ಹಬ್ಬದ ಪ್ರಯುಕ್ತ ಹಾಯರ್ ಇಂಡಿಯಾದಿಂದ ನೂತನ ರೆಫ್ರಿಜಿರೇಟರ್ ಬಿಡುಗಡೆ

By Web DeskFirst Published Sep 27, 2018, 9:19 PM IST
Highlights

ಹಾಯರ್ ಇಂಡಿಯಾದಿಂದ ಹೊಸ ಶ್ರೇಣಿಯ ಬಾಟಮ್ ಮೌಂಟೆಡ್, ಟಾಪ್ ಮೌಂಟೆಡ್ ಮತ್ತು ಡೈರೆಕ್ಟ್ ಕೂಲ್ ರೆಫ್ರಿಜಿರೇಟರ್ ಬಿಡುಗಡೆ ಮಾಡಿದೆ. ನೂತನ ರೆಫ್ರಿಜಿರೇಟರ್‌ಗಳ ವಿಶೇಷತೇ ಏನು? ಇಲ್ಲಿದೆ.

ಬೆಂಗಳೂರು(ಸೆ.27):  ಗೃಹಸಾಧನಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಹಾಯರ್ ಇದೀಗ ಹೊಚ್ಚ ಹೊಸಸ ಶ್ರೇಣಿಯ ರಿಫ್ರಿಜಿರೇಟರ್ ಬಿಡುಗಡೆ ಮಾಡಿದೆ. ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬದ ಪ್ರಯುಕ್ತ ಹಾಯರ್ ಬಿಡುಗಡೆ ಮಾಡಿರುವ ಆಧುನಿಕ ತಂತ್ರಜ್ಞಾನದ ರೆಫ್ರಿಜಿರೇಟರ್ ಗ್ರಾಹಕರನ್ನ ಮೋಡಿ ಮಾಡಲಿದೆ.

ನೂತನ ಬಾಟಮ್ ಮತ್ತು ಟಾಪ್ ಮೌಂಟೆಡ್ ರೆಫ್ರಿಜಿರೇಟರ್‌ಗಳು ಎಲ್ಲ ಹೊಸ ಸ್ಪೈರಲ್ ಗ್ಲಾಸ್ ಫಿನಿಷ್‍ನಲ್ಲಿ ಲಭ್ಯವಿದೆ. ಆಧುನಿಕ ಅಡುಗೆಮನೆ ಅಲಂಕರಣವನ್ನು ದೃಷ್ಟಿಯಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಈ ಸ್ಪೈರಲ್ ಗ್ಲಾಸ್ ಪ್ಯಾಟ್ರನ್ ಶಾಂತತೆಯ ಭಾವವನ್ನು ಪ್ರತಿಫಲಿಸುತ್ತದೆ ಮತ್ತು ಒಂದು ಕಲಾಕೃತಿಯಂತೆ ನಿಮ್ಮ ಮನೆಯನ್ನು ಅಲಂಕರಿಸುತ್ತದೆ ಮತ್ತು ನಿಮ್ಮ ಅಡುಗೆಮನೆಗೆ ಸ್ಟೈಲಿಷ್ ರೂಪ ನೀಡುತ್ತದೆ.

ಹಾಯರ್‌ನಿಂದ ಈ ಆವಿಷ್ಕಾರಕ ಬಾಟಮ್ ಮೌಂಟೆಡ್ ರೆಫ್ರಿಜಿರೇಟರ್‌ಗಳು  ದೈನಂದಿನ ಬಳಕೆಯ ಅಭ್ಯಾಸಗಳನ್ನು ದೃಷ್ಟಿಯಲ್ಲಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಫ್ರೀಝರ್ ವಿಭಾಗ ತಳಭಾಗಕ್ಕೆ ಜೋಡಿಸಲ್ಪಟ್ಟಿದ್ದು ರೆಫ್ರಿಜಿರೇಟರ್ ವಿಭಾಗವನ್ನು ಮೇಲ್ಭಾಗಕ್ಕೆ ಜೋಡಿಸಲಾಗಿದೆ. 

