ಛೇ ಛೇ ಹಾಗೆನಿಲ್ಲ: ಜಿ-ಮೇಲ್ ಆ್ಯಕ್ಸಸ್ ಬಗ್ಗೆ ಗೂಗಲ್ ಸ್ಪಷ್ಟನೆ!

First Published Jul 6, 2018, 4:44 PM IST
Highlights

ಥರ್ಡ್ ಪಾರ್ಟಿ ಡೆವಲಪರ್ಸ್‌ಗೆ ಜಿ-ಮೇಲ್ ಆ್ಯಕ್ಸಸ್ ಇಲ್ಲ

ಊಹಾಪೋಹಗಳಿಗೆ ತೆರೆ ಎಳೆದ ಗೂಗಲ್

ಯಾರಿಗೂ ಖಾಸಗಿ ಮೇಲೆ ಓದುವ ಅವಕಾಶವಿಲ್ಲ 

ಸ್ಯಾನ್‌ಫ್ರಾನ್ಸಿಸ್ಕೋ(ಜು.6): ಥರ್ಡ್ ಪಾರ್ಟಿ ಡೆವಲಪರ್ಸ್ಗಳಿಗೆ ಜಿ-ಮೇಲ್ ಸಂದೇಶಗಳನ್ನು ಓದುವ ಅವಕಾಶ ನೀಡಿದ್ದ ಗೂಗಲ್, ಇದೀಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೂಗಲ್, ಮೂರನೇ ವ್ಯಕ್ತಿಗಳಿಗೆ ಬಳಕೆದಾರರ ಖಾಸಗಿ ಮೇಲ್ ಓದಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೆಲವೇ ಸಂದರ್ಭಗಳಲ್ಲಿ ಮಾತ್ರ ಇ-ಮೇಲ್ ಕ್ಲೈಂಟ್, ಟ್ರಿಪ್ ಪ್ಲ್ಯಾನರ್, ಕಸ್ಟಮರ್ ರಿಲೇಷನ್ಸ್ ಸೇರಿದಂತೆ, ಹೊರಗುತ್ತಿಗೆ ಸಂಸ್ಥೆಗಳಿಗೆ ಬಳಕೆದಾರರ ಅನುಮತಿ ಪಡೆದು ಜಿಮೇಲ್ ಓದುವ ಅವಕಾಶವಿದೆ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದೆ.

ಎಲ್ಲಾ ಸಹ ಜಿಮೇಲ್ ಮೆಸೇಜ್‌ಗಳಿಗೆ ಪ್ರವೇಶ ಲಭ್ಯವಿದೆ. ಆದರೆ ಅದೂ ಸಹ ಹಲವು ಹಂತಗಳಲ್ಲಿ ಪರಿಶೀಲನೆಗೊಳಪಡುತ್ತದೆ ಎಂದು ಗೂಗಲ್ ಹೇಳಿದೆ. ಥರ್ಡ್ ಪಾರ್ಟಿ ಆ್ಯಪ್ ಡೆವಲಪರ್ಸ್ಗಳಿಗೆ ಜಿ-ಮೇಲ್ ಓದುವ ಅವಕಾಶವನ್ನು ಗೂಗಲ್ ನೀಡಿದೆ ಎಂದು ಅಮೆರಿಕದ ಪ್ರಖ್ಯಾತ ವೃತ್ತ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ ಈ ಹಿಂದೆ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!