ಮಕ್ಕಳ ರಜೆ ಹತ್ತಿರ ಬರ್ತಿದೆ. ಬೇಸಿಗೆಕಾಲ ಶುರುವಾಗ್ತಿದೆ. ರಜೆಯಲ್ಲಿ ಮಜಾ ಮಾಡ್ಬೇಕೆಂದ್ರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ರಜೆಯಲ್ಲಿ ನೀವು ಹಾಸಿಗೆ ಹಿಡಿಬಾರದು ಅಂದ್ರೆ ಏನೆಲ್ಲ ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ
ಪ್ರವಾಸಕ್ಕೆ ಹೋಗೋಕೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಗೆ ಪರೀಕ್ಷೆ ಮುಗಿಯುತ್ತಿದೆ. ಶಾಲೆಗಳಿಗೆ ರಜೆ ಇರುವ ಕಾರಣ ಬಹುತೇಕ ಪಾಲಕರು, ಮಕ್ಕಳ ಜೊತೆ ಪ್ರವಾಸಕ್ಕೆ ಹೋಗುವ ಪ್ಲಾನ್ ಈಗಿನಿಂದ್ಲೇ ಮಾಡ್ತಿದ್ದಾರೆ. ದೂರದ ಊರಿಗೆ ಹೋಗಲು ಸಾಧ್ಯವಿಲ್ಲ ಎನ್ನುವವರು ವಿಹಾರಕ್ಕೆ ಹೋಗಿಯಾದ್ರೂ ಮೋಜು ಮಾಡ್ತಾರೆ. ಭಾರತ (India) ದ ಬಹುತೇಕ ಎಲ್ಲಾ ಭಾಗಗಳಲ್ಲಿ ಬೇಸಿಗೆ ಶುರುವಾಗ್ತಿದೆ. ಬೇಸಿಗೆ (Summer) ಯಲ್ಲೇ ಮಕ್ಕಳಿಗೆ ರಜೆ (Vacation ) ಶುರುವಾಗೋದು. ಬೇಸಿಗೆಯಲ್ಲಿಯೇ ಅನೇಕ ಆರೋಗ್ಯ ಸಮಸ್ಯೆ ಕಾಡೋದು. ಮನೆಯಲ್ಲಿರುವವರು ಕೂಡ ಬೇಸಿಗೆ ಋತುವಿನಲ್ಲಿ ಅನಾರೋಗ್ಯಕ್ಕೆ ಒಳಗಾಗ್ತಾರೆ. ಇನ್ನು ಊರು ಸುತ್ತುವವರ ಸ್ಥಿತಿಯನ್ನು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಸಾಮಾನ್ಯವಾಗಿ ರಜೆಯಲ್ಲಿ ಪ್ರವಾಸ (Trip) ಕ್ಕೆ ಹೋಗುವ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸ್ತೇವೆ. ಸರಿಯಾಗಿ ನೀರು ಕುಡಿಯೋದಿಲ್ಲ, ಬಿಸಿಲಿನಲ್ಲಿ ತಂಪಾದ ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡ್ತೇವೆ. ಐಸ್ ಕ್ರೀಂ ತಿನ್ನುತ್ತೇವೆ. ಇದೆಲ್ಲವೂ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ರಜಾದಿನಗಳಲ್ಲಿ, ಪ್ರವಾಸದ ವೇಳೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಆರೋಗ್ಯವಾಗಿರಬೇಕೆಂದು ಬಯಸಿದ್ರೆ ಕೆಲವು ಆಯುರ್ವೇದ ಸಲಹೆಗಳನ್ನು ಅನುಸರಿಸಬೇಕು. ನಾವಿಂದು ನಿಮ್ಮ ಆರೋಗ್ಯ ಕಾಪಾಡಲು ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
Health Tips : ಮನೆ ಕೆಲಸ ಮಾಡಿದರೆ ಸಾಕು, ಮಹಿಳೆಯರು ಫಿಟ್ ಆಗಿರ್ತಾರೆ ನೋಡಿ
ಭಾರವಾದ ಆಹಾರವನ್ನು ಸೇವಿಸಬೇಡಿ: ಆರೋಗ್ಯಕರವಾಗಿರಲು ಬೇಸಿಗೆ ಕಾಲದಲ್ಲಿ ಅಥವಾ ಪ್ರವಾಸದ ಸಮಯದಲ್ಲಿ ಭಾರೀ ಆಹಾರವನ್ನು ಸೇವಿಸಬೇಡಿ. ನೀವು ಮನೆಯಲ್ಲಿದ್ದರೂ ಆಹಾರಕ್ಕೆ ಹೆಚ್ಚು ಗಮನ ನೀಡಿ. ನೀವು ಪ್ರವಾಸದ ಸ್ಥಳಕ್ಕೆ ಭೇಟಿ ನೀಡುವ ವೇಳೆಯೂ ಲಘು ಆಹಾರವನ್ನು ಮಾತ್ರ ಸೇವಿಸಬೇಕು. ಮೊದಲೇ ಹೇಳಿದಂತೆ ಪ್ರಯಾಣದ ಸಮಯದಲ್ಲಿ ಹೆಚ್ಚು ನೀರು ಸೇವನೆ ಮಾಡಿ. ನೀವು ತಣ್ಣನೆಯ ಐಸ್ ನೀರನ್ನು ಸೇವಿಸಬೇಡಿ. ಕೋಲ್ಡ್ ಡ್ರಿಂಕ್ಸ್ ಕುಡಿಯಬೇಡಿ. ಆದಷ್ಟು ತಾಜಾ ಹಣ್ಣಿನ ಜ್ಯೂಸ್ ಸೇವನೆ ಮಾಡಿ.
