ರೊಮ್ಯಾನ್ಸ್‌ ಮಾಡೋಕೆ ಸ್ವಿಟ್ಜರ್‌ಲ್ಯಾಂಡೇ ಬೇಕಿಲ್ಲ ಭಾರತದ ಈ ಸ್ಥಳಕ್ಕೆ ಹೋದ್ರೂ ಸಾಕು!

By Suvarna NewsFirst Published Jan 3, 2020, 2:47 PM IST
Highlights

ಸ್ವಿಟ್ಜರ್‌ಲ್ಯಾಂಡ್‌ಗೆ ಭೇಟಿ ಕೊಡೋದು ಪ್ರತಿಯೊಂದು ಹನಿಮೂನ್‌ ಜೋಡಿಯ ಕನಸು. ಆದರೆ ಹಣ ಇಲ್ಲದೇ ಅದು ಸಾಧ್ಯವಾಗದು. ಆದ್ರೆ ಭಾರತದಲ್ಲಿರೋ ಈ ಐದು ಜಾಗಗಳು ಸ್ವಿಟ್ಜರ್‌ಲ್ಯಾಂಡ್‌ಗೆ ಏನೂ ಕಡಿಮೆಯಿಲ್ಲ.

ನಮ್ಮ ಕರ್ನಾಟಕದ ಕೊಡಗು, ಕಾಶ್ಮೀರ ಇವುಗಳನ್ನು ಆಗಾಗ ‘ಭಾರತದ ಸ್ವಿಟ್ಜರ್‌ಲ್ಯಾಂಡ್‌’ ಎಂದು ಕರೆಯುವುದುಂಟು. ಇವು ಆ ಪಟ್ಟಕ್ಕೆ ಅರ್ಹವಾಗಿವೆ ಕೂಡ. ಆದರೆ. ಇಷ್ಟೊಂದು ಹೆಸರು ಮಾಡದೆಯೂ ಸದ್ದಿಲ್ಲದೇ ಪ್ರವಾಸಿಗರನ್ನು ಆಕರ್ಷಿಸುವ, ಸದಾ ಹಸಿರು, ನೀರು, ಮಂಜು. ಹಿಮಗಳ ನಡುವೆ ಮುಳುಗಿರುವ ಹಲವು ಪ್ರದೇಶಗಳು ನಮ್ಮಲ್ಲಿವೆ. ಇವು ಸ್ವಿಟ್ಜರ್‌ಲ್ಯಾಂಡ್‌ನ ಅನುಭವವನ್ನೇ ನೀಡುತ್ತವೆ. ಸ್ವಿಸ್‌ ದೇಶಕ್ಕೆ ಹೇಗಲಾಗದಿದ್ದರೆ ಅಟ್‌ಲೀಸ್ಟ್‌ ಇಲ್ಲಿಗೊಮ್ಮೆ ಹೋಗಿ ಬನ್ನಿ.

ಲಿಮಿಟೆಡ್ ಬಜೆಟ್‌ನಲ್ಲಿ ವಿಶ್ವ ಪರ್ಯಟನೆ ಮಾಡುವುದು ಹೇಗೆ?

ಖಜ್ಜಿಯಾರ್‌

ಈ ಸ್ಥಳದ ಫೋಟೋ ನೋಡಿದರೂ ನಿಮಗೆ ಸ್ವಿಟ್ಜರ್‌ಲ್ಯಾಂಡ್‌ನ ತಂಪು ಹವೆಯ ಅನುಭವ ಆಗದಿರದು. ಇದೊಂದು ಸ್ವರ್ಗೀಯ ತಾಣ. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಖಜ್ಜಿಯಾರ್‌ ಎಂಬ ತಾಣ, ಧೌಲಾಧರ್‌ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಶಾಂತವಾಗಿ ನಿಂತಿದೆ. ಸರೋವರ ಅರಣ್ಯ ಹುಲ್ಲುಗಾವಲುಗಳು ಪರಸ್ಪರ ಸಂಧಿಸಿ ನಿಮ್ಮ ಕನಸಿನ ತಾಣವನ್ನು ಅಲ್ಲಿಯೇ ಪ್ರತ್ಯಕ್ಷ ಮಾಡಿಬಿಡುತ್ತವೆ. ಡಾಲ್‌ಹೌಸಿಯಿಂದ ಬಸ್‌ ಮೂಲಕ ಇಲ್ಲಿಗೆ ತಲುಪಬಹುದು. ಹಿಮಾಚಲ ಸರಕಾರದ ಪ್ರವಾಸ ಇಲಾಖೆ, ಪಿಡಬ್ಲ್ಯುಡಿ ಮತ್ತು ಅರಣ್ಯ ಇಲಾಖೆ ನಡೆಸುತ್ತಿರುವ ಹೋಟೆಲ್‌ಗಳು, ವಿಶ್ರಾಂತಿ ಗೃಹಗಳು, ಖಾಸಗಿ ಹೋಟೆಲ್‌ಗಳಳು ಇಲ್ಲಿವೆ. ಪ್ರಸಿದ್ಧ ಖಜ್ಜಿಯಾರ್‌ ಸರೋವರದ ಸುತ್ತಲೂ ಶಾಂತವಾಗಿ ಅಡ್ಡಾಡಬಹುದು. ಚಾರಣ ಉತ್ಸಾಹಿಗಳಿಗೆ ಖಜ್ಜಿಯಾರ್‌ನಿಂದ ದೈನಕುಂಡ್‌ಗೆ 3.5 ಕಿ.ಮೀ. ಟ್ರೆಕ್ಕಿಂಗ್‌ ಅವಕಾಶವೂ ಇದೆ.

