
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಸರ್ಕಾರ ಇತ್ತೀಚೆಗೆ ಯುಎಫ್ ಒ ಮತ್ತು ಏಲಿಯನ್ಸ್ ಘಟನೆಗಳನ್ನು ಪತ್ತೆ ಹಚ್ಚಲು ಹೆಚ್ಚು ಆಸಕ್ತಿ ತೋರಿದೆ. ಈ ಸಂದರ್ಭದಲ್ಲಿ, ಪ್ರಪಂಚದ ಅನೇಕ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿರುವ ಸ್ಥಳದ ಬಗ್ಗೆ ನಾವು ತಿಳಿದುಕೊಳ್ಳುತ್ತಿದ್ದೇವೆ. ಅದ್ರಲ್ಲಿ ಅಲಾಸ್ಕಾ ಟ್ರಯಾಂಗಲ್ ಕೂಡ ಸೇರಿದೆ. ಅಲಾಸ್ಕಾ ಟ್ರಯಾಂಗಲ್ ನ ರಹಸ್ಯ ಇನ್ನೂ ಬಗೆಹರಿದಿಲ್ಲ. ಇದೊಂದು ನಿಗೂಢ ಜಾಗ. ಅಲ್ಲಿ ಹಾದು ಹೋಗುವ ಯಾವುದೇ ವ್ಯಕ್ತಿ ವಾಪಸ್ ಬರೋದಿಲ್ಲ. ಆತ ಏನಾದ ಎನ್ನುವ ಸುಳಿವೂ ಜನರಿಗೆ ಸಿಗೋದಿಲ್ಲ. ಈ ಪ್ರದೇಶದಲ್ಲಿ 20,000 ಕ್ಕೂ ಹೆಚ್ಚು ಜನರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂದು ನಂಬಲಾಗಿದೆ.
ಅಲಾಸ್ಕಾ ಟ್ರಯಾಂಗಲ್ (Alaska Triangle), ಬಿಗ್‌ಫೂಟ್, ಪ್ರೇತಗಳು ಮತ್ತು ಯುಎಫ್ಓ (UFO) ಗಳ ಆಪಾದಿತ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಈ ಬಗ್ಗೆ ಆಗಾಗ ಸಂಶೋಧನೆ, ಅಧ್ಯಯನ (Study) ಗಳು ನಡೆಯುತ್ತವೇ ಇವೆ. ಆದ್ರೆ ಈವರೆಗೂ ಸರಿಯಾದ ಕಾರಣ ಸಿಕ್ಕಿಲ್ಲ.
ಕೇರಳ ಅಂದ್ರೆ ಬರೀ ಮುನ್ನಾರ್, ಅತಿರಪಳ್ಳಿ ಫಾಲ್ಸ್ ಅಲ್ಲ; ಈ ಅಡ್ವೆಂಚರ್ ಪ್ಲೇಸ್‌ಗೂ ಹೋಗ್ಬನ್ನಿ
ಅಷ್ಟಕ್ಕೂ ಅಲಾಸ್ಕಾ ತ್ರಿಕೋನದ ರಹಸ್ಯವೇನು? : ವರದಿಯೊಂದರ ಪ್ರಕಾರ, ಡಿಸ್ಕವರಿ ಚಾನೆಲ್‌ನ ಹೊಸ ಸಾಕ್ಷ್ಯಚಿತ್ರವನ್ನು ಸಿದ್ಧಪಡಿಸಿದೆ. ಅದ್ರಲ್ಲಿ ಕೆಲವು ಅತ್ಯಂತ ನಿಗೂಢ UFO ದೃಶ್ಯಗಳನ್ನು ನೋಡಿದ ಪ್ರತ್ಯಕ್ಷದರ್ಶಿಗಳನ್ನು ಸಂದರ್ಶಿಸಲಾಗಿದೆ. ಅವರಲ್ಲಿ ಒಬ್ಬರಾದ ವೆಸ್ ಸ್ಮಿತ್ ತಮ್ಮ ಅನುಭವವನ್ನು ಹೇಳಿದ್ದಾರೆ. ಯುಎಫ್ ಒ ಬಹಳ ವಿಚಿತ್ರವಾಗಿತ್ತು ಎಂದಿದ್ದಾರೆ. ಅಲ್ಲದೆ ಇದು ನನಗೆ ತಿಳಿದಿರುವ ವಿಮಾನದಂತೆ ಚಲನೆ ಹೊಂದಿರಲಿಲ್ಲ ಎಂದಿದ್ದಾರೆ. ಇಲ್ಲಿ ಕೆಲವು ತ್ರಿಕೋನ ವಸ್ತುಗಳನ್ನು ನೋಡಿದ್ದಾಗಿಯೂ ಅವರು ಹೇಳಿದ್ದಾರೆ. ವೆಸ್ ಸ್ಮಿತ್ ನೋಡಿದ ಅಪರಿಚಿತ ಹಾರುವ ವಸ್ತುಗಳು ಶಾಂತವಾಗಿದ್ದವಂತೆ. ಕಡಿಮೆ ಎತ್ತರದಲ್ಲಿ ಅವು ಹಾರಾಟ ನಡೆಸುತ್ತಿದ್ದವಂತೆ. ಆದ್ರೆ ಅವುಗಳಿಂದ ಡ್ರೋನ್ ನಲ್ಲಿ ಬಂದಂತೆ ಯಾವುದೇ ಶಬ್ಧ ಬರ್ತಿರಲಿಲ್ಲ ಎಂದಿದ್ದಾರೆ.