ಹಾಯರ್ ಬಿಎಂಆರ್‌ಗಳು ಸಾಂಪ್ರದಾಯಿಕ ರೆಫ್ರಿಜಿರೇಟರ್‌ಗಳಿಗೆ ಹೋಲಿಸಿದರೆ ಶೇ.90ರಷ್ಟು ಬಾಗುವಿಕೆ ಕಡಿಮೆ ಮಾಡುತ್ತವೆ. ಅಲ್ಲದೆ ಆವಿಷ್ಕಾರಕ 8 ಇನ್ 1 ಕನ್ವರ್ಟಿಬಲ್ ಫೀಚರ್‌ನಿಂದ ಬಳಕೆದಾರರಿಗೆ ಫ್ರೀಝರ್ ಭಾಗವನ್ನು ಫ್ರಿಜ್ ಆಗಿ ಅಥವಾ ಮತ್ತೆ ಫ್ರೀಝರ್ ಆಗಿ ಕೇವಲ 50 ನಿಮಿಷಗಳಲ್ಲಿ ಬದಲಾಯಿಸುವ ಸ್ವಾತಂತ್ರ್ಯ ನೀಡುತ್ತದೆ. 

ಹೊಸ ಬಿಎಂಆರ್‌ಗಳು 256 ಲೀಟರ್‌ಗಳಿಂದ 345 ಲೀಟರ್‌ಗಳವರೆಗೆ ವಿಸ್ತಾರ ಸಾಮಥ್ರ್ಯ ಒದಗಿಸುತ್ತವೆ. ಈ ರೆಫ್ರಿಜಿರೇಟರ್‌ಗಳು ಟ್ವಿನ್ ಇನ್ವರ್ಟರ್ ತಂತ್ರಜ್ಞಾನದಂತಹ ಹೆಚ್ಚುವರಿ ವಿಶೇಷಗಳನ್ನು ಹೊಂದಿದ್ದು ಅದು ಸ್ವಯಂಚಾಲಿತವಾಗಿ ರೆಫ್ರಿಜಿರೇಟರ್‌ನ್ನ ತಂಪಾಗಿಸುವ ಸಾಮಥ್ರ್ಯವನ್ನು ಹೊಂದಿದೆ.

ಟರ್ಬೊ ಐಸಿಂಗ್ ತಂತ್ರಜ್ಞಾನ ಮಂಜುಗಡ್ಡೆಯನ್ನು ಶೇ.200ರಷ್ಟು ವೇಗವಾಗಿ ಕೇವಲ 49 ನಿಮಿಷಗಳಲ್ಲಿ ಸಿದ್ಧಪಡಿಸುತ್ತದೆ. ಬಿಎಂಆರ್‌ಗಳ ನವೀಕೃತ ಶ್ರೇಣಿ ಹೊಸ ಸ್ಪೈರಲ್ ಗ್ಲಾಸ್ ಪ್ಯಾಟ್ರನ್‍ಗಳೊಂದಿಗೆ ಬಂದಿದ್ದು ಕಂಪ್ರೆಸರ್‌ಗೆ ಹಾಗೂ ಪ್ರೀಮಿಯಂ ಮಾಡೆಲ್‍ಗಳ ಫ್ಯಾನ್ ಮೋಟಾರ್‌ಗೆ 10 ವರ್ಷಗಳ ವಾರೆಂಟಿ ನೀಡುತ್ತದೆ.

