Paragliding : ಅಧ್ಬುತ ಅನುಭವ ಪಡೆಯಲು travel tips

By Suvarna News  |  First Published Sep 3, 2022, 11:45 AM IST

ಸಾಹಸ ಕ್ರೀಡೆಗಳನ್ನು ಇಷ್ಟಪಡುವವರು ಪ್ಯಾರಾಗ್ಲೈಡಿಂಗ್ ಇಷ್ಟಪಡದೆ ಇರೋದಿಲ್ಲ. ಆಕಾಶದ ಮೇಲೆ ತೇಲುವ ಈ ಕ್ರೀಡೆ ಅದ್ಭುತ ಅನುಭವ ನೀಡುತ್ತದೆ. ಭಾರತದಲ್ಲೂ ಅನೇಕ ಪ್ಯಾರಾಗ್ಲೈಡಿಂಗ್ ಪ್ರದೇಶಗಳಿವೆ. ನಾವಿಂದು ಯಾವುದು ದಿ ಬೆಸ್ಟ್ ಪ್ಲೇಸ್ ಎನ್ನೋದನ್ನು ಹೇಳ್ತೇವೆ.
 


ಹಕ್ಕಿಯಂತೆ ಹಾರೋಕೆ ಯಾರಿಗೆ ಇಷ್ಟವಾಗಲ್ಲ ಹೇಳಿ. ಆಕಾಶದಲ್ಲಿ ತೇಲಾಡುವ ಅನುಭವ ಅದ್ಭುತ. ಅನೇಕರಿಗೆ ಸಾಹಸ ಕ್ರೀಡೆಗಳ ಮೇಲೆ ಆಸಕ್ತಿ ಹೆಚ್ಚಿರುತ್ತದೆ. ಸದಾ ಒಂದಲ್ಲ ಒಂದು ಸಾಹಸ ಕ್ರೀಡೆ ಮಾಡಲು ಅವರು ಹಾತೊರೆಯುತ್ತಿರುತ್ತಾರೆ. ಆಕಾಶದಲ್ಲಿ ಹಾರಾಡಲು ಬಯಸುವ ಜನರು ಪ್ಯಾರಾಗ್ಲೈಡಿಂಗ್ ಇಷ್ಟಪಡ್ತಾರೆ. ಪ್ಯಾರಾಗ್ಲೈಡಿಂಗ್ ಅತ್ಯಂತ ಮೋಜಿನ ಹಾಗೂ ಅತ್ಯಂತ ಜನಪ್ರಿಯ ಸಾಹಸ ಕ್ರೀಡೆಗಳಲ್ಲಿ ಒಂದಾಗಿದೆ. ಅತ್ಯಾಕರ್ಷಕ ಪ್ಯಾರಾಗ್ಲೈಡಿಂಗ್ ಅನುಭವಗಳನ್ನು ನೀಡುವ ಅನೇಕ ಸ್ಥಳಗಳು ಭಾರತದಲ್ಲಿವೆ. ತುಂಬಾ ಸುರಕ್ಷಿತವಾದ ಈ ಪ್ರದೇಶಗಳು ಯಾವುವು ಎಂಬುದನ್ನು ನಾವಿಂದು ಹೇಳ್ತೇವೆ. ಪ್ಯಾರಾಗ್ಲೈಡಿಂಗ್ ನಲ್ಲಿ ಆಸಕ್ತಿ ಇದ್ದರೆ ನೀವೂ ಒಮ್ಮೆ ಅಲ್ಲಿಗೆ ಭೇಟಿ ನೀಡಿ.  