ಅತೀ ಹೆಚ್ಚು ಪ್ರವಾಸಿಗರ ದಟ್ಟಣೆ ಹೊಂದಿರುವ ವಿಶ್ವದ ಟಾಪ್ ದ್ವೀಪವಿದು, ನಿಮಗೂ ಟ್ರಿಪ್ ಹೋಗೋ ಪ್ಲಾನ್ ಇದೆಯಾ?
ಆಕರ್ಷಕ ದೃಶ್ಯ ನೋಡಿದ್ದ ವ್ಯಕ್ತಿ : ಸಾಕ್ಷ್ಯಚಿತ್ರದಲ್ಲಿ ಇನ್ನೊಬ್ಬ ವ್ಯಕ್ತಿ ತನ್ನ ಅನುಭವ ಹೇಳಿಕೊಂಡಿದ್ದಾನೆ. ಅಲಾಸ್ಕಾದಿಂದ 11 ಮೈಲಿ ದೂರದಲ್ಲಿ ವಾಸಿಸುವ ಮೈಕೆಲ್ ದಿಲ್ಲನ್ ನಿಗೂಢ ವಿಮಾನದ ಫೋಟೋ ಕ್ಲಿಕ್ಕಿಸಿದ್ದಾನೆ. ವಿಮಾನವು UFO ಯಂತಿದೆ ಎಂದು ಅವರು ಹೇಳಿದ್ದಾರೆ. ತಾನು ಕಂಡದ್ದು ಸಹಜ ವಿದ್ಯಮಾನವಲ್ಲ ಎಂದು ಆತ ಸ್ಪಷ್ಟವಾಗಿದೆ ಹೇಳಿದ್ದಾನೆ. ಯಾವುದೇ ಮಾನವ ದೇಹವು ಆ ವೇಗದಲ್ಲಿ ಹಾರಲು ಸಾಧ್ಯವಿಲ್ಲ ಎಂದು ಮೈಕೆಲ್ ಹೇಳಿದ್ದಾನೆ. ಯುಎಫ್ ಒ ಅಂದ್ರೆ ಹಾರುವ ತಟ್ಟೆ ಬಗ್ಗೆ ಜನರು ನೂರಾರು ವರ್ಷಗಳಿಂದ ಮಾತನಾಡ್ತಿದ್ದಾರೆ. ಈ ಬಗ್ಗೆ ಬಹಳ ಚರ್ಚೆಯಾಗುವ ಕಾರಣ, ಆಗಾಗ ಅಧ್ಯಯನ, ಸಮೀಕ್ಷೆಗಳು ನಡೆಯುತ್ತಿರುತ್ತವೆ.
1970ರಿಂದ ನಾಪತ್ತೆಯಾದ ವ್ಯಕ್ತಿಗಳೆಷ್ಟು? : ಅಲಾಸ್ಕಾ ತ್ರಿಕೋನದ ವಿಚಿತ್ರ ರಹಸ್ಯವು ಕೇವಲ ಆಕಾಶದಲ್ಲಿ ಅಸ್ತಿತ್ವದಲ್ಲಿಲ್ಲ. ದಕ್ಷಿಣದಲ್ಲಿ ಆಂಕೊರೇಜ್ ಮತ್ತು ಜುನೌದಿಂದ ಉತ್ತರ ಕರಾವಳಿಯ ಉಟ್ಕಿಯಾಗ್ವಿಕ್ ವರೆಗಿನ ವಿರಳ ಜನಸಂಖ್ಯೆಯ ಪ್ರದೇಶದಲ್ಲಿ, 1970 ರಿಂದ ಈವರೆಗೆ 20,000 ಕ್ಕೂ ಹೆಚ್ಚು ಅಪರಿಚಿತ ಜನರು ಇಲ್ಲಿ ಕಾಣೆಯಾಗಿದ್ದಾರೆ.
ಜನರು ಕಾಣೆಯಾಗಲು ಕಾರಣವೇನು? : ಜನರ ಕಣ್ಮರೆಗೆ ಕಾರಣಗಳು ಕಾಂತೀಯ ವೈಪರೀತ್ಯಗಳು, ಬಿಗ್‌ಫೂಟ್ ತರಹದ ಜೀವಿ ವೆಂಡಿಗೊ ಮತ್ತು ಯುಎಫ್ ಒ ಎಂದು ಹೇಳಲಾಗುತ್ತದೆ.
ಪಾರುಗಾಣಿಕಾ ತಜ್ಞರು ಹೇಳೋದೇನು? : ಹೆಚ್ಚು ಅನುಭವಿ ಪಾರುಗಾಣಿಕಾ ವೃತ್ತಿಪರರು ಅಲಾಸ್ಕಾದಲ್ಲಿ ಕಾಣೆಯಾದ ಹಲವಾರು ವ್ಯಕ್ತಿಗಳ ಹುಡುಕಾಟ ನಡೆಸುತ್ತಿರುತ್ತಾರೆ. ಈ ವೇಳೆ ಅವರು ದಿಗ್ಭ್ರಮೆಗೊಂಡಿದ್ದಾರಂತೆ. ಅನೇಕ ಬಾರಿ ಅವರನ್ನು ದಾರಿ ತಪ್ಪಿಸುವ ಅನುಭವವಾಗಿದೆ. ಅಲ್ಲಿ ವಿಚಿತ್ರ ಶಬ್ಧಗಳು ಕೇಳಿ ಬಂದಿವೆ. ಪ್ರೇತದ ಧ್ವನಿಗಳನ್ನು ತಾವು ಕೇಳಿರುವುದಾಗಿಯೂ ಅವರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.