ಜಿಯೋ ಹೊಸ ಸೇವೆಗೆ ಆ.15ರಂದು ನೋಂದಣಿ ಆರಂಭ! ರಿಜಿಸ್ಟರ್ ಮಾಡಬೇಕಾದ್ರೆ ಹೀಗೆ ಮಾಡಿ

By Web DeskFirst Published Aug 14, 2018, 1:16 PM IST
Highlights

ಜಿಯೋಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಹೇಗೆ ಪಡೆಯಬಹುದು? ಇಂಟರ್ನೆಟ್ ಸ್ಪೀಡ್ ಎಷ್ಟಿರಲಿದೆ? ಯಾವಾಗ ಆರಂಭ? ಎಲ್ಲಿ ಶುರು? ಇಲ್ಲಿದೆ ಫುಲ್ ಡಿಟೇಲ್ಸ್...
 

ಕಳೆದ ತಿಂಗಳು ನಡೆದ 41ನೇ ವಾರ್ಷಿಕ ಮಹಾಸಭೆಯಲ್ಲಿ ರಿಲಯನ್ಸ್ ಮುಖ್ಯಸ್ಥ  ಮುಕೇಶ್ ಅಂಬಾನಿ,  ಜಿಯೋಗಿಗಾಫೈಬರ್ ಸೇವೆ ಹಾಗೂ ಜಿಯೋ ಫೋನ್ 2 ಬಿಡುಗಡೆ ಬಗ್ಗೆ ಪ್ರಕಟಿಸಿದ್ದರು.

ಜಿಯೋಗಿಗಾಫೈಬರ್ ಹೊಸ ಬ್ರಾಡ್‌ಬ್ಯಾಂಡ್ ಸೇವೆಯಾಗಿದ್ದು, 1 ಜಿಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸೇವೆ ಕಲ್ಪಿಸುವುದಾಗಿ ಹೇಳಿದ್ದರು.  ಅದೇ ರೀತಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಫೋನ್‌ನ ಹೊಸ ಹಾಗೂ ಮೇಲ್ದರ್ಜೆಗೇರಿಸಲಾಗಿರುವ ಜಿಯೋ ಫೋನ್ 2 ಆವೃತ್ತಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು.

ಈ 2 ಸೇವೆ/ಫೋನ್‌ ಗಳನ್ನು ಪಡೆಯಲು ಸ್ವಾತಂತ್ರ್ಯ ದಿನದಂದು [ಆ.15]  ನೋಂದಣಿ ಆರಂಭಿಸಲಾಗುತ್ತಿದೆ.

ನೋಂದಣಿ ಹೇಗೆ:

ಜಿಯೋನ ಜಿಯೋ ಫೋನ್ 2 ಮತ್ತು ಜಿಯೋಗಿಗಾಫೈಬರ್ ಹೊಸ ಸೇವೆಗಳನ್ನು ಪಡೆಯಬಯಸುವ ಗ್ರಾಹಕರು MyJio ಆ್ಯಪ್ ಅಥವಾ Jio.Com.ನಲ್ಲಿ ನೋಂದಣಿ ಮಾಡಬೇಕು.

ತಮ್ಮ ಹೆಸರು, ನೋಂದಾಯಿತ ಈಮೇಲ್ ವಿಳಾಸವನ್ನು ನಮೂದಿಸಿ ಶುಲ್ಕವನ್ನು ಪಾವತಿಸಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್,  ಅಥವಾ ಜಿಯೋಮನಿ, ಪೇಟಿಎಂನಂತಹ ವ್ಯಾಲೆಟ್ ಆ್ಯಪ್‌ಗಳ ಮೂಲಕವೂ ಶುಲ್ಕವನ್ನು ಪಾವತಿಸಬಹುದಾಗಿದೆ.