ಪ್ಯಾರಾಗ್ಲೈಡಿಂಗ್ (Paragliding) ಗೆ ಪ್ರಸಿದ್ಧ ಪ್ರದೇಶಗಳು : 
ಮಹಾರಾಷ್ಟ್ರದ ಕಾಮ್ಶೆತ್ (Kamshet) :
ಪುಣೆಯಿಂದ 45 ಕಿಲೋಮೀಟರ್  ದೂರದಲ್ಲಿರುವ ಕಾಮ್ಶೆಟ್‌ ಪ್ಯಾರಾಗ್ಲೈಡಿಂಗ್ ಗೆ ಹೆಚ್ಚು ಪ್ರಸಿದ್ಧಿ ಪಡೆದ ಸ್ಥಳವಾಗಿದೆ. ಕಾಮ್ಶೆಟ್ ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವವರು ಸುಂದರ ಕಟ್ಟಡಗಳನ್ನು ವೀಕ್ಷಿಸಬಹುದು. ಅಲ್ಲದೆ ಇಲ್ಲಿನ ಸುಂದರ ಪರ್ವತಗಳನ್ನು ಕಣ್ತುಂಬಿಕೊಳ್ಳಬಹುದು. ವಾರಾಂತ್ಯದಲ್ಲಿ ನಿಮಗೆ ಇಲ್ಲಿ ಪ್ಯಾರಾಗ್ಲೈಡಿಂಗ್ ಅಧ್ಬುತ ಅನುಭವ ಸಿಗುತ್ತದೆ. ಸುಮಾರು 15ರಿಂದ 20 ನಿಮಿಷಗಳ ಕಾಲ ಪ್ಯಾರಾಗ್ಲೈಡಿಂಗ್ ಆನಂದವನ್ನು ನೀವು ಸವಿಯಬಹುದಾಗಿದೆ. 

Tap to resize

Latest Videos

ಸೆಪ್ಟೆಂಬರ್‌ನಲ್ಲಿ ಲಡಾಖ್ ಪ್ರವಾಸಕ್ಕೆ ಹೋಗ್ಲೇ ಬೇಕು!

ತಮಿಳುನಾಡಿನ ಯಲಗಿರಿ (Yelagiri) : ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಯಲಗಿರಿಯು ಗಿರಿಧಾಮಗಳಿಂದ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ಪ್ಯಾರಾಗ್ಲೈಡಿಂಗ್ ತಾಣದಲ್ಲಿ ಇದು ಒಂದು. ಸಾಹಸ ಕ್ರೀಡೆ ಸಂದರ್ಭದಲ್ಲಿ ನೀವು ಸುಂದರವಾದ ಗಿರಿಧಾಮಗಳನ್ನು ವೀಕ್ಷಿಸಬಹುದು. ಇದು ಕೂಡ ಪ್ಯಾರಾಗ್ಲೈಡಿಂಗ್ ಮಾಡಲು ಅತ್ಯಂತ ಸುರಕ್ಷಿತ ಸ್ಥಳವಾಗಿದೆ.   

Travel Tips : ಗಿಜಿಗಿಜಿ ಜೀವನಕ್ಕೆ ಶಾಂತಿ ಬೇಕೆಂದ್ರೆ ಇಲ್ಲಿಗೆ ಹೋಗಿ

ಜಮ್ಮುವಿನ ಸನಾಸರ್ (Sanasar) : ಜಮ್ಮುವಿನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಸನಾಸರ್‌ ಕೂಡ ಇಂದು. ಇದು ಪ್ಯಾರಾಗ್ಲೈಡಿಂಗ್ ಗೆ ಹೆಚ್ಚು ಪ್ರಸಿದ್ಧಿಯಾಗಿದೆ. ಇಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ  ಜಮ್ಮುವಿನ ಸುಂದರ ಪ್ರದೇಶಗಳನ್ನು ವೀಕ್ಷಿಸಬಹುದು. ಪ್ಯಾರಾಗ್ಲೈಡಿಂಗ್ ವೇಳೆ ವೃತ್ತಿಪರರು ನಿಮ್ಮ ಜೊತೆಗಿರ್ತಾರೆ. ಅವರ ಜೊತೆ ನೀವು ಮೇಲೇರುವುದ್ರಿಂದ ಯಾವುದೇ ಅಪಾಯವಿರುವುದಿಲ್ಲ. ಸುರಕ್ಷಿತ ಪ್ಯಾರಾಗ್ಲೈಡಿಂಗ್ ನಲ್ಲಿ ಕನಿಷ್ಠ  20 ನಿಮಿಷಗಳ ಕಾಲ ನೀವು ಮೇಲೆ ಹಾರಾಡಬಹುದು. ಸಮುದ್ರ ಮಟ್ಟದಿಂದ 2000 ಅಡಿ ಎತ್ತರದಲ್ಲಿ  ನಿಮಗೆ ಹಾರಾಡುವ ಅವಕಾಶ ಸಿಗುತ್ತದೆ. ಪ್ಯಾರಾಗ್ಲೈಡಿಂಗ್ ವೇಳೆ ಸುತ್ತಲಿನ ಎತ್ತರದ ಪರ್ವತಗಳನ್ನು ನೋಡಬಹುದು. 

