ರೈಲಲ್ಲೂ ಜೋಲಿ ಕಟ್ಟಿ ನಿದ್ದೆಗೆ ಜಾರಿದ ದೊಡ್ಡ ಪಾಪುವಿನ ವೀಡಿಯೋ ಸಖತ್ ವೈರಲ್‌

By Suvarna News  |  First Published Sep 25, 2023, 1:00 PM IST

ಇಲ್ಲೊಂದು ಕಡೆ ಯುವಕನೋರ್ವ ತುಂಬಿ ತುಳುಕಾಡುವ ರೈಲಿನಲ್ಲಿ ನಿದ್ದೆಗೆ ಜಾರಿದ್ದಾನೆ. ಹಾಗಂತ ಆತ ನಿಂತುಕೊಂಡೋ ಕುಳಿತುಕೊಂಡೋ ನಿದ್ದೆ ಮಾಡ್ತಿಲ್ಲ, ಆತ ಹೇಗೆ ನಿದ್ದೆ ಮಾಡ್ತಿದ್ದಾನೆ ಎಂಬುದನ್ನು ನೋಡಿದ್ರೆ ನೀವು ಅಚ್ಚರಿ ಆಗೋದಂತು ಪಕ್ಕಾ..!


ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತನ್ನು ನೀವು ಕೇಳಿರ್ತೀರಾ. ಯಾವುದೇ ಇಹದ ಚಿಂತೆಗಳಿಲ್ಲದೇ ಎಲ್ಲಿ ಬೇಕಾದರಲ್ಲಿ ಜನ ಜಂಗುಳಿಯ ಮಧ್ಯೆಯೂ ನಿದ್ದೆಗೆ ಜಾರುವವರಿಗೆ ಈ ಗಾದೆ ಮಾತನ್ನು ಹೇಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ತುಂಬಿ ತುಳುಕಾಡುವ ರೈಲಿನಲ್ಲಿ ನಿದ್ದೆಗೆ ಜಾರಿದ್ದಾನೆ. ಹಾಗಂತ ಆತ ನಿಂತುಕೊಂಡೋ ಕುಳಿತುಕೊಂಡೋ ನಿದ್ದೆ ಮಾಡ್ತಿಲ್ಲ, ಆತ ಹೇಗೆ ನಿದ್ದೆ ಮಾಡ್ತಿದ್ದಾನೆ ಎಂಬುದನ್ನು ನೋಡಿದ್ರೆ ನೀವು ಅಚ್ಚರಿ ಆಗೋದಂತು ಪಕ್ಕಾ..!

ಸೀಟುಗಳ ಮಧ್ಯೆ ಬಟ್ಟೆಯ ಜೋಲಿ ಕಟ್ಟಿದ ಯುವಕ

Tap to resize

Latest Videos

ನೀವು ಪುಟ್ಟ ಮಕ್ಕಳನ್ನು ಮಲಗಿಸುವಾಗ ಬಟ್ಟೆಯ ಅಥವಾ ಅಮ್ಮನ ಸೀರೆಯ ಜೋಲಿ ಕಟ್ಟುವುದನ್ನು ನೋಡಿರಬಹುದು, ಅದರಲ್ಲಿ ಮಲಗಿ ನೆಮ್ಮದಿಯಾಗಿ ಪುಟ್ಟ ಮಕ್ಕಳು ನಿದ್ರೆಗೆ ಜಾರುತ್ತಾರೆ. ಅದೇ ರೀತಿ ಇಲ್ಲೊಬ್ಬ  ರೈಲೊಂದರ ಬೋಗಿಯೊಳಗೆ ಇರುವ ಮೇಲ್ಬಾಗದ ಸೀಟುಗಳ ಕಂಬಿಗಳಿಗೆ ಲುಂಗಿಯಂತಹ ಬಟ್ಟೆಯೊಂದನ್ನು ಕಟ್ಟಿ ಜೋಲಿ ನಿರ್ಮಿಸಿ ಅದರಲ್ಲಿ ನಿದ್ದೆಗೆ ಜಾರಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ತುಂಬಿ ತುಳುಕುವ ಕಾಲಿಡಲು ಜಾಗವಿಲ್ಲದಂತಹ ರೈಲೊಂದರಲ್ಲಿ ಯುವಕ ಮಾಡಿದ ಈ ಉಪಾಯ ಅನೇಕರನ್ನು ಅಚ್ಚರಿಗೆ ದೂಡಿದೆ. 