ಈ ತಿಂಡಿಗಳಿಂದ ದೂರವಿರಿ: ಪ್ರವಾಸಕ್ಕೆ ಹೋಗ್ತಿವಿ ಎಂದಾಗ ನಮ್ಮ ಬ್ಯಾಗ್ ನಲ್ಲಿ ಒಂದಿಷ್ಟು ತಿಂಡಿ ಸೇರಿರುತ್ತದೆ. ನೀವು ಮಕ್ಕಳ ಜೊತೆ ಪ್ರವಾಸಕ್ಕೆ ಪ್ಲಾನ್ ಮಾಡಿದ್ದರೆ ಬ್ಯಾಗ್ ಗೆ ಹಾಕುವ ತಿಂಡಿ ಬಗ್ಗೆ ಗಮನವಿರಲಿ. ನೀವು ಕರಿದ ಚಿಪ್ಸ್, ಕುಕೀಸ್, ಕಡಲೆಕಾಯಿ ಮತ್ತು ಅಧಿಕ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ಸೇವಿಸಬೇಡಿ. ನೀವು ಪ್ರಯಾಣದ ವೇಳೆ ನಿಂಬೆ ಹಣ್ಣಿನ ಜ್ಯೂಸ್ ಅಥವಾ ಮಸಾಲಾ ಮಜ್ಜಿಗೆ ತೆಗೆದುಕೊಂಡು ಹೋಗಿ. ಹಣ್ಣುಗಳನ್ನು ನೀವು ಕೊಂಡೊಯ್ಯಬಹುದು.
ಬೆಳಗ್ಗೆ ಎದ್ದ ಮೇಲೆ ಮತ್ತೆ ಮಲಗಬೇಕೆನಿಸಿದರೆ, ಈ ರೋಗವಿರಬಹುದು!
ಮದ್ಯಪಾನ ಮಾಡುವ ಸಾಹಸ ಬೇಡ: ಪ್ರವಾಸ ಅಂದ್ರೆ ಮೋಜು, ಮಸ್ತಿ ಇರ್ಲೇಬೇಕು. ಕೆಲವರಿಗೆ ಮದ್ಯಪಾನವೇ ಹೆಚ್ಚು ಮೋಜು ನೀಡುತ್ತದೆ. ಹಾಗಾಗಿ ತಮ್ಮೊಂದಿಗೆ ಮದ್ಯವನ್ನು ತೆಗೆದುಕೊಂಡು ಹೋಗ್ತಾರೆ. ಬೇಸಿಗೆ ಉರಿಯಲ್ಲಿ, ಪ್ರವಾಸದ ವೇಳೆ ಮದ್ಯಪಾನ ಮಾಡುವುದು ನಮ್ಮ ದೇಹಕ್ಕೆ ನಷ್ಟವನ್ನುಂಟು ಮಾಡುತ್ತದೆ. ಮಕ್ಕಳ ಜೊತೆ ನೀವು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಮದ್ಯಪಾನವನ್ನು ಅಪ್ಪಿತಪ್ಪಿಯೂ ಮಾಡ್ಬೇಡಿ. ಇದು ಮಕ್ಕಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಅವರು ದಾರಿತಪ್ಪಲು ಕಾರಣವಾಗುತ್ತದೆ.
ವ್ಯಾಯಾಮ ಬಿಡಬೇಡಿ: ವ್ಯಾಯಾಮ ಮಾಡಲು ಯಾವುದೇ ಸೀಸನ್ ಇಲ್ಲ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ಸಮಯದಲ್ಲಿ ವ್ಯಾಯಾಮ ಮಾಡುವುದು ಬಹಳ ಮುಖ್ಯ. ನೀವು ಮನೆಯಲ್ಲಿ ಅಥವಾ ಮಕ್ಕಳೊಂದಿಗೆ ವಿಹಾರಕ್ಕೆ ಹೋಗುತ್ತಿದ್ದರೆ ಬೆಳಿಗ್ಗೆ ಅಥವಾ ಸಂಜೆ ಸ್ವಲ್ಪ ಸಮಯ ವ್ಯಾಯಾಮ ಮಾಡಿ. ವ್ಯಾಯಾಮವು ಶುಗರ್ ಲೆವೆಲ್ ಜೊತೆಗೆ ಅನೇಕ ರೋಗಗಳನ್ನು ನಿಮ್ಮಿಂದ ದೂರವಿಡುತ್ತದೆ. ಮಕ್ಕಳಿಗೂ ನೀವು ದೈಹಿಕ ವ್ಯಾಯಾಮ ನೀಡುವುದು ಮುಖ್ಯ.