ಅತ್ಯಾಕರ್ಷಕ ರಿಯಲ್ ಮಿ 2 ಮೊಬೈಲ್ ಬಿಡುಗಡೆ

By Web DeskFirst Published Sep 1, 2018, 6:42 PM IST
Highlights

ರಿಯಲಿ ಮಿ ಮೊಬೈಲ್ ಕಂಪೆನಿ ನೂತನ ಸ್ಮಾರ್ ಫೋನ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, 6.2 ಇಂಚಿನ ಸ್ಕ್ರೀನ್ ಜೊತೆಗೆ ಜಿಬಿ ರ‍್ಯಾಮ್ ಹೊಂದಿರೋ ನೂತನ ರಿಯಲ್ ಮಿ2 ಮೊಬೈಲ್ ವಿಶೇಷತೆಗಳು ಇಲ್ಲಿದೆ.

ಬೆಂಗಳೂರು(ಸೆ.01):  ಹೆಚ್ಚಾಗಿ ದುಬಾರಿ ಫೋನ್‌ಗಳಲ್ಲಿ ಕಾಣಸಿಗುವ ನಾಚ್ ಫುಲ್ ಸ್ಕ್ರೀನ್ ಡಿಸ್ಲ್ಪೇಯನ್ನು ಕಡಿಮೆ ಬೆಲೆಯಲ್ಲೂ ನೀಡುವ ಮೂಲಕ ರಿಯಲ್ ಮಿ
ಕಂಪನಿ ಹೊಸ ಸಾಹಸಕ್ಕೆ ಕೈ ಹಾಕಿದೆ. 6.2 ಇಂಚು ನಾಚ್ ಫುಲ್ ಸ್ಕ್ರೀನ್ ಡಿಸ್ಪ್ಲೇ ಹೊಂದಿರುವ ಮೊಬೈಲ್ ಫೋನ್‌ಗಳನ್ನು 8990 ರು.ಗಳಿಂದ ರಿಯಲ್ ಮಿ2 ನೀಡಲಿದೆ. ಹೈಎಂಡ್ ಫೋನ್‌ಗಳ ಕೆಲವೊಂದು ವಿಶೇಷತೆ ಇದರಲ್ಲಿದ್ದು, 4230 ಎಂಎಎಚ್ ಎಐ ಬ್ಯಾಟರಿಯನ್ನೂ ಹೊಂದಿದೆ.

ಈ ಸೀರಿಸ್‌ನಲ್ಲಿ 3ಜಿಬಿ ರ‍್ಯಾಮ್ 32 ಜಿಬಿ ಸ್ಟೋರೇಜ್ ಹೊಂದಿರುವ ಫೋನ್ 8990 ರು.ಗಳಿಗೆ ಲಭ್ಯ. 4 ಜಿಬಿ ರ‍್ಯಾಮ್, 64 ಜಿಬಿ ರೋಮ್‌ನ ಮೊಬೈಲ್ 10,990  ರು.ಗಳಿಗೆ ದೊರಕಲಿದೆ.  ಸೆ.4 ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ನಲ್ಲೂ ಮಾರಾಟವಾಗಲಿದೆ.

ಈ ಹೊಸ ಮೊಬೈಲ್‌ನಲ್ಲಿ ಡ್ಯುಯೆಲ್ ಕ್ಯಾಮರಗಳಿದ್ದು, 13 ಎಂಪಿ ಹಾಗೂ 2 ಎಂಪಿಯ ರೆಸೊಲ್ಯೂಶನ್ ಹೊಂದಿವೆ. ಕ್ಯಾಮರದಲ್ಲಿರುವ ಪಿಡಿಎಎಫ್ ಫಾಸ್ಟ್ ಫೋಕಸಿಂಗ್ ತಂತ್ರಜ್ಞಾನದಿಂದ ಕಡಿಮೆ ಬೆಳಕಿನಲ್ಲೂ ಪರಿಣಾಮಕಾರಿ ಫೋಟೋ ಕ್ಲಿಕ್ಕಿಸಬಹುದು. ೮ ಎಂಪಿ ಸೆಲ್ಫೀ ಕ್ಯಾಮರಾವಿದೆ. ಡೈಮಂಡ್ ಬ್ಲ್ಯಾಕ್,  ಡೈಮಂಡ್ ರೆಡ್ ಹಾಗೂ ಡೈಮಂಡ್ ಬ್ಲ್ಯೂ ಬಣ್ಣಗಳಲ್ಲಿ ಲಭ್ಯ.
 

click me!