ಇತ್ತೀಚಿಗೆ ಪ್ರವಾಸಿ ತಾಣಗಳು ಕಸದ ತೊಟ್ಟಿಯಾಗಿವೆ. ಅದ್ರ ಸ್ವಚ್ಛತೆಗೆ ಸರ್ಕಾರ ಎಷ್ಟೇ ಕ್ರಮಕೈಗೊಂಡರೂ ಪ್ರವಾಸಿಗರ ಬೇಜವಾಬ್ದಾರಿತನ ಪ್ರವಾಸಿ ತಾಣದ ಸೌಂದರ್ಯ ಹಾಳು ಮಾಡ್ತಿದೆ. ಪ್ರವಾಸಕ್ಕೆ ಹೋದಾಗ ಕೆಲ ವಿಷ್ಯ ನೆನಪಿನಲ್ಲಿಟ್ಟುಕೊಂಡ್ರೆ ನಾವು ಜವಾಬ್ದಾರಿಯುತ ಪ್ರಜೆಯಾಗ್ಬಹುದು.
ಭಾರತ (India) ವು ಹಲವಾರು ಪ್ರವಾಸಿ ತಾಣ (Tourist Spot) ಗಳ ನೆಲೆಯಾಗಿದೆ. ಪ್ರತಿದಿನ ಸಾವಿರಾರು ಜನರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಪ್ರವಾಸಿ ತಾಣದ ಸೌಂದರ್ಯ (Beauty) ಸವಿಯಲು ನಾವು ಹೋಗ್ತೇವೆ ಆದ್ರೆ ಪ್ರವಾಸಿ ತಾಣವನ್ನು ಹಾಳು ಮಾಡ್ಬಾರದು ಎಂಬ ಸಾಮಾನ್ಯ ಜ್ಞಾನ (Knowledge) ನಮಗೆ ಇರೋದಿಲ್ಲ. ಕಂಡ ಕಂಡಲ್ಲಿ ಕಸವನ್ನು ಹಾಕುವ ನಾವು ಐತಿಹಾಸಿಕ ಸ್ಥಳಗಳಲ್ಲಿನ ಶಿಲ್ಪಕಲೆಯನ್ನು ನಾಶಮಾಡುವ ಪ್ರಯತ್ನ ಮಾಡ್ತೇವೆ. ಅಲ್ಲಿನ ಮೂರ್ತಿಗಳನ್ನು ಭಗ್ನಗೊಳಿಸುವುದು, ಸುಂದರ ಕಲ್ಲಿನ ಮೇಲೆ ಬರೆಯುವುದು ಸೇರಿದಂತೆ ಅನೇಕ ಕೆಟ್ಟ ಕೆಲಸಗಳನ್ನು ಮಾಡ್ತೇವೆ. ನಮ್ಮ ಜನಪ್ರಿಯ ಪ್ರವಾಸಿ ತಾಣಗಳನ್ನು ನಮ್ಮ ಮುಂದಿನ ಪೀಳಿಗೆಯ ಜನರೂ ನೋಡ್ಬೇಕೆಂದ್ರೆ ಶುಚಿತ್ವ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಪ್ರವಾಸಿ ತಾಣಗಳಿಗೆ ಹೋದಾಗ ನಾವು ಏನೆಲ್ಲ ಮಾಡ್ಬಾರದು, ಏನು ಮಾಡ್ಬೇಕು ಎಂಬುದನ್ನು ಇಂದು ಹೇಳ್ತೇವೆ.
ಕಸ (Garbage) ಹಾಕಬೇಡಿ : ನೀವು ಎಲ್ಲಿಗೆ ಹೋದರೂ ನೆನಪಿಡುವ ಮೂಲಭೂತ ವಿಷಯ ಇದು. ಅರಣ್ಯವಾಗಲಿ ಅಥವಾ ಐತಿಹಾಸಿಕ ಸ್ಮಾರಕವಾಗಲಿ ಪ್ರವಾಸಿಗರು ಕಸ ಹಾಕಬಾರದು. ಪ್ರವಾಸಿಗರು ತಿಂಡಿಗಳನ್ನು ತೆಗೆದುಕೊಂಡು ಹೋಗಿರ್ತಾರೆ. ಅದನ್ನು ಅಲ್ಲಿಯೇ ಎಸೆದು ಬರ್ತಾರೆ. ಪ್ಲಾಸ್ಟಿಕ್ (Plastic) ಬಾಟಲ್, ಪ್ಲಾಸ್ಟಿಕ್ ಕಂಟೇನರ್ ಸೇರಿದಂತೆ ಪ್ಲಾಸ್ಟಿಕ್ ಕವರ್ (Plastic cover) ಗಳು ಪ್ರವಾಸಿ ತಾಣದಲ್ಲಿ ತುಂಬಿರುತ್ತವೆ. ಕಸ ಎಸೆಯಲು ಕಸದ ಬುಟ್ಟಿ ಇರುತ್ತದೆ. ಅದನ್ನು ಎಲ್ಲ ಪ್ರವಾಸಿಗರು ಬಳಸಬೇಕು. ಕಂಡ ಕಂಡಲ್ಲಿ ಕಸವನ್ನು ಚೆಲ್ಲಬಾರದು.
