ಜಿಯೋಗೆ 2 ವರ್ಷದ ಸಂಭ್ರಮ; ಗ್ರಾಹಕರಿಗೆ ಭರ್ಜರಿ ಆಫರ್!

By Web DeskFirst Published 12, Sep 2018, 6:38 PM IST
Highlights
  • ಸೆ.12ರಿಂದ 21ರವರೆಗೆ ಈ ಆಕರ್ಷಕ ಸೌಲಭ್ಯ!
  • ಜಿಯೋದ ಅತ್ಯಂತ ಜನಪ್ರಿಯ, ಭಾರೀ ಮಾರಾಟ ಕಂಡಿರುವ ಪ್ಲ್ಯಾನ್ ಈಗ ಕೇವಲ ತಿಂಗಳಿಗೆ 100 ರೂ.ಗೆ ಲಭ್ಯ!
  • ಈ ಸೌಲಭ್ಯ ಮೈಜಿಯೋ ಆ್ಯಪ್ ನಲ್ಲಿ ಸಿಗುವಂತಾಗಲು ಫೋನ್ ಪೇ ಜತೆ ಜಿಯೋ ಸಹಭಾಗಿತ್ವ
     

ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ  ಜಿಯೋಗೆ 2 ವರ್ಷ ತುಂಬಿದ್ದು, ಇದೀಗ ಗ್ರಾಹಕರಿಗಾಗಿ ಹೊಸ ಆಫರ್ ಹೊರಡಿಸಿದೆ. ತನ್ನ ಗ್ರಾಹಕರಿಗೆ/ಬಳಕೆದಾರರಿಗೆ ಇಡೀ ತಿಂಗಳು ಹಲವು ಅಚ್ಚರಿದಾಯಕ ಕೊಡುಗೆಗಳನ್ನು  ಸಂಸ್ಥೆಯು ಪ್ರಕಟಿಸಿದೆ. 

ತನ್ನ ದ್ವಿತೀಯ ವಾರ್ಷಿಕೋತ್ಸವದ ನಿಮಿತ್ತ ಎಲ್ಲ ಗ್ರಾಹಕರಿಗೂ ಮೊದಲಿಗೆ 16ಜಿಬಿ ಡೇಟಾವನ್ನು ಉಚಿತವಾಗಿ ಕೊಟ್ಟಿರುವ ಸಂಸ್ಥೆಯು, ತನ್ನ ಅತ್ಯಂತ ಜನಪ್ರಿಯ ಪ್ಲ್ಯಾನ್‌ಅನ್ನು ಈಗ ತಿಂಗಳಿಗೆ ಕೇವಲ 100 ರೂ.ಗಳಿಗೆ ನೀಡಲು ಮುಂದಾಗಿದೆ.

ಈ ಪ್ಲ್ಯಾನ್‌ನಡಿ, ಅಪರಿಮಿತ ಉಚಿತ ಕರೆಗಳು ಮತ್ತು ಅಪರಿಮಿತ(42ಜಿಬಿ) ಡೇಟಾ ಪ್ರತಿ ತಿಂಗಳು ಕೇವಲ 100 ರೂ. ಆಗಿರಲಿದೆ.

ಈಗ ರೂ.399ರ ಪ್ಲ್ಯಾನ್ ದರದಲ್ಲಿ ಕೂಡ 100 ರೂ.ಗಳ ರಿಯಾಯಿತಿಯನ್ನು ಜಿಯೋ ಘೋಷಿಸಿದೆ. ಈ ರಿಯಾಯಿತಿಯು ಎರಡು ಬಗೆಯಲ್ಲಿ ಬಳಕೆದಾರರಿಗೆ ಸಿಗಲಿದೆ. ಅಂದರೆ, ಮೈಜಿಯೋ ಆ್ಯಪ್ ಮೂಲಕ ರೀಚಾರ್ಜ್ ಮಾಡಿಕೊಳ್ಳುವ ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ತಕ್ಷಣವೇ 50 ರೂ.ಗಳ ರಿಯಾಯಿತಿ ಸಿಗಲಿದೆ.

ಎರಡನೆಯದಾಗಿ, ಮೈಜಿಯೋ ಆ್ಯಪ್ ನಲ್ಲಿ ಇರುವ ಫೋನ್ ಪೇ ಮೂಲಕ ಹಣ ಪಾವತಿ ಮಾಡುವವರಿಗೆ 50 ರೂ.ಗಳನ್ನು ಕೂಡಲೇ ಹಿಂದಿರುಗಿಸಲಾಗುತ್ತದೆ.  ಎರಡನೇ ವರ್ಷಾಚರಣೆಯ ಅಂಗವಾಗಿ ಕೊಡಲಾಗುತ್ತಿರುವ ಈ ಕೊಡುಗೆಯು ಸೆ.12ರಿಂದ ಆರಂಭವಾಗಿದ್ದು ಈ ತಿಂಗಳ 21ರವರೆಗೂ ಮುಂದುವರಿಯಲಿದೆ.

Last Updated 19, Sep 2018, 9:24 AM IST