 ಈ ಟ್ರೆಂಡ್‍ಸೆಟ್ಟರ್ ರೆಫ್ರಿಜಿರೇಟರ್ ಎನರ್ಜಿ ಸೇವಿಂಗ್ ಹಾಗೂ ರಿಟೆನ್ಷನ್ ಮೋಡ್‍ಗಳಿಂದ ಬಳಕೆದಾರರಿಗೆ ವಿದ್ಯುಚ್ಛಕ್ತಿ ಉಳಿಸಲು ಮತ್ತು ರೆಫ್ರಿಜಿರೇಟರ್‌ನಲ್ಲಿ ತಂಪಾಗಿಸುವಿಕೆ ಉಳಿಸಿಕೊಳ್ಳಲು ನೆರವಾಗುತ್ತದೆ. 5ಇನ್1 ಕನ್ವರ್ಟಿಬಲ್ ಟಾಪ್ ಮೌಂಟೆಡ್ ರೆಫ್ರಿಜಿರೇಟರ್‌ಗಳು ಟರ್ಬೊ ಐಸಿಂಗ್‍ನೊಂದಿಗೆ ಬಂದಿದ್ದು ಅದು ಕೇವಲ 49 ನಿಮಿಷಗಳಲ್ಲಿ ಶೇ.200ರಷ್ಟು ವೇಗದ ಐಸ್ ನೀಡುತ್ತದೆ.

ಹಾಯರ್ ಇಂಡಿಯಾ ಬಿಡುಗಡೆ ಮಾಡಿರುವ ನೂತನ ರೆಫ್ರಿಜಿರೇಟರ್ ಬೆಲೆ ಇಲ್ಲಿದೆ.

ಎಚ್‍ಆರ್‍ಡಿ-1955ಸಿಎಸ್‍ಜಿ-ಇ - ಎಂಆರ್‍ಪಿ ರೂ.21000
ಎಚ್‍ಆರ್‍ಡಿ-2204ಸಿಎಸ್‍ಜಿ-ಇ - ಎಂಆರ್‍ಪಿ ರೂ.22800
ಎಚ್‍ಆರ್‍ಡಿ-1955ಸಿಡಬ್ಲ್ಯೂಜಿ-ಇ - ಎಂಆರ್‍ಪಿ ರೂ.21000
ಎಚ್‍ಆರ್‍ಡಿ-2204ಸಿಡಬ್ಲ್ಯೂಜಿ-ಇ- ಎಂಆರ್‍ಪಿ ರೂ.22800
ಎಚ್‍ಆರ್‍ಡಿ-1955ಪಿಎಸ್‍ಜಿ-ಇ - ಎಂಆರ್‍ಪಿ ರೂ.22200
ಎಚ್‍ಆರ್‍ಡಿ-2204ಪಿಎಸ್‍ಜಿ-ಇ - ಎಂಆರ್‍ಪಿ ರೂ.23700
ಎಚ್‍ಆರ್‍ಡಿ-1955ಪಿಡಬ್ಲ್ಯೂಜಿ-ಇ - ಎಂಆರ್‍ಪಿ ರೂ.22200
ಎಚ್‍ಆರ್‍ಡಿ-2204ಪಿಡಬ್ಲ್ಯೂಜಿ-ಇ - ಎಂಆರ್‍ಪಿ ರೂ.23700

ಬಾಟಮ್ ಮೌಂಟೆಡ್ ರೆಫ್ರಿಜಿರೇಟರ್
ಎಚ್‍ಆರ್‍ಬಿ-2764ಪಿಎಸ್‍ಜಿ-ಇ- ಎಂಆರ್‍ಪಿ ರೂ.36300
ಎಚ್‍ಆರ್‍ಬಿ-2964ಪಿಎಸ್‍ಜಿ-ಇ- ಎಂಆರ್‍ಪಿ ರೂ.38700
ಎಚ್‍ಆರ್‍ಬಿ-3404ಪಿಎಸ್‍ಜಿ-ಇ- ಎಂಆರ್‍ಪಿ ರೂ.-45800
ಎಚ್‍ಆರ್‍ಬಿ-3654ಪಿಎಸ್‍ಜಿ-ಇ- ಎಂಆರ್‍ಪಿ ರೂ.49900

ಟಾಪ್ ಮೌಂಟ್ ರೆಫ್ರಿಜಿರೇಟರ್
ಎಚ್‍ಆರ್‍ಎಫ್-2784ಪಿಎಸ್‍ಜಿ-ಇ- ಎಂಆರ್‍ಪಿ ರೂ.34500
ಎಚ್‍ಆರ್‍ಎಫ್-2984ಪಿಎಸ್‍ಜಿ-ಇ- ಎಂಆರ್‍ಪಿ ರೂ.37000

click me!