Viral Video : ಚಾಲಕನಿಗೆ ರಾತ್ರಿ ರೈಲ್ವೆ ಟ್ರ್ಯಾಕ್ ಹೇಗೆ ಕಾಣುತ್ತೆ? ವೈರಲ್ ವಿಡಿಯೋಗೆ ಕಮೆಂಟ್ ಮಾಡಿದ ಎಲಾನ್ ಮಸ್ಕ್

By Suvarna News  |  First Published Mar 9, 2023, 5:11 PM IST

ರೈಲು, ವಿಮಾನ, ಬಸ್ ಹೀಗೆ ಬೇರೆ ಬೇರೆ ಪ್ರಯಾಣದ ಮಜ ಭಿನ್ನವಾಗಿರುತ್ತದೆ. ಅನೇಕರು ಪ್ರಯಾಣವನ್ನು ಎಂಜಾಯ್ ಮಾಡ್ತಾರೆ. ಹೊಸ ವಿಷ್ಯಗಳನ್ನು ತಿಳಿಯುವ ಪ್ರಯತ್ನ ಮಾಡ್ತಾರೆ. ಈ ವ್ಯಕ್ತಿಯೊಬ್ಬ, ರಾತ್ರಿ ರೈಲು ಚಾಲಕನಿಗೆ ಟ್ರ್ಯಾಕ್ ಹೇಗೆ ಕಾಣುತ್ತೆ ಎಂಬುದನ್ನು ನಮಗೆ ತೋರಿಸುವ ಪ್ರಯತ್ನ ಮಾಡಿದ್ದಾನೆ.
 


ರೈಲಿನಲ್ಲಿ ಪ್ರಯಾಣ ಬೆಳೆಸುವುದು ತುಂಬಾ ಆರಾಮದಾಯಕ. ಹಾಗೆಯೇ ಪ್ರಕೃತಿ ಸೌಂದರ್ಯವನ್ನು ಸವಿಯಲು ಅವಕಾಶವಿರುತ್ತದೆ. ಕೆಲ ಪ್ರದೇಶಗಳಿಗೆ ರೈಲಿನಲ್ಲಿ ಪ್ರಯಾಣ ಬೆಳೆಸುವಂತೆ ಸಲಹೆ ನೀಡಲಾಗುತ್ತದೆ. ಅಲ್ಲಿನ ಪ್ರಕೃತಿಯನ್ನು ರೈಲು ಪ್ರಯಾಣದ ವೇಳೆ ಸವಿಯಬಹುದು ಎಂಬುದು ಇದ್ರ ಉದ್ದೇಶ. 

ರೈಲಿ (Train) ನಲ್ಲಿ ಪ್ರಯಾಣ ಬೆಳೆಸುವ ನಾವು ನೀವೆಲ್ಲ ರಾತ್ರಿ (Night ) ಪ್ರಯಾಣದ ವೇಳೆ ಮಲಗೋದು ಬಿಟ್ಟು ಇನ್ನೇನು ಮಾಡಲು ಸಾಧ್ಯ. ಆದ್ರೆ ರೈಲಿನ ಚಾಲಕ (Driver) ಹೀಗೆ ಮಾಡೋಕೆ ಸಾಧ್ಯವಿಲ್ಲ. ಆತನ ಸ್ವಲ್ಪ ಕಣ್ಣು ಮುಚ್ಚಿದ್ರೂ ಅಪಾಯವೇ. ಹಾಗಾಗಿ ಇಡೀ ರಾತ್ರಿ ಆತ ಕಣ್ಣು ಬಿಟ್ಕೊಂಡು ರೈಲಿನಲ್ಲಿ ಕುಳಿತುಕೊಳ್ಬೇಕು. ನಾವೆಲ್ಲ ರೈಲಿನ ಅಕ್ಕಪಕ್ಕ ಏನಿದೆ ಎನ್ನುವುದನ್ನು ನೋಡ್ತೇವೆ. ಆದ್ರೆ ಚಾಲಕ, ರೈಲ್ವೆ ಟ್ರ್ಯಾಕ್ ನೋಡ್ತಾನೆ. ಹಗಲಿನಲ್ಲಿ ಟ್ರೈಕ್ ಹೇಗೆ ಕಾಣುತ್ತೆ ಎಂಬುದನ್ನು ನಾವು ಊಹಿಸಬಹುದು. ಆದ್ರೆ ರಾತ್ರಿ ರೈಲ್ವೆ ಟ್ರ್ಯಾಕ್ ಹೇಗಿರುತ್ತೆ ಎಂಬುದನ್ನು ಕಲ್ಪಿಸಿಕೊಳ್ಳೋದು ಕಷ್ಟ. ಹೌದಲ್ವಾ? ರೈಲ್ವೆ ಟ್ರ್ಯಾಕ್, ರೈಲು ಚಾಲಕನ ಕಣ್ಣಿಗೆ ಹೇಗೆ ಕಾಣುತ್ತೆ ಎನ್ನುವ ಪ್ರಶ್ನೆ ಈಗ ನಿಮಗೂ ಎದ್ದಿರಬೇಕು. ಚಿಂತಿಸ್ಬೇಡಿ. ವ್ಯಕ್ತಿಯೊಬ್ಬರು ಅದ್ರ ವಿಡಿಯೋ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ಸ್ ಬಂದಿದೆ.

