ಬೆಂಗಳೂರು TO ತುಮಕೂರು: ಐಟಿ ಉದ್ಯೋಗಿಗಳಿಗೆ BMTC ಭರ್ಜರಿ ಗಿಫ್ಟ್​; 101 ಕಿ.ಮೀ ಬಸ್​ ಸೇವೆ ಹೀಗಿದೆ

Published : Jul 14, 2026, 07:46 PM IST
BMTC

ಸಾರಾಂಶ

ತುಮಕೂರಿನಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ಪ್ರಯಾಣಿಸುವ ಐಟಿ ಉದ್ಯೋಗಿಗಳಿಗಾಗಿ ಬಿಎಂಟಿಸಿ ಹೊಸ ವಿಸ್ತಾರ ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ನೈಸ್ ರಸ್ತೆ ಮೂಲಕ 101 ಕಿ.ಮೀ ಸಂಚರಿಸುವ ಈ ನೇರ ಸೇವೆಯಿಂದಾಗಿ ಪ್ರಯಾಣಿಕರ ಸುಮಾರು ಒಂದು ಗಂಟೆ ಸಮಯ ಉಳಿತಾಯವಾಗಲಿದ್ದು, ಇದು ಬಿಎಂಟಿಸಿಯ ಅತಿ ಉದ್ದದ ಮಾರ್ಗವಾಗಿದೆ.

ಬೆಂಗಳೂರು: ಬೆಂಗಳೂರಿನ ಐಟಿ ಹಬ್​ ಎಂದೇ ಫೇಮಸ್​ ಆಗಿರೋ ಎಲೆಕ್ಟ್ರಾನಿಕ್​ ಸಿಟಿಗೆ ಬೇರೆ ಬೇರೆ ಊರುಗಳಿಂದ ಬರುವ ಉದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲಿಯೂ ತುಮಕೂರಿನಿಂದ ಪ್ರತಿನಿತ್ಯವೂ ಓಡಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ತುಮಕೂರು ಮತ್ತು ಬೆಂಗಳೂರಿಗೆ ರೈಲಿನ ಮೂಲಕ ಬರುವವರು ಹೆಚ್ಚಾಗಿದ್ದರೂ ಎಲೆಕ್ಟ್ರಾನಿಕ್​ ಸಿಟಿ ತಲುಪಲು ಮತ್ತಷ್ಟು ಸಾಹಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಇಲ್ಲಿಯ ಉದ್ಯೋಗಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಸಾಫ್ಟ್​ವೇರ್​ ಉದ್ಯೋಗಿಗಳಿಗೆ ಈಗ ಬಿಎಂಟಿಸಿ ಭರ್ಜರಿ ಗುಡ್​​ನ್ಯೂಸ್​ ಕೊಟ್ಟಿದೆ. ತುಮಕೂರಿನಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ನೈಸ್ ರಸ್ತೆಯ ಮುಖಾಂತರ ವಿಸ್ತಾರ ಎಸಿ ಬಸ್ ಸೇವೆ ಆರಂಭಿಸಲಾಗಿದೆ. ಇದು 101 ಕಿಲೋಮಿಟರ್​ಗಳಷ್ಟು ಸಂಚರಿಸಲು ಬಿಎಂಟಿಸಿ ವ್ಯವಸ್ಥೆ ಮಾಡಿದೆ.

ತುಮಕೂರಿನಿಂದ ಬೆಂಗಳೂರು ಐಟಿ ಹಬ್ ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ ಸುಮಾರು 101 ಕಿಲೋ ಮೀಟರ್ ದೂರವಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಡೆಸುತ್ತಿರುವ ಬಸ್​ ಸರ್ವೀಸ್​ಗಳಲ್ಲಿ ಈ ಮಾರ್ಗವೇ ಅತೀ ಉದ್ದದ ಮಾರ್ಗವಾಗಿದೆ. ಕರ್ನಾಟಕ ಸರ್ಕಾರ ಬಿಎಂಟಿಸಿಗೆ ಗ್ರೇಟರ್ ಬೆಂಗಳೂರು ಗಡಿದಾಟಿ ಸುಮಾರು 40 ಕಿಲೋ ಮೀಟರ್ ದೂರದ ವರೆಗೂ ವಿಸ್ತಾರ ಎಸಿ ಬಸ್ ಓಡಿಸಲು ಅನುಮತಿ ನೀಡಲಾಗಿದೆ.

