ಭಾರತದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 500, ಸೌತ್ಕೊರಿಯಾದ ಮಾಲೀಕ, ಅಮೆರಿಕಾದಲ್ಲಿ ಪ್ರಯಾಣ. ರಾಯಲ್ ಎನ್ಫೀಲ್ಡ್ ಬೈಕ್ ಮೂಲಕ 51 ಸಾವಿರ ಕೀಲೋಮೀಟರ್ ಪ್ರಯಾಣಿಸಿದ ಸಂಗ್ಮಿನ್ ಜರ್ನಿಯನ್ನ ಬೈಕ್ ಪ್ರೀಯರು ಮಿಸ್ ಮಾಡದೇ ಓದಿ.
ಸೌತ್ಕೊರಿಯಾ(ಜು.06): ಬರೋಬ್ಬರಿ 51,000 ಕೀಲೋ ಮೀಟರ್, 11 ತಿಂಗಳು. ಇದು ದಕ್ಷಿಣ ಕೊರಿಯಾದ ಅಹನ್ ಸಂಗ್ಮಿನ್ ಕೇಝ್ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಸುತ್ತಾಟ ನಡೆಸಿದ ರೀತಿ.
ರಾಯಲ್ ಎನ್ಫೀಲ್ಡ್ಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಅದರಲ್ಲೂ ಸೌತ್ಕೊರಿಯಾದ 36 ವರ್ಷದ ಸಂಗ್ಮಿನ್ ಬಳಿ ಇರೋದು ಭಾರತದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 500 . ಇದೇ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 500 ಬೈಕ್ನಲ್ಲಿ ಸಂಗ್ಮಿನ್ ದಕ್ಷಿಣ ಅಮೇರಿಕಾ ಸುತ್ತಿದ್ದಾರೆ. ಓಟ್ಟು 51 ಸಾವಿರ ಕೀಲೋಮೀಟರ್ ಪ್ರಯಾಣ ಮಾಡಿ ದಾಖಲೆ ಬರೆದಿದ್ದಾರೆ.
ಸಂಗ್ಮಿನ್ ಪಯಣವೇ ರೋಚಕವಾಗಿದೆ. ಭಾರತದ ಪ್ರವಾಸಕ್ಕೆ ಆಗಮಿಸಿದ ಸಂದರ್ಭ ಇಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಬಾಡಿಗೆ ಪಡೆದು ರೈಡ್ ಮಾಡಿದ್ದರು. ಮೊದಲ ರೈಡ್ಗೆ ಸಂಗ್ಮಿನ್ ರಾಯಲ್ ಎನ್ಫೀಲ್ಡ್ ಅಭಿಮಾನಿಯಾದರು. ತಾಯ್ನಿಡಿಗೆ ವಾಪಾಸ್ಸಾದ ಸಂಗ್ಮಿನ್, ಸೌತ್ಕೊರಿಯಾದ ಬೈಕ್ ಡೀಲರ್ ಬಳಿ ಮನವಿ ಮಾಡಿ ಭಾರತದ ರಾಯಲ್ ಎನ್ಫೀಲ್ಡ್ ಖರೀದಿಸಿದರು.
A post shared by AhnSungmin (@kaze_wolf_min) on Jul 3, 2017 at 11:53pm PDT
ಭಾರತದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 500 ಬೈಕ್ ಸೌತ್ಕೊರಿಯಾ ಸಂಗ್ಮಿನ್ಗೆ ತಲುಪು ವೇಳೆ ಅದರ ಬೆಲೆ 6.2 ಲಕ್ಷ ರೂಪಾಯಿ ಆಗಿತ್ತು. ಇದಕ್ಕಾಗಿ ಸಂಗ್ಮಿನ್ ತನ್ನ ಬಳಿ ಇದ್ದ BMW650 ಕಾರನ್ನ ಮಾರಾಟ ಮಾಡಿದ್ದರು.
A post shared by AhnSungmin (@kaze_wolf_min) on Aug 17, 2017 at 2:50pm PDT
ಇಲ್ಲಿಂದ ಸಂಗ್ಮಿನ್ ಜರ್ನಿ ಆರಂಭಗೊಳ್ಳುತ್ತೆ. ಸೌತ್ಕೊರಿಯಾದಿಂದ ದಕ್ಷಿಣ ಅಮೆರಿಕಾಗೆ ಹಡಗಿನ ಮೂಲಕ ಸಂಗ್ಮಿನ್ ರಾಯಲ್ ಎನ್ಫೀಲ್ಡ್ ಬೈಕ್ ರವಾನಿಸಿದರು. ಬಳಿಕ ದಕ್ಷಿಣ ಅಮೆರಿಕಾದಿಂದ ಸಂಗ್ಮಿನ್ ಪ್ರಯಾಣ ಆರಂಭಗೊಂಡಿತು.
A post shared by AhnSungmin (@kaze_wolf_min) on May 4, 2018 at 9:46pm PDT
ಅರ್ಜೆಂಟೀನಾ, ದಕ್ಷಿಣ ಅಮೇರಿಕಾ, ನಾರ್ತ್ ಅಮೇರಿಕಾ ಮೂಲಕ ಅಲಸ್ಕಾ ತಲುಪಿದ ಸಂಗ್ಮಿನ್ ತಮ್ಮ ಗುರಿ ಮುಟ್ಟಿದ್ದಾರೆ. ಬರೋಬ್ಬರಿ 51 ಸಾವಿರ ಕೀಲೋಮೀಟರ್ ಭಾರತದ ರಾಯಲ್ ಎನ್ಫೀಲ್ಡ್ನಲ್ಲಿ ಪ್ರಯಾಣ ಮಾಡಿದ್ದಾರೆ.
ಬಳಿಕ ಅದೇ ರೀತಿ ಹಿಂತಿರುಗಿದ್ದಾರೆ. ಇಷ್ಟೇ ಅಲ್ಲ ತನ್ನ ರಾಯಲ್ ಎನ್ಫೀಲ್ಡ್ ಬೈಕ್ನ್ನ ಮತ್ತೆ ಕೊರಿಯಾಗೆ ತಂದಿದ್ದಾರೆ. ಸಂಗ್ಮಿನ್ ತನ್ನ ಮುಂದಿನ ಜರ್ನಿ ಕುರಿತು ಶೀಘ್ರದಲ್ಲೇ ಬಹಿರಂಗ ಪಡಿಸೋದಾಗಿ ಹೇಳಿದ್ದಾರೆ.