
ನವದೆಹಲಿ (ಫೆ.20): ಬೆಂಗಳೂರು ಮತ್ತು ದೆಹಲಿ ಪ್ರಯಾಣಿಕರು ಡಿಜಿ-ಯಾತ್ರಾ ಅಪ್ಲಿಕೇಶನ್‌ನ ಲಾಭವನ್ನು ಬಳಸಿಕೊಳ್ಳುವ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಗಮನಾರ್ಹ ಸಂಖ್ಯೆಯ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ಅನುಭವವನ್ನು ಸುಗಮಗೊಳಿಸಿದ್ದಾರೆ. ಡಿಸೆಂಬರ್ 2022 ರಲ್ಲಿ ಪರಿಚಯಿಸಲಾದ ಈ ನವೀನ ಫೇಸ್-ಸ್ಕ್ಯಾನ್ ಬಯೋಮೆಟ್ರಿಕ್ ತಂತ್ರಜ್ಞಾನವನ್ನು ಈಗಾಗಲೇ ಈ ಎರಡು ನಗರದ ಜನ ವ್ಯಾಪಕವಾಗಿ ಬಳಸಿಕೊಂಡಿದ್ದಾರೆ. ಡಿಜಿ ಯಾತ್ರಾ ಅಪ್ಲಿಕೇಶನ್ ಪ್ರಾರಂಭವಾದ ಕೇವಲ 14 ತಿಂಗಳ ಒಳಗಾಗಿ 1.4 ಕೋಟಿ ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಭಾರತದ ತಾಂತ್ರಿಕ ಪ್ರಗತಿಯ ಪುರಾವೆ ಎನಿಸಿಕೊಂಡಿರುವ ರೀತಿಯಲ್ಲಿ ಅಭಿವೃದ್ಧಿಯಾಗಿರುವ ಡಿಜಿ-ಯಾತ್ರಾ ಅಪ್ಲಿಕೇಶನ್, ದೇಶಾದ್ಯಂತ ಲಕ್ಷಾಂತರ ಜನರ ಪ್ರಯಾಣದ ದಿನಚರಿಯಲ್ಲಿ ವ್ಯಾಪಕ ಪ್ರಶಂಸೆ ಗಳಿಸಿದೆ. ಭಾರತದಾದ್ಯಂತ 13 ವಿಮಾನ ನಿಲ್ದಾಣಗಳಲ್ಲಿ ಪ್ರಸ್ತುತ ಇದು ಲಭ್ಯವಿದೆ. ಡಿಜಿ-ಯಾತ್ರಾ ಅಪ್ಲಿಕೇಶನ್ ಸ್ಥಿರವಾಗಿ ಜನರ ನಡುವೆ ಪ್ರಚಾರವಾಗುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಮೂಲಗಳ ಪ್ರಕಾರ, ದೆಹಲಿ ಮತ್ತು ಬೆಂಗಳೂರಿನಲ್ಲಿ ಅತಿಹೆಚ್ಚಿ ಡಿಜಿ-ಯಾತ್ರಾ ಬಳಕೆದಾರರನ್ನು ಹೊಂದಿವೆ. ಅಪ್ಲಿಕೇಶನ್‌ನ ಜನಪ್ರಿಯತೆ ಹಾಗೂ ಇದು ಜನರ ಉಪಯೋಗಕ್ಕೆ ಪರಿಣಾಮಕಾರಿಗಯಾಗಿದೆ ಎನ್ನುವುದನ್ನು ಸಾಬೀತು ಮಾಡಿದೆ.
ಆರಂಭದಲ್ಲಿ ಡಿಸೆಂಬರ್ 2022 ರಲ್ಲಿ ದೆಹಲಿ, ಬೆಂಗಳೂರು ಮತ್ತು ವಾರಣಾಸಿಯಲ್ಲಿ ಇದನ್ನು ಪ್ರಾರಂಭ ಮಾಡಲಾಗಿತ್ತು. ಡಿಜಿ-ಯಾತ್ರಾ ಅಪ್ಲಿಕೇಶನ್‌ನ ವ್ಯಾಪ್ತಿಯು ವಿಜಯವಾಡ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆಯಲ್ಲಿ 2023ರ ಏಪ್ರಿಲ್‌ನಲ್ಲಿ ವಿಸ್ತರಣೆ ಮಾಡಲಾಗಿತ್ತು. ಮುಂಬೈ ವಿಮಾನ ನಿಲ್ದಾಣವು ಆಗಸ್ಟ್ 2023 ರಲ್ಲಿ ಟರ್ಮಿನಲ್ 2 ನಲ್ಲಿ ಮಾತ್ರ ಈ ಅಪ್ಲಿಕೇಶನ್‌ಗೆ ಅವಕಾಶ ನೀಡಿದೆ. ಫೆಬ್ರವರಿ 11ರಂದು ಮುಂಬೈ T2 ನಲ್ಲಿ ಸುಮಾರು 3 ಲಕ್ಷ ಬಳಕೆದಾರರನ್ನು ಡಿಜಿ ಯಾತ್ರಾ ದಾಖಲೆ ಮಾಡಿದೆ. ಮೊದಲ ವರ್ಷದ ಕೊನೆಯಲ್ಲಿ ಅಚ್ಚರಿ ಎನ್ನುವಂತೆ 1.1 ಕೋಟಿ ಪ್ರಯಾಣಿಕರು ಭಾರತದಾದ್ಯಂತ ಡಿಜಿ-ಯಾತ್ರಾ ಅಪ್ಲಿಕೇಶನ್ ಅನ್ನು ಪಡೆದುಕೊಂಡಿದ್ದಾರೆ, ವಿಮಾನ ನಿಲ್ದಾಣಗಳ ಮೂಲಕ ಇದು ನೀಡುವ ತಡೆರಹಿತ ಪ್ರಯಾಣದ ಅನುಭವವನ್ನು ಆನಂದಿಸಿದ್ದಾರೆ.
ವೆಂಚರ್ ಕ್ಯಾಪಿಟಲ್ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ತೇಜ್ ಕಪೂರ್ ಈ ಕುರಿತಾಗಿ ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಡಿಜಿ-ಯಾತ್ರಾ ಗೇಟ್ ತನ್ನ ಅಮೂಲ್ಯ ಸಮಯವನ್ನು ಹೇಗೆ ಉಳಿಸಿತು ಎಂಬುದನ್ನು ಅವರು ಬರೆದುಕೊಂಡಿದ್ದಾರೆ. ಇದೇ ರೀತಿಯ ಭಾವನೆಗಳನ್ನು ತಂತ್ರಜ್ಞರಾದ ಆಶಿಶ್ ನಥಾನಿ ಅವರು ಹಂಚಿಕೊಂಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಪ್ರತಿ ಡಿಜಿ-ಯಾತ್ರಾ ಪ್ರಯಾಣಿಕರಿಗೆ ಗೇಟ್‌ನಲ್ಲಿ ಪ್ರಕ್ರಿಯೆಯ ಸಮಯ ಕೇವಲ 3 ಸೆಕೆಂಡುಗಳಾಗಿದೆ. ಈ ತ್ವರಿತ ಪ್ರಕ್ರಿಯೆಯು ಬೋರ್ಡಿಂಗ್ ಪಾಸ್‌ನಲ್ಲಿ ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವುದು, ಮುಖ ಗುರುತಿಸುವಿಕೆ ಮತ್ತು ಇ-ಗೇಟ್ ಮೂಲಕ ತಡೆರಹಿತ ಪ್ರವೇಶವನ್ನು ಒಳಗೊಂಡಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.