Tap to resize

Latest Videos

ರೈಲ್ವೆ ಚಾಲಕನಿಗೆ ರಾತ್ರಿ ಟ್ರ್ಯಾಕ್ ಹೇಗೆ ಕಾಣುತ್ತೆ ಗೊತ್ತಾ? : ಟ್ವಿಟರ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನ ಸಾವಿರಾರು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಅದ್ರಲ್ಲಿ ಕೆಲವೇ ಕೆಲವು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ವೆ. ಜನರ ಗಮನ ಸೆಳೆಯಲು ಯಶಸ್ವಿಯಾಗುತ್ವೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಸ್ಪೇಸ್ ಎಕ್ಸ್ ನ ಸಂಸ್ಥಾಪಕ, ಕಾರು ಕಂಪನಿ ಟೆಸ್ಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಟ್ವಿಟರ್ (Twitter) ಸಿಇಒ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಎಲಾನ್ ಮಸ್ಕ್ ಕಮೆಂಟ್ ಮಾಡ್ತಿದ್ದಂತೆ ವಿಡಿಯೋ ಮತ್ತಷ್ಟು ವೈರಲ್ ಆಗಿದೆ.  ಅಷ್ಟಕ್ಕೂ ಈ ವಿಡಿಯೋದಲ್ಲಿ ರೈಲು ಚಾಲಕನ ಕಣ್ಣಿಗೆ ರೈಲ್ವೆ ಟ್ರ್ಯಾಕ್ ಹೇಗೆ ಕಾಣುತ್ತೆ ಎಂಬುದರ ವಿಡಿಯೋ ಮಾಡಲಾಗಿದೆ. ವಾವ್ ಟೆರಿಫೈಯಿಂಗ್ ಹೆಸರಿನ ಟ್ವಿಟರ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಟ್ರೈನ್ ಡ್ರೈವರ್ ವ್ಯೂ ಎಟ್ ನೈಟ್ ಎಂದು ಶೀರ್ಷಿಕೆ ನೀಡಲಾಗಿದೆ. ಚಾಲಕನ ಸೀಟಿನ ಮುಂಭಾಗದ ನೋಟವನ್ನು ವೀಡಿಯೊದಲ್ಲಿ ತೋರಿಸಲಾಗಿದ್ದು, ಇದು ಆಕರ್ಷಕ ಹಾಗೂ ಭಯಾನಕವಾಗಿದೆ ಎಂದ್ರೆ ತಪ್ಪಾಗಲಾರದು. 

ಟ್ವಿಟರ್ ಸಿಇಒ ಎಲಾನ್ ಮಸ್ಕ್ ಪ್ರತಿಕ್ರಿಯೆ : ಈ ವಿಡಿಯೋಕ್ಕೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಅದ್ರಲ್ಲಿ ಎಲಾನ್ ಮಸ್ಕ್ ಕೂಡ ಸೇರಿದ್ದಾರೆ. Intense. Not like you have a lot of room to maneuver ಎಂದು ಎಲಾನ್ ಮಸ್ಕ್ ಕಮೆಂಟ್ ಮಾಡಿದ್ದಾರೆ.  ಎಲೋನ್ ಮಸ್ಕ್ ಅವರ ಕಾಮೆಂಟ್ ತ್ವರಿತವಾಗಿ ವೈರಲ್ ಆಗಿದೆ. ಎಲಾನ್ ಮಸ್ಕ್ ಕಮೆಂಟ್ ಮಾಡಿದ ನಂತ್ರ ವೀಕ್ಷಣೆ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಈ ವೀಡಿಯೊಕ್ಕೆ ಇಲ್ಲಿಯವರೆಗೆ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ ಸಿಕ್ಕಿದೆ.

ಬಹುಶಃ ನಾನು ಭಾರೀ ಹಿಮಪಾತದಲ್ಲಿ ಅತಿ ವೇಗದಲ್ಲಿ ಓಡ್ತಿರುವ ರೈಲಿನಲ್ಲಿರುವ ಚಾಲಕನ ದೃಷ್ಟಿಯನ್ನು ನೋಡುತ್ತಿದ್ದೇನೆ ಎಂದು ಒಬ್ಬ ಟ್ವಿಟ್ಟರ್ ಬಳಕೆದಾರರು ಬರೆದಿದ್ದಾನೆ. ಈ ದೃಶ್ಯ ಒಂದೇ ಸಮಯದಲ್ಲಿ ಸುಂದರವಾಗಿ ಮತ್ತು ಭಯಾನಕವಾಗಿ ಕಾಣುತ್ತದೆ ಎಂದು ಬರೆದಿದ್ದಾನೆ. ಮೂರನೆಯ ಬಳಕೆದಾರ ಇದನ್ನು ಹುಚ್ಚು ಎಂದು ಬರೆದರೆ, ನಾಲ್ಕನೆಯವನು  ಇದು ತುಂಬಾ ಭಯಾನಕ ದೃಶ್ಯವಾಗಿದೆ ಎಂದು ಬರೆದಿದ್ದಾನೆ.
 

Train drivers view at night. pic.twitter.com/axBkW6PXzg

— Wow Terrifying (@WowTerrifying)
click me!