನೇ ವಯಸ್ಸಿನಲ್ಲೂ ಸಹ ನಮಗೆ ಹುರುಪಿದೆ ಜೋಶ್ ಇದೆ ಎಂದು ಪ್ಲೈಟ್ ಹತ್ತುವ ಮೊದಲು ವೃದ್ದೆಯೊಬ್ಬರು ಖುಷಿ ಹಂಚಿಕೊಂಡಿದ್ದಾರೆ.