ಹಿಮಾಚಲ ಪ್ರದೇಶದ ಬಿರ್ ಬಿಲ್ಲಿಂಗ್ (Bir Billing) : ಬಿರ್ ಬಿಲ್ಲಿಂಗನ್ನು ಭಾರತದ ಪ್ಯಾರಾಗ್ಲೈಡಿಂಗ್ ರಾಜಧಾನಿ ಎಂದೇ ಕರೆಯಲಾಗುತ್ತದೆ. ಸಾಹಸ ಕ್ರೀಡೆಗಳಿಗೆ ಪ್ರಸಿದ್ಧವಾದ ಪ್ರದೇಶ ಇದಾಗಿದೆ. ಕಂಗ್ರಾ ಕಣಿವೆಯ ಸಮೀಪದಲ್ಲಿರುವ ಬಿರ್ ಬಿಲ್ಲಿಂಗ್, ಬಿರ್ ಲ್ಯಾಂಡಿಂಗ್ ಪಾಯಿಂಟ್ ಮತ್ತು ಬಿಲ್ಲಿಂಗ್ ಟೇಕ್-ಆಫ್ ಪಾಯಿಂಟ್ ಇದೆ. ಇದು ಏಷ್ಯಾದ ಅತಿ ಎತ್ತರದ ಪ್ಯಾರಾಗ್ಲೈಡಿಂಗ್ ಪಾಯಿಂಟ್ ಆಗಿದೆ. ಬಿರ್ ಬಿಲ್ಲಿಂಗ್ ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುವ ವೇಳೆ ಹಿಮಾಲಯ ಪರ್ವತಗಳ ಸುಂದರ ನೋಟವನ್ನು ಸವಿಯಬಹುದಾಗಿದೆ. ಜೊತೆಗೆ ಕಣಿವೆಯ ಹಸಿರಿನ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. 

ಹಿಮಾಚಲ ಪ್ರದೇಶದ ಮನಾಲಿ (Manali) : ಪ್ರವಾಸಿಗರ ಅತ್ಯಂತ ಆಕರ್ಷಕ ಪ್ರವಾಸಿ ತಾಣ ಮನಾಲಿ. ಹಿಮಾಲಯ ಪರ್ವತಗಳ ನಡುವೆ ಪರ್ವತಗಳ ಮಡಿಲಲ್ಲಿ ಮನಾಲಿಯಿದೆ. 5000 ರಿಂದ 6000 ಅಡಿ ಎತ್ತರದಲ್ಲಿರುವ ಮನಾಲಿ ಪ್ಯಾರಾಗ್ಲೈಡಿಂಗ್‌ಗೆ ಉತ್ತಮ ಸ್ಥಳವಾಗಿದೆ. ಈ ಸ್ಥಳವು ಪರ್ವತಗಳು, ನದಿಗಳು ಮತ್ತು ಹುಲ್ಲುಗಾವಲುಗಳಿಂದ ಎಲ್ಲರನ್ನು ಸೆಳೆಯುತ್ತದೆ. ಸೋಲಾಂಗ್ ಕಣಿವೆ, ನಗರದ ಸುಂದರ ರಸ್ತೆಗಳನ್ನು ನೀವು ಪ್ಯಾರಾಗ್ಲೈಡಿಂಗ್ ವೇಳೆ ವೀಕ್ಷಣೆ ಮಾಡಬಹುದು. ಮನಾಲಿಯಲ್ಲಿ ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆಗೆ ಮಳೆಗಾಲದಲ್ಲಿ ಮಾತ್ರ ಅವಕಾಶವಿಲ್ಲ. ಮಳೆಗಾಲ ಹೊರತುಪಡಿಸಿ ವರ್ಷಪೂರ್ತಿ ನೀವು ಇದರ ಅನುಭವ ಪಡೆಯಬಹುದು.  

 


 

click me!