ಗಂಡನ ಮುಂದೆಯೇ ಪತ್ನಿ ಮೇಲೆ ಅತ್ಯಾಚಾರ: ವಿಷ ಸೇವಿಸಿ ಸಾವಿಗೆ ಶರಣಾದ ದಂಪತಿ

ವೈರಲ್ ಆದ ವೀಡಿಯೋದಲ್ಲೇನಿದೆ?
ವೀಡಿಯೋದಲ್ಲಿ ರೈಲೊಂದರ ಜನರಲ್ ಬೋಗಿ ಇದಾಗಿದ್ದು, ನಡೆದಾಡುವ ಜಾಗದಲ್ಲೆಲ್ಲಾ ಜನ ತುಂಬಿ ತುಳುಕಿದ್ದಾರೆ, ಎಲ್ಲರೂ ರೈಲಿನ ಕಾರಿಡಾರ್‌ನಲ್ಲೇ ಕುಳಿತುಕೊಂಡು ನಿಂತುಕೊಂಡು ಪ್ರಯಾಣ ಮಾಡುತ್ತಿದ್ದಾರೆ. ಇವರ ಮಧ್ಯೆ ಯುವಕನೋರ್ವ ಸೀಟಿಗೆ ಬೆಡ್‌ಶೀಟ್ ಕಟ್ಟಿ ಸುಖ ನಿದ್ದೆಗೆ ಜಾರಿದ್ದಾನೆ.

ನೆಟ್ಟಿಗರ ಕಾಮೆಂಟ್ ಹೇಗಿದೆ?

ಈ ವೀಡಿಯೋ ನೋಡಿದ ನೆಟ್ಟಿಗರು ವೆರೈಟಿ ಆಗಿ ಕಾಮೆಂಟ್ ಮಾಡಿದ್ದು, ಈತ ರೈಲಿಗಿಂತ ಜಾಸ್ತಿ ತನ್ನ ಬೆಡ್‌ಶೀಟ್ ಮೇಲೆ ನಂಬಿಕೆ ಇರಿಸಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತುಂಬಾ ಸುಖಿಯಾಗಿರುವ ಮಗು ಇದು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈತನಂತೆ ನನಗೂ ನಿದ್ರಿಸುವ ಆಸೆಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈತನಿಗೆ ಇಲ್ಲಿಂದ ಬಿದ್ದರು ಚಿಂತೆ ಇಲ್ಲ ಏಕೆಂದರೆ ಈತನ ಕೆಳಗೆ ಜನ ಕುಳಿತಿದ್ದಾರೆ. ಏನಾದರೂ ಆದರೆ ಅವರಿಗೆ ಇವನಿಗಲ್ಲ, ಈ ರೈಲಿನ ಜನಸಂದಣಿ ಮಧ್ಯೆ ಟಿಟಿಯಂತೂ ಬರಲ್ಲ ಎಂಬುದು ಆತನಿಗೆ ತಿಳಿದಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ತಿರುಪತಿಗೆ ಹೋಗುವ ವೇಳೆ ನಾನು ಈ ರೀತಿಯ ದೃಶ್ಯ ನೋಡಿದ್ದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈತ ತನ್ನ ಶೇ.200 ರಷ್ಟು ಮಿದುಳನ್ನು ಬಳಸಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಆರ್‌ಬಿಐ ಗವರ್ನರ್‌ಗೆ ಹಣದ ರಾಶಿ ಮೇಲೆ ಕುಳಿತ ಹಾವು ಎಂದಿದ್ದರಂತೆ ಪ್ರಧಾನಿ ಮೋದಿ!

ಈ ವೀಡಿಯೋವನ್ನು hathim_ismayil ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು,  ಎ ಲೋಕಲ್ ಟ್ರಿಪ್ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. 

 

click me!