ಜಿಯೋ ಗಿಗಾ ಫೈಬರ್ ಸೇವೆಯೂ ಸದ್ಯ ಬೀಟಾ-ಪರೀಕ್ಷೆ ಹಂತದಲ್ಲಿದೆ. ಯಾವ ಸ್ಥಳದಿಂದ ಹೆಚ್ಚು ಬೇಡಿಕೆ ಬರುತ್ತದೋ ಆ ಸ್ಥಳಗಳಿಗೆ ಆದ್ಯತೆಯ ಮೇರೆಗೆ ಜಿಯೋಗಿಗಾ ಫೈಬರ್ ಸಂಪರ್ಕ ಕಲ್ಪಿಸಲಾಗುವುದು ಎಂದು ಮುಕೇಶ್ ಅಂಬಾನಿ ಪ್ರಕಟಿಸಿದ್ದರು.

ಜಿಯೋ ಗಿಗಾ ಫೈಬರ್  ಸಂಪರ್ಕ ಅಳವಡಿಸಲು ಗ್ರಾಹಕರಿಂದ ಯಾವುದೇ ಶುಲ್ಕವನ್ನು ಕಂಪನಿಯು ವಿಧಿಸುತ್ತಿಲ್ಲ.  ಆದರೆ ಗ್ರಾಹಕರು  ₹4500 ರಿಫಂಡೇಬಲ್ ಡಿಪಾಸಿಟನ್ನು ಪಾವತಿಸಬೇಕಾಗುತ್ತದೆ. 

ಜಿಯೋಗಿಗಾಫೈಬರ್ ಸೇವೆ ಹೇಗೆ ಭಿನ್ನ?
  
ಅತೀ ದೊಡ್ಡ ‘ಗ್ರೀನ್ ಫೀಲ್ಡ್ ಫಿಕ್ಸೆಡ್ ಲೈನ್ ಬ್ರಾಡ್ ಬ್ಯಾಂಡ್ ಸೇವೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜಿಯೋಗಿಗಾಫೈಬರ್  ದೇಶದ 1000 ನಗರ/ಪಟ್ಟಣ ಪ್ರದೇಶಗಳಲ್ಲಿ 1 ಜಿಬಿಪಿಎಸ್ ರಷ್ಟು ವೇಗದಲ್ಲಿ ಇಂಟರ್ನೆಟ್ ಸೇವೆ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದೆ.

‘ಇಂಟರ್ನೆಟ್ ಆಫ್ ಥಿಂಗ್ಸ್ [IoT]’ ಮತ್ತು ವರ್ಚುವಲ್ ರಿಯಾಲಿಟಿಯಂತಹ ಭವಿಷ್ಯದ ತಂತ್ರಜ್ಞಾನಗಳಿಗೂ ಈ ಹೊಸ ಸೇವೆಯೂ ಪೂರಕವಾಗಿರಲಿದೆ. 

ಸದ್ಯ ಜಿಯೋಗಿಗಾಫೈಬರ್ ಸೇವೆಯು ಪ್ರಿಪೇಯ್ಡ್ ಯೋಜನೆಗಳಲ್ಲಿ ಮಾತ್ರ ಲಭ್ಯವಾಗಿದ್ದು, ಮುಂದಿನ ದಿನಗಳಲ್ಲಿ ಪೋಸ್ಟ್-ಪೇಯ್ಡ್ ಸೇವೆಗಳನ್ನು ಆರಂಭಿಸುವ ಯೋಜನೆಯಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಾನ್ಸೂನ್ ಹಂಗಾಮದೊಂದಿಗೆ ಮತ್ತೆ ಅಬ್ಬರಿಸಿದ ಜಿಯೋ

ಅದೇ ರೀತಿ ಜಿಯೋ ಫೋನ್ 2 ಕೂಡಾ ನಾಳೆಯಿಂದ ಗ್ರಾಹಕರು ಪಡೆಯಬಹುದು. ಜಿಯೋ ಫೋನ್-2 ಕ್ಕೆ ₹2999 ದರನಿಗದಿಪಡಿಸಲಗಿದೆ. ಆದರೆ ಕಂಪನಿಯೂ ಈ ಫೋನ್‌ಗಳಿಗೆ ಸೂಕ್ತವಾದ ಡೇಟಾ ಪ್ಲಾನ್‌ಗಳನ್ನು ಪ್ರಕಟಿಸಿಲ್ಲ.

ಇದನ್ನೂ ಓದಿ: ಜಿಯೋಫೋನ್ 2 ಬಿಡುಗಡೆ; ನೂತನ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್ ಇದೆ?
 

click me!