ಅತಿ ಉದ್ದನೆಯ ಸೇವೆ

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಈ ಬಸ್​ ತುಮಕೂರಿನಿಂದ ಬೆಳಿಗ್ಗೆ 7.45ಕ್ಕೆ ಹೊರಟು ಬೆಳಿಗ್ಗೆ 9.45ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ತಲುಪುತ್ತದೆ. ಸಾಯಂಕಾಲ 5.45ಕ್ಕೆ ಎಲೆಕ್ಟ್ರಾನಿಕ್ ಸಿಟಿಯಿಂದ ಹೊರಡುವ ಬಸ್ ರಾತ್ರಿ 9ರ ವೇಳೆಗೆ ತುಮಕೂರು ತಲುಪಲಿದೆ. ಈ ಮಾರ್ಗವು ನೆಲಮಂಗಲ, ಮಾದಾವರ ಮೂಲಕ ನೈಸ್ ರಸ್ತೆಯನ್ನು ಸೇರುತ್ತದೆ. ಏಕಮುಖ ಸಂಚಾರದ ಪ್ರಯಾಣ ದರ 200 ನಿಗದಿಪಡಿಸಲಾಗಿದೆ. ಹೊಸ ಬಸ್ ನೇರವಾದ ಸೇವೆಯಿಂದ ಪ್ರತಿದಿನ ಪ್ರಯಾಣ ಮಾಡುವವರ ಸುಮಾರು 45 ನಿಮಿಷದಿಂದ ಒಂದು ಗಂಟೆಯವರಗೆ ಸಮಯ ಉಳಿಯಲಿದೆ ಎನ್ನಲಾಗಿದೆ.

ಎಲ್ಲೆಲ್ಲಿ ಸ್ಟಾಪ್​

ತುಮಕೂರು ಎಲೆಕ್ಟ್ರಾನಿಕ್ ಮಾರ್ಗವಾಗಿ ಸಂಚರಿಸುವ ಈ ಬಸ್​, ತುಮಕೂರು, ನೆಲಮಂಗಲ, ಮಾದವರ, ನೈಸ್ ರೋಡ್​ನಲ್ಲಿ ನಿಲ್ಲಲಿದೆ ಎಂದು ಬಿಎಂಟಿಸಿ ಮುಖ್ಯ ಟ್ರಾಫಿಕ್ ಮ್ಯಾನೇಜರ್ ಜಿಟಿ ಪ್ರಭಾಕರ್ ರೆಡ್​ಡಿ ತಿಳಿಸಿದ್ದಾರೆ. ತುಮಕೂರು ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ನಡುವಿನ ಪ್ರಯಾಣಿಕರ ದಟ್ಟಣೆ ಪ್ರಸ್ತುತ ತುಂಬಾ ಉತ್ತಮವಾಗಿದೆ. ಇದಕ್ಕೂ ಮುನ್ನ ತುಮಕೂರು ಮತ್ತು ಎಲೆಕ್ಟ್ರಾನಿಕ್ ಸಿಟಿ ನಡುವೆ ಪ್ರಯಾಣಿಸಲು ಹಲವು ಬಸ್ ಗಳನ್ನು ಬದಲಾವಣೆ ಮಾಡಬೇಕಿತ್ತು. ಆದರೆ ಈಗ ಒಂದೇ ಬಸ್ ಮೂಲಕ ಪ್ರಯಾಣ ಮಾಡುವುದರಿಂದ ಸುಮಾರು 45 ನಿಮಿಷದಿಂದ ಒಂದು ಗಂಟೆ ಸಮಯ ಉಳಿಯುತ್ತದೆ. ಈ ಹಿಂದೆ ನೆಲಮಂಗಲ ಮತ್ತು ಹೊಸಕೋಟೆ ನಡುವೆ 80 ಕಿ.ಮೀ ಮಾರ್ಗವನ್ನು ಬಿಎಂಟಿಸಿ ಆರಂಭ ಮಾಡಿತ್ತು ಎಂದು ಅವರು ವಿವರಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚೆನ್ನಾಗಿದೆ ಅಂತ ರೈಲಿನಲ್ಲಿ ಸಿಗೋ ಬೆಡ್ ಶೀಟ್ ಬ್ಯಾಗಿಗೆ ಹಾಕಿಕೊಳ್ತೀರಾ? ನಿಮ್ಮ ತಪ್ಪು, ಯಾರಿಗೋ ಶಿಕ್ಷೆ !
ದಕ್ಷಿಣ ಭಾರತದ 'ಕಾಶ್ಮೀರ' ಎಂದು ಕರೆಯಲ್ಪಡುವ ಸುಂದರ ತಾಣ ಯಾವುದು ಗೊತ್ತಾ?