ಸೋಶಿಯಲ್ ಮೀಡಿಯಾ ರೂಮರ್‌ಗಳ ಮೇಲೆ ಹದ್ದಿನ ಕಣ್ಣು

By Web DeskFirst Published Oct 25, 2018, 9:52 PM IST
Highlights

ಗೂಗಲ್, ಟ್ವಿಟರ್ ಮತ್ತು ವಾಟ್ಸಪ್  ಸೇರಿದಂತೆ ಇತರೆ ಸೋಶಿಯಲ್ ಮೀಡಿಯಾ ವೇದಿಕೆಗಳಿಗೆ ಸರಕಾರ ಸ್ಪಷ್ಟ ಸಂದೇಶ ರವಾನಿಸಿದ್ದು ರೂಮರ್ ಹಂಚುವ ಮೆಸೇಜ್ ಗಳ ಕುರಿತಾಗಿ  ಎಚ್ಚರಿಕೆ ವಹಿಸಲು ತಿಳಿಸಿದೆ.

ನವದೆಹಲಿ[ಅ.25] ಶಾಂತಿ ಕದಡುವ, ಸೈಬರ್ ಅಪರಾಧ ಮತ್ತು ರಾಷ್ಟ್ರೀಯ ಭದ್ರತೆಗೆ ಭಂಗ ತರುವಂತಹ ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಹೇಳಿದ್ದಾರೆ.

ಫೇಸ್ ಬುಕ್ ಮತ್ತು ಇನ್ ಸ್ಟಾಗ್ರ್ಯಾಮ್ ಗಳಿಗೂ ಇದೇ ನಿಯಮ ಅನ್ವಯವಾಗಲಿದೆ. ಸಂದೇಶ ಶೇರ್ ಆಗುವ ಬಗೆಯ ಕುರಿತಾದ ಮಾಹಿತಿಯನ್ನು ಕಲೆಹಾಕಬೇಕು ಎಂದು ತಿಳಿಸಲಾಗಿದೆ.

ಕೇಂದ್ರ ಗೃಹ ಇಲಾಖೆ ಈ ತೀರ್ಮಾನಕ್ಕೆ ಬಂದಿದ್ದು  ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಮುಖೇನ ತಪ್ಪು ಸಂದೇಶಗಳು ರವಾನೆಯಾಗುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಸರಕಾರ ಇಂಥ ತೀರ್ಮಾನಕ್ಕೆ ಮುಂದಿದೆ.

ಕಳೆದ ಜೂನ್ ನಿಂದಲೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಕೇಂದ್ರ ಗೃಹ ಇಲಾಖೆ ನಿರಂತರ ಸಭೆ ನಡೆಸುತ್ತಿದ್ದು ಇದೀಗ ಅಂತಿಮವಾಗಿ ಸೋಶಿಯಲ್ ಮೀಡಿಯಾಗಳ ರೂಮರ್ ಮೆಸೇಜ್ ಗಳ ಮೇಲೆ ಕಣ್ಣಿಡಲು ಮುಂದಾಗಿದೆ.

click me!