ಔಲಿ

ಪ್ರಕೃತಿ ಸೊಬಗಿನಿಂದ ಮನಸೆಲೆಯುವ ಔಲಿ, ಭಾರತದ ಪ್ರಸಿದ್ಧ ಸ್ಕೀಯಿಂಗ್‌ ತಾಣವೂ ಆಗಿದೆ. ಸುಮಾರು 2505 ಮೀಟರ್‌ ಎತ್ತರದ ಪ್ರದೇಶ. ಹಿಮಾಲಯದ ಭವ್ಯವಾದ ನೋಟ ಸುಲಭ ಲಬ್ಯ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಔಲಿಯನ್ನು ಕೆಲವೊಮ್ಮೆ ಘರ್‌ವಾಲ್‌ ಎಂದೂ ಕರೆಯಲಾಗುತ್ತದೆ. ಡೆಹ್ರಾಡೂನ್‌ ಔಲಿಯಿಂದ 270 ಕಿ.ಮೀ ದೂರದಲ್ಲಿದೆ. ಖಾಸಗಿ ಮತ್ತು ಸರ್ಕಾರಿ ವಸತಿ ಎರಡೂ ಲಭ್ಯ. ಹಿಮಾಲಯದ ಶಿಖರಗಳಾದ ನಂದಾದೇವಿ, ಕಾಮೆಟ್‌, ದುನಾಗಿರಿ ಮತ್ತು ಮನಾಗಳನ್ನು ಇಲ್ಲಿ ಮನದಣಿಯೆ ನೋಡಿ ತಣಿಯಬಹುದು. ಸುತ್ತಲೂ ಕೋನಿಫೆರಸ್‌ ಮತ್ತು ಓಕ್‌ ಕಾಡು ಹರಡಿಕೊಂಡಿದೆ. ಸ್ಕೀಯಿಂಗ್‌ ಮಾಡುವ ಮಧುರ ಅನುಭವ ತಪ್ಪಿಸಿಕೊಳ್ಳಬೇಡಿ.

ಏರ್‌ಲೈನ್ಸ್‌ನಲ್ಲಿ ಬಿಕಿನಿ ಬೆಡಗಿಯರು; ನಗ್ನರಾಗೋಕೆ ಇಲ್ಲಿದೆ ಸ್ವಾತಂತ್ರ್ಯ!

