ಪ್ರಿವೆಡ್ಡಿಂಗ್‌ಗಾಗಿ ಇಟಲಿಯ ಒಂದಿಡೀ ಖ್ಯಾತ ಪಟ್ಟಣವನ್ನೇ ಬುಕ್ ಮಾಡಿದ ಅಂಬಾನಿ ಕುಟುಂಬ!

By Reshma Rao  |  First Published Jun 5, 2024, 2:37 PM IST

ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಎರಡನೇ ವಿವಾಹಪೂರ್ವ ಆಚರಣೆಗಳು ಇಟಲಿಯಲ್ಲಿ ಕ್ರೂಸ್‌ನಲ್ಲಿ ನಡೆದಿವೆ. ಈ ಸಮಾರಂಭಕ್ಕಾಗಿ ಅಂಬಾನಿ ಕುಟುಂಬವು ಒಂದು ದಿನ ಇಡೀ ಪಟ್ಟಣವನ್ನೇ ಬುಕ್ ಮಾಡಿದ್ದಾರೆ!


ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಪೂರ್ವ ಆಚರಣೆ ಇದೀಗ ಎರಡನೇ ಬಾರಿ ಯೂರೋಪ್‌ನಲ್ಲಿ ನಡೆದಿದೆ. ಈ ಬಾರಿ ಅಂಬಾನಿ ಕುಟುಂಬವು ಫೋಟೋಗಳು,ವಿಡಿಯೋಗಳನ್ನು ಸಾಕಷ್ಟು ಖಾಸಗಿಯಾಗಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಔತಣಕ್ಕೆ ಆಹ್ವಾನಿತ ವಿವಿಐಪಿ ಗೆಸ್ಟ್‌ಗಳು ಕೂಡಾ ಅವರ ಫೋನ್ ಬಳಸದಿರುವಂತೆ ನಿಷೇಧವಿತ್ತು.

ಹೀಗಾಗಿ, ಮಾಜಿಕ ಮಾಧ್ಯಮದ ವೇದಿಕೆಗಳಲ್ಲಿ ಪ್ರಿ ವೆಡ್ಡಿಂಗ್ ಕ್ರೂಸ್ ಪಾರ್ಟಿ ಬಗ್ಗೆ ಅತಿ ಉತ್ಸುಕರಾಗಿದ್ದವರಿಗೆ ಕೊಂಚ ನಿರಾಸೆಯಾಗಿದೆ. ಎಲ್ಲೋ ಕೆಲವು ಹೆಚ್ಚು ಸ್ಪಷ್ಟತೆಯಿಲ್ಲದ ಫೋಟೋಗಳೊಂದಿಗೆ ಸಮಾಧಾನ ಪಟ್ಟುಕೊಳ್ಳುವಂತಾಗಿದೆ. 

Tap to resize

Latest Videos

ಈ ಬಾರಿ ಕ್ರೂಸ್ ಪಾರ್ಟಿಗಾಗಿ ಇಟಲಿಗೆ ಹಾರಿದ ಅಂಬಾನಿ ಕುಟುಂಬದ ಅತಿಥಿಗಳ ಪಟ್ಟಿಯಲ್ಲಿ ಶಾರುಖ್ ಖಾನ್, ಬಿಲ್ ಗೇಟ್ಸ್, ರಣವೀರ್ ಸಿಂಗ್, ರಣಬೀರ್ ಕಪೂರ್, ಜೆಫ್ ಬೆಜೋಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಶೇ.96 ಮುಸ್ಲಿಮರನ್ನೇ ಹೊಂದಿರೋ ಈ ದೇಶದಲ್ಲಿ ಹಿಜಾಬ್, ಗಡ್ಡ ಬ್ಯಾನ್!
 