ಅಮರನಾಥ ಯಾತ್ರೆಗೆ ತೆರಳುವಿರಾ? ಈ ತಪ್ಪು ಮಾಡ್ಲೇಬೇಡಿ
ಸಿಗರೇಟ್ ತುಂಡುಗಳನ್ನು ಆಕಸ್ಮಿಕವಾಗಿಯೂ ಎಸೆಯಬೇಡಿ : ಸಾರ್ವಜನಿಕ ಪ್ರದೇಶದಲ್ಲಿ ಸಿಗರೇಟ್ ಸೇದುವುದೇ ಅಪರಾದ. ಹಾಗಿರುವಾಗ ಕಂಡ ಕಂಡಲ್ಲಿ ಸಿಗರೇಟ್ ತುಂಡುಗಳನ್ನು ಎಸೆಯುವುದು ಮತ್ತೊಂದು ತಪ್ಪು. ಪ್ರವಾಸಿ ಸ್ಥಳಗಳಲ್ಲಿ ಅತ್ಯಂತ ಅಸಹ್ಯವಾದ ಕಸವೆಂದ್ರೆ ಸಿಗರೇಟ್ ತುಂಡು. ಧೂಮಪಾನ ಮಾಡುವ ಜನರು ತಮ್ಮ ಸಿಗರೇಟ್ ತುಂಡುಗಳನ್ನು ಎಸೆಯಲು ಡಸ್ಟ್ ಬಿನ್‌ಗಳು ಮತ್ತು ಆಶ್ ಟ್ರೇಗಳನ್ನು ಬಳಸಬೇಕು. ಸದಾ ಅದನ್ನು ತಮ್ಮೊಂದಿಗೆ ಕರೆದೊಯ್ಯಬೇಕು.
ನಿಮ್ಮ ಬೂಟುಗಳನ್ನು ಮುಚ್ಚಲು ಬೂಟಿಗಳನ್ನು ಧರಿಸಿ : ತಾಜ್ ಮಹಲ್‌ನಂತಹ ಸ್ಥಳಗಳಿಗೆ ಬೂಟ್ ಧರಿಸಿ ಹೋಗ್ತೇವೆ. ಬೂಟ್ ನಲ್ಲಿ ಕೊಳೆ ಇರುತ್ತದೆ. ಅದೇ ಬೂಟ್ ಧರಿಸಿ ನಾವು ತಾಜ್ ಮಹಲ್ ನಂತಹ ಜಾಗಕ್ಕೆ ಹೋದ್ರೆ ಬೂಟಿನ ಕೊಳೆ ಒಳಗೆ ಹೋಗುತ್ತದೆ. ಹಾಗಾಗಿ ನಿಮ್ಮ ಬೂಟುಗಳನ್ನು ಮುಚ್ಚಲು ನೀವು ಬೂಟಿಗಳನ್ನು ಧರಿಸಬೇಕು.
ಗುಟ್ಕಾ – ಪಾನ್ ಕಲೆ : ಭಾರತದಲ್ಲಿ ಗುಟ್ಕಾ ಮತ್ತು ಪಾನ್ ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಜನರು ಕಂಡ ಕಂಡಲ್ಲಿ ಪಾನ್ ಉಗುಳುತ್ತಾರೆ. ಪ್ರವಾಸಿ ತಾಣದ ಮೂಲೆ ಮೂಲೆಗಳಲ್ಲಿ ನೀವು ಗುಟ್ಕಾ ಕಲೆ ನೋಡ್ಬಹುದು. ಇದು ಉಳಿದ ಪ್ರವಾಸಿಗರಿಗೆ ವಾಕರಿಕೆ ಬರಿಸುತ್ತದೆ. ಹಾಗೆ ಅಲ್ಲಿನ ಸೌಂದರ್ಯ ಹಾಳಾಗುತ್ತದೆ. ಹಾಗಾಗಿ ಗುಟ್ಕಾ, ಪಾನ್ ಸೇವನೆ ಮಾಡುವವರು ಅದನ್ನು ಉಗುಳಲು ಸೂಕ್ತ ಸ್ಥಳವನ್ನು ಬಳಸಿ.
ಕುಳಿತು ನಿಂತು ಬೋರಾಗ್ತಿದ್ಯಾ: ಹಾಗಿದ್ರೆ ಈ ಮಂಚದ ಮೇಲೆ ಮಲ್ಕೊಂಡೇ ಊರು ಸುತ್ತಿ
ಜವಾಬ್ದಾರಿಯುತ ನಾಗರಿಕರಾಗಿ : ಪ್ರವಾಸಿ ತಾಣಗಳ ಸುತ್ತಮುತ್ತ ಕಸ ಹಾಕುವುದು ಕಂಡು ಬಂದ್ರೆ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಿ. ನೀವೂ ಕಸ ಹಾಕ್ಬೇಡಿ. ಹಾಕಿದವರ ವಿರುದ್ಧ ದ್ವನಿ ಎತ್ತುವ ಕೆಲಸ ಮಾಡಿ. ಸರಕಾರ ಸ್ವಚ್ಛತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರ ಕ್ರಮ ಕೈಗೊಳ್ಳುತ್ತದೆ. ಹಾಗಾಗಿ ಕಸ ಹಾಕಿದವರ ಫೋಟೋವನ್ನು ನೀವು ಪಿಎಂಒ ಅಥವಾ ಯಾವುದೇ ಅಧಿಕಾರಿಗೆ ಟ್ವೀಟ್ ಮಾಡ್ಬಹುದು.
ಪ್ರವಾಸಿ ತಾಣಗಳು ನಮ್ಮ ಹೆಮ್ಮೆ. ಅದನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ. ಸುಂದರ ಪ್ರಕೃತಿಯನ್ನು ಕಸ ಹಾಕಿ ಹಾಳು ಮಾಡ್ಬೇಡಿ.