ಕೌಸಾನಿ

ಉತ್ತರಾಖಂಡದ ಕುಮಾವುನ್‌ ಪ್ರಾಂತ್ಯದ ಮಡಿಲಲ್ಲಿರುವ ಕೌಸಾನಿ ಎಂಬ ಗ್ರಾಮ ಪಂತ್‌ನಗರ ವಿಮಾನ ನಿಲ್ದಾಣದಿಂದ ಕೌಸಾನಿಗೆ 178 ಕಿ.ಮೀ. ಅಥವಾ Pಥಗೊಡಂ ರೈಲ್ವೆ ನಿಲ್ದಾಣದ ಮೂಲಕ ಹೋಗಪಬಹುದು. ಹಿಮಾಲಯ ಶಿಖರಗಳಾದ ನಂದಾದೇವಿ, ತ್ರಿಶೂಲ್‌, ಪಂಚೌುಲಿಗಳ 300 ಕಿ.ಮೀ. ವಿಸ್ತಾರದ ನೋಟ ಇಲ್ಲಿ ಕಾಣುತ್ತದೆ. ಇಲ್ಲಿ ಸುಲಭದಿಂದ ಕಠಿಣದ ವರೆಗೆ ನಾನಾ ಬಗೆಯ ಟ್ರೆಕ್ಕಿಂಗ್‌ ಪ್ರಯತ್ನಿಸಬಹುದು. ಇಲ್ಲವಾದರೆ ಸುಮ್ಮನೇ ಹಿಮದಲ್ಲಿ ಆಡಬಹುದು. ಪಿಂಡಾರಿ ಹಿಮನದಿಯ ಚಾರಣ ಅಥವಾ ಕಾಫ್ನಿ ಹಿಮನದಿ ಚಾರಣ ಅಥವಾ ರುದ್ರಹರಿ ಗುಹೆ ದೇವಾಲಯದ ಚಾರಣ ಮಾಡಬಹುದು. ಕೌಸಾನಿಯ ಗಾಢವಾದ ಹಸಿರು ಬೆಟ್ಟಗಳಲ್ಲಿ ನೀವು ಕಳೆದುಹೋಗಬಹುದು.

ಡಾರ್ಜಿಲಿಂಗ್‌

ಪಶ್ಚಿಮ ಬಂಗಾಳದಲ್ಲಿರುವ, ಪೂರ್ವ ಹಿಮಾಲಯ ಪ್ರಾಂತ್ಯದಲ್ಲಿ ಅತ್ಯಂತ ಹೆಸರುವಾಸಿ ಗಿರಿಧಾಮವಾಗಿರುವ ಡಾರ್ಜಿಲಿಂಗ್‌, ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗುತ್ತದೆ. ಇಲ್ಲಿನ ಟೀ ಉದ್ಯಮ ಫೇಮಸ್ಸು. ಜೀವನದಲ್ಲಿ ಒಮ್ಮೆಯಾದರೂ ಡಾರ್ಜಿಲಿಂಗ್‌ ಟೀ ಕುಡಿಯಬೇಕೆಂದು ವಿದೇಶಿಗರು ತವಕಿಸುತ್ತಾರೆ. ಬಗ್ದೋರಾ ವಿಮಾನ ನಿಲ್ದಾಣ ಅಥವಾ ಜಲಪೈಗುರಿ ರೈಲ್ವೆ ನಿಲ್ದಾಣಗಳು ಇಲ್ಲಿಗೆ ಹತ್ತಿರ. ಬ್ರಿಟಷ್‌ ದೊರೆಗಳು ದೊರೆಸಾನಿಗಳು ಇಲ್ಲಿ ತಮ್ಮ ಬೇಸಿಗೆಯ ದಿನಗಳನ್ನು ಕಳೆಯುತ್ತಿದ್ದರು. ನೀವು ಕಳೆಯಬಾರದೇಕೆ?

ವರ್ಚುವಲ್ ಟ್ರಾವೆಲ್: ಕುಳಿತಲ್ಲೇ ಬ್ರಹ್ಮಾಂಡ ದರ್ಶನದ ಕಂಪ್ಲೀಟ್ ಡಿಟೇಲ್!

ಮನಾಲಿ

ಹಿಮಾಚಲ ಪ್ರದೇಶ ರಾಜ್ಯದ ಪ್ರಮುಖ ತಂಪು ತಾಣಗಳಲ್ಲಿ ಒಂದಾದ ಮನಾಲಿಯಲ್ಲಿ ನೀವು ಜೀವನದ ಅವಿಸ್ಮರಣೀಯ ಸೊಗಸಿನ ದಿನಗಳನ್ನು ಕಳೆಯಬಹುದು. ಮನಾಲಿಯ ಮೂಲಕ ನೀವು ಲೇಹ್‌, ಲಡಾಖ್‌ಗೂ ರೋಹ್ತಾಂಗ್‌ ಪಾಸ್‌ ಎಂಬ ಅದ್ಭುತ ಹಿಮಶಿಖರ ಮಾರ್ಗದ ಮೂಲಕ ತೆರಳಬಹುದು. ಸುತ್ತಮುತ್ತಲೂ ಚಾರಣ ಮಾಡಬಹುದಾದ ಹಲವು ಪರ್ವತಗಳಿವೆ. ಬಿಯಾಸ್‌ ನದಿಯಲ್ಲಿ ರಮ್ಯಾದ್ಭುತ ಅಡ್ವೆಂಚರ್‌ ಗೇಮ್‌ಗಳನ್ನೂ ಆಡಬಹುದು.

click me!