ಮೂರು ದಿನಗಳ ಫೋಟೋಗಳು ಮತ್ತು ವೀಡಿಯೋಗಳು ಇನ್ನೂ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಹಣಕುತ್ತಿರುವಾಗ ನಿಜವಾಗಿಯೂ ಜನರ ಗಮನವನ್ನು ಸೆಳೆದದ್ದು ಅಂಬಾನಿಗಳು ಇಡೀ ಇಟಾಲಿಯನ್ ಗ್ರಾಮವನ್ನು ಒಂದು ದಿನದ ಪೂರ್ವ-ಮದುವೆ ಆಚರಣೆಗಳನ್ನು ಆಯೋಜಿಸಲು ಕಾಯ್ದಿರಿಸಿದ ಸುದ್ದಿ.

ಹೌದು, ಇಟಲಿಯ ಪೋರ್ಟೋಫಿನೋ ಜನಪ್ರಿಯ ಪಟ್ಟಣವಾಗಿದ್ದು, ಇದರ ವರ್ಣವಿನ್ಯಾಸದ ಮನೆಗಳಿಂದ ಹೆಸರುವಾಸಿಯಾಗಿದೆ. ಪೋರ್ಟೋಫಿನೋದ ಕಡಲತೀರದಲ್ಲಿ ನಡೆದ ಅಂಬಾನಿ ಉತ್ಸವಗಳ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುವ Instagram ನಲ್ಲಿ ಹಲವಾರು ಬಳಕೆದಾರರು 1200 ಅತಿಥಿಗಳನ್ನು ಹೋಸ್ಟ್ ಮಾಡಲು ಅಂಬಾನಿಗಳು ಒಂದು ದಿನಕ್ಕೆ ಪೋರ್ಟೋಫಿನೋವನ್ನು ಬುಕಿಂಗ್ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಅನುಷ್ಕಾ ಶರ್ಮಾಳ ಅತಿ ದೊಡ್ಡ ಹಿಟ್ ಚಿತ್ರ ಭಿಕ್ಷುಕನ ಬದುಕನ್ನೇ ಬದಲಾಯಿ ...
 

ವೀಡಿಯೊವನ್ನು ಪೋಸ್ಟ್ ಮಾಡಿದ ಬಳಕೆದಾರರು ಬರೆದಿದ್ದಾರೆ, 'ಅಂಬಾನಿಗಳು ಪೋರ್ಟೊಫಿನೊದ ಸಂಪೂರ್ಣ ಸಮುದ್ರ ತೀರವನ್ನು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳ ಅಂತಿಮ ಕಾರ್ಯಕ್ರಮ ಲಾ ಡೋಲ್ಸ್ ವೀಟಾವನ್ನು ಆಚರಿಸಲು ಕಾಯ್ದಿರಿಸಿದ್ದಾರೆ. ಇಲ್ಲಿನ ಜೀವಂತ ದಂತಕಥೆ ಆಂಡ್ರಿಯಾ ಬೊಸೆಲ್ಲಿ ಅವರು ಜನಪ್ರಿಯ ಆರ್ಕೆಸ್ಟ್ರಾವನ್ನು ಭವ್ಯವಾದ ಸಮಾರಂಭದಲ್ಲಿ ನಿರ್ವಹಿಸಿದ್ದಾರೆ. ಕಾರ್ಯಕ್ರಮದ ಉದ್ದಕ್ಕೂ ಇಡೀ ಕಡಲತೀರವು ಶಸ್ತ್ರಸಜ್ಜಿತವಾಗಿತ್ತು. ವೈಭವಯುತವಾದ ಕಾರ್ಯಕ್ರಮದಲ್ಲಿ ಒಟ್ಟು 1200 ಅತಿಥಿಗಳು ಭಾಗವಹಿಸಿದ್ದರು.'

ಇದು ನಿಜವಾಗಿ ಬುಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದು ಅಧಿಕೃತ ಮೂಲಗಳಿಂದ ಇನ್ನೂ ದೃಢೀಕರಿಸಲ್ಪಟ್ಟಿಲ್ಲ.

 

click me!